ರಾಜ್ಯ

ಗಂಡು ಕಲೆಯಲ್ಲಿ ಮೆರೆದ ಹೆಣ್ಣು ಕಂಠ ಲೀಲಾವತಿ ಬೈಪಾಡಿತ್ತಾಯ

ಯಕ್ಷಗಾನದ ಹಿರಿಯಕ್ಕ ಖ್ಯಾತಿಯ ಪ್ರಥಮ ಮಹಿಳಾ ಭಾಗವತೆ ಕಲಾಲೀನ ಕಾರ್ಕಳ : ಹೆಣ್ಣುಮಕ್ಕಳು ಯಕ್ಷಗಾನ ನೋಡುವುದಕ್ಕೂ ಸಂಪ್ರದಾಯದ ಕಟ್ಟುಪಾಡುಗಳ ಬೇಲಿ ಇದ್ದ ಕಾಲದಲ್ಲಿ ಮಹಿಳೆಯೊಬ್ಬರು ಯಕ್ಷಗಾನ ಮೇಳದ ಪ್ರಧಾನ ಭಾಗವತರಾಗಿ ಮೇಳದೊಂದಿಗೆ ಊರೂರು ತಿರುಗಾಡಿ ಇಡೀ ರಾತ್ರಿ ವೇದಿಕೆಯಲ್ಲಿ ಹಾಡುತ್ತಾ ಪ್ರಸಂಗವನ್ನು ಮುನ್ನಡೆಸುತ್ತಿದ್ದರು ಎಂಬುದು ಆ ಕಾಲಕ್ಕೊಂದು ಅಚ್ಚರಿಯೇ ಆಗಿತ್ತು. ಗಂಡುಕಲೆಯೆಂದೇ ಅರಿಯಲ್ಪಡುವ ಯಕ್ಷಗಾನದಲ್ಲಿ ಹೆಣ್ಣು ಧ್ವನಿಯೊಂದು ಮೊಳಗಿ ಉಚ್ಛ್ರಾಯ ಸ್ಥಿತಿಗೆ ತಲುಪಿ ಯಕ್ಷಗಾನದ ಅಗಾಧ ಸಾಧ್ಯತೆಗಳಿಗೊಂದು ಮುನ್ನುಡಿ ಬರೆದಿತ್ತು. ಹೀಗೆ ವೃತ್ತಿಪರ ಮೇಳಗಳ ಮೊದಲ ಮಹಿಳಾ […]

ಗಂಡು ಕಲೆಯಲ್ಲಿ ಮೆರೆದ ಹೆಣ್ಣು ಕಂಠ ಲೀಲಾವತಿ ಬೈಪಾಡಿತ್ತಾಯ Read More »

ವಿರಾಸತ್: ರಾಸಲೀಲೆ ನೃತ್ಯದ ವೈಭವ, ಡೊಳ್ಳಿನ ಅಬ್ಬರದ ಅಲೆ

ಕರಾವಳಿಯಲ್ಲಿ ಅವತರಿಸಿದ ಯದುಕುಲ ಲೋಕ ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ವಿರಾಸತ್‌ನ ನಾಲ್ಕನೇ ದಿನವಾದ ಶುಕ್ರವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶೈಕ್ಷಣಿಕ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಸಂಚಲನ ಸೃಷ್ಟಿಸಿದರು. ಬಡಗುತಿಟ್ಟಿನ ಯಕ್ಷ ವೇಷಧಾರಿಗಳು ಕೃಷ್ಣನ ರಾಸಲೀಲೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿದರು.ಮಂಟಪ ಪ್ರಭಾಕರ ಮತ್ತು ವಿದ್ವಾನ್ ಚಂದ್ರಶೇಖರ ನಾವುಡ ನಿರ್ದೇಶನದಲ್ಲಿ ಮೋಡಿಬಂದ ‘ಬಡಗುತಿಟ್ಟು ಯಕ್ಷಗಾನ ರಾಸಲೀಲೆ’ ಯಕ್ಷ ರೂಪಕ ಕೃಷ್ಣನ ಯದುಕುಲ ಲೋಕ ಕರಾವಳಿಯಲ್ಲಿ ಅವತರಿಸಿದಂತೆ ಭಾಸವಾಯಿತು.’ರಂಗನೇತಕೆ ಬಾರನೇ..’ ‘ಕೊಳಲನೂದುತ ಬಂದ ಕೃಷ್ಣ’ ಸಾಲಿಗೆ ಮಕ್ಕಳ ನೃತ್ಯ ಗೋಕುಲವನ್ನೇ

ವಿರಾಸತ್: ರಾಸಲೀಲೆ ನೃತ್ಯದ ವೈಭವ, ಡೊಳ್ಳಿನ ಅಬ್ಬರದ ಅಲೆ Read More »

ಮಾಜಿ ಸಿ.ಎಂ. ದಿ.ಎಸ್.ಎಂ.ಕೃಷ್ಣರ ಪ್ರತಿಮೆ ವಿಕಾಸಸೌಧದ ಎದುರೇ ಸ್ಥಾಪಿಸಿ |ಸುಳ್ಯದ ಗೌಡರ ಯುವ ಸೇವಾ ಸಂಘದಿಂದ ಮನವಿ

ಸುಳ್ಯ : ಕರ್ನಾಟಕದ ಮಾಜಿ ಮುಖ್ಯಮಂತ್ರಿ, ವಿಶೇಷವಾಗಿ ಬಿಸಿಯೂಟದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ದಿ. ಎಸ್.ಎಂ.ಕೃಷ್ಣರವರು ಬೆಂಗಳೂರಿನಲ್ಲಿ ವಿಕಾಸಸೌಧವನ್ನು ನಿರ್ಮಿಸಲು ಕಾರಣಕರ್ತರಾದವರು. ಈ ಹಿನ್ನಲೆಯಲ್ಲಿ ಅವರ ಪ್ರತಿಮೆಯನ್ನು ವಿಕಾಸಸೌಧದ ಎದುರು ಸ್ಥಾಪಿಸಬೇಕೆಂದು ಸುಳ್ಯ ಗೌಡರ ಯುವ ಸೇವಾ ಸಂಘದ ಪ್ರಮುಖರು ಸುಳ್ಯ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಎಸ್.ಎಂ. ಕೃಷ್ಣ ರವರು ಬೆಂಗಳೂರನ್ನು ಐಟಿಪಾರ್ಕ್ ಮಾಡುವಲ್ಲಿ ಯಶಸ್ವಿಯಾದವರು. ಇಂದು ನಾಡಿನ ಹಳ್ಳಿಗಳಿಂದ ವಿದ್ಯಾಭ್ಯಾಸ ಪಡೆದು ಐಟಿ,ಬಿಟಿಯಲ್ಲಿ ಉದ್ಯೋಗ ಹೊಂದಿ ಸ್ಥಿತಿವಂತರಾಗಿ ಹಳ್ಳಿಯಲ್ಲಿರುವ ತಮ್ಮ ಹಿರಿಯರನ್ನು,

ಮಾಜಿ ಸಿ.ಎಂ. ದಿ.ಎಸ್.ಎಂ.ಕೃಷ್ಣರ ಪ್ರತಿಮೆ ವಿಕಾಸಸೌಧದ ಎದುರೇ ಸ್ಥಾಪಿಸಿ |ಸುಳ್ಯದ ಗೌಡರ ಯುವ ಸೇವಾ ಸಂಘದಿಂದ ಮನವಿ Read More »

ಆಳ್ವಾಸ್ ವಿರಾಸತ್ : ನೃತ್ಯ ವರ್ಷಧಾರೆ, ರಾಮ-ಕೃಷ್ಣರ ನೃತ್ಯಾರಾಧನೆ

ಸಮ್ಮೋಹನಗೊಳಿಸಿದ ಕ್ಯಾಂಡಿಯನ್, ಕಥಕ್‌ ನೃತ್ಯ ವಿದ್ಯಾಗಿರಿ(ಮೂಡುಬಿದಿರೆ) : ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ನಿನ್ನೆ ರಾತ್ರಿ ನಡೆದ ಕಥಕ್ ನೃತ್ಯ ವರ್ಷಧಾರೆ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿತು. ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೂರನೇ ದಿನದ ಗಾಯನದ ಬಳಿಕ ಮೂಡಿ ಬಂದ ಸಾಂಸ್ಕೃತಿಕ ವೈಭವ ಮೋಡಿ ಮಾಡುವಂತಿತ್ತು. ಆಶಿಶಬಂಧು ಚಟರ್ಜಿ ನಿರ್ದೇಶನದಲ್ಲಿ ಪ್ರಸ್ತುಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಕಥಕ್ ವರ್ಷಧಾರೆಯನ್ನೇ ಸುರಿಸಿತು. ತುಂತುರು ಮಳೆಯನ್ನು ಸಂಭ್ರಮಿಸುವ ಋತುವಿನ ದರ್ಶನ ನೀಡಿತು. ಉತ್ತರದ

ಆಳ್ವಾಸ್ ವಿರಾಸತ್ : ನೃತ್ಯ ವರ್ಷಧಾರೆ, ರಾಮ-ಕೃಷ್ಣರ ನೃತ್ಯಾರಾಧನೆ Read More »

ಕನ್ನಡದಲ್ಲೇ ತೀರ್ಪು ಪ್ರಕಟ : ಕರ್ನಾಟಕ ಹೈಕೋರ್ಟ್‌ ಐತಿಹಾಸಿಕ ಉಪಕ್ರಮ

ಜನಸಾಮಾನ್ಯರಿಗೆ ತೀರ್ಪು ಅರ್ಥವಾಗಬೇಕೆಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು ಬೆಂಗಳೂರು: ಕರ್ನಾಟಕ ಹೈಕೋರ್ಟ್​​ ಇದೇ ಮೊದಲ ಬಾರಿಗೆ ಪ್ರಕರಣವೊಂದರ ತೀರ್ಪನ್ನು ಕನ್ನಡದಲ್ಲೇ ಪ್ರಕಟಿಸಿ ಐತಿಹಾಸಿಕ ಉಪಕ್ರಮವೊಂದನ್ನು ಕೈಗೊಂಡಿದೆ. ಡಿಸೆಂಬರ್ 11ರಂದು ಭಾರತ ಭಾಷಾ ದಿವಸವಾಗಿದ್ದು, ಆ ಪ್ರಯುಕ್ತ ಸಾಂಕೇತಿಕವಾಗಿ ಡಿಸೆಂಬರ್ 12ರಂದು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಸಿ.ಎಂ.ಜೋಶಿ ಅವರಿದ್ದ ಪೀಠ ನಂಜಾವಧೂತ ಸ್ವಾಮಿ ವಿರುದ್ಧ ಎಸ್.ಲಿಂಗಣ್ಣ ಪ್ರಕರಣದಲ್ಲಿ ಕನ್ನಡದಲ್ಲೇ ತೀರ್ಪು ನೀಡಿದೆ. ತುಮಕೂರಿನ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ವಿರುದ್ಧ ಎಸ್‌

ಕನ್ನಡದಲ್ಲೇ ತೀರ್ಪು ಪ್ರಕಟ : ಕರ್ನಾಟಕ ಹೈಕೋರ್ಟ್‌ ಐತಿಹಾಸಿಕ ಉಪಕ್ರಮ Read More »

ಆಳ್ವಾಸ್‌ ವಿರಾಸತ್: ರಂಗೇರಿಸಿದ ನೃತ್ಯ, ಕಸರತ್ತಿನ ಗಮ್ಮತ್ತು

ಜಾನಪದ-ಶಾಸ್ತ್ರೀಯದ ಸ್ಪಂದನ, ಸಾಹಸ-ಹೆಜ್ಜೆಗಳ ಸಮ್ಮಿಲನ ವಿದ್ಯಾಗಿರಿ (ಮೂಡುಬಿದಿರೆ): ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರ ಭಕ್ತಿಗಾನ ಸುಧೆಯಲ್ಲಿ ಮಿಂದ ಪ್ರೇಕ್ಷಕರನ್ನು ನರ್ತನ ಲೋಕಕ್ಕೆ ಕೊಂಡೊಯ್ದದ್ದು ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ. ಉತ್ತರದ ಹಿಂದೂಸ್ಥಾನಿಗೆ ಶ್ರೋತೃಗಳಾಗಿದ್ದ ವಿರಾಸತ್ ಪ್ರೇಕ್ಷಕರು ಪಶ್ಚಿಮದ ಜಾನಪದಕ್ಕೆ ವೀಕ್ಷಕರಾದರು. ದೇಶದ ಪಶ್ಚಿಮ ತೀರದ ಗುಜರಾತ್‌ನಲ್ಲಿ ನವರಾತ್ರಿಯ ಸಂದರ್ಭದಲ್ಲಿ ದೇವಿ ಆರಾಧನೆ ಮಾಡುತ್ತಾ ನರ್ತಿಸುವ ಜಾನಪದ ನೃತ್ಯವೇ ಗರ್ಭಾ. ಗುಜರಾತ್‌ನ ರಂಗ್ ಮಲಹರ್ ತಂಡ ಸದಸ್ಯರು

ಆಳ್ವಾಸ್‌ ವಿರಾಸತ್: ರಂಗೇರಿಸಿದ ನೃತ್ಯ, ಕಸರತ್ತಿನ ಗಮ್ಮತ್ತು Read More »

ಪಂಡಿತ್ ಎಂ. ವೆಂಕಟೇಶ್ ಕುಮಾರ್‌ಗೆ ಆಳ್ವಾಸ್ ವಿರಾಸತ್-2024 ಪ್ರಶಸ್ತಿ ಪ್ರದಾನ

ವಿದ್ಯಾಗಿರಿ (ಮೂಡುಬಿದಿರೆ): ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 30ನೇ ವರ್ಷದ ಆಳ್ವಾಸ್ ವಿರಾಸತ್‌ನಲ್ಲಿ ಬುಧವಾರ ಸಂಜೆ ಪ್ರತಿಷ್ಠಿತ ‘ಆಳ್ವಾಸ್ ವಿರಾಸತ್-2024’ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನಿಸಲಾಯಿತು. ಬಡವರು, ದೀನದಲಿತರು, ಅಂಗವಿಕಲರಿಗಾಗಿ ಬದುಕು ಮುಡುಪಾಗಿಟ್ಟಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಈ ಪ್ರಶಸ್ತಿ ಅರ್ಪಣೆ ಎಂದು ಪಂಡಿತ್ ವೆಂಕಟೇಶ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾವುಕರಾಗಿ ನುಡಿದರು. ಶಿಸ್ತು, ಸಂಯಮ, ಸಮಯ

ಪಂಡಿತ್ ಎಂ. ವೆಂಕಟೇಶ್ ಕುಮಾರ್‌ಗೆ ಆಳ್ವಾಸ್ ವಿರಾಸತ್-2024 ಪ್ರಶಸ್ತಿ ಪ್ರದಾನ Read More »

ಮುರುಡೇಶ್ವರ ದುರಂತ : 7 ಶಿಕ್ಷಕರು ಪೊಲೀಸ್‌ ವಶಕ್ಕೆ

ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ ಕಾರವಾರ: ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಶಾಲೆಯ 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರದಿಂದ ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದವರ ಪೈಕಿ ನಾಲ್ಕು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಆಟವಾಡುವಾಗ ನೀರು ಪಾಲಾಗಿ ಸಾವನ್ನಪ್ಪಿದ್ದು, ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬೀಚ್‌ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಶಿಕ್ಷಕರ ವಿರುದ್ಧ ನಾಲ್ವರು ವಿದ್ಯಾರ್ಥಿನಿಯರ ಸಾವಿಗೆ ಕಾರಣ, ನಿರ್ಲಕ್ಷ್ಯದ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುರುಡೇಶ್ವರದಲ್ಲಿ ಪ್ರವಾಸಿಗರು

ಮುರುಡೇಶ್ವರ ದುರಂತ : 7 ಶಿಕ್ಷಕರು ಪೊಲೀಸ್‌ ವಶಕ್ಕೆ Read More »

ಸಮುದ್ರ ಪಾಲಾದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆ

ಮುರುಡೇಶ್ವರ: ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಕೋಲಾರ ಶಾಲೆಯ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದೆ. , ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಬೋಟ್ ಮೂಲಕ ಮೂವರ ಮೃತ ದೇಹವನ್ನು ಹೊರತೆಗೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಿನ್ನೆ ಘೋರ ದುರಂತ ಒಂದು ಸಂಭವಿಸಿದ್ದು ಕೋಲಾರ ಜಿಲ್ಲೆಯ  ಮುಳಬಾಗಿಲು ತಾಲೂಕಿನ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಮೂವರು ವಿದ್ಯಾರ್ಥಿನಿಯರು ಸಮುದ್ರಗಳ ಅಲೆ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಇದರಲ್ಲಿ ಮೂವರನ್ನು

ಸಮುದ್ರ ಪಾಲಾದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆ Read More »

ವಿರಾಸತ್‌ ಭವ್ಯ ಮೆರವಣಿಗೆ : ಧರೆಗಿಳಿದು ಬಂದ ಕಲಾಲೋಕ

ದೇಶ-ವಿದೇಶಗಳ ಅದ್ಭುತ ಕಲಾಪರಂಪರೆ ಮೂಡುಬಿದಿರೆಯಲ್ಲಿ ಅನಾವರಣ ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೊದಲ ದಿನವಾದ ಮಂಗಳವಾರ ಉದ್ಘಾಟನೆಯ ಬಳಿಕ ನಡೆದ ದೇಶ-ವಿದೇಶಗಳ ಅದ್ಭುತ ಕಲಾಪರಂಪರೆಯನ್ನು ಧರೆಗಿಳಿಸಿ ಸಾರ್ಥಕವಾಯಿತು. ಶ್ರದ್ಧೆ-ಭಕ್ತಿಯ ನಾಡು-ನುಡಿಯ ಕಲಾ ವೈಶಿಷ್ಟ್ಯತೆಯ ಸಾಂಸ್ಕೃತಿಕ ವೈಭವ, ಭಾರತದ ಭವ್ಯ ಸಂಸ್ಕೃತಿಯ ಕಲಾರೂಪವೇ ಧರೆಗಿಳಿದು ಬಂದಂತೆ ಭಾಸವಾಯಿತು. ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುತ್ತತುದಿವರೆಗಿನ ವೈವಿಧ್ಯ ಕಲಾಪ್ರಕಾರಗಳು ಮಾತ್ರವಲ್ಲದೆ ಶ್ರೀಲಂಕಾ ಸೇರಿದಂತೆ ನೆರೆಹೊರೆ ರಾಷ್ಟ್ರಗಳ ಸಂಸ್ಕೃತಿ ಶ್ರೀಮಂತಿಕೆಗೆ ಆಳ್ವಾಸ್ ಆವರಣ ಸಾಕ್ಷಿಯಾಯಿತು.

ವಿರಾಸತ್‌ ಭವ್ಯ ಮೆರವಣಿಗೆ : ಧರೆಗಿಳಿದು ಬಂದ ಕಲಾಲೋಕ Read More »

error: Content is protected !!
Scroll to Top