ರಾಜ್ಯ

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅವಧಿ ನ.30ರ ತನಕ ವಿಸ್ತರಣೆ

ಇನ್ನೂ ಒಂದೂವರೆ ಕೋಟಿ ವಾಹನಗಳಿಗೆ ನಂಬರ್‌ ಪ್ಲೇಟ್‌ ಅಳವಡಿಕೆಯಾಗಿಲ್ಲ ಬೆಂಗಳೂರು: ಸಾರಿಗೆ ಇಲಾಖೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಿ ವಾಹನ ಮಾಲಕರಿಗೆ ತುಸು ನೆಮ್ಮದಿ ನೀಡಿದೆ. ಈಗಾಗಲೇ ಮೂರಕ್ಕೂ ಅಧಿಕ ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಆದರೆ ಇನ್ನೂ ಸುಮಾರು 1.5 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಬಾಕಿ ಇರುವುದರಿಂದ ಅಂತಿಮ ಗಡುವನ್ನು ವಿಸ್ತರಣೆ ಮಾಡಲಾಗಿದೆ.ಸಾರಿಗೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪಾ ವಿ. ಎಸ್. ಎಚ್‌ಎಸ್‌ಆರ್‌ಪಿ ಗಡುವನ್ನು […]

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅವಧಿ ನ.30ರ ತನಕ ವಿಸ್ತರಣೆ Read More »

ಮುಡಾ ಹಗರಣ : ನಾಳೆ ಲೋಕಾಯುಕ್ತ ಪೊಲೀಸರಿಂದ ಸಿದ್ದರಾಮಯ್ಯ ವಿಚಾರಣೆ

40 ವರ್ಷದ ರಾಜಕಾರಣದಲ್ಲಿ ಮೊದಲ ಸಲ ಹಗರಣದ ಕೇಸಿನಲ್ಲಿ ವಿಚಾರಣೆ ಎದುರಿಸಲಿರುವ ಸಿದ್ದರಾಮಯ್ಯ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) 14 ಸೈಟ್‌ಗಳನ್ನು ಅಕ್ರಮವಾಗಿ ಪಡೆದುಕೊಂಡ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ನ.6ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.ಮುಡಾ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರನ್ನು ಲೋಕಾಯುಕ್ತ ಪೊಲೀಸರು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಆಗಲೇ ಸಿದ್ದರಾಮಯ್ಯನವರು ಲೋಕಾಯುಕ್ತ ವಿಚಾರಣೆ ಎದುರಿಸಲಿರುವುದು ಖಾತ್ರಿಯಾಗಿತ್ತು.ಸಿದ್ದರಾಮಯ್ಯನವರ 40

ಮುಡಾ ಹಗರಣ : ನಾಳೆ ಲೋಕಾಯುಕ್ತ ಪೊಲೀಸರಿಂದ ಸಿದ್ದರಾಮಯ್ಯ ವಿಚಾರಣೆ Read More »

ಗುರುಪ್ರಸಾದ್‌ ಮೊಬೈಲ್‌, ಲ್ಯಾಪ್‌ಟಾಪ್‌ ಎಫ್‌ಎಸ್‌ಎಲ್‌‌ ಪರೀಕ್ಷೆಗೆ ರವಾನೆ

ಸಾವಿನ ನಿಜವಾದ ಕಾರಣ ಇನ್ನೂ ನಿಗೂಢ ಬೆಂಗಳೂರು: ನಿರ್ದೇಶಕ, ನಟ ಗುರುಪ್ರಸಾದ್ ಆತ್ಮಹತ್ಯೆಯ ಕಾರಣ ನಿಗೂಢವಾಗಿರುವುದ ಹಿನ್ನೆಲೆಯಲ್ಲಿ ಪೊಲೀಸರು ಅವರ ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಟ್ಯಾಬ್‌ ಇತ್ಯಾದಿಗಳನ್ನಜು ವಿಧಿವಿಜ್ಞಾನ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ ಲ್ಯಾಬ್‌ಗೆ ರವಾನಿಸಿದ್ದಾರೆ.ಭಾನುವಾರ ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ 72 ತಾಸಿಗೂ ಅಧಿಕ ಸಮಯ ಕಳೆದ ಬಳಿಕ ಮೃತದೇಹ ಸಿಕ್ಕಿದೆ. ಆದರೆ ಆತ್ಮಹತ್ಯೆಐ ಅಸಲಿ ಕಾರಣ ಇನ್ನೂ ನಿಗೂಢವಾಗಿ ಇರುವುದರ ಹಿನ್ನೆಲೆಯಲ್ಲಿ ಪೊಲೀಸರು ಮೊಬೈಲ್‌ ಫೋನ್‌

ಗುರುಪ್ರಸಾದ್‌ ಮೊಬೈಲ್‌, ಲ್ಯಾಪ್‌ಟಾಪ್‌ ಎಫ್‌ಎಸ್‌ಎಲ್‌‌ ಪರೀಕ್ಷೆಗೆ ರವಾನೆ Read More »

ವಕ್ಫ್‌ ನೋಟಿಸ್‌ ಭೀತಿ : ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ವಕ್ಫ್‌ ದಾಖಲೆ ತಿದ್ದುಪಡಿ ಕುರಿತು ಸಿಬಿಐ, ಇ.ಡಿ. ತನಿಖೆಗೆ ಒತ್ತಾಯ ಬೆಂಗಳೂರು: ರಾಜ್ಯದ ವಿವಿಧೆಡೆ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ನಮೂದಿಸಿ ನೋಟಿಸ್‌ ನೀಡಿರುವುದನ್ನು ಪ್ರತಿಭಟಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ವಕ್ಫ್ ಆಸ್ತಿ ಕುರಿತಾದ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಆಗ್ರಹಿಸಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿಗಳ ಎದುರು

ವಕ್ಫ್‌ ನೋಟಿಸ್‌ ಭೀತಿ : ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ Read More »

ಆತ್ಮಹತ್ಯೆ ಮಾಡಿಕೊಂಡ ನಟ, ನಿರ್ದೇಶಕ ಗುರುಪ್ರಸಾದ್ !

ಬೆಂಗಳೂರು: ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾದನಾಯಕಹಳ್ಳಿ ಅಪಾರ್ಟ್‌ಮೆಂಟ್‌ ನಲ್ಲಿರುವ ತಮ್ಮ ನಿವಾಸದಲ್ಲಿ ಮೂರು ದಿನಗಳ ಹಿಂದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಆತ್ಮಹತ್ಯೆ ಮಾಡಿಕೊಂಡ ನಟ, ನಿರ್ದೇಶಕ ಗುರುಪ್ರಸಾದ್ ! Read More »

ಅಮೆಜಾನ್‌ ಕಂಪನಿಗೆ 30 ಕೋಟಿ ರೂ. ವಂಚಿಸಿದ ಇಬ್ಬರು ಮಂಗಳೂರಿನಲ್ಲಿ ಸೆರೆ

ದುಬಾರಿ ವಸ್ತುಗಳನ್ನು ಆರ್ಡರ್‌ ಮಾಡಿ ವಂಚಿಸುತ್ತಿದ್ದ ಕಿಲಾಡಿಗಳು ಮಂಗಳೂರು : ಅಮೆಜಾನ್‌ ಕಂಪನಿಗೆ ಬರೊಬ್ಬರಿ 30 ಕೋಟಿ ರೂ. ವಂಚಿಸಿದ್ದ ಆರೋಪಿಗಳನ್ನು ಮಂಗಳೂರಿನ ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಧೋಪುರ್ ಜಿಲ್ಲೆಯ ರಾಜಕುಮಾರ್ ಮೀನಾ (23) ಮತ್ತು ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು.ಆರೋಪಿಗಳು ಅಮೆಜಾನ್​ನಲ್ಲಿ ಬೆಲೆಬಾಳುವ ವಸ್ತುಗಳನ್ನು ಆರ್ಡರ್​​ ಮಾಡುತ್ತಿದ್ದರು. ವಸ್ತುಗಳ ಡೆಲಿವರಿ ಪಡೆಯಲು ಮಂಗಳೂರಿನಂಥ ಎರಡನೇ ಹಂತದ ನಗರಗಳ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ಆರೋಪಿಗಳು

ಅಮೆಜಾನ್‌ ಕಂಪನಿಗೆ 30 ಕೋಟಿ ರೂ. ವಂಚಿಸಿದ ಇಬ್ಬರು ಮಂಗಳೂರಿನಲ್ಲಿ ಸೆರೆ Read More »

ಗೋಲ್‌ ಗುಂಬಜ್‌ ಸಹಿತ ಐತಿಹಾಸಿಕ ಸ್ಮಾರಕಗಳೂ ವಕ್ಫ್‌ ಆಸ್ತಿ!

53 ಐತಿಹಾಸಿಕ ಸ್ಥಳಗಳ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಬೆಂಗಳೂರು : ರಾಜ್ಯದಲ್ಲಿರುವ ಹಲವು ಐತಿಹಾಸಿಕ ಸ್ಮಾರಕಗಳನ್ನೂ ವಕ್ಫ್‌ ಬೋರ್ಡ್‌ ತನ್ನದು ಎಂದು ಘೋಷಿಸಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ. ವಿಜಯಪುರದ ಪ್ರಸಿದ್ಧ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾ ಕಮಾನ್, ಬೀದರ್ ಮತ್ತು ಕಲಬುರಗಿಯ ಕೋಟೆಗಳು ಸೇರಿದಂತೆ ಕರ್ನಾಟಕದಾದ್ಯಂತ ಕನಿಷ್ಠ 53 ಐತಿಹಾಸಿಕ ಸ್ಮಾರಕಗಳನ್ನು ವಕ್ಫ್ ಮಂಡಳಿ ತನ್ನದು ಎಂದು ಪ್ರತಿಪಾದಿಸುತ್ತಿದೆ. ಇವುಗಳಲ್ಲಿ ಆದಿಲ್ ಶಾಹಿಗಳ ಹಿಂದಿನ ರಾಜಧಾನಿ ವಿಜಯಪುರದಲ್ಲಿರುವ 43 ಆಸ್ತಿಗಳನ್ನು 2005ರಲ್ಲೇ ವಕ್ಫ್ ಬೋರ್ಡ್

ಗೋಲ್‌ ಗುಂಬಜ್‌ ಸಹಿತ ಐತಿಹಾಸಿಕ ಸ್ಮಾರಕಗಳೂ ವಕ್ಫ್‌ ಆಸ್ತಿ! Read More »

ಮಂಗಳೂರಿನ ಸಮಾಜ ಸೇವಕನನ್ನು ಬೆಂಗಳೂರು ತನಕ ಕರೆಸಿಕೊಂಡು ಪ್ರಶಸ್ತಿ ನೀಡದೆ ಅವಮಾನಿಸಿದ ಸರಕಾರ

ಕೊನೇ ಕ್ಷಣದಲ್ಲಿ ನೀವು ಅವರಲ್ಲ ಕ್ಷಮಿಸಿ ಎಂದು ಹೇಳಿ ವಾಪಸು ಕಳುಹಿಸಿದ ಅಧಿಕಾರಿಗಳು ಮಂಗಳೂರು: ಮಂಗಳೂರಿನ ಸಮಾಜ ಸೇವಕರೊಬ್ಬರನ್ನು ಪ್ರಶಸ್ತಿ ಕೊಡುತ್ತೇವೆ ಎಂದು ಬೆಂಗಳೂರಿಗೆ ಕರೆಸಿ ಕೊನೇ ಕ್ಷಣದಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಹೇಳಿ ಸರಕಾರ ಘೋರ ಅವಮಾನ ಮಾಡಿದೆ. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಮಂಗಳೂರಿನ ಸಮಾಜ ಸೇವಕ ಸಮಾಜ ಸೇವಕ ಬಾಬು ಪಿಲಾರ್ ಎಂಬವರನ್ನು ಫೋನ್ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದೆ. ಇನ್ನೇನು ಪ್ರಶಸ್ತಿ ಸ್ವೀಕರಿಸಲು

ಮಂಗಳೂರಿನ ಸಮಾಜ ಸೇವಕನನ್ನು ಬೆಂಗಳೂರು ತನಕ ಕರೆಸಿಕೊಂಡು ಪ್ರಶಸ್ತಿ ನೀಡದೆ ಅವಮಾನಿಸಿದ ಸರಕಾರ Read More »

ನ.17ರಿಂದ ಕಂಬಳ ಋತು ಆರಂಭ

ಪಿಲಿಕುಳದಲ್ಲಿ ಹಲವು ವರ್ಷಗಳ ಬಳಿಕ ಮೊದಲ ಕಂಬಳ ಮಂಗಳೂರು: ಈ ಕಂಬಳ ಋತುವಿನ ಮೊದಲ ಕಂಬಳ ನ.17ರಂದು ಪಿಲಿಕುಳದಲ್ಲಿ ನಡೆಯಲಿದೆ. ಹಿಂದೆ ಪಿಲಿಕುಳದಲ್ಲಿ ಕಂಬಳ ನಡೆಯುತ್ತಿದ್ದರೂ ನಿಂತುಹೋಗಿ ಬಹಳ ವರ್ಷಗಳಾಗಿತ್ತು. ಹೀಗಾಗಿ ಕಂಬಳ ಋತುವನ್ನು ಪಿಲಿಕುಳದಿಂದ ಪ್ರಾರಂಭಿಸಲು ಕಂಬಳ ಸಮಿತಿ ತೀರ್ಮಾನಿಸಿದೆ. ಈ ಕಂಬಳಕ್ಕೆ ಸಕಲ ಸಿದ್ಧತೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ. ಈಗಾಗಲೇ ಒಂದೆರಡು ಕಡೆ ಸಾಂಪ್ರದಾಯಿಕವಾಗಿ ಜೂನಿಯರ್‌ ಮತ್ತು ಸಬ್‌ಜೂನಿಯರ್‌ ಕಂಬಳಗಳು ನಡೆದಿವೆ. ಇವುಗಳಲ್ಲಿ ಸೀಮಿತ ಸಂಖ್ಯೆಯ ಕೋಣಗಳಷ್ಟೇ ಭಾಗವಹಿಸಿವೆ. ಇದೇ ಮಾದರಿಯ ಇನ್ನೊಂದು

ನ.17ರಿಂದ ಕಂಬಳ ಋತು ಆರಂಭ Read More »

ಪುರಾತನ ದೇವಸ್ಥಾನಕ್ಕೂ ಬಂತು ವಕ್ಫ್‌ ನೋಟಿಸ್‌

ಒಂದು ವರ್ಷದ ಹಿಂದೆ ಪಹಣಿ ತಿದ್ದುಪಡಿ ಮಾಡಿರುವ ಅನುಮಾನ ಮಂಡ್ಯ : ವಕ್ಫ್ ನೋಟಿಸ್‌ಗಳಿಂದ ರೈತರು ಮತ್ತು ಮಠಗಳು ಕಂಗಾಲಾಗಿರುವ ಹೊತ್ತಲ್ಲೇ ಪುರಾತನ ದೇವಸ್ಥಾನದ ಆಸ್ತಿಯನ್ನೂ ವಕ್ಫ್‌ ಮಂಡಳಿಗೆ ಸೇರಿಸಿರುವುದು ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಪುರಾತನ ಶ್ರೀ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಪಹಣಿಯಲ್ಲಿಯೂ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ತಿಳಿದುಬಂದಿದೆ. ಇದು ಗ್ರಾಮಸ್ಥರನ್ನು ಕೆರಳಿಸಿದೆ. ರಾಜ್ಯದಾದ್ಯಂತ ವಕ್ಫ್ ವಿಚಾರದ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ದೇಗುಲದ ಆಸ್ತಿ ದಾಖಲೆ ನೋಡಿದ ಗ್ರಾಮಸ್ಥರಿಗೆ ಶಾಕ್

ಪುರಾತನ ದೇವಸ್ಥಾನಕ್ಕೂ ಬಂತು ವಕ್ಫ್‌ ನೋಟಿಸ್‌ Read More »

error: Content is protected !!
Scroll to Top