ರಾಜ್ಯ

ಉಳ್ಳಾಲ : ಮನೆಯಲ್ಲಿ ಸಿಲಿಂಡರ್‌ ಸ್ಫೋಟ; ತಾಯಿ ಮೂವರು ಮಕ್ಕಳು ಗಂಭೀರ

ಗ್ಯಾಸ್‌ ಸೋರಿಕೆಯಾಗಿ ಸ್ಫೋಟಿಸಿದ ಸಿಲಿಂಡರ್‌, ಹಾರಿಹೋದ ಛಾವಣಿ ಮಂಗಳೂರು : ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಂಡಿಕ ಎಂಬಲ್ಲಿ ಶನಿವಾರ ಮಧ್ಯರಾತ್ರಿ ಮನೆಯೊಳಗೆ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ತಾಯಿ ಮತ್ತು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಗ್ಯಾಸ್ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ಬಿರುಸಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಮಲಗಿದ್ದ ಮಂಚ ಸುಟ್ಟು ಕರಕಲಾಗಿದೆ.ತಾಯಿ ಖುಬ್ರಾ (40) ಹಾಗೂ ಮೂವರು ಮಕ್ಕಳಾದ ಮೆಹದಿ (15), ಮಝಿಯಾ (13), ಮಾಯಿದಾ (11) ಘಟನೆಯಲ್ಲಿ ತೀವ್ರ ಗಾಯಗೊಂಡವರು. […]

ಉಳ್ಳಾಲ : ಮನೆಯಲ್ಲಿ ಸಿಲಿಂಡರ್‌ ಸ್ಫೋಟ; ತಾಯಿ ಮೂವರು ಮಕ್ಕಳು ಗಂಭೀರ Read More »

ದ.ಕ., ಕೊಡಗು ಗೌಡ ಸಮಾಜದಿಂದ ಸ್ನೇಹ ಮಿಲನ, ಷಷ್ಟ್ಯಾಬ್ದಿ ಸಂಭ್ರಮ, ಪ್ರತಿಭಾ ಪುರಸ್ಕಾರ, ಸನ್ಮಾನ | ಬೆಂಗಳೂರು ಲಗ್ಗೆರೆ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ

ಕೊಡಗು: ದಕ್ಷಿಣ ಕನ್ನಡ ಹಾಗೂ ಕೊಡಗು ಗೌಡ ಸಮಾಜ ಬೆಂಗಳೂರು ವತಿಯಿಂದ ಸ್ನೇಹಮಿಲನ ಷಷ್ಟ್ಯಾಬ್ಧಿ ಸಂಭ್ರಮ, ಪ್ರತಿಭಾ ಪುರಸ್ಕಾರ, ಸಮಾಜದ ಮಾಜಿ  ಅಧ್ಯಕ್ಷರು, ಮಹಿಳಾ ಹಾಗೂ ಯುವ ಘಟಕದ ಮಾಜಿ ಅಧ್ಯಕ್ಷರು ಗಳಿಗೆ, ಕಾರ್ಯದರ್ಶಿಗಳಿಗೆ ಸನ್ಮಾನ ಕಾರ್ಯಕ್ರಮ ಬೆಂಗಳೂರಿನ ಲಗ್ಗೆರೆ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಅದ್ದೂರಿಯಾಗಿ ನಡೆಯಿತು. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮವರು ಸಂಘಟಿತರಾಗಬೇಕು, ಅರೆಭಾಷೆ ಮಾತಾಡುತ್ತಾ ಭಾಷೆಯನ್ನು ಬೆಳೆಸಬೇಕು.

ದ.ಕ., ಕೊಡಗು ಗೌಡ ಸಮಾಜದಿಂದ ಸ್ನೇಹ ಮಿಲನ, ಷಷ್ಟ್ಯಾಬ್ದಿ ಸಂಭ್ರಮ, ಪ್ರತಿಭಾ ಪುರಸ್ಕಾರ, ಸನ್ಮಾನ | ಬೆಂಗಳೂರು ಲಗ್ಗೆರೆ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ Read More »

ಬೆಳಗಾವಿ ಜಿಲ್ಲೆಯಲ್ಲೂ 29 ಬಾಣಂತಿಯರು, 322 ನವಜಾತ ಶಿಶುಗಳ ಸಾವು

ಅಧಿವೇಶನದ ಹೊತ್ತಿನಲ್ಲಿ ಸರಕಾರಕ್ಕೆ ಮುಜುಗರವಾಗುವ ಮಾಹಿತಿ ಬಹಿರಂಗ ಬೆಳಗಾವಿ : ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರು ಸಮರ್ಪಕ ಚಿಕಿತ್ಸೆ ಸಿಗದೆ ಮೃತಪಟ್ಟಿರುವುದು ದೇಶವ್ಯಾಪಿಯಾಗಿ ಸುದ್ದಿಯಾಗಿ ಸರಕಾರ ತೀವ್ರ ಮುಜುಗರ ಅನುಭವಿಸುತ್ತಿರುವಾಗಲೇ ಬೆಳಗಾವಿಯ ವಿವಿಧ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ 29 ಬಾಣಂತಿಯರು ಮತ್ತು 322 ಶಿಶುಗಳ ಮೃತಪಟ್ಟಿವೆ ಎಂಬ ಮಾಹಿತಿ ಹೊರಬಿದ್ದಿದೆ.ಬೆಳಗಾವಿಯಲ್ಲಿ ನಾಳೆಯಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷ ಬಾಣಂತಿಯುರ ಸಾವುಗಳ ಪ್ರಕರಣವನ್ನು ಪ್ರಸ್ತಾಪಿಸಿ ಸರಕಾರದ ಮೇಲೆ ದಾಳಿ ಮಾಡಲು ಸಿದ್ಧವಾಗಿರುವಾಗಲೇ ಸ್ವತಹ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಬೆಳಗಾವಿಯ

ಬೆಳಗಾವಿ ಜಿಲ್ಲೆಯಲ್ಲೂ 29 ಬಾಣಂತಿಯರು, 322 ನವಜಾತ ಶಿಶುಗಳ ಸಾವು Read More »

ಪ್ರಧಾನಿ ಅಂಗಳ ತಲುಪಿದ ಮುಡಾ ಹಗರಣ

ಸಿಬಿಐ ತನಿಖೆಗೆ ಆಗ್ರಹಿಸಿ ನರೇಂದ್ರ ಮೋದಿಯವರಿಗೆ ಪತ್ರ ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉರುಳಾಗಿ ಪರಣಮಿಸಿರುವ ಮುಡಾ ಹಗರಣ ಈಗ ಪ್ರಧಾನಿ ಅಂಗಳ ತಲುಪಿದೆ. ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸದಿರುವುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಾದ ಬೆನ್ನಿಗೆ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಕೀಲರೊಬ್ಬರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ವಕೀಲ ರವಿಕುಮಾರ್ ಎಂಬವರು ಪ್ರಧಾನ ಮಂತ್ರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. 296 ಪುಟಗಳ ದಾಖಲೆ ಸಮೇತ ಪತ್ರ ರವಾನಿಸಲಾಗಿದೆ. ಈಗಾಗಲೇ ಪ್ರಧಾನಿಗಳ ಕಚೇರಿಗೆ ಪತ್ರ

ಪ್ರಧಾನಿ ಅಂಗಳ ತಲುಪಿದ ಮುಡಾ ಹಗರಣ Read More »

ಡ್ರಗ್ಸ್‌ ದಂಧೆ : 63 ವರ್ಷದ ಮಹಿಳೆ ಬಂಧನ; 40 ಕೆಜಿ ಗಾಂಜಾ ವಶ

ಮಾದಕವಸ್ತು ವ್ಯಾಪಾರದಿಂದಲೇ ಕೋಟಿಗಟ್ಟಲೆ ಸಂಪಾದಿಸಿದ್ದ ಲೇಡಿ ಡಾನ್‌ ಬೆಂಗಳೂರು: ಹಲವು ವರ್ಷಗಳಿಂದ ಡ್ರಗ್ಸ್ ದಂಧೆ ಮಾಡುತ್ತಿದ್ದ 63 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ಪೊಲೀಸರು ಸಹ ಆಕೆಯೊಂದಿಗೆ ಕೈಜೋಡಿಸಿದ್ದಾರೆ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಮಹಿಳೆಯ ಮನೆಯಿಂದ 40 ಕೆಜಿ ಗಾಂಜಾ, 33 ಲಕ್ಷ ರೂ. ನಗದು, ಮಚ್ಚು ಸೇರಿದಂತೆ ಎಂಟು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇರೆಗೆ ಬ್ಯಾಟರಾಯನಪುರ ಪೊಲೀಸರು ಮಾದಕವಸ್ತು ಮಾರಾಟಗಾರ್ತಿ ಕಾಲಿ ಮೆಹರುನಿಸಾ ಒಡೆತನದ ಹಲವು

ಡ್ರಗ್ಸ್‌ ದಂಧೆ : 63 ವರ್ಷದ ಮಹಿಳೆ ಬಂಧನ; 40 ಕೆಜಿ ಗಾಂಜಾ ವಶ Read More »

ಮುಡಾದಲ್ಲಿ ನಡೆದಿರುವುದು ಬರೋಬ್ಬರಿ 2800 ಕೋ. ರೂ. ಭ್ರಷ್ಟಾಚಾರ

4921 ನಿವೇಶನಗಳನ್ನು ಅಕ್ರಮವಾಗಿ ಹಂಚಿರುವ ಮಾಹಿತಿ ಇ.ಡಿ.ಗೆ ಲಭ್ಯ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾದಿಂದ ಅಕ್ರಮವಾಗಿ 14 ಸೈಟ್‌ಗಳನ್ನು ಪಡೆದುಕೊಂಡ ಪ್ರಕರಣದ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಈಗ ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರವನ್ನೆಲ್ಲ ಬಯಲಿಗೆಳೆದಿದೆ. ಮುಡಾದಲ್ಲಿ ಆಗಿರುವುದು ಬರೀ 14 ಸೈಟ್‌ಗಳ ಅಕ್ರಮವಲ್ಲ, ಬರೋಬ್ಬರಿ 2800 ಕೋ. ರೂ. ಬೃಹತ್‌ ಅಕ್ರಮ ಎಂಬ ಅಂಶ ಇ.ಡಿ. ತನಿಖೆಯಿಂದ ಬಯಲಿಗೆ ಬಂದಿದೆ. ಕೆಲ ದಿನಗಳ ಹಿಂದೆ 1,095 ಸೈಟ್‌ಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ

ಮುಡಾದಲ್ಲಿ ನಡೆದಿರುವುದು ಬರೋಬ್ಬರಿ 2800 ಕೋ. ರೂ. ಭ್ರಷ್ಟಾಚಾರ Read More »

ಈಗ ಉಪ್ಪು ಕೂಡ ಅಪಾಯಕಾರಿ

ಉಪ್ಪಿನಲ್ಲಿ ರಾಸಾಯನಿಕ ಅಂಶ, ಅಯೋಡಿನ್‌ ಕೊರತೆ ಪತ್ತೆ ಬೆಂಗಳೂರು: ಪ್ರತಿಯೊಬ್ಬರೂ ನಿತ್ಯವೂ ಸೇವಿಸುವ ಉಪ್ಪು ಕೂಡ ಈಗ ಕಲಬೆರೆಕೆ ಆಗುತ್ತಿದೆ ಎಂಬ ಆಘಾತಕಾರಿ ಅಂಶ ಪತ್ತೆಯಾಗಿದೆ. ಈ ವಿಚಾರವನ್ನು ಖುದ್ದು ಆಹಾರ ಮತ್ತು ಸುರಕ್ಷತಾ ಇಲಾಖೆ ಬಹಿರಂಗಪಡಿಸಿದೆ. ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಉಪ್ಪಿನ ಮಾದರಿಗಳನ್ನು ಸಂಗ್ರಹಿಸಲು ಮುಂದಾದ ಆಹಾರ ಮತ್ತು ಸುರಕ್ಷತಾ ಇಲಾಖೆ ಉಪ್ಪಿನಲ್ಲಿ ಅಯೋಡಿನ್ ಕೊರತೆ ಇರುವುದು ಲ್ಯಾಬ್ ಟೆಸ್ಟ್‌ನಲ್ಲಿ ಪತ್ತೆಹಚ್ಚಿದೆ. ಅಷ್ಟೆ ಅಲ್ಲ ಉಪ್ಪಿನಲ್ಲಿ ಸೀಮೆಸುಣ್ಣ, ಸಿಂಥೆಟಿಕ್ ಪೊಟ್ಯಾಶಿಯಂ ಕ್ಲೋರೈಡ್‌ನಂತಹ ರಾಸಾಯನಿಕಗಳ ಅಂಶ ಇರುವುದು

ಈಗ ಉಪ್ಪು ಕೂಡ ಅಪಾಯಕಾರಿ Read More »

ಪ್ರೀತಿಗೆ ಅಡ್ಡಿ | ಪ್ರಿಯತಮೆಯ ತಾಯಿ ಹಾಗೂ ಸಹೋದರನ ಬರ್ಬರ ಕೊಲೆ

ಬೆಳಗಾವಿ: ಮಗಳ ಪ್ರೀತಿ ವಿರೋಧ ಮಾಡಿದ್ದ ತಾಯಿ ಹಾಗೂ ಸಹೋದರನನ್ನು ಬರ್ಬರ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಅಕ್ಕೊಳದಲ್ಲಿ ಇಂದು ನಡೆದಿದೆ. ಮಂಗಳ ನಾಯಕ (45), ಪ್ರಜ್ವಲ್ ನಾಯಕ (18) ಮೃತ ದುರ್ದೈವಿಗಳು. ಕಳೆದ ಕೆಲ ತಿಂಗಳಿಂದ ಮಂಗಳ ಅವರ ಮಗಳು ಹಾಗೂ ರವಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ತಾಯಿ ಮಗಳನ್ನು ಕರೆದು ಬುದ್ಧಿ ಮಾತು ಹೇಳಿದ್ದಾರೆ. ತಾಯಿ ಬುದ್ದಿ ಮಾತು ಹೇಳಿದರು ಕೇಳದ ಮಗಳು ಮತ್ತೆ ತನ್ನ ಹಳೆಯ ಚಾಳಿಯನ್ನು

ಪ್ರೀತಿಗೆ ಅಡ್ಡಿ | ಪ್ರಿಯತಮೆಯ ತಾಯಿ ಹಾಗೂ ಸಹೋದರನ ಬರ್ಬರ ಕೊಲೆ Read More »

ಪ್ರವೀಣ್‌ ನೆಟ್ಟಾರು ಹತ್ಯಾ ಪ್ರಕರಣ : ಆರೋಪಿ ನೌಷಾದ್‌ ಮನೆಗೆ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ

ಮಂಗಳೂರು: ಸುಳ್ಯ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯಾ ಪ್ರಕರಣದ ತನಿಖೆ ಈಗಲೂ ನಡೆಯುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವೊಂದು ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿ ನೌಷಾದ್‌ ಎಂಬಾತನ ಮನೆಗೆ ದಾಳಿ ಮಾಡಿದೆ.ನೌಷಾದ್‌ ಬೆಳ್ತಂಗಡಿ ತಾಲೂಕಿನ ಪಡಂಗಡಿ ಎಂಬಲ್ಲಿಯವ. ಬೆಂಗಳೂರಿನಿಂದ ಬಂದ ಎನ್‌ಐಎ ತಂಡ ಬೆಳಗ್ಗೆ ಪಡಂಗಡಿಯ ಮನೆಗೆ ದಾಳಿ ಮಾಡಿ ಶೋಧ ನಡೆಸಿ ಮನೆಯವರನ್ನು ಪ್ರಶ್ನಿಸಿದೆ ಎಂದು ತಿಳಿದುಬಂದಿದೆ.ಬೆಂಗಳೂರಿನಿಂದ ಐವರು ಎನ್‌ಐಎ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ 5.30ರ ವೇಳೆಗೆ ಪಡಂಗಡಿಗೆ ಬಂದಿದೆ ಎಂಬ

ಪ್ರವೀಣ್‌ ನೆಟ್ಟಾರು ಹತ್ಯಾ ಪ್ರಕರಣ : ಆರೋಪಿ ನೌಷಾದ್‌ ಮನೆಗೆ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ Read More »

ಯತ್ನಾಳ್‌ಗೆ ಹೈಕಮಾಂಡ್‌ ಶಿಸ್ತಿನ ಪಾಠ : ಪಕ್ಷದ ಚೌಕಟ್ಟಿನೊಳಗಿರಲು ಖಡಕ್‌ ಸೂಚನೆ

ಬಿಜೆಪಿಯ ಒಳಜಗಳ ಸದ್ಯಕ್ಕೆ ಶಮನ ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ದಿಲ್ಲಿಯಲ್ಲಿ ಬಿಜೆಪಿ ಹೈಕಮಾಂಡ್ ಶಿಸ್ತಿನ ಪಾಠ ಮಾಡಿದೆ. ಕೇಂದ್ರ ಶಿಸ್ತು ಸಮಿತಿ ಕೊಟ್ಟ ನೋಟಿಸ್​ಗೆ 6 ಪುಟಗಳ ಉತ್ತರ ನೀಡಿರುವ ಯತ್ನಾಳ್, ಖುದ್ದು ಹಾಜರಾಗಿ ಲಿಖಿತ ಮಾತ್ರವಲ್ಲದೆ ಮೌಖಿಕವಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಚೌಕಟ್ಟು ಮೀರಿ ಹೋಗದಂತೆ

ಯತ್ನಾಳ್‌ಗೆ ಹೈಕಮಾಂಡ್‌ ಶಿಸ್ತಿನ ಪಾಠ : ಪಕ್ಷದ ಚೌಕಟ್ಟಿನೊಳಗಿರಲು ಖಡಕ್‌ ಸೂಚನೆ Read More »

error: Content is protected !!
Scroll to Top