ರಾಜ್ಯ

ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

ಬೆಂಗಳೂರು: ನವಜಾತ ಶಿಶುವಿನ ಶವ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದು, ಶೇಷಾದ್ರಿಪುರಂ ರೈಲ್ವೆ ಪಾರ್ಲರ್‌ನಲ್ಲಿ ಈ ಘಟನೆ ನಡೆದಿದೆ. ಮಗು ಹುಟ್ಟಿದ ಒಂದೇ ದಿನದಲ್ಲಿ ಯಾರೋ‌ ತಂದು ಕಸದ ತೊಟ್ಟಿಗೆ ‌ಎಸೆದಿದ್ದು, ಆ ರಭಸಕ್ಕೆ ಮಗು ಮೃತಪಟ್ಟಿರುವಂತಿದೆ. ಮೃತದೇಹವನ್ನು ‌ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಕ್ರೂರಿಗಳನ್ನು ಹಿಡಿಯಲು ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ.

ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ Read More »

ಬಸ್ ಗುದ್ದಿ ಬೈಕ್ ಸವಾರ ಸಾವು, ಸಹಸವಾರನಿಗೆ ಗಾಯ

ತುಮಕೂರು: ದ್ವಿಚಕ್ರ ವಾಹನ ಮತ್ತು ಖಾಸಗಿ ಬಸ್ ಒಂದರ ನಡುವೆ ಅಪಘಾತ‌ ಸಂಭವಿಸಿದ್ದು, ದ್ವಿಚಕ್ರ ಸವಾರ ಮೃತಪಟ್ಟ‌ ಘಟನೆ ಸಾತಟ್ಟದಲ್ಲಿ ‌ನಡೆದಿದೆ. ಮಿಟ್ರಳ್ಳಿಯ ಗಂಗಯ್ಯ (60) ಎಂಬವರೇ ಮೃತ ದುರ್ದೈವಿ. ಸಹಸವಾರ ಲಿಂಗಣ್ಣ ಎಂಬವರಿಗೆ ‌ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ‌ದಾಖಲು ಮಾಡಲಾಗಿದೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಗುದ್ದಿ ಬೈಕ್ ಸವಾರ ಸಾವು, ಸಹಸವಾರನಿಗೆ ಗಾಯ Read More »

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ: ಸುಟ್ಟು ಕರಕಲಾದ ವಸ್ತುಗಳು

ವೀರಕಂಭ: ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿರುವ ವಸ್ತುಗಳೆಲ್ಲಾ ಆಹುತಿಯಾದ ಘಟನೆ ಗಣೇಶ್ ಕೋಡಿಯಲ್ಲಿ ನಡೆದಿದೆ. ರಾಜೇಶ್ವರಿ ಎಂಬವರ ‌ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವುದಾಗಿದೆ. ಇದರಿಂದಾಗಿ ಮನೆಯಲ್ಲಿದ್ದ ಬಟ್ಟೆ ಬರೆ ಸೇರಿದಂತೆ ಇತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ: ಸುಟ್ಟು ಕರಕಲಾದ ವಸ್ತುಗಳು Read More »

ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಕೊಟ್ಟ ಕುಡುಕ ತಂದೆಗೆ ಪೊಲೀಸರಿಂದ ಕ್ಲಾಸ್

ದಾವಣಗೆರೆ: ಮಗಳು ಶಾಲೆಗೆ ಹೋಗದಂತೆ ತಡೆಯಲು ಕುಡುಕ ತಂದೆಯೊಬ್ಬ ಅವಳ ಪುಸ್ತಕಗಳನ್ನೆಲ್ಲಾ ‌ಸುಟ್ಟು ಹಾಕಿದ್ದು,‌ ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಿದ ಘಟನೆ ನ್ಯಾಮತಿ ತಾಲೂಕಿನ ಆರುಂಡಿಯಲ್ಲಿ ‌ನಡೆದಿದೆ. ಹುಡುಗಿ 10 ನೇ ತರಗತಿಯಲ್ಲಿ ಕಲಿಯುತ್ತಿದ್ದು ಶಾಲೆಗೆ ಹೋಗದಂತೆ ಆಕೆಗೆ ತಂದೆಯೇ ಗದರಿದ್ದಾನೆ. ಜೊತೆಗೆ ಆಕೆಯ ಶಾಲೆಯ ಬ್ಯಾಗ್‌ನಲ್ಲಿದ್ದ ಪುಸ್ತಕಗಳನ್ನು ಸುಟ್ಟು ಹಾಕಿದ್ದಾನೆ. ಈ ವೇಳೆ ಶಾಲೆಗೆ ಹೋಗಲೇ ಬೇಕು ಎಂದು ಹಠ ಹಿಡಿದ ಮಗಳು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಬಂದ

ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಕೊಟ್ಟ ಕುಡುಕ ತಂದೆಗೆ ಪೊಲೀಸರಿಂದ ಕ್ಲಾಸ್ Read More »

ವಿದ್ಯಾರ್ಥಿನಿ ಅಪಹರಣ ಪ್ರಹಸನಕ್ಕೆ ಟ್ವಿಸ್ಟ್: ತಾನೇ ಕೈಗೆ ಗೀರಿಕೊಂಡು ಅಪಹರಣದ ನಾಟಕವಾಡಿದಳಾ ಯುವತಿ?

ಬೆಳ್ತಂಗಡಿ: ಮೂವರು ದುಷ್ಕರ್ಮಿಗಳಿಂದ ಕಾಲೇಜು ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ಎನ್ನುವ ಸುದ್ದಿಗೆ ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡಿನಿಂದ ಗೀರಿಕೊಂಡು ಅಪಹರಣದ ಕಥೆ ಕಟ್ಟಿದ್ದಳು ಎನ್ನುವ ಸತ್ಯಾಂಶ ಪೊಲೀಸರ ತನಿಖೆಯ ವೇಳೆ ಬಯಲಾಗಿದೆ. ಮೂವರು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಪಹರಣಕ್ಕೆ ಯತ್ನಿಸಿ‌, ತನ್ನ ಕೈಗೆ ಚಾಕು ಚುಚ್ಚಿ ಪರಾರಿಯಾದರು ಎಂದು ಯುವತಿ ಹೇಳಿದ್ದಳು. ಆದರೆ ಆಕೆ ಹೇಳಿದಂತ ಯಾವ ಘಟನೆಯೂ ‌ಸ್ಥಳದಲ್ಲಿ ನಡೆದಂತೆ ಇರಲಿಲ್ಲ. ಪೊಲೀಸರು ಸಹ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸಿಸಿಟಿವಿ ಪರಿಶೀಲನೆ ಸೇರಿದಂತೆ

ವಿದ್ಯಾರ್ಥಿನಿ ಅಪಹರಣ ಪ್ರಹಸನಕ್ಕೆ ಟ್ವಿಸ್ಟ್: ತಾನೇ ಕೈಗೆ ಗೀರಿಕೊಂಡು ಅಪಹರಣದ ನಾಟಕವಾಡಿದಳಾ ಯುವತಿ? Read More »

ವಿಧಾನಸೌಧದ ಸಚಿವರ ಕಚೇರಿಯಲ್ಲೇ ಚಿನ್ನಾಭರಣ, ನಗದು ಇದ್ದ ಬ್ಯಾಗ್ ಕಳವು

ಸಂದರ್ಶಕರೊಬ್ಬರು ಮರೆತು ಹೋದ ಬ್ಯಾಗ್‌ ಕಳ್ಳತನ ಬೆಂಗಳೂರು : ಹೆಚ್ಚಿನ ಭದ್ರತೆ ಇರುವ ಸ್ಥಳವಾದ ವಿಧಾನಸೌಧದಲ್ಲೇ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಕಳವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವೇಳೆ, ಕೈಚೀಲದಲ್ಲಿದ್ದ 300

ವಿಧಾನಸೌಧದ ಸಚಿವರ ಕಚೇರಿಯಲ್ಲೇ ಚಿನ್ನಾಭರಣ, ನಗದು ಇದ್ದ ಬ್ಯಾಗ್ ಕಳವು Read More »

ಕಾಸರಗೋಡಿನ ಖ್ಯಾತ ಸೋಷಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಆತ್ಮಹತ್ಯೆಗೆ ಶರಣು

ಕಾಸರಗೋಡು: ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್, ಕಾಸರಗೋಡಿನ ಅಡೂರು ಮೂಲದ ಚಿನ್ನು ನಾನು ಖ್ಯಾತಿಯ ರೇಷ್ಮಾ(24) ಅವರು ಉಳಿಯತ್ತಡ್ಕದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೇಷ್ಮಾ ಅವರಿಗೆ ಒಂದು ಮಗುವೂ ಇದ್ದು, ಇತ್ತೀಚೆಗಷ್ಟೇ ಪತಿಯಿಂದ ‌ವಿಚ್ಛೇದನ ಪಡೆದಿದ್ದರು. ಕಾಸರಗೋಡು ಮಲೆಯಾಳಂ, ತುಳು ಮೂಲಕವೇ ರೀಲ್ಸ್ ಮಾಡಿ ಜನಪ್ರಿಯರಾಗಿದ್ದ ರೇಷ್ಮಾ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಕರಿದ್ದರು. ನೇಣು ಬಿಗಿದ ‌ಸ್ಥಿತಿಯಲ್ಲಿದ್ದ

ಕಾಸರಗೋಡಿನ ಖ್ಯಾತ ಸೋಷಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಆತ್ಮಹತ್ಯೆಗೆ ಶರಣು Read More »

ಮತ್ತೆ ತಾರಕಕ್ಕೇರಿದ ಕಾಂಗ್ರೆಸ್‌ ಕುರ್ಚಿ ಫೈಟ್‌ : ಡಿಕೆಶಿ ದಿಢೀರ್‌ ದಿಲ್ಲಿ ದೌಡು

ಭಾರಿ ಕುತೂಹಲ ಕೆರಳಿಸಿದ ಡಿಕೆಶಿ ಹೈಕಮಾಂಡ್‌ ಭೇಟಿ ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವಿನ ಎರಡನೇ ಸುತ್ತಿನ ಕುರ್ಚಿ ಜಗಳ ತಾರಕಕ್ಕೇರಿದೆ. ಶಿವಕುಮಾರ್‌ ಈ ಸಲ ಏನಾದರೊಂದು ತೀರ್ಮಾನವಾಗಲೇಬೇಕು ಎಂದು ಹಠಕ್ಕೆ ಬಿದ್ದಿದ್ದು, ಅವರ ಇತ್ತೀಚೆಗಿನ ಹೇಳಿಕೆಗಳು ಮತ್ತು ನಡೆಗಳು ಇದನ್ನು ಪುಷ್ಟೀಕರಿಸುತ್ತಿವೆ. ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಬಿಕ್ಕಟ್ಟಿನ ವದಂತಿಗಳು ಮುಂದುವರಿದಿರುವಂತೆಯೇ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಯನ್ನು ಕೈಬಿಟ್ಟು ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ

ಮತ್ತೆ ತಾರಕಕ್ಕೇರಿದ ಕಾಂಗ್ರೆಸ್‌ ಕುರ್ಚಿ ಫೈಟ್‌ : ಡಿಕೆಶಿ ದಿಢೀರ್‌ ದಿಲ್ಲಿ ದೌಡು Read More »

ಪ್ಲಾಸ್ಟಿಕ್‌ ಗೋಡೌನ್‌ ಬೆಂಕಿಗಾಹುತಿ

ಬೆಂಗಳೂರು: ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸೋಮವಾರ ಮಧ್ಯರಾತ್ರಿ ಈ ಅವಘಡ ನಡೆದಿದೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದು, ಇನ್ನೂ ಬೆಂಕಿ ಹತೋಟಿಗೆ ಬಂದಿಲ್ಲ. ಪ್ಲಾಸ್ಟಿಕ್ ಗೋಡೌನ್ ಸಮೀಪವೇ ಗ್ಯಾಸ್ ಸಿಲಿಂಡರ್ ಗೋಡೌನ್ ಇತ್ತು. ಗ್ಯಾಸ್ ಗೋಡೌನ್‌ಗೆ ಬೆಂಕಿ ವ್ಯಾಪಿಸಿದರೆ ದೊಡ್ಡ ಅನಾಹುತ ಆಗುವ ಸಾಧ್ಯತೆಯಿತ್ತು. ಸದ್ಯ ಭಾರಿ ಅನಾಹುತವೊಂದು ತಪ್ಪಿದೆ.

ಪ್ಲಾಸ್ಟಿಕ್‌ ಗೋಡೌನ್‌ ಬೆಂಕಿಗಾಹುತಿ Read More »

ಮುಡಾ ಹಗರಣ ಮುಚ್ಚಿ ಹಾಕಲು ಲೋಕಾಯುಕ್ತರಿಗೆ ಲಂಚ : ಸ್ನೇಹಮಯಿ ಕೃಷ್ಣ ಆರೋಪ

ಮತ್ತೆ ಜೀವ ಪಡೆದುಕೊಂಡ ಮುಡಾ ಹಗರಣ ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಸಂಭವಿಸಿದ ಬಹುಕೋಟಿ ಸೈಟ್‌ ಹಗರಣವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಅಧಿಕಾರಿಗಳಿಗೆ ಕೋಟಿಗಟ್ಟಲೆ ರೂಪಾಯಿ ಲಂಚ ನೀಡಲಾಗಿದೆ ಎಂಬ ಸ್ಫೋಟಕ ಆರೋಪವನ್ನು ಸ್ನೇಹಮಯಿ ಕೃಷ್ಣ ಮಾಡಿದ್ದಾರೆ. ಮುಡಾದ ಹಿಂದಿನ ಆಯುಕ್ತರಿಂದ ಕೋಟಿಗಟ್ಟಲೆ ರೂಪಾಯಿ ಲಂಚ ಪಡೆದ ಬಗ್ಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತರಿಗೆ ಕೋಟಿಗಟ್ಟಲೆ ಹಣ ಲಂಚ

ಮುಡಾ ಹಗರಣ ಮುಚ್ಚಿ ಹಾಕಲು ಲೋಕಾಯುಕ್ತರಿಗೆ ಲಂಚ : ಸ್ನೇಹಮಯಿ ಕೃಷ್ಣ ಆರೋಪ Read More »

error: Content is protected !!
Scroll to Top