ರಾಜ್ಯ

ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಬೃಹತ್ ಮಹಿಳಾ ಸಮಾವೇಶ

ಬೆಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಚುಂಚಾದ್ರಿ ಮಹಿಳಾ ಸಮಾವೇಶ ನಡೆಯಿತು. ಸಮಾರಂಭವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಉದ್ಘಾಟಿಸಿ, ಆಶೀರ್ಚನ ನೀಡಿದರು. ಇದೇ ಸಂದರ್ಭ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಉಪಸ್ಥಿತರಿದ್ದು, ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಯರನ್ನು ಸನ್ಮಾನಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಬೃಹತ್ ಮಹಿಳಾ ಸಮಾವೇಶ Read More »

ಮದ್ಯ ಸೇವನೆ ವಯೋಮಿತಿ ಇಳಿಸಲು ಚಿಂತನೆ

ಈ ನಿಯಮ ಜಾರಿಗೆ ಬಂದರೆ ಹದಿಹರೆಯದವರಿಗೂ ಸಿಗುತ್ತದೆ ಮದ್ಯ ಬೆಂಗಳೂರು: ಮದ್ಯ ಖರೀದಿ ಮತ್ತು ಸೇವನೆಯ ವಯಸ್ಸಿನ ಮಿತಿಯನ್ನು ಇಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಪ್ರಕಾರ ಮದ್ಯ ಖರೀದಿಸುವ ವಯಸ್ಸು 21 ವರ್ಷ ಇದೆ. ಈಗ ಈ ಮಿತಿಯನ್ನು 18 ವರ್ಷಕ್ಕೆ ಇಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಅಬಕಾರಿ ಇಲಾಖೆ ಜ.9ರಂದು ಕರಡು ಪ್ರಕಟಿಸಿದ್ದು, 30 ದಿನಗಳಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು

ಮದ್ಯ ಸೇವನೆ ವಯೋಮಿತಿ ಇಳಿಸಲು ಚಿಂತನೆ Read More »

ಗ್ಯಾಸ್‌ ಸಿಲಿಂಡರ್‌ ತುಂಬಿಸಿಕೊಡಲಿದೆ ಕಾಂಗ್ರೆಸ್‌

ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಪುಕ್ಕಟೆ ಕೊಡುಗೆ ಬೆಂಗಳೂರು: ಮತದಾರರನ್ನು ಸೆಳೆಯಲು 200 ಯುನಿಟ್‌ ತನಕ ಉಚಿತ ವಿದ್ಯುತ್‌ ಕೊಡುವ ಭರವಸೆ ನೀಡಿದ್ದ ಕಾಂಗ್ರೆಸ್‌ ಇದೀಗ ಎರಡನೇ ಕೊಡುಗೆಯಾಗಿ ಮಹಿಳಾ ಮತದಾರರ ಮನಗೆಲ್ಲುವ ಸಲುವಾಗಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುವ ಇನ್ನೊಂದು ಆಕರ್ಷಕ ಪುಕ್ಕಟೆ ಕೊಡುಗೆಯ ಘೋಷಣೆ ಮಾಡಿದೆ.ಸೋಮವಾರ ಬೆಂಗಳೂರಿನಲ್ಲಿ ನಡೆದ ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಎಂಬ ಯೋಜನೆಯನ್ನು

ಗ್ಯಾಸ್‌ ಸಿಲಿಂಡರ್‌ ತುಂಬಿಸಿಕೊಡಲಿದೆ ಕಾಂಗ್ರೆಸ್‌ Read More »

ಪುತ್ತೂರಿನಲ್ಲಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ: ಡಿ.ವಿ.ಸದಾನಂದ ಗೌಡರಿಗೆ ಆಮಂತ್ರಣ

ಪುತ್ತೂರು: ಪುತ್ತೂರಿನಲ್ಲಿ ನಡೆಯಲಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಯ ಆಮಂತ್ರಣವನ್ನು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಅವರ ಬೆಂಗಳೂರಿನ ನಿವಾಸದಲ್ಲಿ ನೀಡಲಾಯಿತು. ಆಮಂತ್ರಣವನ್ನು ದೇವರ ಮುಂದೆ ಇಟ್ಟು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಎಂ.ಪಿ ಉಮೇಶ್, ಯು.ಪಿ. ರಾಮಕೃಷ್ಣ ಉಪಸ್ಥಿತರಿದ್ದರು.

ಪುತ್ತೂರಿನಲ್ಲಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ: ಡಿ.ವಿ.ಸದಾನಂದ ಗೌಡರಿಗೆ ಆಮಂತ್ರಣ Read More »

ಕ್ಷೇತ್ರ ಹುಡುಕಾಟ ದುರಂತ : ಸಿ.ಟಿ.ರವಿ ವ್ಯಂಗ್ಯ

ಕಾಂಗ್ರೆಸ್ಸನ್ನು ಜನರೇ ಗುಡಿಸಿ ಹಾಕುತ್ತಿದ್ದಾರೆ ಬೆಂಗಳೂರು : ಸುಮಾರು 40 ವರ್ಷದ ಸುದೀರ್ಘ ರಾಜಕೀಯ ಜೀವನದಲ್ಲಿ ಕಡೆವರೆಗೂ ಕ್ಷೇತ್ರ ಹುಡುಕುತ್ತಿರುವುದು ದುರಂತ ಎಂದು ಸಿ.ಟಿ.ರವಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ. ಮೈಸೂರಿನಲ್ಲಿ ಗೆಲ್ಲುವ ವಿಶ್ವಾಸ ಸಿದ್ದರಾಮಯ್ಯ ಅವರಿಗಿಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ನಂತರ ಅವರಿಗೆ ಎಲ್ಲೂ ಗೆಲ್ಲುವ ವಿಶ್ವಾಸ ಇಲ್ಲ, ಬಾದಾಮಿಯಲ್ಲೂ ಎರಡನೇ ಬಾರಿ ಗೆಲ್ಲುತ್ತೇನೆಂಬ ವಿಶ್ವಾಸ ಇಲ್ಲ, ಹೀಗಾಗಿ ಕೋಲಾರಕ್ಕೆ ಹೋಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವ, ಜನ ತೀರ್ಮಾನ ಮಾಡ್ತಾರೆ. ಜನರ ತೀರ್ಮಾನವನ್ನು ಹೇಳುವುದಕ್ಕೆ

ಕ್ಷೇತ್ರ ಹುಡುಕಾಟ ದುರಂತ : ಸಿ.ಟಿ.ರವಿ ವ್ಯಂಗ್ಯ Read More »

ಫೆ.17ಕ್ಕೆ ರಾಜ್ಯ ಬಜೆಟ್‌ ಮಂಡನೆ

ಚುನಾವಣೆ ದೃಷ್ಟಿಯ ಯೋಜನೆ ನಿರೀಕ್ಷೆ ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್‌ ಫೆ.17ರಂದು ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿದ್ಧತೆಗಳನ್ನು ಆರಂಭಿಸಿದ್ದಾರೆ.ಬಜೆಟ್‌ಗೆ ಸಿದ್ಧತೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕಲಬುರ್ಗಿಗೆ ಭೇಟಿ ನೀಡಿದ ಮರುದಿನ ಅಂದರೆ ಜ.20 ರಿಂದ ಇಲಾಖಾ ಮುಖ್ಯಸ್ಥರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಣಿ ಸಭೆ ನಡೆಸಲಿದ್ದಾರೆ.ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗಲೇ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲು ಮುಂದಾಗಿದ್ದು, ಇದು

ಫೆ.17ಕ್ಕೆ ರಾಜ್ಯ ಬಜೆಟ್‌ ಮಂಡನೆ Read More »

ಜ.15ರಂದು ಪ್ರಿಯಾಂಕ ಗಾಂಧಿ ಬೆಂಗಳೂರಿಗೆ

ಕಾಂಗ್ರೆಸಿನ ನಾ ನಾಯಕಿ ಕಾರ್ಯಕ್ರಮ ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.16 ರಂದು ನಡೆಯುವ ‘ನಾ ನಾಯಕಿ’ ಸಮಾವೇಶಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಗಮಿಸಲಿದ್ದಾರೆ. ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವ ಬಗ್ಗೆ ಯೋಜಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಮಹಿಳೆಯರ ಬೆಂಬಲ ಪಡೆಯುವ ಗುರಿಯನ್ನು ಪ್ರಿಯಾಂಕಾ ಗಾಂಧಿ ಅವರು ಹೊಂದಿದ್ದಾರೆ. ಏಪ್ರಿಲ್-ಮೇ ವೇಳೆಗೆ ನಡೆಯಲಿರುವ ಚುನಾವಣೆಗೆ

ಜ.15ರಂದು ಪ್ರಿಯಾಂಕ ಗಾಂಧಿ ಬೆಂಗಳೂರಿಗೆ Read More »

ಇಂದು ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ

ಕಾಂಗ್ರೆಸ್‌ನಿಂದ ತೀವ್ರ ವಿರೋಧ ಬೆಂಗಳೂರು: ಟಿಪ್ಪು ನಿಜ ಕನಸುಗಳು ವಿವಾದಾತ್ಮಕ ನಾಟಕ ರಾಜ್ಯದಾದ್ಯಂತ ಸಂಚಲನ ಮೂಡಿಸಿರುವಾಗಲೇ ಬಿಜೆಪಿ ಇದೇ ಮಾದರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಣಿಯಲು ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಸಿದ್ಧಪಡಿಸಿದೆ. ಇಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯಾಗಲಿದ್ದು ಇದನ್ನು ಕಾಂಗ್ರೆಸ್‌ ತೀವ್ರರವಾಗಿ ವಿರೋಧಿಸಿ ತಡೆಯುವಂತೆ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಪುಸ್ತಕ ಬಿಡುಗಡೆ ಹಿಂದೆ ದುರುದ್ದೇಶವಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೆ ಅದನ್ನು ಕೂಡಲೇ ರದ್ದು ಮಾಡಬೇಕು. ಕಾನೂನು ಸುವ್ಯವಸ್ಥೆ

ಇಂದು ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ Read More »

ಹಾವೇರಿಯಲ್ಲಿ ನಾಳೆಯಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳ

1 ಸಾವಿರ ಬಾಣಸಿಗರಿಂದ ಅಡುಗೆ ತಯಾರಿ; ಭದ್ರತೆಗೆ 12 ಸಾವಿರ ಪೊಲೀಸರು ಹಾವೇರಿ: ಹಾವೇರಿಯಲ್ಲಿ ಶುಕ್ರವಾರದಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳನನಡೆಯಲಿದ್ದು, ಅದಕ್ಕಾಗಿ ಭರ್ಜರಿ ತಯಾರಿ ನಡೆಸಲಾಗಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಸಮ್ಮೇಳನದಲ್ಲಿ ಭದ್ರತೆ ಮತ್ತು ಸಂಚಾರ ನಿರ್ವಹಣೆಯ ಮೇಲ್ವಿಚಾರಣೆಗೆ ಸುಮಾರು 12 ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕರನ್ನು ನಿಯೋಜಿಸಲಾಗಿದೆ.ಸಂದರ್ಶಕರು ಸ್ಥಳವನ್ನು ತಲುಪಲು ಮತ್ತು ಪಾರ್ಕಿಂಗ್ ಸ್ಲಾಟ್‌ಗಳನ್ನು ಹುಡುಕಲು ಕ್ಯೂಆರ್ ಕೋಡ್‌ಗಳನ್ನು ಪರಿಚಯಿಸಲಾಗುತ್ತಿದೆ. ಅಡುಗೆ ಕೋಣೆ ಸೇರಿದಂತೆ

ಹಾವೇರಿಯಲ್ಲಿ ನಾಳೆಯಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳ Read More »

ಕಂಬಳ ನಿಯಮದಲ್ಲಿ ಕೆಲವು ಬದಲಾವಣೆ

ತುರ್ತುಸಭೆಯಲ್ಲಿ ನಿರ್ಧಾರ ಮೂಡುಬಿದಿರೆ : ಕಂಬಳ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಬುಧವಾರ ನಡೆದ ತುರ್ತುಸಭೆಯಲ್ಲಿ ನಿರ್ಧರಿಸಲಾಗಿದೆ.ಮುಂದಿನ ಕಂಬಳಗಳಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಕೊಡುಗೆಯಾಗಿ ನೀಡದ ಸೆನ್ಸಾರ್‌ ಸಿಸ್ಟಂ ಅಳವಡಿಸಿಕೊಂಡು ಫಲಿತಾಂಶ ನಿರ್ಧರಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸೆನ್ಸಾರ್‌ ಸಿಸ್ಟಂ ನಿರ್ವಹಣೆಯ ಪೂರ್ಣ ಜವಾಬ್ದಾರಿ ಕಂಗಿನಮನೆ ವಿಜಯಕುಮಾರ್‌ ಅವರದ್ದು. ಒಂದು ವೇಳೆ ಈ ಸೆನ್ಸಾರ್‌ ಸಿಸ್ಟಂ ಕಂಬಳ ಆಗುವಾಗ ಕೈಕೊಟ್ಟರೆ ಮೂರನೇ ತೀರ್ಪುಗಾರರ ತೀರ್ಮಾನವನ್ನು ಅವಲಂಬಿಸಲಾಗುವುದು. ಮೂರನೇ ತೀರ್ಪುಗಾರರಾಗಿ ಜಿಲ್ಲಾ ಕಂಬಳ ಸಮಿತಿ ಮತ್ತು ಆಯಾಯ ಕಂಬಳ

ಕಂಬಳ ನಿಯಮದಲ್ಲಿ ಕೆಲವು ಬದಲಾವಣೆ Read More »

error: Content is protected !!
Scroll to Top