ರಾಜ್ಯ

ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ!!

ಬೆಂಗಳೂರು: ಹಾಸನದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್​​ನಲ್ಲಿ ಬಂದರೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದ ಕಾರಣ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ನಡೆಯಿತು. ಇದರ ಬೆನ್ನಲ್ಲೇ ಮಗುವಿನ ಪೋಷಕರು ಹಾಗೂ ಆ್ಯಂಬುಲೆನ್ಸ್‌ ಚಾಲಕರು ನಿಮ್ಹಾನ್ಸ್‌ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಶವ ಪರೀಕ್ಷೆಯ ನಂತರ ಮಗುವಿನ ಮೃತದೇಹ ಪಡೆಯಲು ಪೋಷಕರು 24 ಗಂಟೆಗಳಿಗೂ ಹೆಚ್ಚು ಕಾಲ ಕಾಯುವಂತ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಸಂಜೆಯವರೆಗೂ ನಡೆಯಿತು. ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ […]

ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ!! Read More »

ಜನೌಷಧಿ ಕೇಂದ್ರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ, ಸಂವಾದ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಶವಂತಪುರ ಸುಬೇದಾರ್ ಛತ್ರಂ ರಸ್ತೆಯಲ್ಲಿರುವ “ಪ್ರಧಾನಮಂತ್ರಿಗಳ ಜನೌಷಧಿ ಕೇಂದ್ರ”ಕ್ಕೆ ಭೇಟಿ ನೀಡಿ ಜನರ ಜೊತೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರ್ಖಂಡ್‍ನ ದಿಯೋಘರ್‍ನ ಏಮ್ಸ್‍ನಲ್ಲಿ 10 ಸಾವಿರನೇ ಜನೌಷಧಿ ಕೇಂದ್ರವನ್ನು ಜನತೆಗೆ ಸಮರ್ಪಿಸಿದ್ದಾರೆ. ಮಧ್ಯಮ ವರ್ಗ ಮತ್ತು ಬಡಜನರಲ್ಲಿ ಜನೌಷಧಿ ಕೇಂದ್ರಗಳ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಕೆಲವು ಔಷಧಿಗಳು ಶೇ 70ರಷ್ಟು ಕಡಿಮೆ ದರಕ್ಕೆ ಲಭಿಸುತ್ತವೆ. ಕಳೆದ 9 ವರ್ಷಗಳಲ್ಲಿ, ದೇಶಾದ್ಯಂತ

ಜನೌಷಧಿ ಕೇಂದ್ರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ, ಸಂವಾದ Read More »

ಸಿಡಿಲು ಬಡಿದು ಸಹೋದರರಿಬ್ಬರು ಮೃತ್ಯು

ಭತ್ತ ಕಾಯಲು ಗದ್ದೆಗೆ ತೆರಳಿದ್ದ ಸಹೋದರರಿಬ್ಬರು ಸಿಡಿಲು ಬಡಿದು ಮೃತಪಟ್ಟ ಘಟನೆ ಶಿವಮೊಗ್ಗದ ಭದ್ರಾವತಿಯ ಹುಣಸೆಕಟ್ಟೆ ಜಂಕ್ಷನ್‌ನಲ್ಲಿ ನಡೆದಿದೆ. ಬೀರು (32) ಹಾಗೂ ಸುರೇಶ್ (30) ಸಿಡಿಲು ಬಡಿತದಿಂದ ಮೃತಪಟ್ಟವರು ಎನ್ನಲಾಗಿದೆ. ಇಬ್ಬರೂ ಮಂಗಳವಾರ ರಾತ್ರಿ ಕಟಾವಾಗಿದ್ದ ಭತ್ತದ ಗದ್ದೆಗೆ ಭತ್ತ ಕಾಯಲು ತೆರಳಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರ ಶವವನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆಯ ಮುಂಭಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

ಸಿಡಿಲು ಬಡಿದು ಸಹೋದರರಿಬ್ಬರು ಮೃತ್ಯು Read More »

ಸಾವಿನಲ್ಲೂ ಒಂದಾದ ಅಜ್ಜ-ಮೊಮ್ಮಗ !

ಅಜ್ಜ ಸಾವನ್ನಪ್ಪಿದ ಎರಡೂವರೆ ಗಂಟೆಗಳ ಅಂತರದಲ್ಲಿ ರಸ್ತೆ ಅಪಘಾತದಲ್ಲಿ ಮೊಮ್ಮಗ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರ ತಾಲೂಕಿನ ಶೇಡಿಮನೆಯಲ್ಲಿ ವಾಸ್ಥವ್ಯವಿರುವ ನಾರಾಯಣ ಪೂಜಾರಿ ವಯೋಸಹಜದಿಂದ ಮೃತಪಟ್ಟಿದ್ದರು. ಇದಾದ ಎರಡೂವರೆ ಗಂಟೆ ಬಳಿಕ ಮೊಮ್ಮಗ ನಿಶಾಂತ ಪೂಜಾರಿ (23) ವಾಹನ ಅಪಘಾತದಿಂದ ಮೃತಪಟ್ಟರು ಎನ್ನಲಾಗಿದೆ. ಮೃತ ನಿಶಾಂತ ಚಾಮರಾಜನಗರದ ಮೆಡಿಕಲ್ ಕಾಲೇಜೊಂದರಲ್ಲಿ  ಎರಡನೇ ವರ್ಷದ ಎಂಬಿ ವ್ಯಾಸಂಗ ಮಾಡುತ್ತಿದ್ದು, ಕಳೆದ ವಾರವಷ್ಟೆ ಊರಿಗೆ ಬಂದಿದ್ದ ನಿಶಾಂತ ಸೋಮವಾರ ಪರೀಕ್ಷೆ ಇದ್ದಿದ್ದರಿಂದ ಶನಿವಾರ ಚಾಮರಾಜನಗರಕ್ಕೆ ತೆರಳಿದ್ದ. ಆದರೆ

ಸಾವಿನಲ್ಲೂ ಒಂದಾದ ಅಜ್ಜ-ಮೊಮ್ಮಗ ! Read More »

ವಾಹನಗಳಿಗೆ ಪ್ಯಾನಿಕ್ ಬಟನ್ ಎಲ್​.ವಿ.ಟಿ. ಕಡ್ಡಾಯಕ್ಕೆ ಆದೇಶ: ಡಿ. 1ರಿಂದಲೇ ಅನ್ವಯ | ಏನಿದು ಪ್ಯಾನಿಕ್ ಬಟನ್ ಎಲ್​.ವಿ.ಟಿ.? ಕಾರ್ಯನಿರ್ವಹಣೆ ಹೇಗೆ? ಇಲ್ಲಿದೆ ಡೀಟೈಲ್ಸ್

ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೋಕೇಷನ್ ಟ್ರಾ್ಯಕಿಂಗ್ ಡಿವೈಸ್ (ವಿಎಲ್​ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಡಿ.1ರಿಂದ ಆದೇಶ ಅನ್ವಯವಾಗಲಿದ್ದು, ಒಂದು ವರ್ಷದ ಅವಧಿಯೊಳಗೆ ಅಳವಡಿಸಿಕೊಳ್ಳುವಂತೆ ಗಡುವು ನೀಡಲಾಗಿದೆ. ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲ ರೀತಿಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಬೇಕಿದ್ದು, 2024ರ ನ. 30ರವರೆಗೆ ಅವಕಾಶ ನೀಡಲಾಗಿದೆ. ವಾಹನಗಳಿಗೆ ವಿಎಲ್​ಟಿ ಮತ್ತು ಪ್ಯಾನಿಕ್ ಬಟನ್ ಡಿವೈಸ್​ಗಳನ್ನು ಅಳವಡಿಸುವ

ವಾಹನಗಳಿಗೆ ಪ್ಯಾನಿಕ್ ಬಟನ್ ಎಲ್​.ವಿ.ಟಿ. ಕಡ್ಡಾಯಕ್ಕೆ ಆದೇಶ: ಡಿ. 1ರಿಂದಲೇ ಅನ್ವಯ | ಏನಿದು ಪ್ಯಾನಿಕ್ ಬಟನ್ ಎಲ್​.ವಿ.ಟಿ.? ಕಾರ್ಯನಿರ್ವಹಣೆ ಹೇಗೆ? ಇಲ್ಲಿದೆ ಡೀಟೈಲ್ಸ್ Read More »

ಮಿಂಚುಹುಳಗಳ ಸಂಖ್ಯೆಯಲ್ಲಿ ತೀವ್ರ ಕುಸಿತ! | ಭ್ರೂಣ ಹತ್ಯೆಯಂತೆ ಮಿಂಚುಹುಳಗಳಿಗೂ ಬಂತೇ ವೈದ್ಯಕೀಯ ಕುತ್ತು??

ಕತ್ತಲ ಹೊತ್ತಲ್ಲಿ ಬೆಳಕ ಚಿಮ್ಮಿಸುತ್ತಾ ಬರುವ ಮಿಂಚುಹುಳ ಯಾರಿಗೆ ಗೊತ್ತಿಲ್ಲ ಹೇಳಿ!! ಹಳ್ಳಿಯ ಮನೆಗಳಲ್ಲಿ ಬಾಲ್ಯವನ್ನು ಕಳೆದವರಿಗೆ ಮಿಂಚುಹುಳವನ್ನು ಮರೆಯಲು ಸಾಧ‍್ಯವೇ ಇಲ್ಲ. ಆದರೆ ಇಂದು ಆ ಮಿಂಚುಹುಳಗಳು ಎಲ್ಲಿ ಹೋಗಿವೆ? ಅಪರೂಪಕ್ಕಾದರೂ ನೋಡಲು ಸಿಗಬೇಕಲ್ಲವೇ? ಸಂಶೋಧಕರ ಪ್ರಕಾರ, ಪಶ್ಚಿಮ ಘಟ್ಟಗಳಲ್ಲಿಯೂ ಮಿಂಚುಹುಳುಗಳ ಸಂತತಿ ಕಡಿಮೆಯಾಗಿದೆ. ಇದಕ್ಕೆ ಹಲವು ಕಾರಣಗಳನ್ನು ಅವರು ನೀಡಿದ್ದಾರೆ. ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಮತ್ತು ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಸಂಶೋಧಕರು ಜೀರುಂಡೆ ಜಾತಿಗಳು ಮತ್ತು ಅವುಗಳ ಪರಿಸರ

ಮಿಂಚುಹುಳಗಳ ಸಂಖ್ಯೆಯಲ್ಲಿ ತೀವ್ರ ಕುಸಿತ! | ಭ್ರೂಣ ಹತ್ಯೆಯಂತೆ ಮಿಂಚುಹುಳಗಳಿಗೂ ಬಂತೇ ವೈದ್ಯಕೀಯ ಕುತ್ತು?? Read More »

3 ತಿಂಗಳಲ್ಲಿ 242 ಭ್ರೂಣಗಳ ಹತ್ಯೆ!| ಮತ್ತಷ್ಟು ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತ | 8ರಿಂದ 10 ಲಕ್ಷ ರೂ.ಗೆ ಮಗು ಮಾರಾಟ ಜಾಲ ಬೆಳಕಿಗೆ!!

ಬೆಂಗಳೂರು: ಮೈಸೂರು ಹಾಗೂ ಮಂಡ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಭ್ರೂಣ ಹತ್ಯೆ ಜಾಲದ ಬಗೆಗಿನ ಸುದ್ದಿ ಇಡೀ ರಾಜ್ಯವನ್ನೇ ಆತಂಕಕ್ಕೊಳಗಾಗುವಂತೆ ಮಾಡಿದೆ. ಜೀವ ಉಳಿಸಬೇಕಾದ ವೈದ್ಯರೇ ಇಂತಹ ಅಮಾನವೀಯ ಕೆಲಸಕ್ಕೆ ಕೈಹಾಕಿದ್ದು ಮನುಕುಲ ತಲೆ ತಗ್ಗಿಸುವಂತಾಗಿತ್ತು. ಇದೀಗ ಪ್ರಕರಣ ಸಂಬಂಧ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮತ್ತಷ್ಟು ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅ.15ರಂದು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಕಾರು

3 ತಿಂಗಳಲ್ಲಿ 242 ಭ್ರೂಣಗಳ ಹತ್ಯೆ!| ಮತ್ತಷ್ಟು ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತ | 8ರಿಂದ 10 ಲಕ್ಷ ರೂ.ಗೆ ಮಗು ಮಾರಾಟ ಜಾಲ ಬೆಳಕಿಗೆ!! Read More »

‘ಕಾಂತಾರ ಚಾಪ್ಟರ್ 1’ ಈಗಷ್ಟೇ ಶುರು: ರಿಷಬ್ ಮಾತಿನ ಮರ್ಮವೇನು?

“ಕಾಂತಾರ ಚಾಪ್ಟರ್‌ -1” ಶುರು ಮಾಡಿದ್ದೇವೆ. ಅಧ್ಯಾಯ ಎರಡನ್ನು ನೋಡಿ ನೀವು ದೊಡ್ಡ ಹಿಟ್‌ ಮಾಡಿದ್ದೀರಿ. ಇದರ ಸಂಪೂರ್ಣ ಸಕ್ಸಸ್‌ ನ್ನು ಕನ್ನಡಿಗರಿಗೆ ಅರ್ಪಿಸಲು ಇಷ್ಟಪಡ್ತೇನೆ. ಇದು ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ  ನೆರವೇರಿದ ʼಕಾಂತಾರʼ ಪ್ರೀಕ್ವೆಲ್‌ ಮುಹೂರ್ತ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಮಾತು ಕಾಂತಾರದ ಮುಂದುವರೆದ ಪಯಣದಲ್ಲಿ ಮುನ್ನುಡಿ ಅಂದರೆ ಹಿಂದೆ ಏನು ನಡೆಯಿತು ಎನ್ನುವುದನ್ನು ಹೇಳಲು ಹೊರಟಿದ್ದೇನೆ. ಹಿಂದಿನಂತೆ ಈ ಸಿನಿಮಾಕ್ಕೂ ನಿಮ್ಮೆಲ್ಲರ ಹಾರೈಕೆ ಇರಲಿ. ಯಶಸ್ಸನ್ನು ಜವಾಬ್ದಾರಿಯಾಗಿ ತೆಗೆದುಕೊಂಡು ಅದ್ಭುತವಾಗಿ

‘ಕಾಂತಾರ ಚಾಪ್ಟರ್ 1’ ಈಗಷ್ಟೇ ಶುರು: ರಿಷಬ್ ಮಾತಿನ ಮರ್ಮವೇನು? Read More »

ಮಹಿಳೆಯನ್ನು ಕೊಂದಿದ್ದ ಹೆಬ್ಬುಲಿ ಸೆರೆ!

ಕೆಲ ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವ್ಯಾಪ್ತಿಯಲ್ಲಿ 50 ವರ್ಷದ ಮಹಿಳೆಯನ್ನು ಕೊಂದಿದ್ದ ಹುಲಿ ಮಂಗಳವಾರ ನಸುಕಿನ ಜಾವ 1.40ರ ಸುಮಾರಿಗೆ ಸೆರೆ ಸಿಕ್ಕಿದೆ. ಸೆರೆಸಿಕ್ಕ ಹತ್ತು ವರ್ಷದ ಗಂಡು ಹುಲಿ ಆರೋಗ್ಯವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಮೈಸೂರು ಸಮೀಪದ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನವೆಂಬರ್ 24ರಂದು ಮಹಿಳೆಯನ್ನು ಕೊಂದಿದ್ದ ಹುಲಿ ಎರಡು ಜಾನುವಾರುಗಳನ್ನು ಕೊಂದಿತ್ತು. ಬೋನಿನೊಳಗೆ ಕಾದು ಕುಳಿತಿದ್ದ ಅರಣ್ಯ ಸಿಬ್ಬಂದಿ ಸಮಾಧಾನಪಡಿಸಿ ಹಸುವನ್ನು ತಿನ್ನಲು ಬಂದಾಗ ಸೆರೆ

ಮಹಿಳೆಯನ್ನು ಕೊಂದಿದ್ದ ಹೆಬ್ಬುಲಿ ಸೆರೆ! Read More »

ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಟಿ. ಶ್ಯಾಮ್ ಭಟ್ ನೇಮಕ

ಬೆಂಗಳೂರು : ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಟಿ. ಶ್ಯಾಮ್ ಭಟ್ ಅವರು ನೇಮಕಗೊಂಡಿದ್ದಾರೆ. ಕರ್ನಾಟಕದ ರಾಜ್ಯಪಾಲರು ಈ ಆದೇಶ ಮಾಡಿದ್ದಾರೆ. ಟಿ. ಶ್ಯಾಮ್ ಭಟ್ ಅವರು ಜಿಲ್ಲಾಧಿಕಾರಿಗಳಾಗಿ, ಲೋಕಸೇವಾ ಆಯೋಗದಲ್ಲಿ, ಅದೇ ರೀತಿ ಬಿಬಿಎಂಪಿ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಟಿ. ಶ್ಯಾಮ್ ಭಟ್ ಅವರನ್ನು ನೇಮಕ ಮಾಡಲಾಗಿದೆ.

ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಟಿ. ಶ್ಯಾಮ್ ಭಟ್ ನೇಮಕ Read More »

error: Content is protected !!
Scroll to Top