ರಾಜ್ಯ

ಎಮ್‌ಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ ಆಯನೂರು ಮಂಜುನಾಥ್

ಶಿವಮೊಗ್ಗ : ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಧಾನಸಭೆಗೆ ಕಣಕ್ಕಿಳಿಯಲೇಬೇಕು ಎಂಬ ಇಚ್ಚೆಯಿಂದ ಸಾರ್ವತ್ರಿಕವಾಗಿ ಹೇಳಿದ್ದೇನೆ. ಪಕ್ಷದ ವೇದಿಕೆಯಲ್ಲೂ ನನ್ನ ವಿನಂತಿ ಮಾಡಿಕೊಂಡಿದ್ದೇನೆ. ಆದರೆ, ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇನೆಂದು ಹೇಳಿದ್ದಾರೆ.ಮೊನ್ನೆ ಈಶ್ವರಪ್ಪ‌ ಹೇಳಿದ ಮಾತನ್ನು […]

ಎಮ್‌ಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ ಆಯನೂರು ಮಂಜುನಾಥ್ Read More »

ಮೆಡಿಕಲ್‌ ಸೀಟು ಕೊಡಿಸುವುದಾಗಿ ವಂಚಿಸಿದ ಆರೋಪಿಯ ಬಂಧನ

ಮಂಗಳೂರು : ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ಮೆಡಿಕಲ್‌ ಸೀಟು ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದ ಪ್ರಕರಣದಲ್ಲಿ ನೋಯ್ಡಾ ಮೂಲದ ಆರೋಪಿಯನ್ನು ಮಹಾರಾಷ್ಟ್ರದ ಪೊಲೀಸರು ಮುಂಬೈನ ನೆರೋಲ್ ನಲ್ಲಿ ಏ. 2 ರಂದು ಬಂಧಿಸಿ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಬಂಧಿತನನ್ನು ಇಫ್ತಿಕರ್ ಅಹ್ಮದ್ (31) ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೆಂದು ಗುರುತಿಸಲಾಗಿದೆ. ಬೀದರ್‌ ಮೂಲದ ವ್ಯಕ್ತಿಯೋರ್ವರು, ತಮ್ಮಿಂದ 22.5 ಲಕ್ಷ ರೂ. ಪಡೆದು ಖಾಸಗಿ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ದೊರಕಿಸುವುದಾಗಿ ನಂಬಿಸಿ ಇಫ್ತಿಕರ್ ಅಹ್ಮದ್ ಹಾಗೂ ಮತ್ತಿತರರು

ಮೆಡಿಕಲ್‌ ಸೀಟು ಕೊಡಿಸುವುದಾಗಿ ವಂಚಿಸಿದ ಆರೋಪಿಯ ಬಂಧನ Read More »

ಮನೆ ಯಜಮಾನನಿಗೆ ಹಲ್ಲೆ : ಗೂಗಲ್ ಪೇ ಮೂಲಕ ಹಣ ವರ್ಗಾವಣೆ

ಬೆಳ್ತಂಗಡಿ : ಪಡಂಗಡಿಯಲ್ಲಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾದ ಘಟನೆ ಮಾ. 30 ರಂದು ಸಂಭವಿಸಿದೆ.ಪಡಂಗಡಿ ಗ್ರಾಮದ ಜಾನೆಬೈಲು ಪುತ್ಯೆ ಮನೆ ಎಂಬಲ್ಲಿ ಮನೆ ಯಜಮಾನ ಜುವಾಮ್‌ ಗೋವಿಯಸ್‌ (64) ಅವರಿಗೆ ಹಲ್ಲೆ ನಡೆಸಿದ್ದಾರೆ. ಪರಿಚಿತರಾದ ರಿಯಾಜ್‌ ಮತ್ತು ಫೈಝಲ್‌ ಎಂಬವರೇ ಹಣ ಎಗರಿಸಿದ ಆರೋಪಿಗಳು. ಜುವಾಮ್‌ ಗೋವಿಯಸ್‌ ಅವರು ತನ್ನ ಮಗನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಮನೆಯಲ್ಲಿ ಈ ಹಿಂದೆ ರಬ್ಬರ್‌ ಟ್ಯಾಪಿಂಗ್‌ ಮಾಡುತ್ತಿದ್ದ

ಮನೆ ಯಜಮಾನನಿಗೆ ಹಲ್ಲೆ : ಗೂಗಲ್ ಪೇ ಮೂಲಕ ಹಣ ವರ್ಗಾವಣೆ Read More »

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಸಹಾಯವಾಣಿ

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯಂತ್ರಣ ಕೊಠಡಿ ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಚುನಾವಣಾ ಆಯೋಗ ಕಣ್ಗಾವಲನ್ನು ಹೆಚ್ಚಿಸಿದೆ.ಚುನಾವಣೆ ಪ್ರಕ್ರಿಯೆ ಮುಕ್ತವಾಗಿ ಹಾಗೂ ನ್ಯಾಯಯುತ ರೀತಿಯಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುವಂತೆ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.ನಾಯಕರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದರೆ ಜನರು ನಿಯಂತ್ರಣ ಕೊಠಡಿಗಳ ಸಹಾಯವಾಣಿ ಸಂಖ್ಯೆ 080-28604331 ಮತ್ತು 080-28600954ಗಳ ಮೂಲಕ ದೂರು ನೀಡಬಹುದಾಗಿದೆ ಎಂದು ಚುನಾವಣಾ ಆಯೋಗ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಸಹಾಯವಾಣಿ Read More »

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯ 20 ರ‍್ಯಾಲಿ

ಅಧಿಕಾರ ಉಳಿಸಿಕೊಳ್ಳಲು ಮೋದಿ ವರ್ಚಸ್ಸು ಬಳಕೆ ದೆಹಲಿ : ಭಾರತದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕವನ್ನು ಉಳಿಸಿಕೊಳ್ಳಲು ತೀವ್ರ ಪ್ರಯತ್ನಪಡುತ್ತಿರುವ ಬಿಜೆಪಿ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನೇ ಪೂರ್ಣವಾಗಿ ನೆಚ್ಚಿಕೊಂಡಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 20 ರ‍್ಯಾಲಿಗಳಲ್ಲಿ ಮೋದಿ ಭಾಗವಹಿಸುವಂಥ ಯೋಜನೆಯನ್ನು ಪಕ್ಷದ ಚುನಾವಣಾ ರಣತಂತ್ರ ಹೆಣೆಯುತ್ತಿರುವ ತಂಡ ರೂಪಿಸುತ್ತಿದೆ.ಈ ಬಾರಿ ಕಾಂಗ್ರೆಸ್‌ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅಥವಾ ಬಹುಮತದ ಸಮೀಪಕ್ಕೆ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ನುಡಿದಿರುವ ಭವಿಷ್ಯ ಬಿಜೆಪಿ

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯ 20 ರ‍್ಯಾಲಿ Read More »

ಶಿವಮೊಗ್ಗ ಚೆಕ್‌ಪೋಸ್ಟ್‌ನಲ್ಲಿ 4.5 ಕೋಟಿ ರೂ. ಮೌಲ್ಯದ ಸೀರೆ ವಶ

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಒಂದೇ ದಿನ ಬರೋಬ್ಬರಿ 4.5 ಕೋಟಿ ಮೌಲ್ಯದ ಸೀರೆ, ನಗದು, ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಶಿವಮೊಗ್ಗ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಶುಕ್ರವಾರ ರಾತ್ರಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 4.5 ಕೋಟಿ ಮೌಲ್ಯದ ಸೀರೆ, 1.6 ಕೋಟಿ ನಗದು, 1.56 ಲಕ್ಷ ಮೌಲ್ಯದ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ನಿತ್ಯ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ದೊಡ್ಡಪೇಟೆ ಪೊಲೀಸ್ ಠಾಣಾ

ಶಿವಮೊಗ್ಗ ಚೆಕ್‌ಪೋಸ್ಟ್‌ನಲ್ಲಿ 4.5 ಕೋಟಿ ರೂ. ಮೌಲ್ಯದ ಸೀರೆ ವಶ Read More »

ಭಾರತೀಯ ಕರೆನ್ಸಿ ಬದಲಾಗಿ ಯುಎಇ ದಿರ್ಹಾಮ್ ಕಡಿಮೆ ಬೆಲೆಗೆ ನೀಡುವುದಾಗಿ ವಂಚನೆ : 6 ಮಂದಿ ಸೆರೆ

ಸಾಬೂನು ಪ್ಯಾಕೆಟ್‌ ಕೊಟ್ಟು ಹಣ ಕಸಿದು ಪರಾರಿಯಾಗುತ್ತಿದ್ದ ಖದೀಮರು ಉಡುಪಿ : ಭಾರತೀಯ ಕರೆನ್ಸಿ ಬದಲಾಗಿ ಯುಎಇ ದಿರ್ಹಾಮ್ ಕಡಿಮೆ ಬೆಲೆಗೆ ನೀಡುವುದಾಗಿ ಭರವಸೆ ನೀಡಿ ಹಲವು ವ್ಯಕ್ತಿಗಳಿಗೆ ವಂಚಿಸಿದ ಆರೋಪದಡಿ ಉಡುಪಿ ಪೊಲೀಸರು ಆರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನೆಲಿಸಿದ್ದ ಮೊಹಮ್ಮದ್ ಪೋಲಾಶ್ ಖಾನ್ (42), ಮುಂಬೈ ಮೂಲದ, ಮಹಮ್ಮದ್ ಮಹತಾಬ್ ಬಿಲ್ಲಾಲ್ ಶೇಕ್ (43), ಪಶ್ಚಿಮ ಬಂಗಾಳದ ಮಹಮ್ಮದ್ ಫಿರೋಜ್ (30), ದಿಲ್ಲಿಯಲ್ಲಿ ವಾಸವಾಗಿರುವ ನೂರ್ ಮಹಮ್ಮದ್ (36) ಹರಿಯಾಣದ ಮೀರಜ್

ಭಾರತೀಯ ಕರೆನ್ಸಿ ಬದಲಾಗಿ ಯುಎಇ ದಿರ್ಹಾಮ್ ಕಡಿಮೆ ಬೆಲೆಗೆ ನೀಡುವುದಾಗಿ ವಂಚನೆ : 6 ಮಂದಿ ಸೆರೆ Read More »

ಗೋವುಗಳನ್ನು ಸಾಗಿಸುತ್ತಿದ್ದವನ ಹತ್ಯೆ : ಪುನೀತ್‌ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲು

ಪುನೀತ್‌ ಕೆರೆಹಳ್ಳಿ ನೇತೃತ್ವದ ಗ್ಯಾಂಗ್‌ ಥಳಿಸಿ ಕೊಂದಿದೆ ಎಂಬ ಆರೋಪ ಬೆಂಗಳೂರು : ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಗೋರಕ್ಷಕರ ತಂಡದ ದಾಳಿಗೆ ಸಿಲುಕಿ ದನಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕ ಹತ್ಯೆಯಾಗಿದ್ದಾನೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ಇತರ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮಂಡ್ಯ ನಿವಾಸಿ ಇದ್ರೀಸ್ ಪಾಷಾ (39) ಎಂಬವರ ಮೃತದೇಹ ಸಾತನೂರು ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿತ್ತು. ಇರ್ಫಾನ್ ಮತ್ತು ಸೈಯದ್

ಗೋವುಗಳನ್ನು ಸಾಗಿಸುತ್ತಿದ್ದವನ ಹತ್ಯೆ : ಪುನೀತ್‌ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲು Read More »

ಕೇವಲ 5 ರೂ. ಗಾಗಿ ಬಾಲಕನ ಕೊಲೆ ಮಾಡಿದ ಪಾಪಿ

ಹುಬ್ಬಳ್ಳಿ : ಹುಬ್ಬಳ್ಳಿಯ ಬಂಡಿಗೆರೆಯಲ್ಲಿ 5 ರೂಪಾಯಿ ಕೇಳಿದ್ದಕ್ಕೆ ವ್ಯಕ್ತಿಯೋರ್ವ ಎಂಟು ವರ್ಷದ ಮಗುವಿನ ತಲೆಗೆ ಕಲ್ಲಿನಿಂದ ಚಚ್ಚಿ ಹತ್ಯೆಗೈದ ಘಟನೆ ಏ. 2 ರಂದು ನಡೆದಿದೆ.ಮಾ. 30 ರಂದು ನಡೆದಿದ್ದ ಈ ಭೀಕರ ಕೊಲೆ ಬೇಧಿಸಿದ ಪೊಲೀಸರಿಗೆ ಅಚ್ಚರಿಯಾಗಿದ್ದು, ಎಂಟು ವರ್ಷದ ನದೀಂ ಎನ್ನುವ ಬಾಲಕ ಶಾಲೆ ರಜೆ ಕೊಟ್ಟಿದ್ದರಿಂದ ಬೆಂಡಿಗೇರಿ ಪೊಲೀಸ್ ಠಾಣೆಯ ಹತ್ತಿರವಿರುವ ದೊಡ್ಮನಿ ಕಾಲೋನಿಯಲ್ಲಿನ ಅಜ್ಜಿ ಮನೆಗೆಂದು ಬಂದಿದ್ದ ವೇಳೆ ಸೈಕೋ ಕಿಲ್ಲರ್ ರವಿ ಬಳ್ಳಾರಿ ಎಂಬ ವ್ಯಕ್ತಿ ಕೇವಲ 5

ಕೇವಲ 5 ರೂ. ಗಾಗಿ ಬಾಲಕನ ಕೊಲೆ ಮಾಡಿದ ಪಾಪಿ Read More »

ಯಕ್ಷಧ್ರುವ ಪಟ್ಲ ಟ್ರಸ್ಟ್ ವತಿಯಿಂದ ದೈವ ನರ್ತಕ ಕಾಂತು ಅಜಿಲರ ಕುಟುಂಬಕ್ಕೆ ನೆರವು

ಮಂಗಳೂರು : ಕಾಣಿಯೂರು ಗ್ರಾಮ‌ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಮಾ. 30 ರಂದು ದೈವಾರಾಧ‌ನೆ ನಡೆಯುತ್ತಿದ್ದ ಸಂದರ್ಭ, ದೈವ ನರ್ತಕರಾದ ಕಾಂತು ಅಜಿಲ ಸ್ಥಳದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದರು. ಅವರ ಕುಟುಂಬಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಒಂದು ಲಕ್ಷ ರೂ. ಆರ್ಥಿಕ ನೆರವನ್ನು ಏ. 2 ರಂದು ಘೋಷಣೆ ಮಾಡಿದೆ.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಭೆಯಲ್ಲಿ ದೈವ ನರ್ತನ ಸೇವೆಯಲ್ಲಿ ತೊಡಗಿರುವಾಗಲೇ ಇಹಲೋಕ ತ್ಯಜಿಸಿದ ಕಾಂತು ಅಜಿಲರಿಗೆ ಶ್ರದ್ದಾಂಜಲಿ

ಯಕ್ಷಧ್ರುವ ಪಟ್ಲ ಟ್ರಸ್ಟ್ ವತಿಯಿಂದ ದೈವ ನರ್ತಕ ಕಾಂತು ಅಜಿಲರ ಕುಟುಂಬಕ್ಕೆ ನೆರವು Read More »

error: Content is protected !!
Scroll to Top