ಸಿಎಂ ಅಪರ ಮುಖ್ಯ ಕಾರ್ಯದರ್ಶಿಯಾಗಿ ಎಲ್.ಕೆ. ಅತೀಕ್
ಬೆಂಗಳೂರು: ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ನೇಮಕ ಮಾಡಲಾಗಿದೆ. ಈವರೆಗೂ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅತೀಕ್ ಅವರು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಜತೆಗೆ ಹಣಕಾಸು ಇಲಾಖೆಯ ಹುದ್ದೆಯಲ್ಲೂ ಮುಂದುವರಿಯಲಿದ್ದಾರೆ. ಅವರು ತುಮಕೂರು ಜಿಲ್ಲೆ ಪಾವಗಡದವರು. 1991ನೇ ಬ್ಯಾಚ್ನ ಐಎಎಸ್ ಅಧಿಕಾರಿ. ಮಂಗಳೂರು ಎಸಿಯಾಗಿ ನಂತರ ಮಂಡ್ಯ, ಹಾಸನ ಡಿಸಿಯಾಗಿದ್ದವರು. ಸರ್ವ ಶಿಕ್ಷಾ ಅಭಿಯಾನದ ಯೋಜನಾ ನಿರ್ದೇಶಕರೂ ಆಗಿದ್ದರು. ಕೇಂದ್ರ ಸರ್ಕಾರದ ಸೇವೆಯಲ್ಲಿ ಪ್ರಧಾನ ಮಂತ್ರಿಗಳ […]
ಸಿಎಂ ಅಪರ ಮುಖ್ಯ ಕಾರ್ಯದರ್ಶಿಯಾಗಿ ಎಲ್.ಕೆ. ಅತೀಕ್ Read More »










