ರಾಜ್ಯ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತವಾಗಿದ್ದು, ಸಚಿವೆ ಅಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಹೋದರ ಚನ್ನರಾಜ ಹಟ್ಟಿಹೊಳಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ Read More »

ಕಾರ್ಕಳದ ಉದ್ಯಮಿಗೆ 2 ಕೋಟಿ ರೂ. ವಂಚನೆ

ಪಾಲುದಾರಿಕೆ ವ್ಯವಹಾರದಲ್ಲಿ ಬೆನ್ನಿಗಿರಿದ ಪರಂಗಿಪೇಟೆಯ ಸ್ನೇಹಿತರು ಉಡುಪಿ : ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುವ ಭರವಸೆ ನೀಡಿ ಉದ್ಯಮಿಯೋರ್ವರಿಗೆ 2 ಕೋಟಿ ರೂ. ವಂಚಿಸಿದ ಪ್ರಕರಣ ಕಾರ್ಕಳದಲ್ಲಿ ಸಂಭವಿಸಿದೆ. ಈ ಕುರಿತು ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ಮಾರ್ಕೆಟ್‌ ರಸ್ತೆಯಲ್ಲಿರುವ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೆಕ್ಸ್‌ನಲ್ಲಿ ಮೊಬೈಲ್‌ ಅಂಗಡಿ ಹೊಂದಿರುವ ಮರ್ಣೆಯ ದಾವುದುಲ್‌ ಹಕೀಂ ಎಂಬವರಿಗೆ ಕಳೆದ 20 ವರ್ಷಗಳಿಂದ ಪರಿಚಯಸ್ಥರಾಗಿರುವ ಫರಂಗಿಪೇಟೆಯ ಅಬ್ದುಲ್‌ ರಹಿಮಾನ್‌, ಹಫೀಜ್ ಟಿ.ಎ., ಅಯ್ಯೂಬ್‌, ಸದಕತ್ತುಲ್ಲಾ, ಮೊಹಮ್ಮದ್‌ ಎಂಬವರು ವಂಚನೆ

ಕಾರ್ಕಳದ ಉದ್ಯಮಿಗೆ 2 ಕೋಟಿ ರೂ. ವಂಚನೆ Read More »

ಕಾಮಗಾರಿ ಹಣ ಬಿಡುಗಡೆ ಮಾಡದಿದ್ದರೆ ಹೋರಾಟ : ಗುತ್ತಿದಾರರಿಂದ ಸಚಿವರಿಗೆ ಪತ್ರ

ಬಾಕಿಯಿರುವ 30 ಸಾವಿರ ಕೋ.ರೂ. 7 ದಿನಗಳಲ್ಲಿ ಬಿಡುಗಡೆ ಮಾಡಲು ಒತ್ತಾಯ ಬೆಂಗಳೂರು: ಗುತ್ತಿಗೆದಾರರಿಗೆ ಬಾಕಿಯಿಟ್ಟಿರುವ ಸುಮಾರು 30 ಸಾವಿರ ಕೋಟಿ ರೂಪಾಯಿ ಕೂಡಲೇ ಬಿಡುಗಡೆಗೊಳಿಸದಿದ್ದರೆ ಭಾರಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿ ರಾಜ್ಯ ಗುತ್ತಿಗೆದಾರರ ಸಂಘ ಆರು ಸಚಿವರಿಗೆ ಬರೆದಿರುವ ಪತ್ರ ಸರಕಾರಕ್ಕೆ ಮತ್ತೊಮ್ಮೆ ಮುಜುಗರ ಉಂಟುಮಾಡಿದೆ. ಕಾಂಗ್ರೆಸ್‌ ಸರಕಾರದಲ್ಲಿ ಶೇ. 60 ಕಮಿಷನ್‌ ಇಲ್ಲದೆ ಕೆಲಸವಾಗುವುದಿಲ್ಲ ಎಂದು ವಿಪಕ್ಷ ಆರೋಪಿಸಿದ ಬೆನ್ನಲ್ಲೇ ಗುತ್ತಿಗೆದಾರರ ಸಂಘದವರು ನೀಡಿರುವ ಎಚ್ಚರಿಕೆ ವಿಪಕ್ಷಕ್ಕೆ ಹೋರಾಟ ಮಾಡಲು ಇನ್ನೊಂದು ಅಸ್ತ್ರವಾಗಿ

ಕಾಮಗಾರಿ ಹಣ ಬಿಡುಗಡೆ ಮಾಡದಿದ್ದರೆ ಹೋರಾಟ : ಗುತ್ತಿದಾರರಿಂದ ಸಚಿವರಿಗೆ ಪತ್ರ Read More »

ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣ : ಓರ್ವ ಆರೋಪಿ ಸೆರೆ

ರಾಜ್ಯಾದ್ಯಂತ ಆಕ್ರೋಶದ ಅಲೆಯೆಬ್ಬಿಸಿದ ದುರುಳರ ವಿಕೃತಿ ಬೆಂಗಳೂರು: ಚಾಮರಾಜಪೇಟೆಯ ಓಲ್ಡ್​ ಪೆನ್ಶನ್​ ಮೊಹಲ್ಲಾದ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್ ​ಪೇಟೆ ಪೊಲೀಸರು ಬಂಧಿಸಿ ಸ್ಥಳ ಮಹಜರು ನಡೆಸಿದ್ದಾರೆ. ನಿನ್ನೆ ತಡರಾತ್ರಿಯಿಂದಲೇ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಚಾಮರಾಜಪೇಟೆಯ ಓಲ್ಡ್ ಪೆನ್ಶನ್ ಮೊಹಲ್ಲಾದ ವಿನಾಯಕನಗರ ನಿವಾಸಿ ಕರ್ಣ ಎಂಬುವರ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿ, ಕಾಲಿಗೆ ಮಚ್ಚಿನಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದರು. ಕರ್ಣ ನೀಡಿದ ​ದೂರು ಆಧರಿಸಿ

ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣ : ಓರ್ವ ಆರೋಪಿ ಸೆರೆ Read More »

ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು

ರಸ್ತೆಯಲ್ಲಿ ಮೇಲೆ ಮಲಗಿದ್ದ ದನಗಳ ಮೇಲೆ ಕ್ರೌರ್ಯ ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಚಾಮರಾಜಪೇಟೆಯ ಓಲ್ಡ್ ಪೆನ್ಶನ್ ಮೊಹಲ್ಲಾದಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಚಾಮರಾಜಪೇಚೆಯ ಕರ್ಣ ಎಂಬುವವರಿಗೆ ಸೇರಿದ ಹಸುಗಳ ಕೆಚ್ಚಲನ್ನು ಕೊಯ್ದು ದುರುಳರು ವಿಕೃತಿ ಮೆರೆದಿದ್ದಾರೆ. ಅವರ ಬಳಿ 8 ಹಸುಗಳಿದ್ದು, ಈ

ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು Read More »

ಮತ್ತೆ ಮೇಲೆದ್ದು ಬಂದ ವಕ್ಫ್‌ ವಿವಾದ : ಜ.20ರಂದು ಮಂಡ್ಯದಲ್ಲಿ ಬಂದ್‌

ಪುರಾತನ ಸ್ಮಾರಕಗಳು, ಶಾಲೆ ಸೇರಿ 70ಕ್ಕೂ ಹೆಚ್ಚು ಜಮೀನುಗಳ ಪಹಣಿಯಲ್ಲಿ ವಕ್ಫ್‌ ಹೆಸರು ಮಂಡ್ಯ: ರಾಜ್ಯದಲ್ಲಿ ವಕ್ಫ್​​ ಮಂಡಳಿ ​ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪುರಾತನ ಮಂಟಪಗಳು, ಸ್ಮಾರಕಗಳು ಹಾಗೂ ಪುರಾತತ್ವ ಇಲಾಖೆಯ ಆಸ್ತಿ ಮತ್ತು ರೈತರ ಜಮೀನೂ ಸೇರಿದಂತೆ 70ಕ್ಕೂ ಹೆಚ್ಚು ಭೂಮಿ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್​ ಮಂಡಳಿ ಎಂದು ನಮೂದು ಆಗಿದೆ. ಕಿರಂಗೂರ, ಕೆ.ಶೆಟ್ಟಹಳ್ಳಿ, ಬಾಬಾರಾಯನಕೊಪ್ಪಲು, ದರಸಕುಪ್ಪೆ ಗ್ರಾಮಗಳ 50ಕ್ಕೂ ಹೆಚ್ಚು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್​

ಮತ್ತೆ ಮೇಲೆದ್ದು ಬಂದ ವಕ್ಫ್‌ ವಿವಾದ : ಜ.20ರಂದು ಮಂಡ್ಯದಲ್ಲಿ ಬಂದ್‌ Read More »

ಸಿ.ಟಿ.ರವಿಗೆ ಜೀವ ಬೆದರಿಕೆ ಪತ್ರ : ಬಿಜೆಪಿ ಕಿಡಿ

ಕ್ಷಮೆ ಕೇಳದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಪುತ್ರನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರಿಗೆ ಜೀವ ಬೆದರಿಕೆ ಒಡ್ಡಿ ಬಂದಿರುವ ಪತ್ರ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಇನ್ನೊಂದು ಸಮರಕ್ಕೆ ಕಾರಣವಾಗಿದೆ. ಬೆದರಿಕೆ ಒಡ್ಡುತ್ತಿರುವ ಶಕ್ತಿಗಳು ಯಾವುದು ಎಂಬುದು ಸರ್ಕಾರ ಹಾಗೂ ಪೊಲೀಸರಿಗೆ ತಿಳಿದೇ ಇದೆ, ಇಷ್ಟಾಗಿಯೂ ದುಷ್ಟಶಕ್ತಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.ಈ ಕುರಿತು ಟ್ವೀಟ್‌ ಮಾಡಿರುವ ಬಿಜಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,

ಸಿ.ಟಿ.ರವಿಗೆ ಜೀವ ಬೆದರಿಕೆ ಪತ್ರ : ಬಿಜೆಪಿ ಕಿಡಿ Read More »

ಉಡುಪಿ: ಗಾಂಧೀಜಿಯನ್ನು ಟೀಕಿಸಿದ ಹಿಂದೂ ಕಾರ್ಯಕರ್ತೆಯ ವಿರುದ್ಧ ಕೇಸ್‌

ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಗಾಂಧೀಜಿ ಬಗ್ಗೆ ಕಮೆಂಟ್‌ ಮಾಡಿದ್ದ ಮೀನಾಕ್ಷಿ ಸೆಹ್ರಾವತ್‌ ಉಡುಪಿ: ಕೆಲವು ದಿನಗಳ ಹಿಂದೆ ಉಡುಪಿಯಲ್ಲಿ ಗಾಂಧೀಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಡೆಹ್ರಾಡೂನ್‌ನ ವಾಗ್ಮಿ ಮೀನಾಕ್ಷಿ ಸೆಹ್ರಾವತ್‌ ಎಂಬವರ ವಿರುದ್ಧ ಕೇಸ್‌ ದಾಖಲಾಗಿದೆ. ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಡೆಹ್ರಾಡೂನ್‌ನ ಚಿಂತಕಿ ಮೀನಾಕ್ಷಿ ಬಾಂಗ್ಲಾ ಪಾಠ ಎಂಬ ವಿಷಯದ ಬಗ್ಗೆ ಹಿಂದಿಯಲ್ಲಿ ಮಾತನಾಡಿ, ಜಿನ್ನಾ ಜೊತೆ ಸೇರಿಕೊಂಡು ಮಹಾತ್ಮ ಗಾಂಧಿ ಪಾಕಿಸ್ಥಾನಕ್ಕೆ ಜನ್ಮ ನೀಡಿದ್ದಾರೆ. ಗಾಂಧೀಜಿ ಹಿಂದೂಗಳನ್ನು ದುರ್ಬಲಗೊಳಿಸಲು ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ.

ಉಡುಪಿ: ಗಾಂಧೀಜಿಯನ್ನು ಟೀಕಿಸಿದ ಹಿಂದೂ ಕಾರ್ಯಕರ್ತೆಯ ವಿರುದ್ಧ ಕೇಸ್‌ Read More »

ಗುತ್ತಿಗೆದಾರ ಆತ್ಮಹತ್ಯೆ : ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತರು ಸಿಐಡಿ ಕಸ್ಟಡಿಗೆ

ಬೆಂಗಳೂರು: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೆರೆಯಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್​ ಸೇರಿದಂತೆ ಐವರು ಆರೋಪಿಗಳನ್ನು ಬೀದರ್​ನ ಜೆಎಂಎಫ್​ಸಿ ನ್ಯಾಯಾಲಯ 5 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಆರೋಪಿಗಳಾದ ರಾಜು ಕಪನೂರ್​​​, ಗೋರಕ್​ನಾಥ್​​, ಸತೀಶ್​, ನಂದಕುಮಾರ್​​ ನಾಗಭುಂಜಗೆ, ರಾಮಾಗೌಡ ಪಾಟೀಲ್​ ಸಿಐಡಿ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಎಂಟು ಜನರ ಪೈಕಿ ಐವರ ಬಂಧನವಾಗಿದ್ದು, ಇನ್ನೂ ಮೂವರಿಗಾಗಿ ಸಿಐಡಿಯಿಂದ ಶೋಧ ನಡೆಸುತ್ತಿದೆ.2024 ಡಿಸೆಂಬರ್ 26 ರಂದು ಬೀದರ್ ನಗರದ ಬಸವೇಶ್ವರ

ಗುತ್ತಿಗೆದಾರ ಆತ್ಮಹತ್ಯೆ : ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತರು ಸಿಐಡಿ ಕಸ್ಟಡಿಗೆ Read More »

ನಾಪತ್ತೆಯಾಗಿದ್ದ ಯುವತಿ ಮದುವೆಯಾಗಿ ಪ್ರತ್ಯಕ್ಷ

ಸೋಷಿಯಲ್‌ಮೀಡಿಯಾದಲ್ಲಿ ಭಾರಿ ವೈರಲ್‌ ಆದ ಮದುವೆ ಸುದ್ದಿ ಬೆಳ್ತಂಗಡಿ: ಮೂಡುಬಿದಿರೆ ಪೊಲೀಸ್‌ ಠಾಣೆ ವ್ಯಾಪ್ತಿಯ ಪಟ್ರಮೆ ಎಂಬಲ್ಲಿಂದ ನಾಪತ್ತೆಯಾಗಿದ್ದ ಮುಸ್ಲಿಮ್‌ ಯುವತಿಯೊಬ್ಬಳು ಧರ್ಮಸ್ಥಳ ಸಮೀಪ ದೇವಸ್ಥಾನದಲ್ಲಿ ಹಿಂದು ಯುವಕನನ್ನು ಮದೆಯಾಗಿದ್ದು, ಈ ಮದುವೆ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಬಹಳ ವೈರಲ್‌ ಆಗಿದೆ. ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪಟ್ರಮೆ ಗ್ರಾಮದ ಸುಹಾನ (19) ಕಂಪ್ಯೂಟರ್ ಕ್ಲಾಸ್‍ಗೆ ಹೋಗಿದ್ದವಳು ನಾಪತ್ತೆ ಆಗಿದ್ದಳು. ಈ ಬಗ್ಗೆ ಬಳಿಕ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಿನ್ನೆ ಈಕೆ ಹಿಂದೂ ಯುವಕ

ನಾಪತ್ತೆಯಾಗಿದ್ದ ಯುವತಿ ಮದುವೆಯಾಗಿ ಪ್ರತ್ಯಕ್ಷ Read More »

error: Content is protected !!
Scroll to Top