ರಾಜ್ಯ

ಮಂಗಳೂರು-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ : ಕೇಂದ್ರದಿಂದ ಸ್ಪಂದನೆ

ಪ್ರಯಾಣ ದೂರ, ಸಮಯವನ್ನು ಕಡಿಮೆಗೊಳಿಸಲು ಷಟ್ಪಥ ನಿರ್ಮಾಣಕ್ಕೆ ಪ್ರಸ್ತಾವ ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ಮಧ್ಯೆ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಬೇಡಿಕೆಯ ಕೇಂದ್ರ ಸರಕಾರ ಸ್ಪಂದಿಸಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಯೋಜನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಯೋಜನೆ ಪ್ರಕಾರ ಹಾಸನದ ಮೂಲಕ ಈ ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿದೆ. ಈಗ ಬೆಂಗಳೂರು-ಮಂಗಳೂರು ನಡುವಿನ ಸುಮಾರು 400 ಕಿ.ಮೀ ದೂರ ಕ್ರಮಿಸಲು 7-8 ಗಂಟೆ ಸಮಯ ಹಿಡಿಯುತ್ತದೆ. ನಾಲ್ಕು ಅಥವಾ ಆರು ಪಥಗಳನ್ನು ಒಳಗೊಂಡಿರುವ ಈ […]

ಮಂಗಳೂರು-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ : ಕೇಂದ್ರದಿಂದ ಸ್ಪಂದನೆ Read More »

ಶಿರೂರು ಗುಡ್ಡ ಕುಸಿತ : ಕಾಮಗಾರಿ ಮಾಡಿದ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಜು.16ರಂದು 11 ಜನರ ಸಾವಿಗೆ ಕಾರಣವಾಗಿದ್ದ ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.ಶಿರೂರು ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದ ಕಂಪನಿಯೇ ಹೊಣೆ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ದೂರು ದಾಖಲಿಸಿದ್ದರು.ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದಿದ್ದರಿಂದ ಅವಘಡ ಸಂಭವಿಸಿದೆ. ಅವಘಡ

ಶಿರೂರು ಗುಡ್ಡ ಕುಸಿತ : ಕಾಮಗಾರಿ ಮಾಡಿದ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ Read More »

ಎಂಟು ದಿನಗಳಲ್ಲಿ ಗೃಹಲಕ್ಷ್ಮಿ ಹಣ ಜಮೆ : ಲಕ್ಷ್ಮಿ ಹೆಬ್ಬಾಳ್ಕರ್‌

ಬೆಂಗಳೂರು: ಎಂಟು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಪಪ್ರಚಾರ ಮಾಡಲಿ. ನಾವು ಈಗಾಗಲೇ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದೇವೆ. ತಾಲೂಕು ಪಂಚಾಯಿತಿ ಮುಖಾಂತರ ಬಿಡುಗಡೆಯಾಗಬೇಕಿರುವುದರಿಂದ ಸ್ವಲ್ಪ ತಡವಾಗಿದೆ. ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ನಿಲ್ಲೋದಿಲ್ಲ. 8-10 ದಿನಗಳಲ್ಲಿ ಬರುತ್ತೆ ಅಂತ ಹೇಳಿದ್ದೆ. 2 ದಿನ ಕಳೆದಿದೆ. ಇನ್ನು 8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ

ಎಂಟು ದಿನಗಳಲ್ಲಿ ಗೃಹಲಕ್ಷ್ಮಿ ಹಣ ಜಮೆ : ಲಕ್ಷ್ಮಿ ಹೆಬ್ಬಾಳ್ಕರ್‌ Read More »

ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲ ಮಣ್ಣುಪಾಲು : ಬಹಿರಂಗ ಪತ್ರದಲ್ಲಿ ವಿಜಯೇಂದ್ರ ಟೀಕೆ

ಈ ಬಾರಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುತ್ತಿದ್ದಾರೆ ಎಂದು ಲೇವಡಿ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7ರಂದು ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಾಲ್ಕು ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುತ್ತಿದ್ದಾರೆ. ನೌಕರರಿಗೆ ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ, ಗುತ್ತಿಗೆದಾರರ ಬಾಕಿ ಪಾವತಿಸಲಾಗದ ದಾರುಣ

ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲ ಮಣ್ಣುಪಾಲು : ಬಹಿರಂಗ ಪತ್ರದಲ್ಲಿ ವಿಜಯೇಂದ್ರ ಟೀಕೆ Read More »

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ : ಶಿವಸೇನೆ ಪುಂಡರಿಂದ ಚಾಲಕ, ನಿರ್ವಾಹಕರಿಗೆ ಬೆದರಿಕೆ

ಗಡಿ ವಿವಾದವಾಗಿ ಬದಲಾದ ಕಂಡಕ್ಟರ್‌ ಮೇಲಿನ ಹಲ್ಲೆ ಘಟನೆ ಬೆಳಗಾವಿ: ಮರಾಠಿ ಗೊತ್ತಿಲ್ಲ ಕನ್ನಡದಲ್ಲಿ ಮಾತನಾಡು ಎಂದ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಬೆಳಗಾವಿಯಲ್ಲಿ ಹಲ್ಲೆ ನಡೆಸಿದ ವಿಚಾರ ಈಗ ಎರಡು ರಾಜ್ಯಗಳ ನಡುವೆ ಗಡಿ ಉದ್ವಿಗ್ನತೆ ಸೃಷ್ಟಿಗೆ ಕಾರಣವಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್‌ಗಳನ್ನು ಅಲ್ಲಿನ ಮರಾಠಿ ಪುಂಡರು ಟಾರ್ಗೆಟ್ ಮಾಡುತ್ತಿದ್ದು, ಉದ್ಧವ್ ಠಾಕ್ರೆ ಬಣದ ಶಿವಸೇನೆ ಪುಂಡರು ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿದು ಹಾನಿ ಎಸಗಿದ್ದಾರೆ. ಪುಣೆಯ ಸ್ವಾರ್‌ಗೇಟ್‌ ಬಳಿ ಪುಂಡಾಟಿಕೆ ಮಾಡಿರುವ

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ : ಶಿವಸೇನೆ ಪುಂಡರಿಂದ ಚಾಲಕ, ನಿರ್ವಾಹಕರಿಗೆ ಬೆದರಿಕೆ Read More »

ಭೀಕರ ಅಪಘಾತ : ಕುಂಭಮೇಳಕ್ಕೆ ಹೋಗುತ್ತಿದ್ದ ಬೆಳಗಾವಿಯ 7 ಮಂದಿ ಸಾವು

ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ತೆರಳುತ್ತಿದ್ದ ಬೆಳಗಾವಿಯ ಗೋಕಾಕ್‌ ನಗರದ 7 ಮಂದಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಧ್ಯ ಪ್ರದೇಶದ ಜಬಲಪುರ ಪೆಹರಾ ಟೋಲ್ ನಾಕಾ ಬಳಿ ಇಂದು ಬೆಳಗಿನ ಜಾವ ಕ್ರೂಸರ್‌ ವಾಹನ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. 7 ಮಂದಿ ಕನ್ನಡಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಹಿಂದೆ ಗೋಕಾಕ್‌ ನಗರದಿಂದ 10 ಮಂದಿ ಕ್ರೂಸರ್‌ನಲ್ಲಿ ಮಹಾಕುಂಭಮೇಳಕ್ಕೆ ಹೊರಟಿದ್ದರು. ಇಂದು ಮುಂಜಾನೆ

ಭೀಕರ ಅಪಘಾತ : ಕುಂಭಮೇಳಕ್ಕೆ ಹೋಗುತ್ತಿದ್ದ ಬೆಳಗಾವಿಯ 7 ಮಂದಿ ಸಾವು Read More »

ದಾವಣಗೆರೆಯ ಮಠಕ್ಕೆ ನಟ ಸುನಿಲ್‌ ಶೆಟ್ಟಿಯಿಂದ ರೋಬೋಟಿಕ್‌ ಆನೆ ಕೊಡುಗೆ

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯ ಶಿಲಾಮಠಕ್ಕೆ ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ರೋಬೋಟಿಕ್​ ಆನೆಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. ಭಾನುವಾರ ಶ್ರೀಮಠಕ್ಕೆ ಆಗಮಿಸಿದ ಆನೆಯನ್ನು ಸ್ವಾಮೀಜಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ರೋಬೋಟಿಕ್ ಆನೆಗೆ ಉಮಾಮಹೇಶ್ವರ ಎಂದು ನಾಮಕರಣ ಮಾಡಲಾಯಿತು. ಗ್ರಾಮಸ್ಥರೆಲ್ಲರೂ ಸೇರಿ ಆನೆಯ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ. ರೋಬೋಟಿಕ್ ಆನೆಯ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಜನರು ಮುಗಿಬಿದ್ದರು.ಮುಂಬೈನ ಕುಪಾ ಆ್ಯಂಡ್ ಪೀಠಾ ಇಂಡಿಯಾ ಎಂಬ ಸಂಸ್ಥೆ ವತಿಯಿಂದ ನಟ ಸುನೀಲ್ ಶೆಟ್ಟಿ ಅವರು ರೋಬೋಟಿಕ್​ ಆನೆಯನ್ನು

ದಾವಣಗೆರೆಯ ಮಠಕ್ಕೆ ನಟ ಸುನಿಲ್‌ ಶೆಟ್ಟಿಯಿಂದ ರೋಬೋಟಿಕ್‌ ಆನೆ ಕೊಡುಗೆ Read More »

ಮೂಡೂರು-ಪಡೂರು ಬಯಲು ಕಂಬಳಕ್ಕೆ ಆಗಮಿಸಲಿದ್ದಾರೆ ಸಿದ್ದರಾಮಯ್ಯ

ಮಾ.8ರಂದು ಬಂಟ್ವಾಳದ ಕೊಡಿಬೈಲಿನಲ್ಲಿ ಜೋಡುಕರೆ ಕಂಬಳ ಬಂಟ್ವಾಳ : ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ನಡೆಯಲಿರುವ 14ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ. ಮಾರ್ಚ್ 8ರಂದು ಈ ಕಂಬಳ ನಡೆಯಲಿದ್ದು, ಅಧಿವೇಶನ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲು ಒಪ್ಪಿದ್ದಾರೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ. ದಿ.ಆಲ್ಬರ್ಟ್ ಪಾಯಸ್ ಕೂಡಿಬೈಲು ವೇದಿಕೆಯಲ್ಲಿ ಅಂದು ಬೆಳಗ್ಗೆ 8.45ಕ್ಕೆ ಸೋಲೂರು ಆರ್ಯ-ಈಡಿಗ ಮಹಾ ಸಂಸ್ಥಾನ

ಮೂಡೂರು-ಪಡೂರು ಬಯಲು ಕಂಬಳಕ್ಕೆ ಆಗಮಿಸಲಿದ್ದಾರೆ ಸಿದ್ದರಾಮಯ್ಯ Read More »

ಪಾದಚಾರಿಗಳ ಮೇಲೆ ಹರಿದ ಖಾಸಗಿ ಬಸ್‍ : ಇಬ್ಬರು ಮೃತ್ಯು, ಓರ್ವ ಗಂಭೀರ

ಹಾಸನ: ಧರ್ಮಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ವೇಗವಾಗಿ ಬಂದ ಖಾಸಗಿ ಬಸ್ ಹರಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಸುರೇಶ್ (60), ಕುಮಾರ್ (55) ಮೃತಪಟ್ಟವರೆಂದು ಗುರುತಿಸಲಾಗಿದೆ. ಮೃತರು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಆನಗೋಳು ಗ್ರಾಮದವರು. ಘಟನೆಯಲ್ಲಿ ಗಂಭೀರ ಗಾಯಗೊಂಡ ದಿನೇಶ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಪಾದಚಾರಿಗಳ ಮೇಲೆ ಹರಿದ ಖಾಸಗಿ ಬಸ್‍ : ಇಬ್ಬರು ಮೃತ್ಯು, ಓರ್ವ ಗಂಭೀರ Read More »

ಬಾಣಂತಿ ಹೊಟ್ಟೆಯಲ್ಲಿ ಹತ್ತಿ ಉಂಡೆ ಬಿಟ್ಟು ಹೊಲಿಗೆ ಹಾಕಿದ ವೈದ್ಯರು

ಜಿಮ್ಸ್‌ ಆಸ್ಪತ್ರೆ ವೈದ್ಯರ ಯಡವಟ್ಟು ಕಲಬುರಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಸಿಸೇರಿಯನ್‌ ಮಾಡುವ ವೇಳೆ ಹೊಟ್ಟೆಯಲ್ಲೇ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಫೆ.5ರಂದು ಭಾಗ್ಯಶ್ರೀ ಎಂಬ ಮಹಿಳೆಗೆ ಸಿಸೇರಿಯನ್‌ ಆಗಿತ್ತು. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊಟೆಯಲ್ಲೇ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದಾರೆ. ತಕ್ಷಣಕ್ಕೆ ಇದು ಮಹಿಳೆಯ ಅರಿವಿಗೆ ಬಂದಿಲ್ಲ. ಒಂದು ವಾರದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ

ಬಾಣಂತಿ ಹೊಟ್ಟೆಯಲ್ಲಿ ಹತ್ತಿ ಉಂಡೆ ಬಿಟ್ಟು ಹೊಲಿಗೆ ಹಾಕಿದ ವೈದ್ಯರು Read More »

error: Content is protected !!
Scroll to Top