ಇಂದು (ಮಾ.5) : ಬೈಂದೂರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭವತಿ ಭೀಕ್ಷಾಂ ದೇಹಿ ಅಭಿಯಾನದ ಮೂಲಕ ನಿಧಿ ಸಂಗ್ರಹ
ಪುತ್ತೂರು : ಕರ್ನಾಟಕ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಪತ್ ಭಾಂದವ ಈಶ್ವರ್ ಮಲ್ಪೆ ಅವರ ಸಹಕಾರದಲ್ಲಿ ಸೇವೆ ಎಂಬ ಯಜ್ಞದಲ್ಲಿ ಮಾ.5 ಭಾನುವಾರ ಬೈಂದೂರು ಸಮೀಪದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭವತಿ ಭೀಕ್ಷಾಂ ದೇಹಿ ಅಭಿಯಾನ ನಡೆಸಿ ನಿಧಿ ಸಂಗ್ರಹ ನಡೆಸಲಿದೆ. ಮಂಗಳೂರು ತಾಲ್ಲೂಕಿನ ಬಿಂದು ಅವರ ಮಗು ಗೌರವ್ ಎಂಬ 14 ವರ್ಷದ ಬಾಲಕ ಕರುಳು ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸುಮಾರು 15 ಲಕ್ಷ ರೂಪಾಯಿ ಅಗತ್ಯವಿರುತ್ತದೆ. […]