ರಾಜ್ಯ

ಸಂಪುಟ ಪುನಾರಚನೆ, ಆಪರೇಷನ್‌ ಹಸ್ತ ಸಿದ್ದರಾಮಯ್ಯ ಗುರಿ

ಹೈಕಮಾಂಡ್‌ ನಾಯಕರ ಜೊತೆ ಇಂದು ಮಹತ್ವದ ಮಾತುಕತೆ ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ ಬಳಿಕ ಬಲಿಷ್ಠರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪುಟಕ್ಕೆ ಸರ್ಜರಿ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಂದು ದಿಲ್ಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ತೆರಳುತ್ತಿರುವುದರಿಂದ ರಾಜ್ಯದಲ್ಲಿ ಸಂಪುಟ ಪುನಾರಚನೆಯೂ ಸೇರಿದಂತೆ ಸರಕಾರದ ಮಟ್ಟದಲ್ಲಿ ದೊಡ್ಡ ಬದಲಾವಣೆ ನಡೆಯುವ ಬಗ್ಗೆ ಕುತೂಹಲ ಗರಿಗೆದರಿದೆ. ಈಗಾಗಲೇ ಮಂತ್ರಿಗಳಿಗೆ ಸಂದೇಶ ಕೊಟ್ಟಿದ್ದೇವೆ ಎನ್ನುವ […]

ಸಂಪುಟ ಪುನಾರಚನೆ, ಆಪರೇಷನ್‌ ಹಸ್ತ ಸಿದ್ದರಾಮಯ್ಯ ಗುರಿ Read More »

ಬೋವಿ ನಿಗಮದಲ್ಲಿ 90 ಕೋ. ರೂ. ಭ್ರಷ್ಟಾಚಾರ

ಬಾಡಿಗೆದಾರರು, ನೆರೆಹೊರೆಯವರ ಹೆಸರಲ್ಲಿ ಕಂಪನಿ ತೆರೆದು ಹಣ ವರ್ಗಾವಣೆ ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಐದು ವರ್ಷಗಳಲ್ಲಿ ಸುಮಾರು 90 ಕೋ ರೂ. ಭ್ರಷ್ಟಾಚಾರವಾಗಿರುವುದನ್ನು ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪತ್ತೆ ಹಚ್ಚಿದೆ. ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ 34 ಕೋಟಿ ರೂ. ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದ್ದು, ಇಂಥ ಹಲವು ಅವ್ಯವಹಾರಗಳು ಕಂಡುಬಂದಿವೆ ಎನ್ನಲಾಗಿದೆ. ಕೆಲದಿನಗಳ ಹಿಂದೆ ತನಿಖಾಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಉದ್ಯಮಿ ಜೀವಾ ಎಂಬಾಕೆಯ ಖಾತೆಗೆ 7.16

ಬೋವಿ ನಿಗಮದಲ್ಲಿ 90 ಕೋ. ರೂ. ಭ್ರಷ್ಟಾಚಾರ Read More »

ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕ ಎಂದು ಟೀಕಿಸಿದ ಸಿದ್ದರಾಮಯ್ಯ

ಸ್ವಾಮೀಜಿ ಸಂವಿಧಾನದ ಬಗ್ಗೆ ಮಾತನಾಡಿದ್ದು ಏಕೆ ಎಂದು ಪ್ರಶ್ನೆ ಬೆಂಗಳೂರು : ಎಲ್ಲರನ್ನೂ ಸಮಾನವಾಗಿ ಕಾಣುವ ಸಂವಿಧಾನ ಬೇಕೆಂದು ಹೇಳಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಾಮೀಜಿ ಸಂವಿಧಾನದ ಬಗ್ಗೆ ಮಾತನಾಡುವ ಅಗತ್ಯವಿರಲಿಲ್ಲ ಅವರು ಮನುಸ್ಮೃತಿಯ ಪ್ರತಿಪಾದಕರು ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಕಚೇರಿಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಸ್ವಾಮೀಜಿಯವರ ಹೇಳಿಕೆ ಬಗ್ಗೆ ಕಿಡಿಕಾರಿದ್ದಾರೆ. ಪೇಜಾವರಶ್ರೀ ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಅವರು ಇಂಥ ಹೇಳಿಕೆ ನೀಡುವ

ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕ ಎಂದು ಟೀಕಿಸಿದ ಸಿದ್ದರಾಮಯ್ಯ Read More »

ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತುವ ಶಾಸಕರ ಬಾಯಿಗೆ ಡಿಕೆಶಿ ಬೀಗ

ಗ್ಯಾರಂಟಿಗಳನ್ನು ಪ್ರಶ್ನಿಸಿದರೆ ಶಿಸ್ತುಕ್ರಮದ ಎಚ್ಚರಿಕೆ ಬೆಂಗಳೂರು : ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗ್ಯಾರಂಟಿಗಳಿಂದಾಗಿ ಅನುದಾನ ಬರುತ್ತಿಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್‌ ಶಾಸಕರ ಬಾಯಿಮುಚ್ಚಿಸಲು ಯತ್ನಿಸಿದ್ದಾರೆ. ಕಾಂಗ್ರೆಸ್‌ ಶಾಸಕ ಗವಿಯಪ್ಪ ನಿನ್ನೆ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಒಂದೆರಡು ಗ್ಯಾರಂಟಿಗಳನ್ನು ನಿಲ್ಲಿಸಿ ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಆಗ್ರಹಿಸಿರುವುದು ಕಾಂಗ್ರೆಸ್‌ ಪಾಲಿಗೆ ತೀವ್ರ ಮುಜುಗರ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಕೆಂಡಾಮಂಡಲವಾಗಿರುವ ಕೆಪಿಸಿಸಿ ಅಧ್ಯಕ್ಷರೂ

ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತುವ ಶಾಸಕರ ಬಾಯಿಗೆ ಡಿಕೆಶಿ ಬೀಗ Read More »

ಗ್ಯಾರಂಟಿಗಳನ್ನು ನಿಲ್ಲಿಸಲು ಕಾಂಗ್ರೆಸ್‌ ಶಾಸಕರಿಂದಲೇ ಮನವಿ

ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ ಎಂದು ಅಸಮಾಧಾನ ಬೆಂಗಳೂರು: ಕಾಂಗ್ರೆಸ್‌ ಸರಕಾರ ಉಪಚುನಾವಣೆಯ ಕ್ಲೀನ್‌ಸ್ವೀಪ್‌ ಗೆಲುವಿಗೆ ಪಂಚ ಗ್ಯಾರಂಟಿಗಳೇ ಕಾರಣ ಎಂದು ಹೇಳುತ್ತಿದ್ದರೂ ಗ್ಯಾರಂಟಿಗಳ ವಿರುದ್ಧ ಕಾಂಗ್ರೆಸ್‌ ಶಾಸಕರೇ ಆಕ್ಷೇಪ ಎತ್ತಲು ತೊಡಗಿದ್ದಾರೆ. ಐದು ಗ್ಯಾರಂಟಿಗಳಲ್ಲಿ ಎರಡನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್​ ಪಕ್ಷದ ಶಾಸಕ ಗವಿಯಪ್ಪ ಹೇಳಿದ್ದಾರೆ. ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಇನ್ನೆರಡು ಗ್ಯಾರಂಟಿಗಳು ಕಡಿಮೆ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಅವರೇನು ತೀರ್ಮಾನ

ಗ್ಯಾರಂಟಿಗಳನ್ನು ನಿಲ್ಲಿಸಲು ಕಾಂಗ್ರೆಸ್‌ ಶಾಸಕರಿಂದಲೇ ಮನವಿ Read More »

ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದ ಇಂಜಿನಿಯರ್‌ ಈಗ ಬೆಂಗಳೂರಿನಲ್ಲಿ ಭಿಕ್ಷುಕ

ಇಂಜಿನಿಯರನ್ನು ಭಿಕ್ಷುಕನನ್ನಾಗಿ ಮಾಡಿದ್ದು ಬದುಕಿನ ಆ ಒಂದು ಆಘಾತಕಾರಿ ಘಟನೆ ಬೆಂಗಳೂರು: ಜರ್ಮನಿಯಲ್ಲಿ ಇಂಜಿನಿಯರಿಂಗ್‌ ಕಲಿತು, ಫ್ರಾಂಕ್‌ಫರ್ಟ್‌ನಲ್ಲಿ ಆರಂಕಿಯ ಸಂಬಳ ಪಡೆಯುತ್ತಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಈಗ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ವೀಡಿಯೊ ನಿನ್ನೆಯಿಂದ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ಕೆಂಪು ಬಣ್ಣದ ಹಳೆಯ ಟಿಶರ್ಟ್‌ ಮತ್ತು ಹರಕು ಜೀನ್ಸ್‌ ಪ್ಯಾಂಟ್‌ ಧರಿಸಿ ಕುರುಚಲು ಗಡ್ಡ ಬಿಟ್ಟು ಕಂಡೋರಿಗೆಲ್ಲ ಕೈಚಾಚಿ ಭಿಕ್ಷೆ ಕೇಳುತ್ತಿದ್ದ ಈ ವ್ಯಕ್ತಿಯನ್ನು ಶರತ್‌ ಯುವರಾಜ್‌ ಎಂಬವರು ಕುತೂಹಲದಿಂದ ಮಾತನಾಡಿಸಿದಾಗ ಆತನ

ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದ ಇಂಜಿನಿಯರ್‌ ಈಗ ಬೆಂಗಳೂರಿನಲ್ಲಿ ಭಿಕ್ಷುಕ Read More »

ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಗಳೂರಿನ ಕುಖ್ಯಾತ ದರೋಡೆಕೋರರ ಕಾಲಿಗೆ ಗುಂಡೇಟು

ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಸೆರೆಯಾಗಿದ್ದ ಪಾತಕಿಗಳು ಮಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಗಳೂರಿನ ಇಬ್ಬರು ಕುಖ್ಯಾತ ದರೋಡೆಕೋರರ ಕಾಲಿಗೆ ಸಿಸಿಬಿ ಪೊಲೀಸರು ಗುಂಡಿಕ್ಕಿದ ಘಟನೆ ಹುಬ್ಬಳ್ಳಿ ಸಮೀಪ ಭಾನುವಾರ ಸಂಭವಿಸಿದೆ. ಮಂಗಳೂರಿನ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡೇಟು ತಗುಲಿದೆ. ಭರತ್ ಮತ್ತು ಫಾರೂಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್‌ನಲ್ಲಿ 15 ಜನರಿದ್ದಾರೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ಮಹಾರಾಷ್ಟ್ರದ

ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಗಳೂರಿನ ಕುಖ್ಯಾತ ದರೋಡೆಕೋರರ ಕಾಲಿಗೆ ಗುಂಡೇಟು Read More »

ಬೃಹತ್‌ ಸಾರಿಗೆ ಮುಷ್ಕರಕ್ಕೆ ನೌಕರರ ಸಿದ್ಧತೆ

38 ತಿಂಗಳ ಅರಿಯರ್ಸ್‌ ಬಿಡುಗಡೆ, ವೇತನ ಹೆಚ್ಚಳ ಬೇಡಿಕೆ ಬೆಂಗಳೂರು: 38 ತಿಂಗಳಿಂದ ಬಾಕಿಯಿರುವ ಅರಿಯರ್ಸ್‌ ಬಿಡುಗಡೆ, ವೇತನ ಏರಿಕೆ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ಹೂಡಲು ಕೆಸ್‌ಆರ್‌ಟಿಸಿ ನೌಕರರು ಸಿದ್ಧತೆ ಮಾಡುತ್ತಿದ್ದಾರೆ. ಡಿಸೆಂಬರ್ 31ರಿಂದ ಸಾರಿಗೆ ಮುಷ್ಕರಕ್ಕೆ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ. ಡಿಸೆಂಬರ್ 9ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ಚಲೋ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ನೀಡಲಾಗುತ್ತದೆ. ಕೈಗಾರಿಕಾ ವಿವಾದ ಕಾಯ್ದೆ ಸೆಕ್ಷನ್-22ರ ಪ್ರಕಾರ

ಬೃಹತ್‌ ಸಾರಿಗೆ ಮುಷ್ಕರಕ್ಕೆ ನೌಕರರ ಸಿದ್ಧತೆ Read More »

ಇಂದಿನಿಂದ ಪಡಿತರ ಕಾರ್ಡ್‌ ಪರಿಶೀಲನೆ

ಬಡವರಾ, ಶ್ರೀಮಂತರಾ ಎಂದು ಪರಿಶೀಲಿಸಲಿರುವ ಅಧಿಕಾರಿಗಳು ಬೆಂಗಳೂರು : ಬಿಪಿಎಲ್ ಕಾರ್ಡ್ ರದ್ದತಿಯಿಂದ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಇಂದಿನಿಂದ ಅಧಿಕಾರಿಗಳು ರಾಜ್ಯಾದ್ಯಂತ ಪಡಿತರ ಕಾರ್ಡ್‌ಗಳ ಪರಿಶೀಲನೆ ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ. ಅರ್ಹ ಫಲಾನುಭವಿಗಳ ಕಾರ್ಡ್‌ಗಳು ಮತ್ತೆ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸರ್ಹತೆಯನ್ನು ದೃಢಪಡಿಸಿಕೊಳ್ಳುವ ಸಲುವಾಗಿ ಕಾರ್ಡ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಆಧಾರ್, ಪ್ಯಾನ್ ಕಾರ್ಡ್, ಐಟಿ ರಶೀದಿ ಮುಂತಾದ ದಾಖಲೆಗಳ ಮೂಲಕ ಕಾರ್ಡ್‌ ರದ್ದಾದವರು ತಮ್ಮ ಕಾರ್ಡ್‌ಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅರ್ಹರ

ಇಂದಿನಿಂದ ಪಡಿತರ ಕಾರ್ಡ್‌ ಪರಿಶೀಲನೆ Read More »

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ

ಉಡುಪಿ: ರಿಷಬ್‌ ಶೆಟ್ಟಿಯವರ ಕಾಂತಾರ-1 ಚಿತ್ರತಂಡ ಪ್ರಯಾಣಿಸುತ್ತಿದ್ದ ಮಿನಿಬಸ್‌ ಕೊಲ್ಲೂರು ಸಮೀಪ ನಿನ್ನೆ ರಾತ್ರಿ ಪಲ್ಟಿಯಾಗಿ ಆರು ಮಂದಿ ಜೂನಿಯರ್‌ ಕಲಾವಿದರು ಗಾಯಗೊಂಡಿದ್ದಾರೆ.ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಹಾಲ್ಕಲ್‌ನ ಆನೆಝರಿ ಎಂಬಲ್ಲಿ ಬಸ್‌ ಅಪಘಾತಕ್ಕೀಡಾಗಿದೆ. ಸ್ಕೂಟಿ ಅಡ್ಡಬಂದಾಗ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್‌ ಮಗುಚಿ ಬಿದ್ದಿದೆ. ಬಸ್‌ನಲ್ಲಿ ಸುಮಾರು 20 ಜ್ಯೂನಿಯರ್ ಕಲಾವಿದರು ಇದ್ದರು. ಈ ಪೈಕಿ 6 ಮಂದಿಗೆ ಗಾಯವಾಗಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. 2025ರ ಅಕ್ಟೋಬರ್​ 2ರಂದು ಈ

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ Read More »

error: Content is protected !!
Scroll to Top