ರಾಜ್ಯ

ಸಂಡೂರು ಉಪಚುನಾವಣೆ | ಮತದಾರರ ಬೃಹತ್ ಸಮಾವೇಶ

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದ ಅಂಗವಾಗಿ ದರೋಜಿ ಗ್ರಾಮದಲ್ಲಿ ಆಯೋಜಿಸಿದ್ದ ಮತದಾರರ ಬೃಹತ್ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರೊಂದಿಗೆ  ಭಾಗವಹಿಸಿದರು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣ ಸೇರಿದಂತೆ ಭ್ರಷ್ಟಾಚಾರದಲ್ಲಿ ಮುಳುಗಿ ಜನಕಲ್ಯಾಣ ಮರೆತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕಪಾಠ ಕಲಿಸುವ ಸದಾವಕಾಶ ಬಂದೊದಗಿದ್ದು ಸಂಡೂರಿನ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಎನ್.ಡಿ.ಎ ನೇತೃತ್ವದ ಬಿಜೆಪಿ ಅಭ್ಯರ್ಥಿ ಶ್ರೀ ಬಂಗಾರು ಹನುಮಂತು ಅವರನ್ನು […]

ಸಂಡೂರು ಉಪಚುನಾವಣೆ | ಮತದಾರರ ಬೃಹತ್ ಸಮಾವೇಶ Read More »

ಸಚಿವ ಜಮೀರ್‌ಗೂ ರಾಜ್ಯಪಾಲರ ತನಿಖೆಯ ಸಂಕಷ್ಟ

ಹೈಕೋರ್ಟ್‌ ತೀರ್ಪು ಟೀಕಿಸಿದ ಜಮೀರ್‌ ವಿರುದ್ಧ ಕ್ರಮಕ್ಕೆ ಸೂಚನೆ ಬೆಂಗಳೂರು: ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಆದೇಶದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದ ಸಚಿವ ಜಮೀರ್ ಅಹಮ್ಮದ್ ಖಾನ್ ಇದೀಗ ಸಂಕಷ್ಟ ಎದುರಾಗಿದೆ.ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವಕ್ಫ್‌ ಸಚಿವ ಜಮೀರ್‌ ಅಹ್ಮದ್‌ ಖಾನ್‌ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅನುಮತಿ ನೀಡಿದ್ದಾರೆ.ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಆದೇಶದ

ಸಚಿವ ಜಮೀರ್‌ಗೂ ರಾಜ್ಯಪಾಲರ ತನಿಖೆಯ ಸಂಕಷ್ಟ Read More »

ಮಂಗಳೂರು-ಬೆಂಗಳೂರು ಮಧ್ಯೆ ನಿರ್ಮಾಣವಾಗಲಿದೆ ಎಕ್ಸ್‌ಪ್ರೆಸ್‌ ವೇ

ಪ್ರಯಾಣ ಸಮಯ 3-4 ತಾಸಿಗಿಳಿಸಲು ಹೈಸ್ಪೀಡ್‌ ರೋಡ್‌ ನಿರ್ಮಾಣದ ಪ್ರಸ್ತಾವ ಬೆಂಗಳೂರು : ಎಲ್ಲ ಅಂದುಕೊಂಡಂತೆ ನಡೆದರೆ ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣ ಸುಲಭವಾಗಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾದರಿಯಲ್ಲಿ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ.ಬೆಂಗಳೂರು-ಮಂಗಳೂರು ಮಧ್ಯೆ ಸುಮಾರು 400 ಕಿ.ಮೀ. ಅಂತರವಿದೆ. ಬಸ್‌ನಲ್ಲಿ ಪ್ರಯಾಣಕ್ಕೆ 7-8 ತಾಸು ಸಮಯ ಬೇಕಾಗುತ್ತದೆ. ಈ ಸಮಯವನ್ನು ಕಡಿಮೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಬೆಂಗಳೂರು-ಮಂಗಳೂರು

ಮಂಗಳೂರು-ಬೆಂಗಳೂರು ಮಧ್ಯೆ ನಿರ್ಮಾಣವಾಗಲಿದೆ ಎಕ್ಸ್‌ಪ್ರೆಸ್‌ ವೇ Read More »

ವಕ್ಫ್ ಬೋರ್ಡ್ ಆಧುನಿಕ ಭಸ್ಮಾಸುರ : ಸಿ.ಟಿ. ರವಿ

ವೋಟಿನ ಆಸೆಗೆ ನಮ್ಮವರೇ ಕೊಟ್ಟ ವರ ಎಂದು ಆರೋಪ ಚಿಕ್ಕಮಗಳೂರು: ರೈತರ, ಮಠ, ದೇವಸ್ಥಾನಗಳ ಜಮೀನು ಕಬಳಿಸುತ್ತಿರುವ ವಕ್ಫ್‌ ಬೋರ್ಡನ್ನು ಬಿಜೆಪಿ ನಾಯಕ ಸಿ.ಟಿ.ರವಿ ಭಸ್ಮಾಸರನಿಗೆ ಹೋಲಿಸಿದ್ದಾರೆ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜ ಒಂದಾಗಬೇಕು ಎಂದು ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ಹೇಳಿದ್ದಾರೆ.ಚಿಕ್ಕಮಗಳೂರಿನ ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ವಿರುದ್ಧ ಮಾತನಾಡಿದ ಅವರು, ವಕ್ಫ್ ಬೋರ್ಡ್ ಆಧುನಿಕ ಭಸ್ಮಾಸುರ. ವೋಟಿನ ಆಸೆಗೆ ಅವರಿಗೆ ನಮ್ಮವರೇ ವರ ಕೊಟ್ಟರು. ಹಿಂದಿನ

ವಕ್ಫ್ ಬೋರ್ಡ್ ಆಧುನಿಕ ಭಸ್ಮಾಸುರ : ಸಿ.ಟಿ. ರವಿ Read More »

ಬಿಜೆಪಿಯನ್ನು ಕೋವಿಡ್‌ ಹಗರಣದ ಇಕ್ಕಳದಲ್ಲಿ ಸಿಲುಕಿಸಲು ಕಾಂಗ್ರೆಸ್‌ ವ್ಯೂಹ

ಯಡಿಯೂರಪ್ಪ, ರಾಮುಲು ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಸಿದ್ಧತೆ ಬೆಂಗಳೂರು: ಕೋವಿಡ್‌ ಕಾಲದಲ್ಲಿ ಮಡೆದಿದೆ ಎನ್ನಲಾಗಿರುವ ಅಕ್ರಮ ಕುರಿತಂತೆ ನ್ಯಾಯಾಧೀಶ ಮೈಕಲ್‌ ಕುನ್ಹಾ ಆಯೋಗದ ಮಧ್ಯಂತರ ವರದಿ ಆಧರಿಸಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ಸರಕಾರ ಮುಂದಾಗಿದೆ. ವರದಿಯ ಆಧಾರದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರಾಗಿದ್ದ ಬಿ. ಶ್ರೀರಾಮುಲು ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರೊಂದಿಗೆ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ಬಿಜೆಪಿಯನ್ನು ಕೋವಿಡ್‌ ಹಗರಣದ ಇಕ್ಕಳದಲ್ಲಿ ಸಿಲುಕಿಸಲು ಕಾಂಗ್ರೆಸ್‌ ವ್ಯೂಹ Read More »

ವಕ್ಫ್‌ ನೋಟಿಸ್‌ ಹಿಂಪಡೆಯಲು ಅಧಿಕೃತ ಆದೇಶ

ರೈತರಿಗೆ ತೊಂದರೆ ಕೊಡದಂತೆ ಸಿದ್ದರಾಮಯ್ಯ ಖಡಕ್‌ ಸೂಚನೆ ಬೆಂಗಳೂರು : ರೈತರಿಗೆ ನೀಡಲಾಗಿರುವ ವಕ್ಫ್‌ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಸೂಚನೆ ನೀಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟಿಸ್‌ಗಳನ್ನು ತಕ್ಷಣ ವಾಪಸ್‌ ಪಡೆಯಿರಿ. ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಆದೇಶದಲ್ಲಿ ಸೂಚಿಸಿದ್ದಾರೆ. ಕಾನೂನು ಬಾಹಿರವಾಗಿ ಹಾಗೂ ನೋಟಿಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು

ವಕ್ಫ್‌ ನೋಟಿಸ್‌ ಹಿಂಪಡೆಯಲು ಅಧಿಕೃತ ಆದೇಶ Read More »

ಮತ್ತೆ ಶತಕದತ್ತ ಮುನ್ನುಗ್ಗುತ್ತಿರುವ ಈರುಳ್ಳಿ ಬೆಲೆ

ಮಳೆಯಿಂದಾಗಿ ಬೆಳೆ ನಾಶವಾಗಿ ಇಳುವರಿ ಕುಂಠಿತ ಬೆಂಗಳೂರು : ಈರುಳ್ಳಿ ಬೆಲೆ ಮತ್ತೆ ಏರುಗತಿಯಲ್ಲಿದ್ದು, ಶತಕದತ್ತ ಮುನ್ನುಗ್ಗುತ್ತಿದೆ. ಸದ್ಯ ರಾಜ್ಯದಲ್ಲಿ‌ ಮಳೆ ತಗ್ಗಿದ್ದರೂ ಕಳೆದ ತಿಂಗಳು ಬಂದ ಅಕಾಲಿಕ ಮಳೆಗೆ ಈರುಳ್ಳಿ ಬೆಳೆ ನೀರು‌ಪಾಲಾಗಿರುವುದರಿಂದ ದಿಢೀರ್‌ ಎಂದು ಬೆಲೆ ಏರಲಾರಂಭಿಸಿದೆ. ಕೆಜಿಗೆ 50-60 ರೂ. ಇದ್ದ ಈರುಳ್ಳಿಯ ಬೆಲೆ ಕಳೆದೊಂದು ವಾರದಿಂದ 70 ರಿಂದ 80 ರೂಪಾಯಿವರೆಗೆ ಏರಿಕೆಯಾಗಿದೆ. ಚಿಲ್ಲರೆ ಬೆಲೆ ಕೆಜಿಗೆ 90 ರೂ. ಇದೆ. ಕಳೆದ ಮೂರು ತಿಂಗಳಿನಿಂದ ಈರುಳ್ಳಿಯ ಬೆಲೆ ಏರಿಕೆಯಾಗುತ್ತಲೇ ಇದೆ.

ಮತ್ತೆ ಶತಕದತ್ತ ಮುನ್ನುಗ್ಗುತ್ತಿರುವ ಈರುಳ್ಳಿ ಬೆಲೆ Read More »

ಮುಡಾ ಹಗರಣ : ಕೆಲವು ನಿವೇಶನಗಳ ಕಡತಗಳೇ ನಾಪತ್ತೆ

ಸಭೆಯಲ್ಲಿ ಕಡತ ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡ ಅಧಿಕಾರಿಗಳು ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 14 ಮುಡಾ ಸೈಟ್‌ಗಳನ್ನು ಪಡೆದುಕೊಂಡ ವಿಚಾರ ಬಯಲಾದ ಬಳಿಕ ಮುಡಾದ ಕಡತಗಳು ನಾಪತ್ತೆಯಾಗಿರುವ ಆರೋಪ ಕೆಳಿಬಂದಿತ್ತು. ಈಗ ಮುಡಾ ಅಧಿಕಾರಿಗಳೇ ಕಡತಗಳು ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಮುಡಾದ 50:50 ಅನುಪಾತದ ದಾಖಲೆಗಳೇ ಮಾಯವಾಗಿರುವುದನ್ನು ಮುಡಾ ಸಭೆಯಲ್ಲಿ ಅಧಿಕೃತವಾಗಿ ಒಪ್ಪಿಕೊಂಡಿರುವ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. 50:50 ಅನುಪಾತದ ‘ಆಯ್ದ ಕೆಲವು ಸೈಟ್‌’ಗಳ ದಾಖಲೆಗಳೇ ಮಾಯವಾಗಿವೆ. ಮುಡಾ ಪ್ರಾಧಿಕಾರದ ಸದಸ್ಯರಿಗೆ ಅಧಿಕೃತವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 50:50 ಅನುಪಾತದ ಕೆಲವು

ಮುಡಾ ಹಗರಣ : ಕೆಲವು ನಿವೇಶನಗಳ ಕಡತಗಳೇ ನಾಪತ್ತೆ Read More »

ಕೇರಳ ಹಲ್ವಾದಲ್ಲೂ ಅಪಾಯಕಾರಿ ಕೃತಕ ಬಣ್ಣ ಬಳಕೆ

31 ಕುರುಕು ತಿಂಡಿಗಳಲ್ಲಿ ರಾಸಾಯನಿಕ ಅಂಶ ಪತ್ತೆ ಬೆಂಗಳೂರು : ಹಲ್ವಾ ಸೇರಿದಂತೆ ಕೇರಳದಿಂದ ಬರುವ ಹಲವು ಕುರುಕು ತಿಂಡಿಗಳಲ್ಲಿ ಕೃತಕ ಬಣ್ಣ ಬಳಸುತ್ತಿರುವ ಆರೋಪ ಕೇಳಿಬಂದ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಕೇರಳದ ಹಲ್ವಾ ಬಹಳ ಜನಪ್ರಿಯ ತಿಂಡಿಯಾಗಿದ್ದು, ನಿತ್ಯ ರೈಲಿನಲ್ಲಿ ಮಂಗಳೂರು, ಉಡುಪಿಯಿಂದ ಹಿಡಿದ ಮುಂಬಯಿ ತನಕ ಪೂರೈಕೆಯಾಗುತ್ತದೆ. ಶಬರಿಮಲೆ ಯಾತ್ರೆ ಸಹಿತ ಕೇರಳ ಪ್ರವಾಸ ಕೈಗೊಳ್ಳುವವರು ಈ ಹಲ್ವಾ ತಂದು ಹಂಚುವುದು ವಾಡಿಕೆ. ಈಗಾಗಲೆ ಗೋಬಿಮಂಚೂರಿ, ಪಾನಿಪುರಿ, ಕೇಕ್‌ ಸೇರಿದಂತೆ ಅನೇಕ ತಿನಿಸುಗಳಿಗೆ

ಕೇರಳ ಹಲ್ವಾದಲ್ಲೂ ಅಪಾಯಕಾರಿ ಕೃತಕ ಬಣ್ಣ ಬಳಕೆ Read More »

ಉಪಚುನಾವಣೆ : ಮೂರೂ ಪಕ್ಷಗಳಿಗೆ ಗೆಲ್ಲಲೇ ಬೇಕಾದ ಸಮರ ಕಣ

ರಾಜ್ಯದ ರಾಜಕೀಯದ ಭವಿಷ್ಯ ಈ ಉಪಚುನಾವಣೆಯಲ್ಲಿದೆ ಬೆಂಗಳೂರು: ನವೆಂಬರ್‌ 13ರಂದು ನಡೆಯಲಿರುವುದು ರಾಜ್ಯದ ಬರೀ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ. ಆದರೆ ಈ ಮೂರು ಕ್ಷೇತ್ರಗಳೇ ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿವೆ ಎನ್ನಲಾಗುತ್ತಿದೆ. ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಗೆಲ್ಲಲು ಮೂರೂ ಪಕ್ಷಗಳು ಶಕ್ತಿಮೀರಿ ಪ್ರಯತ್ನಸುತ್ತಿವೆ, ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹೋರಾಡುತ್ತಿವೆ. ಮೂರೂ ಪಕ್ಷಗಳಿಗೆ ಈ ಚುನಾವಣೆಯ ಗೆಲುವು ಅನಿವಾರ್ಯ ಎನ್ನುವುದು ವಾಸ್ತವ. ಮೂರು ಕ್ಷೇತ್ರಗಳ ಶಾಸಕರು ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಾರಣ

ಉಪಚುನಾವಣೆ : ಮೂರೂ ಪಕ್ಷಗಳಿಗೆ ಗೆಲ್ಲಲೇ ಬೇಕಾದ ಸಮರ ಕಣ Read More »

error: Content is protected !!
Scroll to Top