ರಾಜ್ಯ

ಇನ್ನು ತಾಲೂಕು ಪಂಚಾಯಿತಿಗಳ ಮೂಲಕ ಗೃಹಲಕ್ಷ್ಮಿ ಹಣ ಪಾವತಿ?

ಕೇಂದ್ರದ ಕಿಸಾನ್‌ ಸಮ್ಮಾನ್‌ ರೀತಿ ವಿತರಿಸಲು ಸರಕಾರದ ಚಿಂತನೆ ಬೆಂಗಳೂರು: ಕಾಂಗ್ರೆಸ್‌ ಸರಕಾರದ ಮಹತ್ವಾಕಾಂಕ್ಷಿ ಕೊಡುಗೆಯಾಗಿರುವ ಗೃಹಲಕ್ಷ್ಮೀ ಗ್ಯಾರಂಟಿಯ ಹಣ ವಿತರಣೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತಾಲೂಕು ಪಂಚಾಯಿತಿಗಳ ಮೂಲಕ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಇಲ್ಲಿಯವರೆಗೆ ರಾಜ್ಯ ಕಾರ್ಯದರ್ಶಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮೂಲಕ ಹಣ ಪಾವತಿಯಾಗುತಿತ್ತು. ಇನ್ನು ಮುಂದೆ ರಾಜ್ಯ ಕಾರ್ಯದರ್ಶಿಯಿಂದ ತಾಲೂಕು ಪಂಚಾಯಿತಿಗೆ ಹಣ ಪಾವತಿ ಆಗಲಿದೆ. ತಾಲೂಕು ಪಂಚಾಯಿತಿಯಿಂದ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಲಿದೆ. ಮಹಿಳಾ ಮತ್ತು […]

ಇನ್ನು ತಾಲೂಕು ಪಂಚಾಯಿತಿಗಳ ಮೂಲಕ ಗೃಹಲಕ್ಷ್ಮಿ ಹಣ ಪಾವತಿ? Read More »

ನಂದಿಹೋದ 46 ವರ್ಷಗಳಿಂದ ಉರಿಯುತ್ತಿದ್ದ ದೀಪ : ಕೆಡುಕಿನ ಭೀತಿಯಲ್ಲಿ ಜನ

ಎಣ್ಣೆ-ಬತ್ತಿ ಇಲ್ಲದೆ ನಿರಂತರವಾಗಿ ನಾಲ್ಕೂವರೆ ದಶಕ ಉರಿಯುತ್ತಿದ್ದ ಮೂರು ದೀಪಗಳು ಕಾರವಾರ: ದೇವಸ್ಥಾನವೊಂದರಲ್ಲಿ ಸುಮಾರು ನಾಲ್ಕೂವರೆ ದಶಕದಿಂದ ಎಣ್ಣೆ ಮತ್ತು ಬತ್ತಿ ಇಲ್ಲದೆ ನಿರಂತರವಾಗಿ ಉರಿಯುತ್ತಿದ್ದ ಮೂರು ದೀಪಗಳು ಹಠಾತ್‌ ನಂದಿಹೋಗಿದ್ದು, ಇದು ಯಾವುದೋ ಕೆಡುಕಿನ ಸೂಚನೆ ಎಂದು ಈ ಊರಿನ ಜನ ಭಯಭೀತರಾಗಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದದಲ್ಲಿ ಮೂರು ದೀಪಗಳು ಎಣ್ಣೆ ಮತ್ತು ಬತ್ತಿ ಇಲ್ಲದೆ ಸತತ 46 ವರ್ಷಗಳಿಂದ ಹಗಲು-ರಾತ್ರಿ ನಿರಂತರವಾಗಿ ಉರಿಯುತ್ತಿದ್ದವು. ಕೆಲದಿನಗಳ ಹಿಂದೆ ಏಕಾಏಕಿ

ನಂದಿಹೋದ 46 ವರ್ಷಗಳಿಂದ ಉರಿಯುತ್ತಿದ್ದ ದೀಪ : ಕೆಡುಕಿನ ಭೀತಿಯಲ್ಲಿ ಜನ Read More »

ಇಂದು ಹೈಕೋರ್ಟಿನಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ ಭವಿಷ್ಯ ನಿರ್ಧಾರ

ಮುಡಾ ಹಗರಣ, ಪೋಕ್ಸೊ ಕೇಸ್‌ ತೀರ್ಪಿಗೆ ಕ್ಷಣಗಣನೆ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಾಲಿಗೆ ಇಂದು ನ್ಯಾಯಾಲಯದ ವಿಚಾರಣೆ ನಿರ್ಣಾಯಕವಾಗಲಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಪೋಕ್ಸೊ ಕೇಸಿನಲ್ಲಿ ಯಡಿಯೂರಪ್ಪ ಕುರಿತಾದ ತೀರ್ಪು ಇಂದು ಪ್ರಕಟವಾಗಲಿದೆ.ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್ ಶುಕ್ರವಾರ ಆದೇಶ ಪ್ರಕಟಿಸಲಿದೆ. ಮುಡಾ ನಿವೇಶನ ಹಂಚಿಕೆ ಸಂಬಂಧ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ

ಇಂದು ಹೈಕೋರ್ಟಿನಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ ಭವಿಷ್ಯ ನಿರ್ಧಾರ Read More »

ಸೆಂಟ್ರಿಂಗ್‌ ಕಾರ್ಮಿಕನ ಮನೆಯಲ್ಲಿ ಪ್ರೇತ ಚೇಷ್ಟೆ!

ಹಾರರ್‌ ಸಿನಿಮಾ ರೀತಿ ನಡೆಯುತ್ತಿರುವ ಘಟನೆಗಳಿಂದ ಮನೆಮಂದಿ ಕಂಗಾಲು ಬೆಳ್ತಂಗಡಿ: ನೋಡು ನೋಡುತ್ತಿದ್ದಂತೆ ಬಟ್ಟೆಗೆ ಬೆಂಕಿ ಹತ್ತಿಕೊಂಡು ಉರಿಯತೊಡಗುತ್ತದೆ, ತಟ್ಟೆಬಟ್ಟಲುಗಳು ಉರುಳಿ ಬೀಳುತ್ತವೆ, ಎಲ್ಲೋ ಇಟ್ಟ ವಸ್ತು ಇನ್ನೊಂದು ಕಡೆ ಇರುತ್ತದೆ, ಬಲ್ಬ್‌, ಟ್ಯೂಬ್‌ಗಳು ತಮ್ಮಿಂದ ತಾನೇ ಆನ್‌-ಆಫ್‌ ಆಗುತ್ತವೆ… ಇದು ಯಾವುದೋ ದೆವ್ವದ ಕಥೆಯ ಸಿನಿಮಾ ದೃಶ್ಯವಲ್ಲ ಬೆಳ್ತಂಗಡಿ ತಾಲೂಕಿನ ಮಾಲಾಡಿ ಸಮೀಪ ಕೊಲ್ಪೆದಬೈಲು ಎಂಬಲ್ಲಿರುವ ಮನೆಯೊಂದರಲ್ಲಿ ಕಳೆದ ಮೂರು ತಿಂಗಳಿಂದ ಆಗಾಗ ನಡೆಯುತ್ತಿರುವ ವಿಚಿತ್ರ ಘಟನೆಗಳು.ಸೆಂಟ್ರಿಂಗ್‌ ಕೆಲಸ ಮಾಡುವ ಉಮೇಶ್‌ ಶೆಟ್ಟಿ ಎಂಬವರ ಮನೆಯಲ್ಲಿ

ಸೆಂಟ್ರಿಂಗ್‌ ಕಾರ್ಮಿಕನ ಮನೆಯಲ್ಲಿ ಪ್ರೇತ ಚೇಷ್ಟೆ! Read More »

ಬೆಳ್ಳಿಪ್ಪಾಡಿ ಗುತ್ತು ತರವಾಡು ಮನೆಯಲ್ಲಿ  ದೈವಗಳ ವರ್ಷಾವಾದಿ ನೇಮೋತ್ಸವ

ಕಾಸರಗೋಡು ತಾಲೂಕು ಬೆಳ್ಳಿಪ್ಪಾಡಿ ಗುತ್ತು ತರವಾಡು ಮನೆಯಲ್ಲಿ ಧರ್ಮದೈವ ಹಾಗೂ ಸಪರಿವಾರ ದೈವಗಳ ವರ್ಷಾವಾದಿ ನೇಮೋತ್ಸವವು ಫೆ. ೬ರಿಂದ ಫೆ. ೭ರತನಕ ನಡೆಯಲಿದೆ. ಫೆ.೬ರಂದು ಬೆಳಿಗ್ಗೆ ಗಂಟೆ ೮ರಿಂದ ಪುಣ್ಯಾಹವಾಚನ, ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ತಿರುಪತಿ ವೆಂಕಟ್ರಮಣ ದೇವರ ಮುಡಿಪು ಪೂಜೆ ನಣತರ ದೈವಗಳಿಗೆ ತಂಬಿಲ ಸೇವೆ ನಡೆದು ಮದ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ, ರಾತ್ರಿ ೭ ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ನಂತರ ಮೈಸಂದಾಯ ದೈವದ ನೇಮೋತ್ಸವ ನಡೆಯದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮರುದಿವಸ

ಬೆಳ್ಳಿಪ್ಪಾಡಿ ಗುತ್ತು ತರವಾಡು ಮನೆಯಲ್ಲಿ  ದೈವಗಳ ವರ್ಷಾವಾದಿ ನೇಮೋತ್ಸವ Read More »

ಬ್ಯಾಂಕಿಗೆ ಕೋಟಿಗಟ್ಟಲೆ ರೂ. ವಂಚನೆ : ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು

ನೌಕರರ ಹೆಸರಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಲ ಪಡೆದು ವಂಚಿಸಿದ ಪ್ರಕರಣ ಬೆಂಗಳೂರು: ಬ್ಯಾಂಕಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟಿಸಬೇಕಿದೆ. ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ರೆಡ್ಡಿ ಎಂಟಿವಿ, ಶ್ರೀನಿವಾಸ್ ಹಾಗೂ ಮುನಿರಾಜು ನಾಲ್ಕೂ ಜನರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ನಕಲಿ ದಾಖಲೆ ನೀಡಿ ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಂಚನೆ ಮಾಡಿದ್ದ ಆರೋಪ

ಬ್ಯಾಂಕಿಗೆ ಕೋಟಿಗಟ್ಟಲೆ ರೂ. ವಂಚನೆ : ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು Read More »

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸುಗ್ರೀವಾಜ್ಞೆಯಲ್ಲಿ ಕೆಲ ಬದಲಾವಣೆ

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್  ಕಿರುಕುಳಕ್ಕೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮಸ್ಥರು ಊರುಗಳನ್ನೇ ತೊರೆಯುತ್ತಿದ್ದಾರೆ. ಫೈನಾನ್ಸ್ ಹಾವಳಿಗೆ ಅಂಕುಶ ಹಾಕಲು ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ ಪ್ರಯೋಗಿಸಿದೆ. ಇತ್ತೀಚೆಗೆ ಸುಗ್ರೀವಾಜ್ಞೆ ಡ್ರಾಫ್ಟ್ ಅನ್ನು ರಾಜ್ಯಪಾಲರಿಗೆ ರವಾನೆ ಮಾಡಲಾಗಿತ್ತು. ಇದೀಗ ಸುಗ್ರೀವಾಜ್ಞೆಯಲ್ಲಿ ಕೆಲ ಅಂಶ ಬದಲಾವಣೆ ಮಾಡಲಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ಜಾರಿ ವಿಚಾರವಾಗಿ ಸದ್ಯ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯಲ್ಲಿ ಕೆಲ ಅಂಶ ಬದಲಾವಣೆ ಮಾಡಿದೆ. ಮೈಕ್ರೋ ಸಾಲ ಮತ್ತು ಸಣ್ಣ ಸಾಲ (ದಬ್ಬಾಳಿಕೆ ಕ್ರಮಗಳ ತಡೆಗಟ್ಟುವಿಕೆ) ಸುಗ್ರೀವಾಜ್ಞೆ

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸುಗ್ರೀವಾಜ್ಞೆಯಲ್ಲಿ ಕೆಲ ಬದಲಾವಣೆ Read More »

ಸೂತ್ರ ಕಿತ್ತ ಗಾಳಿಪಟ ರಾಜ್ಯ ಬಿಜೆಪಿ ನಾಯಕತ್ವ

ಅಂತ್ಯ ಕಾಣದ ಕಚ್ಚಾಟದಿಂದ ಕಾರ್ಯಕರ್ತರಿಗೆ ಹತಾಶೆ ಬೆಂಗಳೂರು: ಬಿಜೆಪಿಯ ಒಳಜಗಳ ಪರಾಕಾಷ್ಠೆಗೆ ತಲುಪಿದ್ದು, ಸದ್ಯ ಪಕ್ಷ ಗಟ್ಟಿ ನಾಯಕತ್ವವಿಲ್ಲದೆ ಸೂತ್ರ ಕಡಿದ ಗಾಳಿಪಟದಂತೆ ಸಿಕ್ಕದಲ್ಲೆಡೆಗೆ ಹಾರಾಡುತ್ತಿದೆ. ಕಳೆದ ಕೆಲವು ತಿಂಗಳಿಂದೀಚೆಗೆ ನಡೆಯುತ್ತಿರುವ ಬಣ ಜಗಳಕ್ಕೆ ಮದ್ದರೆಯಲು ಬಿಜೆಪಿ ಹೈಕಮಾಂಡ್‌ಗೆ ಸಾಧ್ಯವಾಗದಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ.ಕಾಂಗ್ರೆಸ್‌ ಸರಕಾರದ ವಿರುದ್ಧ ಹೋರಾಡಲು ಸಾಕಷ್ಟು ವಿಷಯಗಳಿದ್ದರೂ ಪ್ರಮುಖ ವಿಪಕ್ಷವಾಗಿರುವ ಬಿಜೆಪಿ ನಾಯಕರು ತಮ್ಮಲ್ಲೇ ಕಚ್ಚಾಡುತ್ತಾ ಕಾಲಹರಣ ಮಾಡುತ್ತಿರುವುದನ್ನು ಕಂಡು ಕಂಗಾಲಾಗಿರುವ ಸಾಮಾನ್ಯ ಕಾರ್ಯಕರ್ತರು ಮುಂದೇನು ಎಂದು ಭವಿಷ್ಯದ ಬಗ್ಗೆ

ಸೂತ್ರ ಕಿತ್ತ ಗಾಳಿಪಟ ರಾಜ್ಯ ಬಿಜೆಪಿ ನಾಯಕತ್ವ Read More »

ಸರ್ಕಾರಿ ಕಚೇರಿ, ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧ ಕಟ್ಟುನಿಟ್ಟಿನ ಜಾರಿಗೆ ಮಹತ್ವದ ಆದೇಶ

ಬೆಂಗಳೂರು : ಪರಿಸರದ ಮೇಲೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಗಂಭೀರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲ್​​ಗಳಲ್ಲಿ ಕುಡಿಯುವ ನೀರು ಕೊಡುವಂತಿಲ್ಲ ಎಂಬ ಆದೇಶವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಜನವರಿ 31ರಂದೇ ಈ ಸುತ್ತೋಲೆ ಹೊರಡಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಬಗ್ಗೆ ಸಲಹೆ ನೀಡಲಾಗಿದೆ. ಸರ್ಕಾರಿ ಆದೇಶದಲ್ಲೇನಿದೆ? ಪ್ಲಾಸ್ಟಿಕ್‌ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ

ಸರ್ಕಾರಿ ಕಚೇರಿ, ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧ ಕಟ್ಟುನಿಟ್ಟಿನ ಜಾರಿಗೆ ಮಹತ್ವದ ಆದೇಶ Read More »

ಬೆಳ್ಳಂಬೆಳಗ್ಗೆ 30 ಕಡೆ ಐಟಿ ದಾಳಿ

ಭಾರಿ ಪ್ರಮಾಣದ ಅಕ್ರಮ ಸಂಪತ್ತಿನ ಶೋಧ ಬೆಂಗಳೂರು: ರಾಜ್ಯದ ಪ್ರಮುಖ ಸರಕಾರಿ ಗುತ್ತಿಗೆದಾರನ ಬಂಗಲೆಯೂ ಸೇರಿದಂತೆ ಸುಮಾರು 30 ಕಡೆ ಇಂದು ಬೆಳ್ಳಂಬೆಳಗ್ಗ ಆದಾಯ ಕರ ಇಲಾಖೆಯ ದಾಳಿ ನಡೆದಿದ್ದು, ಪರಿಶೋಧನೆ ಮುಂದುವರಿದಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಎಂಪ್ರೋ ಪ್ಯಾಲೇಸ್, ಹೋಟೆಲ್, ಕಲ್ಯಾಣ ಮಂಟಪದ ಸೇರಿದಂತೆ 10ಕ್ಕೂ ಹೆಚ್ಚಿ ಕಡೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಮೂರು ಕಾರುಗಳಲ್ಲಿ ಬಂದ

ಬೆಳ್ಳಂಬೆಳಗ್ಗೆ 30 ಕಡೆ ಐಟಿ ದಾಳಿ Read More »

error: Content is protected !!
Scroll to Top