ಧಾರ್ಮಿಕ

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

ಪುತ್ತೂರು : ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವವು ಫೆ 18 ಶನಿವಾರ ನಡೆಯಿತು. ದೇವಸ್ಥಾನದ ಅನುವಂಶಿಕ ಮೊಕ್ತೇಸರರು, ಅರ್ಚಕರು ಆಗಿರುವ ಜನೇಶ್ ಭಟ್ ಬರೆಪ್ಪಾಡಿಯವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಾನಗಳು ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ, ಶ್ರೀ ದೇವರಿಗೆ 108 ಸೀಯಾಳ ಅಭಿಷೇಕ, ರುದ್ರಾಭಿಷೇಕ, ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, […]

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ Read More »

ಫೆ.25 : ವಿಜಯನಗರ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ 32ನೇ ವರ್ಷದ ವಾರ್ಷಿಕೋತ್ಸವ | ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು : ವಿಜಯನಗರ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ 32ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಫೆ.25 ಶನಿವಾರ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಗಣಪತಿ ಹವನ, ಸಂಜೆ 7 ಕ್ಕೆ ಪೂಜೆ ಆರಂಭ, 7.30 ಕ್ಕೆ ಅಳಿಕೆ ಶ್ರೀ ಸ್ಕಂದ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ 9 ಕ್ಕೆ ಮಹಮಂಗಳಾರತಿ, ಪ್ರಸಾದ ವಿತರಣೆ ನಡೆದು ಬಳಿಕ ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ

ಫೆ.25 : ವಿಜಯನಗರ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ 32ನೇ ವರ್ಷದ ವಾರ್ಷಿಕೋತ್ಸವ | ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ Read More »

ಪುತ್ತೂರ ಒಡೆಯನ ಆಲಯದಲ್ಲಿ ಮಹಾಶಿವರಾತ್ರಿ ಜಾಗರಣೆ | ಅಷ್ಠಾವಧಾನ ಸೇವೆ | ರಾತ್ರಿ ಪಲ್ಲಕಿ ಉತ್ಸವ, ಬಂಡಿ ಉತ್ಸವ, ತೆಪ್ಪೋತ್ಸವ | ಹರಿದು ಬಂದ ಜನಸಾಗರ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರದ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಸಂಜೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ಕಂಡನಾಯಕ ಕಟ್ಟೆಯಲ್ಲಿ ಪೂಜೆ ನಡೆದು ಪಲ್ಲಕಿ ಉತ್ಸವ ನಡೆಯಿತು. ಬಳಿಕ ರಾತ್ರಿ ೯ ಗಂಟೆಯಿಂದ ಅಷ್ಠಾವಧಾನ ಸೇವೆ ಜರಗಿತು. ಸಂಜೆ ದೇವರ ಬಲಿ ಉತ್ಸವದ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಹೊರಾಂಗಣದಲ್ಲಿ ಘೋಷ್

ಪುತ್ತೂರ ಒಡೆಯನ ಆಲಯದಲ್ಲಿ ಮಹಾಶಿವರಾತ್ರಿ ಜಾಗರಣೆ | ಅಷ್ಠಾವಧಾನ ಸೇವೆ | ರಾತ್ರಿ ಪಲ್ಲಕಿ ಉತ್ಸವ, ಬಂಡಿ ಉತ್ಸವ, ತೆಪ್ಪೋತ್ಸವ | ಹರಿದು ಬಂದ ಜನಸಾಗರ Read More »

ಫೆ.28 : ಬದೆಂಜ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಪುತ್ತೂರು : ರಾಮಕುಂಜ ಗ್ರಾಮದ ಬದೆಂಜ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಫೆ.28 ರಂದು ನಡೆಯಲಿದೆ. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರೀಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿದೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ  ದೇವಸ್ಥಾನದ  ಪ್ರಕಟಣೆ ತಿಳಿಸಿದೆ. ಎಂದು ದೇವಸ್ಥಾನದ  ಪ್ರಕಟಣೆ ತಿಳಿಸಿದೆ.

ಫೆ.28 : ಬದೆಂಜ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ Read More »

ದಕ್ಷಿಣ ಕಾಶಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಒಂದನೇ ಮಖೆಕೂಟ | ಭಕ್ತಾದಿಗಳಿಂದ ಉದ್ಭವ ಲಿಂಗಕ್ಕೆ ಸ್ವಯಂ ಅಭಿಷೇಕ

ಪುತ್ತೂರು : ದಕ್ಷಿಣ ಕಾಶಿ ಎಂದು ಕರೆಯುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಒಂದನೇ ಮಖೆಕೂಟದ ಅಂಗವಾಗಿ ನೇತ್ರಾವತಿ ನದಿಯಲ್ಲಿರುವ ಉದ್ಭವ ಲಿಂಗದ ಬಳಿ ಸ್ವಯಂ ಲಿಂಗಾಭಿಷೇಕ ಸೇವೆ ಶನಿವಾರ ನಡೆಯಿತು. ಬೆಳಿಗ್ಗೆಯಿಂದಲೇ ಊರ-ಪರವೂರಿನಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಉದ್ವವ ಲಿಂಗಕ್ಕೆ ಎಕ್ಕದ ಹೂ ಸಹಿತ ವಿವಿಧ ಹೂವುಗಳಿಂದ ಹಲವು ಬಗೆಯ ಅಲಂಕಾರ ಮಾಡಿ ತಮ್ಮಕೈಯಾರೆ ಜಲಾಭಿಷೇಕ, ಕ್ಷೀರಾಭಿಷೇಕ, ಸೀಯಾಳಾಭಿಷೇಕ ಸಮರ್ಪಿಸಿದರು. ಶನಿವಾರ ಆರಂಭಗೊಂಡ ಅಖಂಡ ಭಜನಾ ಸೇವೆ ಭಾನುವಾರ ಸೂರ್ಯೋದಯದ ತನಕ ನಡೆಯಿತು. ಸಂಜೆ

ದಕ್ಷಿಣ ಕಾಶಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಒಂದನೇ ಮಖೆಕೂಟ | ಭಕ್ತಾದಿಗಳಿಂದ ಉದ್ಭವ ಲಿಂಗಕ್ಕೆ ಸ್ವಯಂ ಅಭಿಷೇಕ Read More »

ಪುತ್ತೂರು ಒಡೆಯನಿಗೆ ಮಹಾಶಿವರಾತ್ರಿ ಮಹೋತ್ಸವ | ಮುಂಜಾನೆಯಿಂದಲೇ ನಡೆಯುತ್ತಿರುವ ವಿವಿಧ ವೈದಿಕ ಕಾರ್ಯಕ್ರಮಗಳು | ಕಿಕ್ಕಿರಿದು ತುಂಬಿದ ಭಕ್ತ ಸಮೂಹ

ಪುತ್ತೂರು : ಮಹಾಶಿವರಾತ್ರಿ ದಿನವಾದ ಶನಿವಾರ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂಜಾನೆಯಿಂದಲೇ ನಡೆಯುತ್ತಿದೆ. ಮಹಾಶಿವರಾತ್ರಿಯಂದು ಶಿವನಿಗೆ ವಿಶಿಷ್ಠ ಸೇವೆಯಾದ 108 ಸುತ್ತು ಪ್ರದಕ್ಷಿಣೆ ಮಾಡಲು ಭಕ್ತಾದಿಗಳು ಮುಂಜಾನೆಯಿಂದಲೇ ತೊಡಗಿಸಿಕೊಂಡಿದ್ದರು. ದೇವಸ್ಥಾನದ ಒಳಾಂಗಣದಲ್ಲಿ ಕಿಕ್ಕಿರಿದು ಭಕ್ತ ಸಮೂಹ ಸೇರಿದ್ದು, ಏಕಬಿಲ್ಷಂ ಸೇವೆಯಲ್ಲಿ ಪಾಲ್ಗೊಂಡರು. ಶಿವರಾತ್ರಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 6.45 ರಿಂದ ಭಜನೆ, ಕುಣಿತ ಭಜನೆ. 8ರಿಂದ ಮಹಾರುದ್ರಯಾಗ, 9 ರಿಂದ ಶತರುದ್ರಾಭಿಷೇಕ, ಏಕ

ಪುತ್ತೂರು ಒಡೆಯನಿಗೆ ಮಹಾಶಿವರಾತ್ರಿ ಮಹೋತ್ಸವ | ಮುಂಜಾನೆಯಿಂದಲೇ ನಡೆಯುತ್ತಿರುವ ವಿವಿಧ ವೈದಿಕ ಕಾರ್ಯಕ್ರಮಗಳು | ಕಿಕ್ಕಿರಿದು ತುಂಬಿದ ಭಕ್ತ ಸಮೂಹ Read More »

ನಾಳೆ (ಫೆ.19) : ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಪುತ್ತೂರು : ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ-ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ  ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ (ಕೆಂಡಸೇವೆ) ಫೆ.19 ಭಾನುವಾರ ನಡೆಯಲಿದೆ. ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳ ನಡೆದ ಬಳಿಕ ಸಂಜೆ 7 ಗಂಟೆಗೆ ಶ್ರೀ ದೈವದ ಒತ್ತೆಕೋಲ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ.

ನಾಳೆ (ಫೆ.19) : ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ಫೆ.23 : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಸಭಾಭವನ, ಅನ್ನಛತ್ರ ಲೋಕಾರ್ಪಣೆ

ಪುತ್ತೂರು : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ನೂತನ ಸಭಾಭವನ, ಅನ್ನಛತ್ರ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ದೇವಸ್ಥಾನದ ಪ್ರತಿಷ್ಠಾ ದಿನವಾದ ಫೆ.23 ರಂದು ಲೋಕಾರ್ಪಣೆಗೊಳ್ಳಲಿದೆ. ದೇವಸ್ಥಾನದಲ್ಲಿ ಈ ಬಾರಿ 10ನೇ ವರ್ಷದ ಪ್ರತಿಷ್ಠಾ ಮಹೋತ್ಸವ ನಡೆಯಲಿದ್ದು, ಇದರ ಸವಿನೆನಪಿಗಾಗಿ ನೂತನ ಸಭಾಭವನ, ಅನ್ನಛತ್ರ ನಿರ್ಮಾಣ ಲೋಕಾರ್ಪಣೆಗೊಳ್ಳಲಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದ್ವಾದಶ ನಾರಿಕೇಳ ಗಣಪತಿ ಹವನ,

ಫೆ.23 : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಸಭಾಭವನ, ಅನ್ನಛತ್ರ ಲೋಕಾರ್ಪಣೆ Read More »

ಫೆ.25 ರಿಂದ ಮಾ.5 ರ ವರೆಗೆ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಪಡುಮಲೆ : ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರು ಹಾಗೂ ಸಪರಿವಾರ ದೇವರುಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.25 ರಿಂದ ಮಾ.6 ರ ತನಕ ವಿವಿಧ ವೈದಿಕ, ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಕುರಿತು ಜೀಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಅವರು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿ, ಸುಮಾರು 5 ಕೋಟಿಗೂ ಮಿಕ್ಕಿ

ಫೆ.25 ರಿಂದ ಮಾ.5 ರ ವರೆಗೆ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ Read More »

ನಾಳೆ (ಫೆ.18) : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಕಡಬ : ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆ.18 ಶನಿವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ. ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಸಂಜೆ 6 ಕ್ಕೆ ಕುಣಿತ ಭಜನೆ,  ಮಹಾಪೂಜೆ  ಮತ್ತು ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 12 ಕ್ಕೆ ಮಹಾಶಿವರಾತ್ರಿಯ ವಿಶೇಷ ಪೂಜೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ (ಫೆ.18) : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ Read More »

error: Content is protected !!
Scroll to Top