ಪುತ್ತೂರಿನಲ್ಲಿ ಬೃಹತ್ ಭಜಕರ ಸಮಾವೇಶ | ಮೆರವಣಿಗೆ ಮೂಲಕ ಸಾಗಿದ ಕುಣಿತ ಭಜನೆ | ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಭಜನಾ ನಿಂದಕರಿಗೆ ಸದ್ಭುದ್ದಿ ನೀಡಲೆಂದು ಪ್ರಾರ್ಥನೆ
ಪುತ್ತೂರು: ಭಜನಾ ಪರಿಷತ್ ಪುತ್ತೂರು ಹಾಗೂ ಪುತ್ತೂರಿನ ವಿವಿಧ ಹಿಂದೂ ಸಂಘಟನೆಗಳ ಮತ್ತು ಭಜಕರ ಸಹಕಾರದಲ್ಲಿ ಬೃಹತ್ ಭಜಕರ ಸಮಾವೇಶ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಭಾನುವಾರ ನಡೆಯಿತು. ಸಮಾವೇಶದ ಮೊದಲು ನಗರದ ದರ್ಬೆ ವೃತ್ತದಿಂದ ಭಜನಾ ಸಂಕೀರ್ತನೆಯ ಕುಣಿತದ ಮೂಲಕ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ಭಜಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನೆ ಹಾಗೂ ಭಜನಾ ತಂಡದ ಮಹಿಳೆಯರನ್ನು ನಿಂದನೆ ಮಾಡುವವರಿಗೆ ಸದ್ಭುದ್ಧಿ ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಈ […]