ರಾಜ್ಯ

ತೊಕ್ಕೊಟ್ಟು : ವ್ಯಾಪಾರಿ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ : ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಹೊಲಿಗೆ ಸಂಬಂಧಿತ ಮಳಿಗೆಯೊಂದರ ಮಾಲಕ ತನ್ನ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.10 ರಂದು ಬೆಳಗ್ಗೆ ಸಂಭವಿಸಿರುತ್ತದೆ. ಪ್ರವೀಣ್ ಆಳ್ವ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಲತ ಸೇವಂತಿಗುಡ್ಡೆ ನಿವಾಸಿಯಾಗಿದ್ದ ಇವರು ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿದ್ದರು. ತೊಕ್ಕೊಟ್ಟು ಜಂಕ್ಷನ್ ಬಳಿ ಟೈಲರ್‌ಗಳಿಗೆ ಸಂಬಂಧಿಸಿದ ಹೊಲಿಗೆ ನೂಲು ಸೇರಿದಂತೆ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಿದ್ದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅವರು‌ ಬೆಳಗ್ಗೆ 6.30ಕ್ಕೆ ಮನೆಯಿಂದ […]

ತೊಕ್ಕೊಟ್ಟು : ವ್ಯಾಪಾರಿ ನೇಣು ಬಿಗಿದು ಆತ್ಮಹತ್ಯೆ Read More »

1.999 ಕೆಜಿ ಗಾಂಜಾ ವಶ : ಯುವಕನ ಬಂಧನ

ಮಂಗಳೂರು : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಏ. 10 ರಂದು ಮರಕಡ್ಡದ ಪಡುಶೆಡ್ಡೆ ರಸ್ತೆ ಬದಿಯಲ್ಲಿ ಸಂಛವಿಸಿದೆ.ಬಂಧಿತ ಆರೋಪಿಯನ್ನು ಮಲ್ಪೆ ನಿವಾಸಿ ಸುಹಾನ್ ಎಸ್ ಪೂಜಾರಿ (23) ಎಂದು ಗುರುತಿಸಲಾಗಿದೆ. ಸುಹಾನ್ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ್ಡದ ಪಡುಶೆಡ್ಡೆ ಬಳಿ ರಸ್ತೆ ಬದಿ ಸ್ಕೂಟರ್‌ನಲ್ಲಿ ಕುಳಿತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.ಆತನಿಂದ 1.999 ಕೆಜಿ ಗಾಂಜಾ, ಮೊಬೈಲ್ ಮತ್ತು ಸ್ಕೂಟರ್ ಅನ್ನು ಪೊಲೀಸರು ಜಪ್ತಿ

1.999 ಕೆಜಿ ಗಾಂಜಾ ವಶ : ಯುವಕನ ಬಂಧನ Read More »

ಪ್ರಪಾತಕ್ಕೆ ಬಿದ್ದ ಬೈಕ್ – ಹಿಂಬದಿ ಸವಾರ ಮೃತ್ಯು

ಬಂಟ್ವಾಳ : ಬೈಕ್ ಪ್ರಪಾತಕ್ಕೆ ಬಿದ್ದು, ಬೈಕಿನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಚಿಕ್ಕ ಮಂಗಳೂರು ಮೂಲದ ಯುವಕನೋರ್ವ ಮೃತಪಟ್ಟ ಘಟನೆ ಏ. 10 ರ ಮುಂಜಾವಿನ ವೇಳೆ ಬಿಸಿರೋಡಿನ ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.ಯಶೋಧರ(25) ಎಂಬವರೇ ಮೃತ ದುರ್ದೈವಿ. ಚಿಕ್ಕಮಗಳೂರು ನಿವಾಸಿಯಾದ ಇವರು ಮಂಗಳೂರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೈಕ್ ಚಲಾಯಿಸುತ್ತಿದ್ದ ಈತನ ಸ್ನೇಹಿತ ಅವಿನಾಶ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಪ್ರಾಣಾಪಯವಿಲ್ಲದೆ ಪಾರಾಗಿದ್ದಾನೆ. ಇವರಿಬ್ಬರೂ ಮಂಗಳೂರು ಸಿಟಿ ಸೆಂಟರ್ ನಲ್ಲಿ ಉದ್ಯೋಗಿಗಳಾಗಿದ್ದು, ಬೆಳ್ತಂಗಡಿ ಸ್ನೇಹಿತನ

ಪ್ರಪಾತಕ್ಕೆ ಬಿದ್ದ ಬೈಕ್ – ಹಿಂಬದಿ ಸವಾರ ಮೃತ್ಯು Read More »

ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಮುಲ್ ಗೆ ವಿರೋಧ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್

ಹಾಸನ : ಕನ್ನಡಿಗರ ಅಸ್ಮಿತೆಯಾದ ನಂದಿನಿ ಹಾಲು ಮತ್ತು ನಂದಿನಿ ಹಾಲಿನ ಉತ್ಪನ್ನಗಳನ್ನು ಬದಿಗೆ ತಳ್ಳಿ ಗುಜರಾತ್ ಮೂಲದ ಅಮುಲ್ ಹಾಲು ಕರ್ನಾಟಕದಲ್ಲಿ ಪಾರುಪತ್ಯ ಸ್ಥಾಪಿಸಲು ನೋಡುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರ ಸಹಕಾರ ನೀಡುತ್ತಿದೆ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಾಯಕರು ಹಾಗೂ ಜನಸಾಮಾನ್ಯರ ಒಂದು ವರ್ಗ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ನಂದಿನಿ ವರ್ಸಸ್ ಅಮುಲ್ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಜಟಾಪಟಿ ನಡೆಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಸಚಿವರುಗಳು ಸ್ಪಷ್ಟನೆ ನೀಡಿದರೂ ವಿರೋಧ

ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಮುಲ್ ಗೆ ವಿರೋಧ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್ Read More »

ರಂಗಭೂಮಿ ದಿಗ್ಗಜೆ, ರಾಷ್ಟ್ರ ರಾಜಧಾನಿಯ ಐಕಾನಿಕ್ : ಜಲಬಾಲ ವೈದ್ಯ ವಿಧಿವಶ

ಅಕ್ಷರ ಥಿಯೇಟರ್‌ನ ಸಹ ಸಂಸ್ಥಾಪಕಿ, ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ದೆಹಲಿ : ರಂಗಭೂಮಿ ದಿಗ್ಗಜೆ ಮತ್ತು ರಾಷ್ಟ್ರ ರಾಜಧಾನಿಯ ಐಕಾನಿಕ್ ಅಕ್ಷರ ಥಿಯೇಟರ್‌ನ ಸಹ ಸಂಸ್ಥಾಪಕಿ ಜಲಬಾಲ ವೈದ್ಯ ಅವರು ಭಾನುವಾರ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಮತ್ತು ರಂಗಭೂಮಿ ನಿರ್ದೇಶಕಿ ಅನಸೂಯಾ ವೈದ್ಯ ಶೆಟ್ಟಿ ಅವರು ತಿಳಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜಲಬಾಲ ವೈದ್ಯ(86) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.ಭಾರತೀಯ ಲೇಖಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುರೇಶ್ ವೈದ್ಯ ಮತ್ತು ಇಂಗ್ಲಿಷ್ ಶಾಸ್ತ್ರೀಯ ಗಾಯಕಿ

ರಂಗಭೂಮಿ ದಿಗ್ಗಜೆ, ರಾಷ್ಟ್ರ ರಾಜಧಾನಿಯ ಐಕಾನಿಕ್ : ಜಲಬಾಲ ವೈದ್ಯ ವಿಧಿವಶ Read More »

ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಒಂದೇ ಪಟ್ಟಿಯಲ್ಲಿ 175 ಅಭ್ಯರ್ಥಿಗಳ ಹೆಸರು ಬೆಂಗಳೂರು : ಆಡಳಿತರೂಢ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಇಂದು ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ನಿನ್ನೆ ತಡರಾತ್ರಿ ವರೆಗೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಒಂದೇಟಿಗೆ 175 ಅಭ್ಯರ್ಥಿಗಳ ಪಟ್ಟಿಯನ್ನ ರೆಡಿ ಮಾಡಿದ್ದಾರೆ. ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು.? ಬಂಡಾಯ ಶಮನ ಮಾಡುವುದು ಹೇಗೆ? ಸರ್ವೆ ರಿಪೋರ್ಟ್ ಏನು ಹೇಳುತ್ತದೆ ಹೀಗೆ ಎಲ್ಲವನ್ನೂ ಅಳೆದು ತೂಗಿ ಹೈಕಮಾಂಡ್‌ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದು,

ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ Read More »

ರಾಹುಲ್‌ ಗಾಂಧಿ ವಿದೇಶಕ್ಕೆ ಹೋಗುವುದು ಅನಪೇಕ್ಷಿತ ಉದ್ಯಮಿಗಳ ಭೇಟಿಗೆ

ಸಂಚಲನ ಸೃಷ್ಟಿಸಿದ ಕಾಂಗ್ರೆಸ್‌ ಮಾಜಿ ನಾಯಕ ಗುಲಾಮ್‌ ನಬಿ ಆಜಾದ್‌ ಆರೋಪ ಹೊಸದಿಲ್ಲಿ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಅವರ ಇಡೀ ಕುಟುಂಬ ವ್ಯಾಪಾರಿಗಳೊಂದಿಗೆ ಸಂಬಂಧ ಹೊಂದಿದೆ. ರಾಹುಲ್‌ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲ ಕೆಲವು ಅನಪೇಕ್ಷಿತ ಉದ್ಯಮಿಗಳನ್ನು ಭೇಟಿ ಮಾಡುತ್ತಾರೆ ಎಂದು ಕಾಂಗ್ರೆಸಿನ ಮಾಜಿ ನಾಯಕ ಗುಲಾಮ್‌ ನಬಿ ಆಜಾದ್‌ ಆರೋಪಿಸಿದ್ದಾರೆ. ಉದ್ಯಮಿ ಗೌತಮ್‌ ಅದಾನಿ ವಿಚಾರವನ್ನು ಹಿಡಿದುಕೊಂಡು ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ರಾಹುಲ್‌ ಗಾಂಧಿ

ರಾಹುಲ್‌ ಗಾಂಧಿ ವಿದೇಶಕ್ಕೆ ಹೋಗುವುದು ಅನಪೇಕ್ಷಿತ ಉದ್ಯಮಿಗಳ ಭೇಟಿಗೆ Read More »

ನೀತಿಸಂಹಿತೆ ಜಾರಿಯಾದ 10 ದಿನದಲ್ಲಿ 100 ಕೋ. ರೂ. ನಗದು, ವಸ್ತುಗಳು ವಶ

ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕಣ್ಗಾವಲು ಬೆಂಗಳೂರು : ಚುನಾವಣಾ ನೀತಿಸಂಹಿತೆ ಜಾರಿಯಾದ ಹತ್ತು ದಿನಗಳಲ್ಲಿ ಪೊಲೀಸರು 99.18 ಕೋಟಿ ರೂ. ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿರಿಸಿದೆ. ನಗದು ವಹಿವಾಟುಗಳ ಮೇಲೆ ನಿಗಾ ಇರಿಸಿದ್ದು ಚೆಕ್​ಪೋಸ್ಟ್​​ಗಳನ್ನು ನಿರ್ಮಿಸಲಾಗಿದೆ. ದಾಖಲೆ ರಹಿತ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಸಾಗಿಸುತ್ತಿದ್ದ ಗಿಫ್ಟ್​​ಗಳನ್ನೂ ಆಯೋಗ ಜಪ್ತಿ ಮಾಡಿಕೊಂಡಿದೆ. ಮಾ.29ರಂದು ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಅಂದಿನಿಂದ

ನೀತಿಸಂಹಿತೆ ಜಾರಿಯಾದ 10 ದಿನದಲ್ಲಿ 100 ಕೋ. ರೂ. ನಗದು, ವಸ್ತುಗಳು ವಶ Read More »

ಎಸ್‌ಎಡಿ ನಾಯಕ ಇಂದರ್ ಇಕ್ಬಾಲ್ ಸಿಂಗ್ ಅತ್ವಾಲ್ ಬಿಜೆಪಿಗೆ ಸೇರ್ಪಡೆ

ದೆಹಲಿ : ಶಿರೋಮಣಿ ಅಕಾಲಿದಳದ ನಾಯಕ ಇಂದರ್ ಇಕ್ಬಾಲ್ ಸಿಂಗ್ ಅತ್ವಾಲ್ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು. ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಮತ್ತಿತರ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಕೇಸರಿ ಪಕ್ಷ ಸೇರಿಕೊಂಡರು. ಭಾರತೀಯ ಜನತಾ ಪಕ್ಷಕ್ಕೆ ಸೇರಲು ಎಸ್‌ಎಡಿ ತೊರೆದ ಅತ್ವಾಲ್, 2004 ರಿಂದ 2009 ರವರೆಗೆ 14 ನೇ ಲೋಕಸಭೆಯ ಉಪ ಸ್ಪೀಕರ್ ಆಗಿದ್ದ ಚರಂಜಿತ್ ಸಿಂಗ್ ಅತ್ವಾಲ್ ಅವರ ಪುತ್ರ ಮತ್ತು

ಎಸ್‌ಎಡಿ ನಾಯಕ ಇಂದರ್ ಇಕ್ಬಾಲ್ ಸಿಂಗ್ ಅತ್ವಾಲ್ ಬಿಜೆಪಿಗೆ ಸೇರ್ಪಡೆ Read More »

ಕೆಎಂಎಫ್ – ಅಮುಲ್ ಸಂಸ್ಥೆಗಳ ವಿಲೀನವಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ : ಕೆಎಮ್‌ಎಫ್‌ ಎಮ್‌ಡಿ ಬಿ.ಸಿ ಸತೀಶ್

ಬೆಂಗಳೂರು : ಕರ್ನಾಟಕದ ಕೆಎಂಎಫ್ ಮತ್ತು ಗುಜರಾತ್ ನ ಅಮುಲ್ ಸಂಸ್ಥೆಗಳ ವಿಲೀನವಿಲ್ಲ.. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಕೆಎಮ್‌ಎಫ್‌ ಎಮ್‌ಡಿ ಬಿ.ಸಿ ಸತೀಶ್ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲವು ದೇಶದ ಎರಡನೇ ಅತಿ ದೊಡ್ಡ ಸರ್ಕಾರಿ ಹಾಲು ಮಹಾಮಂಡಲ ಸಂಸ್ಥೆಯಾಗಿದ್ದು, 26 ಲಕ್ಷ ರೈತ ಕುಟುಂಬ ಹಾಗೂ ಕೋಟ್ಯಂತರ ಗ್ರಾಹಕರಿಂದ ಗಟ್ಟಿಯಾಗಿ ನೆಲೆಯೂರಿದ್ದು, ಮತ್ತೊಂದು ಸಹಕಾರ ಮಂಡಲದೊಂದಿಗೆ ವಿಲೀನ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾರೂ ಆತಂಕ ಪಡುವಂತಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕ

ಕೆಎಂಎಫ್ – ಅಮುಲ್ ಸಂಸ್ಥೆಗಳ ವಿಲೀನವಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ : ಕೆಎಮ್‌ಎಫ್‌ ಎಮ್‌ಡಿ ಬಿ.ಸಿ ಸತೀಶ್ Read More »

error: Content is protected !!
Scroll to Top