ರಾಜ್ಯ

ವಕ್ಫ್‌ ನೋಟಿಸ್‌ ಭೀತಿ : ಹಾವೇರಿಯಲ್ಲಿ ಮನೆಗಳಿಗೆ ಕಲ್ಲು ತೂರಾಟ

ಐವರಿಗೆ ಗಾಯ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ ಹಾವೇರಿ: ವಿಜಯಪುರ, ಕಲಬುರಗಿ, ಮಂಡ್ಯ ಬಳಿಕ ಹಾವೇರಿ ಜಿಲ್ಲೆಯಲ್ಲೂ ರೈತರಿಗೆ ವಕ್ಫ್ ಬೋರ್ಡ್​ ನೋಟಿಸ್ ಬರಲಾರಂಭಿಸಿದ್ದು, ಇದನ್ನು ಪ್ರತಿಭಟಿಸಿ ನಿನ್ನೆ ರಾತ್ರಿ ಮುಸ್ಲಿಮ್‌ ಮುಖಂಡರ ಮನೆಗೆ ಕಲ್ಲು ತೂರಾಟ ಮಾಡಲಾಗಿದೆ. ಬುಧವಾರ ರಾತ್ರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್​ ಬೋರ್ಡ್​​ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ವಾಸವಿದ್ದ ಮನೆಗಳನ್ನು ಖಾಲಿ‌ ಮಾಡಿಸಬಹುದು ಎಂಬ ಭೀತಿಯಿಂದ ಜನರ ಗುಂಪು ಮುಸ್ಲಿಂ ಮುಖಂಡರ ಮನೆಗಳ ಮೇಲೆ‌ […]

ವಕ್ಫ್‌ ನೋಟಿಸ್‌ ಭೀತಿ : ಹಾವೇರಿಯಲ್ಲಿ ಮನೆಗಳಿಗೆ ಕಲ್ಲು ತೂರಾಟ Read More »

ರದ್ದಾಗಲಿದೆಯೇ ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯ?

ಉಪಮುಖ್ಯಮಂತ್ರಿ ಡಿಕೆಶಿ ಹೇಳಿಕೆಯಲ್ಲಿದೆ ಶಕ್ತಿ ಯೋಜನೆ ರದ್ದಾಗುವ ಸುಳಿವು ಬೆಂಗಳೂರು : ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಸರಕಾರದ ಪಂಚ ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಶಕ್ತಿ ಯೋಜನೆ ರದ್ದಾಗುವ ಕುರಿತು ಸ್ವತಹ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಸುಳಿವು ನೀಡಿದ್ದಾರೆ. ಶಕ್ತಿ ಯೋಜನೆ ಮುಂದುವರಿಸುವ ವಿಚಾರವಾಗಿ ಮರುಪರಿಶೀಲನೆ ನಡೆಸುತ್ತೇವೆ ಎಂದು ಡಿ.ಕೆ ಶಿವಕುಮಾರ್ ನಿನ್ನೆ ಹೇಳಿದ ಬಳಿಕ ಈ ಯೋಜನೆ ರದ್ದಾಗಲಿದೆಯೇ

ರದ್ದಾಗಲಿದೆಯೇ ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯ? Read More »

ಉಪಚುನಾವಣೆಯಲ್ಲಿ ವಿಧಾನಪರಿಷತ್ ಗೆ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಪ್ರಮಾಣವಚನ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ವಿಧಾನಪರಿಷತ್ ಗೆ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಅವರು ಪರಿಷತ್‌ನ ನೂತನ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಸಭಾಪತಿ ಕೊಠಡಿಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಶಾಸಕರಾದ ಹರೀಶ್ ಪೂಂಜ, ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ

ಉಪಚುನಾವಣೆಯಲ್ಲಿ ವಿಧಾನಪರಿಷತ್ ಗೆ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಪ್ರಮಾಣವಚನ ಸ್ವೀಕಾರ Read More »

ನಟ ದರ್ಶನ್‌ಗೆ ಕೊನೆಗೂ ಸಿಕ್ಕಿತು ಜಾಮೀನು

ಬೆನ್ನುನೋವಿಗೆ ಚಿಕಿತ್ಸೆ ಪಡೆದುಕೊಳ್ಳಲು ಆರು ವಾರ ಬಿಡುಗಡೆ ಭಾಗ್ಯ ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದ ಜೈಲಿನಲ್ಲಿರುವ ನಟ ದರ್ಶನ್​ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್​ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದ್ದು, ಮಧ್ಯಂತರ ಜಾಮೀನಿಗೆ ಬಹಳಷ್ಟು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದರ್ಶನ್ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ದರ್ಶನ್ ಪರ ವಕೀಲರಾದ

ನಟ ದರ್ಶನ್‌ಗೆ ಕೊನೆಗೂ ಸಿಕ್ಕಿತು ಜಾಮೀನು Read More »

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ 63 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ

ಬೆಂಗಳೂರು: ಕರ್ನಾಟಕದಲ್ಲಿ ಈಗ ಹಗರಣ ಮತ್ತು ಕಬಳಿಕೆಯದ್ದೇ ಸುದ್ದಿ. ನಿತ್ಯ ಬೆಳಗಾದರೆ ಒಂದಿಲ್ಲೊಂದು ಹಗರಣ ಅಥವಾ ಭೂ ಕಬಳಿಕೆ ಪ್ರಕರಣಗಳು ಬಯಲಾಗುತ್ತಿವೆ. ಈಗ ಮಾಜಿ ಸ್ಪೀಕರ್‌ ಚೊನಗರೆಸಸ ಹಿರಿಯ ನಾಯಕ ರಮೇಶ್‌ ಕುಮಾರ್‌ ಸರದಿ. ರಮೇಶ್​ ಕುಮಾರ್ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿಬಂದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೊಸಹುಡ್ಯದ ಸರ್ವೆ ನಂ.1, 2ರಲ್ಲಿ 122 ಎಕರೆ ಭೂಮಿಯನ್ನು ಏಳು

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ 63 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ Read More »

ವಕ್ಫ್‌ ನೋಟಿಸ್‌ : ರೈತರಿಂದ ಅಹೋರಾತ್ರಿ ಧರಣಿ

ಸರಕಾರ ನಮಗೆ ದೀಪಾವಳಿಯ ಕರಾಳ ಉಡುಗೊರೆ ಕೊಟ್ಟಿದೆ ಎಂದು ಆಕ್ರೋಶ ವಿಜಯಪುರ: ಎಲ್ಲೆಡೆ ಜನರು ದೀಪಾವಳಿ ಸಂಭ್ರಮಕ್ಕೆ ಅಣಿಯಾಗುತ್ತಿದ್ದರೆ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ಮಾತ್ರ ವಕ್ಫ್‌ ದೆಸೆಯಿಂದಾಗಿ ತಮ್ಮ ಕೃಷಿ ಜಮೀನು ಉಳಿಸಿಕೊಳ್ಳಲು ಹಬ್ಬ ಬಿಟ್ಟು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ರೈತರ ಪಾಲಿಗೆ ಈ ವರ್ಷದ ದೀಪಾವಳಿ ಕರಾಳವಾಗುವ ಲಕ್ಷಣ ಕಾಣಿಸಿದೆ. ತಮ್ಮ ಜಮೀನನ್ನು ವಕ್ಫ್ ಮಂಡಳಿ ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ರೈತರು ಅಹೋರಾತ್ರಿ ಹೋರಾಟ ಪ್ರಾರಂಭಿಸಿದ್ದಾರೆ. ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ

ವಕ್ಫ್‌ ನೋಟಿಸ್‌ : ರೈತರಿಂದ ಅಹೋರಾತ್ರಿ ಧರಣಿ Read More »

ಮುಡಾ ಹಗರಣ : 35 ತಾಸು ಇ.ಡಿ. ಅಧಿಕಾರಿಗಳಿಂದ ಪರಿಶೋಧನೆ | ಬೆಂಗಳೂರು, ಮೈಸೂರಿನಲ್ಲಿ ದಾಳಿ; ಸಿದ್ದರಾಮಯ್ಯ ಆಪ್ತರ ವಿಚಾರಣೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಯಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮೊನ್ನೆಯಿಂದ ಪ್ರಾರಂಭಿಸಿದ ದಾಳಿ ಮತ್ತು ಶೋಧ ಕಾರ್ಯಾಚರಣೆ ಬರೋಬ್ಬರಿ 35 ತಾಸು ನಿರಂತರವಾಗಿ ನಡೆದಿದೆ. ಇ.ಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ದಾಳಿ ಮಾಡಿ ದಾಖಲೆಪತ್ರ ಮತ್ತಿತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ರಾಕೇಶ್ ಪಾಪಣ್ಣ ಹಾಗೂ ಮುಡಾ ಮಾಜಿ ಆಯುಕ್ತ ನಟೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಕಳೆದೆರಡು ದಿನಗಳಿಂದ ಇಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ

ಮುಡಾ ಹಗರಣ : 35 ತಾಸು ಇ.ಡಿ. ಅಧಿಕಾರಿಗಳಿಂದ ಪರಿಶೋಧನೆ | ಬೆಂಗಳೂರು, ಮೈಸೂರಿನಲ್ಲಿ ದಾಳಿ; ಸಿದ್ದರಾಮಯ್ಯ ಆಪ್ತರ ವಿಚಾರಣೆ Read More »

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಆರಂಭ

ಹೆಸರು ಸೇರ್ಪಡೆ, ಬದಲಾವಣೆ, ತಿದ್ದುಪಡಿಗೆ ಅವಕಾಶ ಬೆಂಗಳೂರು : ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ರಾಜ್ಯಾದ್ಯಂತ ಮಂಗಳವಾರದಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಅಭಿಯಾನ ಪ್ರಾರಂಭವಾಗಿದೆ. ಮತದಾರರ ಕರಡು ಪಟ್ಟಿ ಪರಿಷ್ಕರಣೆಗೆ ಹಕ್ಕುಗಳು ಮತ್ತು ಆಕ್ಷೇಪಣೆ ಸಲ್ಲಿಸಲು ಅ.29ರಿಂದ ನವೆಂಬರ್‌ 24ರ ವರೆಗೆ ಅವಕಾಶ ಇರಲಿದೆ. ಹೆಸರು ಸೇರ್ಪಡೆ, ಬದಲಾವಣೆ, ತಿದ್ದುಪಡಿಗಳಿಗೆ ನವೆಂಬರ್‌ 9-10 ಹಾಗೂ 23-24 (ಶನಿವಾರ-ರವಿವಾರ) ವಿಶೇಷ ದಿನಾಂಕ ಇರಲಿದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಆರಂಭ Read More »

13ನೇ ಶತಮಾನದ ಮಠದ ಆಸ್ತಿಯೂ ವಕ್ಫ್‌ ಪಾಲು!

ಭಕ್ತರ ತೀವ್ರ ಆಕ್ರೋಶ, ಉದ್ವಿಗ್ನ ಪರಿಸ್ಥಿತಿ ವಿಜಯಪುರ: ಸಿಂದಗಿ ಪಟ್ಟಣದಲ್ಲಿರುವ 13ನೇ ಶತಮಾನದ ಮಠದ ಆಸ್ತಿ ಕೂಡ ಈಗ ವಕ್ಫ್‌ ಬೋರ್ಡ್‌ ಆಸ್ತಿ ಎಂದು ನೋಂದಣಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ರೈತರ ನೂರಾರು ಎಕರೆ ಕೃಷಿಭೂಮಿ ವಕ್ಫ್‌ ಆಸ್ತಿ ಎಂದು ಪಹಣಿಯಾದ ಬೆನ್ನಿಗೆ ಮಠದ ಆಸ್ತಿಯೂ ವಕ್ಫ್‌ ಪಾಲಾಗಿರುವುದು ಬೆಳಕಿಗೆ ಬಂದಿದೆ. ಸರ್ವೆ ನಂಬರ್‌ 1020ರ ಆಸ್ತಿಯಲ್ಲಿ ಕಬರಸ್ಥಾನ ವಕ್ಫ್ ಬೋರ್ಡ್‌ ಎಂದು ನೋಂದಣಿಯಾಗಿದೆ. ಸಿದ್ದಲಿಂಗ ಸ್ವಾಮಿಜಿ ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂಬರ್‌ 11 ಖಾಲಿ

13ನೇ ಶತಮಾನದ ಮಠದ ಆಸ್ತಿಯೂ ವಕ್ಫ್‌ ಪಾಲು! Read More »

ಬ್ಯಾಂಕ್‌ನಿಂದ 13 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನಾಭರಣ ಕಳ್ಳತನ | ಕಿಟಿಕಿ ಸರಳು ಮುರಿದು ಒಳನುಗ್ಗಿದ್ದ ಕಳ್ಳರು; ಬ್ಯಾಂಕ್‌ ಒಳಗೆಲ್ಲ ಮೆಣಸಿನ ಪುಡಿ

ದಾವಣಗೆರೆ: ಜಿಲ್ಲೆಯ ನ್ಯಾಮತಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯಿಂದ ಕಳ್ಳರು ಬರೋಬ್ಬರಿ 17 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಈ ಕುರಿತು ಬ್ಯಾಂಕ್‌ ಮ್ಯಾನೇಜರ್‌ ಸುನಿಲ್‌ ಕುಮಾರ್‌ ಯಾದವ್‌ ಪೊಲೀಸರಿಗೆ ದೂರು ನೀಡಿದ್ದಾರೆ. 12.95 ಕೋಟಿ ರೂ. ಮೌಲ್ಯದ 17.705 ಕೆಜಿ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.ನ್ಯಾಮತಿ ನಗರದ ನೆಹರು ರಸ್ತೆಯಲ್ಲಿರುವ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಶಾಖೆಯ ಕಿಟಕಿ ಸರಳುಗಳನ್ನು ಮುರಿದು ಲಾಕರ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು

ಬ್ಯಾಂಕ್‌ನಿಂದ 13 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನಾಭರಣ ಕಳ್ಳತನ | ಕಿಟಿಕಿ ಸರಳು ಮುರಿದು ಒಳನುಗ್ಗಿದ್ದ ಕಳ್ಳರು; ಬ್ಯಾಂಕ್‌ ಒಳಗೆಲ್ಲ ಮೆಣಸಿನ ಪುಡಿ Read More »

error: Content is protected !!
Scroll to Top