ರಾಜ್ಯ

ವಜ್ರದೇಹಿ ಶ್ರೀಗೆ ಸಿಸಿಬಿ ನೋಟೀಸ್!?

ಮಂಗಳೂರು: ದಕ್ಷಿಣ ಕನ್ನಡದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಬಿಜೆಪಿ ಟಿಕೆಟ್ ಡೀಲ್ ವಿಷಯವಾಗಿ ಹಿಂದೂ ಮುಖಂಡೆ ಚೈತ್ರ ಕುಂದಾಪುರ ಹಾಗೂ ಹಾಲಶ್ರೀ ಸ್ವಾಮಿಜಿ ಬಂಧನವಾಗಿ ತಿಂಗಳು ಕಳೆದಿದೆ. ಇದೀಗ  ಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಬೆಂಗಳೂರು ಸಿಸಿಬಿ ಸಹಾಯಕ ಪೊಲೀಸ್ ಕಮಿಷನರ್ ರೀನಾ ಸುವರ್ಣ ಅವರು ಶ್ರೀಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಚೈತ್ರ ಇಡಿಗೆ ಬರೆದ ಪತ್ರದಲ್ಲಿ ವಜ್ರದೇಹಿ ಮಠದ […]

ವಜ್ರದೇಹಿ ಶ್ರೀಗೆ ಸಿಸಿಬಿ ನೋಟೀಸ್!? Read More »

ಕೊಡಗು-ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷರಾಗಿ ರವೀಂದ್ರನಾಥ್ ಕೇವಳ, ಉಪಾಧ್ಯಕ್ಷರಾಗಿ ಪಾಣತ್ತಲೆ ಪಳಂಗಪ್ಪಂ ಆಯ್ಕೆ

ಬೆಂಗಳೂರು: ಕೊಡಗು ಹಾಗೂ ದಕ್ಷಿಣ ಕನ್ನಡ ಗೌಡ ಸಮಾಜದ 2023-25 ನೇ ಸಾಲಿನ ಅಧ್ಯಕ್ಷರಾಗಿ ರವೀಂದ್ರನಾಥ್ ಕೇವಳ ಹಾಗೂ ಉಪಾಧ್ಯಕ್ಷರಾಗಿ ಪಾಣತ್ತಲೆ ಪಳಂಗಪ್ಪಂನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವ ಕಾರ್ಯದರ್ಶಿಗಳಾಗಿ ನಾಗೇಶ್ ಕುಮಾರ್ ಕಲ್ಲುಮುಟ್ಲು, ಖಜಾಂಜಿಯಾಗಿ ಕುಂಭಗೌಡನ ಸೋಮಣ್ಣ, ಜಂಟಿ ಕಾರ್ಯದರ್ಶಿಯಾಗಿ ನಾಗೇಶ್ ಬಂಟೋಡಿ ಉಳುವಾರನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೊಡಗು-ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷರಾಗಿ ರವೀಂದ್ರನಾಥ್ ಕೇವಳ, ಉಪಾಧ್ಯಕ್ಷರಾಗಿ ಪಾಣತ್ತಲೆ ಪಳಂಗಪ್ಪಂ ಆಯ್ಕೆ Read More »

ಯಾಕಾಗಿ ನಡೆಯಿತು ಬಿಜೆಪಿ – ಜೆಡಿಎಸ್ ಮೈತ್ರಿ? ಒಳಗುಟ್ಟು ಬಿಚ್ಚಿಟ್ಟ ದೇವೇಗೌಡ!

ಸುಬ್ರಹ್ಮಣ್ಯ: ಕುಮಾರಸ್ವಾಮಿಯವರು ಈಗಾಗಲೇ ಗೃಹಮಂತ್ರಿ ಜೊತೆ ಚರ್ಚೆ ನಡೆಸಿದ್ದಾರೆ. ಸೀಟು ಹಂಚಿಕೆಯ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಷ್ಟೇ. ದಸರಾ ಕಳೆದು ಸೀಟು ಹಂಚಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ದಕ್ಷಿಣ ಭಾರತದ ಹೆಸರಂತ ನಾಗ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮೈತ್ರಿಗೆ ಮೊದಲು ಜೆಡಿಎಸ್’ನ 19 ಶಾಸಕರು, 8 ಸಂಸದರು ಪಕ್ಷದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಜೊತೆ ಎರಡು

ಯಾಕಾಗಿ ನಡೆಯಿತು ಬಿಜೆಪಿ – ಜೆಡಿಎಸ್ ಮೈತ್ರಿ? ಒಳಗುಟ್ಟು ಬಿಚ್ಚಿಟ್ಟ ದೇವೇಗೌಡ! Read More »

ಬೆಂಗಳೂರು: ಹೊತ್ತಿ ಉರಿದ ಪಟಾಕಿ ಅಂಗಡಿಗಳು, 3 ಸಾವು

ಬೆಂಗಳೂರು: ಪಟಾಕಿ ಅನ್’ಲೋಡ್ ಮಾಡುತ್ತಿದ್ದ ವೇಳೆ ಪಟಾಕಿ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು, 3 ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ವರದಿಯಾಗಿದೆ. ನವೀನ್ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದೆ. ಲಾರಿಯಿಂದ ಪಟಾಕಿ ಅನ್ ಲೋಡ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದ್ದು, 4-5 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಂಗಡಿಯ ಎದುರು ನಿಲ್ಲಿಸಿದ್ದ 3 ಬೈಕ್’ಗಳು

ಬೆಂಗಳೂರು: ಹೊತ್ತಿ ಉರಿದ ಪಟಾಕಿ ಅಂಗಡಿಗಳು, 3 ಸಾವು Read More »

ಮೈಸೂರು ದಸರಾ: ಏರ್ ಶೋಗೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್ | 3 ವರ್ಷಗಳ ಬಳಿಕ ನಡೆಯುವ ಏರ್ ಶೋಗೆ ಸಿದ್ಧತೆ ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜನರನ್ನು ಆಕರ್ಷಿಸುವ ಏರ್‌ ಶೋ ಆಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅನುಮತಿ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ. ರಾಜೇಂದ್ರ ಅವರು ಬನ್ನಿಮಂಟಪದ ಮೈದಾನಕ್ಕೆ ಭೇಟಿ ನೀಡಿ ಸ್ಧಳ ಹಾಗೂ ಏರ್ ಶೋ ನಡೆಸಲು ಬೇಕಾದ ರೂಪುರೇಷೆಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮೈಸೂರು ಏರ್ ಬೇಸ್ಡ್ ಗ್ರೂಪ್ ಕ್ಯಾಪ್ಟನ್ ಡಿ.ಕೆ. ಹೋಜಾ ಅವರೊಂದಿಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಏರ್ ಶೋ ನಡೆಸುವ ಸ್ಧಳ ದಿನಾಂಕ ಹಾಗೂ ಸಮಯ ಕುರಿತು

ಮೈಸೂರು ದಸರಾ: ಏರ್ ಶೋಗೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್ | 3 ವರ್ಷಗಳ ಬಳಿಕ ನಡೆಯುವ ಏರ್ ಶೋಗೆ ಸಿದ್ಧತೆ ಆರಂಭ Read More »

ಸರಿಗಮಪ ಸೀಸನ್ 20ಕ್ಕೆ ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆ

ಪುತ್ತೂರು: ಝೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 20ಕ್ಕೆ ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆಯಾಗಿದ್ದಾರೆ. ಎಪಿಸೋಡ್ ಅಕ್ಟೋಬರ್ 7ರಿಂದ ರಾತ್ರಿ 7.30ಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ರಾಜ್ಯದ ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಸರಿಗಮಪದಲ್ಲಿ ಭಾಗವಹಿಸಲು ಹಲವಾರು ಪ್ರತಿಭಾನ್ವಿತರು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ಸರಿಗಮಪ ಸೀಸನ್ 20ರ ಆಡಿಷನ್’ನಲ್ಲಿ ದೇಶ- ವಿದೇಶಗಳ ಲಕ್ಷಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಮೆಗಾ ಆಡಿಷನ್’ಗೆ 40 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. 40 ಮಂದಿಯಲ್ಲಿ ಅಂತಿಮ ಸ್ಪರ್ಧೆಗೆ 20

ಸರಿಗಮಪ ಸೀಸನ್ 20ಕ್ಕೆ ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆ Read More »

ರಾಗಿಗುಡ್ಡಕ್ಕೆ ಅರುಣ್ ಕುಮಾರ್ ಪುತ್ತಿಲ ತಂಡ ಭೇಟಿ: ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ

ತೀರ್ಥಹಳ್ಳಿ: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಹಿಂಸಾಚಾರದ ಪ್ರದೇಶಗಳಿಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ತಂಡ ಭೇಟಿ ನೀಡಿತು. ಈದ್ ಮಿಲಾದ್ ಹಬ್ಬ ಆಚರಣೆ ಸಂದರ್ಭ ಕಲ್ಲುತೂರಾಟ ನಡೆಸಿ, ನೂರಾರು ಮನೆಗಳಿಗೆ ಹಾನಿ ಉಂಟು ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿದ್ದು, ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ತಂಡ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ರಾಗಿಗುಡ್ಡದ ಲಕ್ಷ್ಮೀ ಎಂಬವರು ತನ್ನ ತಾಳಿ

ರಾಗಿಗುಡ್ಡಕ್ಕೆ ಅರುಣ್ ಕುಮಾರ್ ಪುತ್ತಿಲ ತಂಡ ಭೇಟಿ: ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ Read More »

ರೆಪೊ ದರದಲ್ಲಿ ಯಥಾಸ್ಥಿತಿ | ಗೃಹ, ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿಸುದ್ದಿ

ಮುಂಬೈ: ಆರ್.ಬಿ.ಐ.ನ ಹಣಕಾಸು ನೀತಿ ಸಮಿತಿಯೂ ಸತತ ನಾಲ್ಕನೇ ತಿಂಗಳಿನಲ್ಲಿಯೂ ಶೇ. 6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ತಿಳಿಸಿದೆ. ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರಿಂದ ಗೃಹ ಹಾಗೂ ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಮಧ್ಯಮ ಆರ್ಥಿಕ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆ ಬಗ್ಗೆ ನಿಗಾ ಇರಿಸಿದ್ದು, ಹಣದುಬ್ಬರವನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್

ರೆಪೊ ದರದಲ್ಲಿ ಯಥಾಸ್ಥಿತಿ | ಗೃಹ, ವಾಹನ ಸಾಲದ ಇಎಂಐ ಗ್ರಾಹಕರಿಗೆ ಸಿಹಿಸುದ್ದಿ Read More »

ಆಸ್ತಿ ತೆರಿಗೆ ವಸೂಲಿಗೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿ | ತೆರಿಗೆ ಸಂಗ್ರಹ ತೃಪ್ತಿ ನೀಡಿಲ್ಲವೆಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ‌ ನಡೆಯದ ಹಿನ್ನೆಲೆ ಹೊಸ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ ಉಪ‌ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಡಿ.ಕೆ ಶಿವಕುಮಾರ್ ಅವರು, ಬಿಬಿಎಂಪಿಯ ತೆರಿಗೆ ಸಂಗ್ರಹ ನನಗೆ ತೃಪ್ತಿ ನೀಡಿಲ್ಲ. ಸಂಗ್ರಹವಾಗುತ್ತಿರುವುದು ಕೇವಲ 3 ಸಾವಿರ ಕೋಟಿ ರೂ.ಗಳು ಮಾತ್ರ. ಇಷ್ಟು ಹಣದಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರ

ಆಸ್ತಿ ತೆರಿಗೆ ವಸೂಲಿಗೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿ | ತೆರಿಗೆ ಸಂಗ್ರಹ ತೃಪ್ತಿ ನೀಡಿಲ್ಲವೆಂದ ಡಿ.ಕೆ. ಶಿವಕುಮಾರ್ Read More »

ರಾಗಿಗುಡ್ಡಕ್ಕೆ ಭೇಟಿ ನೀಡಲಿದೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ಬಿಜೆಪಿ ಸತ್ಯಶೋಧನಾ ತಂಡ!! ಸತ್ಯಶೋಧನಾ ತಂಡದಲ್ಲಿರುವ ಪ್ರಮುಖರು ಯಾರ್ಯಾರು?

ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿರುವ ಗಲಭೆಯನ್ನು ಖಂಡಿಸಿರುವ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಅಕ್ಟೋಬರ್ 5ರಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಸತ್ಯಶೋಧನಾ ತಂಡ ರಾಗಿಗುಡ್ಡಕ್ಕೆ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ

ರಾಗಿಗುಡ್ಡಕ್ಕೆ ಭೇಟಿ ನೀಡಲಿದೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ಬಿಜೆಪಿ ಸತ್ಯಶೋಧನಾ ತಂಡ!! ಸತ್ಯಶೋಧನಾ ತಂಡದಲ್ಲಿರುವ ಪ್ರಮುಖರು ಯಾರ್ಯಾರು? Read More »

error: Content is protected !!
Scroll to Top