ರಾಜ್ಯ

ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ : ಅಮಿತ್‌ ಶಾ ವಿಶ್ವಾಸ

ಮೋದಿ ನಾಯಕತ್ವ, ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ಹೊಸದಿಲ್ಲಿ : ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಕರ್ನಾಟಕಕ್ಕೆ ಎರಡು ತಿಂಗಳಲ್ಲಿ ಐದು ಬಾರಿ ಹೋಗಿದ್ದೇನೆ. ಅಲ್ಲಿನ ಜನರ ನಾಡಿಮಿಡಿತ ಅರಿತಿದ್ದೇನೆ. ನರೇಂದ್ರ ಮೋದಿ ಅವರು ಜನಪ್ರಿಯತೆಯನ್ನು ಕರ್ನಾಟಕ ಕಣ್ಣಾರೆ ಕಂಡಿದೆ. ಅಲ್ಲಿ ತುಂಬ ದೊಡ್ಡ ಮಟ್ಟದ ಬಹುಮತ ಬಿಜೆಪಿಗೆ […]

ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ : ಅಮಿತ್‌ ಶಾ ವಿಶ್ವಾಸ Read More »

ಸರಕಾರದಿಂದ ಕೋಟಿಗಟ್ಟಲೆ ರೂ. ಟೆಂಡರ್‌ ಹಗರಣ : ಡಿಕೆಶಿ 

ತರಾತುರಿಯಲ್ಲಿ ಟೆಂಡರ್‌ ಕರೆಯಲಾಗುತ್ತಿದೆ ಎಂದು ಆರೋಪ ಬೆಂಗಳೂರು : ಸರ್ಕಾರದ ಅವಧಿ ಕೆಲವೇ ದಿನಗಳಿರುವುದರಿಂದ ಎಲ್ಲ ಇಲಾಖೆಗಳಲ್ಲಿ ತರಾತುರಿಯಿಂದ ಟೆಂಡರ್ ಕರೆಯಲಾಗುತ್ತಿದೆ. 500 ಕೋಟಿ ರೂ. ಟೆಂಡರ್ ಅನ್ನು 1000 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್​ನಲ್ಲಿ ತೊಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಆರೋಪಿಸಿದ್ದಾರೆ.ಡಿಕೆಶಿ ಮನೆಯಲ್ಲಿ ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿ ಕರೆದು ವಿವಿಧ ಇಲಾಖೆಗಳಲ್ಲಿ ಟೆಂಡರ್ ಗೋಲ್ಮಾಲ್ ಹೇಗೆ ನಡೆಯುತ್ತಿದೆ ಎಂಬ ವಿವರ ನೀಡಿದ್ದಾರೆ. ಸರ್ಕಾರ ಇನ್ನು ಒಂದು

ಸರಕಾರದಿಂದ ಕೋಟಿಗಟ್ಟಲೆ ರೂ. ಟೆಂಡರ್‌ ಹಗರಣ : ಡಿಕೆಶಿ  Read More »

ಆಮದು ಅಡಿಕೆ ಸುಂಕ ಹೆಚ್ಚಿಸಿದ ಕೇಂದ್ರ ಸರಕಾರ | ವಿದೇಶಿ ಅಡಿಕೆ ದರ 700 ರೂ. ಸಮೀಪಿಸಲಿದೆ! | ದೇಶಿಯ ಅಡಿಕೆ ಧಾರಣೆ ಹೆಚ್ಚುವ ಸುಳಿವು

ಪುತ್ತೂರು: ಅಮಿತ್ ಶಾ ಪುತ್ತೂರಿಗೆ ಆಗಮಿಸಿ ಏನೂ ಘೋಷಣೆ ಮಾಡಲಿಲ್ಲ ಎನ್ನುವ ಹೇಳಿಕೆಗಳ ಬೆನ್ನಲ್ಲೇ, ಅಡಿಕೆ ಬೆಳೆಗಾರರ ಪಾಲಿಗೆ ಮಹತ್ವದ್ದೆನ್ನಲಾದ ಅಧಿಸೂಚನೆ ಕೇಂದ್ರದಿಂದ ಹೊರಬಿದ್ದಿದೆ. ವಿದೇಶಗಳಿಂದ ಆಮದಾಗುತ್ತಿದ್ದ ಅಡಿಕೆ ಕೆ.ಜಿ.ಗೆ 100 ರೂ.ನಷ್ಟು ಸುಂಕ ಹೆಚ್ಚಿಸಿದ್ದು, ಮುಂದೆ ವಿದೇಶಿ ಅಡಿಕೆಗಳಿಗೆ ಕಡಿವಾಣ ಬೀಳುವುದು ಪಕ್ಕಾ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹಳೆ ಅಡಿಕೆ 460 ರೂ.ನಿಂದ 500 ರೂವರೆಗೆ ಹಾಗೂ ಹೊಸಅಡಕೆಗೆ 400 ರೂ.ವರೆಗೆ ಧಾರಣೆ ಇದೆ. ಆದರೆ ವಿದೇಶಗಳಿಂದ ಆಮದಾಗುತ್ತಿದ್ದ ಅಡಿಕೆಗೆ ಆಮದು ಸುಂಕ ಕಡಿಮೆ ಇರುತ್ತಿದ್ದ

ಆಮದು ಅಡಿಕೆ ಸುಂಕ ಹೆಚ್ಚಿಸಿದ ಕೇಂದ್ರ ಸರಕಾರ | ವಿದೇಶಿ ಅಡಿಕೆ ದರ 700 ರೂ. ಸಮೀಪಿಸಲಿದೆ! | ದೇಶಿಯ ಅಡಿಕೆ ಧಾರಣೆ ಹೆಚ್ಚುವ ಸುಳಿವು Read More »

ಪಿಎಸ್‌ಐ ನೇಮಕಾತಿ ಹಗರಣದ ರೂವಾರಿಯಿಂದ ಕಾಂಗ್ರಸ್‌ ಟಿಕೆಟ್‌ ಕೋರಿಕೆ

ಟಿಕೆಟ್‌ ಕೊಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಪಿಎಸ್ಐ ನೇಮಕಾತಿ ಹಗರಣದ ರೂವಾರಿ ಕಾಂಗ್ರೆಸ್‌ ನಾಯಕ ರುದ್ರಗೌಡ್ ಪಾಟೀಲ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿ ಟಿಕೆಟ್ ನೀಡುವಂತೆ ಕಾಂಗ್ರೆಸ್​ಗೆ ಮನವಿ ಮಾಡಿದ್ದಾನೆ. ರುದ್ರಗೌಡ್ ಪಾಟೀಲ್​​ಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕೈ ನಾಯಕರಿಗೆ ಮನವಿ ಮಾಡಿದ್ದೇವೆ. ಟಿಕೆಟ್ ನೀಡದೆ ಇದ್ದರೆ ಬಂಡಾಯ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗ್ಯಾರಂಟಿ ಎಂದು ಪಾಟೀಲನ ಸಹೋದರ ಮಹಾಂತ್ ಪಾಟೀಲ್ ಹೇಳಿದ್ದಾನೆ.ಪಿಎಸ್ಐ

ಪಿಎಸ್‌ಐ ನೇಮಕಾತಿ ಹಗರಣದ ರೂವಾರಿಯಿಂದ ಕಾಂಗ್ರಸ್‌ ಟಿಕೆಟ್‌ ಕೋರಿಕೆ Read More »

ಆಂಧ್ರಪ್ರದೇಶದ ರಾಜ್ಯಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ನೇಮಕ

ಪುತ್ತೂರು : ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಮೂಡಬಿದಿರೆ ಬೆಳುವಾಯಿ ನಿವಾಸಿಯಾದ ಎಸ್.ಅಬ್ದುಲ್ ನಝೀರ್ ಮೂದಬಿದ್ರೆ ಮಹಾವೀರ ಕಾಲೇಜಿನಲ್ಲಿ ಪದವಿ ಪೂರೈಸಿ, ಮಂಗಳೂರು ಎಸ್ ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. 2019 ರಲ್ಲಿ ಈಶ್ವರಮಂಗಲದ ಹನುಮಗಿರಿ ಕ್ಷೇತ್ರಕ್ಕೆ ತನ್ನ ಪತ್ನಿ ಸಮೇತ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಗಜಾನನ ವಿದ್ಯಾಸಂಸ್ಥೆಯ ಮಕ್ಕಳೊಂದಿಗೆ ಸಂವಿಧಾನದ ಆಶಯಗಳು ವಿಚಾರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆಂಧ್ರಪ್ರದೇಶದ ರಾಜ್ಯಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ನೇಮಕ Read More »

ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಓಟು ಹಾಕಿ! | ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತೆ ಯಡವಟ್ಟು

ಬೆಂಗಳೂರು : ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ಮತ ಕೇಳಿರುವ ಘಟನೆ ವಿಜಯಪುರದ ಪ್ರಜಾಧ್ವನಿ ಯಾತ್ರೆಯಲ್ಲಿ ನಡೆದಿದೆ. ವಿಜಯಪುರದ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಮತ ಹಾಕಿ, ಬಿಜೆಪಿಗೆ ಮತ ಹಾಕಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ವೀಡಿಯೊ ತುಣುಕು ನಿನ್ನೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್‌ ಆಗಿದ್ದು, ವಿರೋಧಿಗಳ ಬಾಯಿಯಿಂದ ಕೆಲವೊಮ್ಮೆ ತಪ್ಪಿಯಾದರೂ ಸತ್ಯ ಹೊರಬರುತ್ತದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾವು

ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಓಟು ಹಾಕಿ! | ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತೆ ಯಡವಟ್ಟು Read More »

ಬಿಜೆಪಿ ಶಾಸಕ, ಸಂಸದರಿಗೆ ಶಾ ಕ್ಲಾಸ್‌

ನಿಷ್ಕ್ರಿಯ ಜನಪ್ರತಿನಿಧಿಗಳಿಗೆ ತರಾಟೆ ಬೈಗುಳ ಕೇಳಿಸಿಕೊಂಡೇ ಚುನಾವಣೆ ಗೆಲ್ಲಬೇಕೆಂದು ಪಾಠ ಮಂಗಳೂರು : ಬಿಜೆಪಿ ಕೋರ್‌ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿ ಶಾಸಕರು ಮತ್ತು ಸಂಸದರಿಗೆ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಪುತ್ತೂರಿನ ಕಾರ್ಯಕ್ರಮ ಮುಗಿಸಿಕೊಂಡು ಮಂಗಳೂರಿಗೆ ಬಂದ ಶಾ ರಾತ್ರಿ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳ ಶಾಸಕರು ಮತ್ತು ಸಂಸದರ ಹಾಗೂ ಪದಾಧಿಕಾರುಗಳ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ನಿಷ್ಕ್ರಿಯ ಶಾಸಕರನ್ನು ಮತ್ತು ಸಂಸದರನ್ನು ಸರಿಯಾಗಿ ಜಾಡಿಸಿದ್ದಾರೆ. ಒಂದು

ಬಿಜೆಪಿ ಶಾಸಕ, ಸಂಸದರಿಗೆ ಶಾ ಕ್ಲಾಸ್‌ Read More »

ನಾನು ಹಿಂದೂ, ನನ್ನ ಅಪ್ಪ ಅವ್ವನೂ ಹಿಂದೂ : ಸಿದ್ದರಾಮಯ್ಯ

ಸಿ.ಟಿ. ರವಿ ಟೀಕೆಗಳಿಗೆ ತಿರುಗೇಟು ಬೆಂಗಳೂರು : ನಾನು ಹಿಂದೂ, ನಮ್ಮಪ್ಪ-ಅವ್ವನೂ ಹಿಂದೂ. ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂ ಆಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ನಾನು ಹಿಂದೂ ಅಲ್ಲವಾ, ನಮ್ಮವ್ವ-ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ, ಗೊತ್ತಿಲ್ಲದಿದ್ದರೆ ಕೇಳುವುದು ಬೇಡ ಎಂದು ಸಿ.ಟಿ. ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಎಲ್ಲವೂ ಮುಸ್ಲಿಂರಿಗೆ

ನಾನು ಹಿಂದೂ, ನನ್ನ ಅಪ್ಪ ಅವ್ವನೂ ಹಿಂದೂ : ಸಿದ್ದರಾಮಯ್ಯ Read More »

ಉಡುಪಿ, ದ.ಕ. 10 ಸ್ಥಾನಗಳಲ್ಲಿ ಗೆಲುವು : ಡಿಕೆಶಿ

ಮೊಗವೀರರು, ಬಂಟರು, ಬಿಲ್ಲವರು, ಕುಲಾಲ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೆ ತಪ್ಪು ಮಾಹಿತಿ ಬಂದಿದೆ. ನಮ್ಮ ವರದಿಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬಂದಿದೆ ಎಂದರು.ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್

ಉಡುಪಿ, ದ.ಕ. 10 ಸ್ಥಾನಗಳಲ್ಲಿ ಗೆಲುವು : ಡಿಕೆಶಿ Read More »

ಗಂಗೊಳ್ಳಿಯಲ್ಲಿ ಭವತಿ ಭಿಕ್ಷಾಂದೇಹಿ

ಪುತ್ತೂರು: ಪುತ್ತೂರು ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ ಇದರ ನೇತೃತ್ವದಲ್ಲಿ ಬೆಳ್ತಂಗಡಿಯ ತೆಂಕಕಾರಂದೂರು ನಿವಾಸಿ ಪ್ರಶಾಂತ್ ಲಾವಣ್ಯ ದಂಪತಿ ಪುತ್ರಿ ಮಾನ್ಯ ಅವರ ಚಿಕಿತ್ಸೆ ಹಿನ್ನೆಲೆಯಲ್ಲಿ ಗಂಗೊಳ್ಳಿ ಖಾರ್ವಿಕೆರೆ ಶ್ರೀ ಮಹಾಂಕಾಳಿ ಅಮ್ಮ ದೇವಸ್ಥಾನದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮ ನಡೆಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಈಶ್ವರ್ ಮಲ್ಪೆ ಅವರ ಸಹಕಾರದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ 6 ವರ್ಷದ ಮಾನ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗಂಗೊಳ್ಳಿಯಲ್ಲಿ ಭವತಿ ಭಿಕ್ಷಾಂದೇಹಿ Read More »

error: Content is protected !!
Scroll to Top