ಧಾರ್ಮಿಕ

ತಿರುಪತಿ ಬೆಟ್ಟದಲ್ಲಿ ಮಾಂಸಾಹಾರ ಸೇವನೆ: ಇಬ್ಬರು ಸಿಬ್ಬಂದಿ ವಜಾ

ತಿರುಪತಿ: ತಿರುಮಲ ದೇಗುಲದ ಸಿಬ್ಬಂದಿ ಪವಿತ್ರ ಬೆಟ್ಟಗಳಲ್ಲಿ ಮಾಂಸಾಹಾರ ಸೇವನೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಹಿಂದೂಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲಿಪಿರಿ ‌ಕಾಲುದಾರಿಯ ಸಮೀಪ ಮಾಂಸಾಹಾರ ಸೇವನೆ ಮಾಡಿರುವ ಆಪಾದನೆ ಮೇಲೆ ಇಬ್ಬರು ಹೊರಗುತ್ತಿಗೆ ಸಿಬ್ಬಂದಿಯನ್ನು ದೇವಾಲಯದ ಆಡಳಿತ ಮಂಡಳಿ ವಜಾ ಮಾಡಿದೆ. ಈ ಬಗ್ಗೆ ತಿರುಮಲದ ಎರಡು ಟೌನ್ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. ಮಾಂಸಾಹಾರ ಸೇವನೆ ಮಾಡಿದವರನ್ನು ರಾಮಸ್ವಾಮಿ, ಸರಸಮ್ಮ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.

ತಿರುಪತಿ ಬೆಟ್ಟದಲ್ಲಿ ಮಾಂಸಾಹಾರ ಸೇವನೆ: ಇಬ್ಬರು ಸಿಬ್ಬಂದಿ ವಜಾ Read More »

ಡಾ.ರೇಣುಕಾಪ್ರಸಾದ್ ಕೆ.ವಿ. ಅವರಿಂದ ಬೆಳ್ಳಿ ರಥ ಸಮರ್ಪಣೆ

ಸುಬ್ರಹ್ಮಣ್ಯ: ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್ ಕಮಿಟಿ ‘ಬಿ’ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಿದರು. ಭಕ್ತಿ ಸಂಭ್ರಮದ ಮಧ್ಯೆ ನ.10ರಂದು ಪೂ. 11ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ರಜತ ರಥ ಸಮರ್ಪಣೆ ಮಾಡಿದರು. ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರ ಕುಟುಂಬದವರು, ಪ್ರಮುಖರು ಸೇರಿ ಸಾವಿರಾರು ಮಂದಿ ದಿವ್ಯ ಮುಹೂರ್ತಕ್ಕೆ ಸಾಕ್ಷಿಗಳಾದರು. ಸೇವಾ ರೂಪದಲ್ಲಿ ಅವರು ಬೆಳ್ಳಿ

ಡಾ.ರೇಣುಕಾಪ್ರಸಾದ್ ಕೆ.ವಿ. ಅವರಿಂದ ಬೆಳ್ಳಿ ರಥ ಸಮರ್ಪಣೆ Read More »

ವಿಜೃಂಭಣೆಯಿಂದ ಜರುಗಿದ ಬೆಳ್ಳಿರಥ ಸಮರ್ಪಣೆಯ ಪೂರ್ವಭಾವಿ ಪೂಜೆ

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯನಿಗೆ ಶ್ರದ್ಧಾಪೂರ್ವಕವಾಗಿ ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಇಂದು ಸಮರ್ಪಿಸಲಿರುವ ಅತಿ ಸುಂದರವಾದ 18 ಅಡಿಗಳ ಎತ್ತರದ, ರೂ. ಎರಡು ಕೋಟಿಗೂ ಮಿಕ್ಕಿದ ಮೌಲ್ಯವುಳ್ಳ, ವಾಸ್ತುಶುದ್ಧಿಯುಳ್ಳ ಬೆಳ್ಳಿರಥಕ್ಕೆ ನಿನ್ನೆ ಸಂಜೆ ಗಂಟೆ 6ಕ್ಕೆ ಶುದ್ದಿ ಕಲಶ, ವಾಸ್ತುಪೂಜೆ, ವಾಸ್ತುಬಲಿ ಮತ್ತು ರಾಕ್ಷೋಘ್ನ ಹೋಮಗಳು ಪುರೋಹಿತವರ್ಯರಾದ ಎಡಪಡಿತ್ತಾಯರ ನೇತೃತ್ವದಲ್ಲಿ ನಡೆದವು. ವಿಜಯ ಸಂಕೇಶ್ವರ ಹಾಜರ್ಪೂರ್ವಭಾವಿ ವೈದಿಕ ವಿಧಿಗಳ ಸಂದರ್ಭದಲ್ಲಿ ಪ್ರಖ್ಯಾತ ಪತ್ರಕರ್ತರೂ, ಉದ್ಯಮಿಯವರೂ ಆಗಿರುವ ವಿಜಯ ಸಂಕೇಶ್ವರ ಭೇಟಿ ನೀಡಿ ಡಾ. RPಯವರಿಗೆ ಅಭಿನಂದನೆ

ವಿಜೃಂಭಣೆಯಿಂದ ಜರುಗಿದ ಬೆಳ್ಳಿರಥ ಸಮರ್ಪಣೆಯ ಪೂರ್ವಭಾವಿ ಪೂಜೆ Read More »

ಗಮ್ಯಸ್ಥಾನ ತಲುಪಿದ ಡಾ. ರೇಣುಕಾಪ್ರಸಾದ್ ಕೊಡುಗೆಯ ಬೆಳ್ಳಿರಥ

ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥವು ಕೋಟೇಶ್ವರದಿಂದ ಮೆರವಣಿಗೆಯ ಮೂಲಕ ನವೆಂಬರ್ 4ರಂದು ಹೊರಟಿದ್ದು ನಿನ್ನೆ ನವೆಂಬರ್ 5ಕ್ಕೆ ತನ್ನ ಗಮ್ಯಸ್ಥಾನವಾದ ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ತಲುಪಿತು. ಕಟೀಲ್ ಮತ್ತು ಮುರುಳ್ಯ ಭಾಗಿನಿನ್ನೆ ಪೂರ್ವಾಹ್ನ ಸುಳ್ಯದ ಕೆವಿಜಿ ಸರ್ಕಲ್ ಬಳಿ ಬೆಳ್ಳಿರಥದ ಭವ್ಯ ಮೆರವಣಿಗೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ

ಗಮ್ಯಸ್ಥಾನ ತಲುಪಿದ ಡಾ. ರೇಣುಕಾಪ್ರಸಾದ್ ಕೊಡುಗೆಯ ಬೆಳ್ಳಿರಥ Read More »

ನ.17ರಿಂದ ಶಬರಿಮಲೆ ಯಾತ್ರೆ ಶುರು

ಡಿ.27ರಂದು ಮಂಡಲ ಪೂಜೆ ; ಜ.14ಕ್ಕೆ ಮಕರ ಜ್ಯೋತಿ ದರ್ಶನ ಶಬರಿಮಲೆ : ಶಬರಿಮಲೆಯಲ್ಲಿ ಈ ಬಾರಿಯ ಮಂಡಲ ಮಹೋತ್ಸವಕ್ಕೆ ಸಿದ್ಧತೆ ಶುರುವಾಗಿದ್ದು, ಈಗಾಗಲೇ ಭಕ್ತರು ಮಾಲೆ ಧರಿಸಿ ವ್ರತಾಚರಣೆ ಶುರು ಮಾಡಿದ್ದಾರೆ. ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆ ಶ್ರೀ ಧರ್ಮಶಾಸ್ತ್ರಾ ದೇವಸ್ಥಾನದ ಗರ್ಭಗುಡಿಯ ಬಾಗಿಲು ನ.17ರಂದು ತೆರೆಯಲಿದೆ. ಡಿ.27ರಂದು ಮಂಡಲ ಪೂಜೆ ನಡೆಯಲಿದ್ದು, 2026ರ ಜ.14ರಂದು ಮಕರ ಸಂಕ್ರಮಣ ಮಹೋತ್ಸವ ನಡೆಯಲಿದೆ. ಶಬರಿಮಲೆ ಮಂಡಲ ಮಹೋತ್ಸವಕ್ಕೆ ಆನ್‌ಲೈನ್ ಬುಕ್ಕಿಂಗ್ ಆರಂಭಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 70 ಸಾವಿರ

ನ.17ರಿಂದ ಶಬರಿಮಲೆ ಯಾತ್ರೆ ಶುರು Read More »

ಬೆಳ್ಳಿರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದಿಂದ ಸ್ವಾಗತ, ಗೌರವಾರ್ಪಣೆ

ಸುಳ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಡಾ. ಕೆ.ವಿ. ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದರು ಹರಕೆಯಾಗಿ ಸಮರ್ಪಿಸಲಿರುವ ಬೆಳ್ಳಿರಥ ಯಾತ್ರೆಯು ನವೆಂಬರ್ 4ರಂದುಕೋಟೇಶ್ವರದಿಂದ ಸುಳ್ಯಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಶ್ರೀರಾಮಪೇಟೆಗೆ ಆಗಮಿಸಿದ ರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದ ಪರವಾಗಿಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್‌ನ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ಮತ್ತು ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಅವರ ನೇತೃತ್ವದಲ್ಲಿ ಅಕಾಡೆಮಿ ವತಿಯಿಂದ ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ನೀಡಲಾಯಿತು. ಡಾ. ರೇಣುಕಾಪ್ರಸಾದ್ ಅವರಿಗೆ ಸುಗಂಧ

ಬೆಳ್ಳಿರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದಿಂದ ಸ್ವಾಗತ, ಗೌರವಾರ್ಪಣೆ Read More »

ಸುಳ್ಯಕ್ಕೆ ಪುರಪ್ರವೇಶಗೈದ ಬೆಳ್ಳಿರಥ

ಸುಳ್ಯ: ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಹರಕೆಯ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನವೆಂಬರ್ 4ರ ರಾತ್ರಿ 8ರ ಸುಮಾರಿಗೆ ಸುಳ್ಯಕ್ಕೆ ಪುರಪ್ರವೇಶ ಮಾಡಿತು. ನವೆಂಬರ್ 3ರ ರಾತ್ರಿ 8ಕ್ಕೆ ಉಡುಪಿ ಜಿಲ್ಲಾ ಕುಂಭಾಶಿಯ ರಾಜಗೋಪಾಲಾಚಾರ್ಯ ಅವರ ವಿಶ್ವಕರ್ಮ ಕರಕುಶಲ ಮತ್ತು ಶಿಲ್ಪಕಲಾ ಕೇಂದ್ರದಲ್ಲಿ ಕುತ್ತಿ ಪೂಜೆಗೊಂಡು ಡಾಕ್ಟರ್ ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದವರಿಗೆ ಹಸ್ತಾಂತರಿಸಲ್ಪಟ್ಟ ಬೆಳ್ಳಿರಥ

ಸುಳ್ಯಕ್ಕೆ ಪುರಪ್ರವೇಶಗೈದ ಬೆಳ್ಳಿರಥ Read More »

ಉಚ್ಚಿಲದಲ್ಲಿ ಬೆಳ್ಳಿರಥಕ್ಕೆ ಭವ್ಯ ಸ್ವಾಗತ

ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಡಾ. ಕೆ ವಿ ರೇಣುಕಾಪ್ರಸಾದ್ ಮತ್ತು ಮನೆಯವರು ಹರಕೆಯ ರೂಪದಲ್ಲಿ ಸಮರ್ಪಿಸಲಿರುವ ಬೆಳ್ಳಿರಥ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆಗಮಿಸಿದಾಗ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ವಿಧಾನ ಪರಿಷತ್ ಶಾಸಕರಾದ ಯಶ್’ಪಾಲ್ ಸುವರ್ಣ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಗಿರಿಧರ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಕುಮಾರ್ ವೈ. ಮತ್ತು ನೂರಾರು ಭಕ್ತರು ಹಾಜರಿದ್ದರು. ಇದಕ್ಕೂ ಮೊದಲು ಕೋಟೇಶ್ವರದಿಂದ ಹೊರಟ ರಥಯಾತ್ರೆಯು ಸಾಸ್ತಾನ, ಬ್ರಹ್ಮಾವರ, ಸಂತೆಕಟ್ಟೆ, ಕರಾವಳಿ

ಉಚ್ಚಿಲದಲ್ಲಿ ಬೆಳ್ಳಿರಥಕ್ಕೆ ಭವ್ಯ ಸ್ವಾಗತ Read More »

ಕೋಟೇಶ್ವರದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಳದ ಮುಂಭಾಗದಲ್ಲಿ ಬೆಳ್ಳಿರಥದ ಊರ್ಧ್ವಭಾಗದ ಜೋಡಣೆ

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥದ ಯಾತ್ರೆಯ ಚಾಲನೆ ಬೆಳಿಗ್ಗೆ ಗಂಟೆ 8ಕ್ಕೆ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿತು. ಬೆಳ್ಳಿರಥ ಯಾತ್ರೆಗೆ ಚಾಲನೆಗೊಂಡ ರಥವು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳಕ್ಕೆ ತೆರಳಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಬಳಿಕ ಕೋಟೇಶ್ವರದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಳದ ಮುಂಭಾಗದಲ್ಲಿ ಬೆಳ್ಳಿರಥದ ಊರ್ಧ್ವಭಾಗದ ಜೋಡಣೆ ಮಾಡಲಾಯಿತು. ನೂರಕ್ಕೂ ಅಧಿಕ ಭಕ್ತಾದಿಗಳು ಹಾಜರಿದ್ದರು.

ಕೋಟೇಶ್ವರದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಳದ ಮುಂಭಾಗದಲ್ಲಿ ಬೆಳ್ಳಿರಥದ ಊರ್ಧ್ವಭಾಗದ ಜೋಡಣೆ Read More »

ಡಾ. ರೇಣುಕಾಪ್ರಸಾದ್ ಕೊಡುಗೆಯ ಬೆಳ್ಳಿರಥ ಯಾತ್ರೆಗೆ ಚಾಲನೆ

ಕೋಟೇಶ್ವರ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸರ್ಪಿಸಲಿರುವ ಬೆಳ್ಳಿರಥದ ಯಾತ್ರೆಯ ಚಾಲನೆ ಸಮಯಕ್ಕೆ ಸರಿಯಾಗಿ ಕುಂಭಾಶಿಯ ವಿಶ್ವಕರ್ಮ ಕರಕುಶಲ ಮತ್ತು ಶಿಲ್ಪಕಲಾ ಕೇಂದ್ರದಲ್ಲಿ ನಡೆಯಿತು. ಬೆಳಿಗ್ಗೆ ಗಂಟೆ 8ಕ್ಕೆ ಪೂಜಾ ವಿಧಿ ವಿಧಾನಗಳೊಂದಿಗೆ ಚಾಲನೆಗೊಂಡ ರಥ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳಕ್ಕೆ ತೆರಳಿತು. ಅಲ್ಲಿ ಪೂಜೆಗೊಳ್ಳುವ ಸಂದರ್ಭದಲ್ಲಿ ಪೂರ್ವ ಸಂಸದ ವಿನಯ್ ಕುಮಾರ್ ಸೊರಕೆ ಹಾಜರಿದ್ದರು. 8.50ಕ್ಕೆ ಸರಿಯಾಗಿ ಕೋಟೇಶ್ವರದಿಂದ ರಥದ ಪ್ರಯಾಣ ಮುಂದುವರಿಯಿತು.

ಡಾ. ರೇಣುಕಾಪ್ರಸಾದ್ ಕೊಡುಗೆಯ ಬೆಳ್ಳಿರಥ ಯಾತ್ರೆಗೆ ಚಾಲನೆ Read More »

error: Content is protected !!
Scroll to Top