ಧಾರ್ಮಿಕ

ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ವಸ್ತ್ರ ಸಂಹಿತೆ | ಭಕ್ತರೊಂದಿಗೆ ಚರ್ಚಿಸಿ ತೀರ್ಮಾನ : ಶಾಸಕ ಅಶೋಕ್ ರೈ

ಪುತ್ತೂರು; ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವ ಬಗ್ಗೆ ಭಕ್ತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ದೇವರ ದರ್ಶನಕ್ಕೆ ಬರುವ ಸ್ತ್ರೀ ಅಥವಾ ಪುರುಷರು ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು, ಧರಿಸಬಾರದು ಎಂಬುದರ ಬಗ್ಗೆ ನಾನು ಏಕಾಂಗಿಯಾಗಿ ತೀರ್ಮಾನ ಮಾಡುವಂತಿಲ್ಲ. ಇಲ್ಲಿಗೆ ಬರುವ ಪ್ರತಿಯೊಬ್ಬರು ಮಹಾಲಿಂಗೇಶ್ವರನ ಭಕ್ತರೇ ಆಗಿದ್ದಾರೆ, ದೇವರ ದರ್ಶನಕ್ಕೆ ಬರುತ್ತಾರೆ. ದೇವರ ದರ್ಶನಕ್ಕೆ ಬರುವ ಭಕ್ತರು […]

ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ವಸ್ತ್ರ ಸಂಹಿತೆ | ಭಕ್ತರೊಂದಿಗೆ ಚರ್ಚಿಸಿ ತೀರ್ಮಾನ : ಶಾಸಕ ಅಶೋಕ್ ರೈ Read More »

ಸ್ಥಗಿತವಾಗಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭ

ಶ್ರೀನಗರ: ವಿಪರೀತ ಮಳೆ, ಭೂಕುಸಿತದ ಭೀತಿಯಿಂದ ‌ಸ್ಥಗಿತ ಮಾಡಲಾಗಿದ್ದು ಅಮರನಾಥ ಯಾತ್ರೆ ಒಂದು ದಿನದ ಬಳಿಕ ಮತ್ತೆ ಪ್ರಾರಂಭವಾಗಿದೆ. ಜಮ್ಮುವಿನಿಂದ ಕಾಶ್ಮೀರದ ಕಡೆಗೆ ಶುಕ್ರವಾರ 7,908 ಯಾತ್ರಿಕರ ತಂಡ ತೆರಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಜುಲೈ 3 ರಂದು ಆರಂಭವಾಗಿದ್ದು ಅಮರನಾಥ ಯಾತ್ರೆ 2.52 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇಂದಿನ ಯಾತ್ರಿಕರ ಮೊದಲ‌ ತಂಡದ 2,879 ಯಾತ್ರಿಕರು 92 ವಾಹನಗಳ ಮೂಲಕ ಬೆಳಗ್ಗೆ 3.30 ರ ವೇಳೆಗೆ ಪ್ರಯಾಣ

ಸ್ಥಗಿತವಾಗಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭ Read More »

ಮಳೆ ಮುನ್ಸೂಚನೆ: ಅಮರನಾಥ ಯಾತ್ರೆ ತಾತ್ಕಾಲಿಕ ಮುಂದೂಡಿಕೆ

ಶ್ರೀನಗರ: ಕಣಿವೊ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ‌ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ. ಗಂಡೇರ್ಬಲ್ ಜಿಲ್ಲೆಯ ಬಲ್ಟಾನ್ ಮಾರ್ಗದಲ್ಲಿ ಬುಧವಾರ ಸಂಭವಿಸಿದ ಭೂ ಕುಸಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆ ಮೇರೆಗೆ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದು, ಅಮರನಾಥ ಯಾತ್ರಿಗಳ ‌ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಗಮನ

ಮಳೆ ಮುನ್ಸೂಚನೆ: ಅಮರನಾಥ ಯಾತ್ರೆ ತಾತ್ಕಾಲಿಕ ಮುಂದೂಡಿಕೆ Read More »

ಸರ್ಕಾರದ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ: ಸರ್ಕಾರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು: ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಸರ್ಕಾರ ಒಪ್ಪಿಸಿದ್ದು, ಇದಕ್ಕೆ ತಡೆಯಾಜ್ಞೆ ‌ನೀಡಲು ಹೈಕೋರ್ಟ್ ನಿರಾಕರಿಸಿದೆ. ದೇವಸ್ಥಾನದ ಆಡಳಿತದಲ್ಲಿ ಅವ್ಯವಹಾರ ನಡೆದಿರುವುದು ಸಾಕ್ಷಿ ಸಮೇತ ಬಯಲಾಗಿದ್ದು, ಈ‌ ನಿಟ್ಟಿನಲ್ಲಿ‌ ಸರ್ಕಾರ ಇಂತಹ ಕ್ರಮ ಕೈಗೊಂಡಿತ್ತು. ಈ ಆದೇಶವನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಸೂಚಿಸಲು ದೇಗುಲದ ಟ್ರಸ್ಟಿ ಹಾಗೂ ಸಂಚಾಲಕ ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿ‌‌ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ರಾಜ್ಯ ಸರ್ಕಾರ

ಸರ್ಕಾರದ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ: ಸರ್ಕಾರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ Read More »

ಆರೇಲ್ತಡಿ ದೈವಸ್ಥಾನಕ್ಕೆ  ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭೇಟಿ | ಜೀವನದಲ್ಲಿ ಎಲ್ಲಾ ಏಳು ಬೀಳುಗಳು ಕೂಡ ದೇವರ ಇಚ್ಛೆಯಂತೆ ನಡೆಯುತ್ತದೆ : ಜನಾರ್ದನ ರೆಡ್ಡಿ

ಸವಣೂರು : ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ದ.ಕ. ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಬುಧವಾರ ಭೇಟಿ ನೀಡಿದರು. ಆರೇಲ್ತಡಿ ಇರ್ವೆ‌ರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಸ್ಥಾನಕ್ಕೆ ಕಳೆದ ಮೇ 13ರಂದು ದೈವಸ್ಥಾನದ ಬ್ರಹಕಲಶೋತ್ಸವಕ್ಕೆ ಆಗಮಿಸಬೇಕಿದ್ದ ರೆಡ್ಡಿ ಅಂದು ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿ ಆಗಮಿಸಲು ಸಾಧ್ಯವಾಗಿರಲಿಲ್ಲ. ಮೇ 13 ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಜೈಲಿನಿಂದ ಬಿಡುಗಡೆಗೆ ಮೊರೆ

ಆರೇಲ್ತಡಿ ದೈವಸ್ಥಾನಕ್ಕೆ  ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭೇಟಿ | ಜೀವನದಲ್ಲಿ ಎಲ್ಲಾ ಏಳು ಬೀಳುಗಳು ಕೂಡ ದೇವರ ಇಚ್ಛೆಯಂತೆ ನಡೆಯುತ್ತದೆ : ಜನಾರ್ದನ ರೆಡ್ಡಿ Read More »

ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೊಡಿತ್ತಾಯಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಸಂಕ್ರಾಂತಿ ತಂಬಿಲ | ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾಗಿ | ಆರೇಲ್ತಡಿಯಲ್ಲಿ ಕೆಡೆಂಜೊಡಿತ್ತಾಯ ಬಸ್‍ ತಂಗುದಾಣಕ್ಕೆ ಚಾಲನೆ, ನೂತನ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ರೆಡ್ಡಿ

ಸವಣೂರು: ಕಡಬ ತಾಲೂಕಿನ ಸವಣೂರು ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೊಡಿತ್ತಾಯಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಸಂಕ್ರಾಂತಿ ದಿನವಾದ ಬುಧವಾರ ಸಂಕ್ರಾಂತಿ ತಂಬಿಲ ಹಾಗೂ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಗಾಲಿ ಜನಾರ್ದನ ರೆಡ್ಡಿ ಅವರು 2023-24ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸವಣೂರು ಆರೇಲ್ತಡಿಯಲ್ಲಿ ನಿರ್ಮಾಣಗೊಂಡ ಕೆಡೆಂಜೊಡಿತ್ತಾಯಿ ಬಸ್‍ ತಂಗುದಾಣವನ್ನು ಉದ್ಘಾಟಿಸಿದರು. ಬಳಿಕ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ಸಂಕ್ರಾಂತಿ

ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೊಡಿತ್ತಾಯಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಸಂಕ್ರಾಂತಿ ತಂಬಿಲ | ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾಗಿ | ಆರೇಲ್ತಡಿಯಲ್ಲಿ ಕೆಡೆಂಜೊಡಿತ್ತಾಯ ಬಸ್‍ ತಂಗುದಾಣಕ್ಕೆ ಚಾಲನೆ, ನೂತನ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ರೆಡ್ಡಿ Read More »

ಆ.27-28 : ಚಂದಳಿಕೆಯಲ್ಲಿ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ: ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಮತ್ತು ಚಂದಳಿಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ವತಿಯಿಂದ ಜರಗುವ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಚಂದಳಿಕೆ ಮಂಗಳಾ ಮಂಟಪದಲ್ಲಿ ಬಿಡುಗಡೆ ಮಾಡಲಾಯಿತು. ಸಮಿತಿ ಅಧ್ಯಕ್ಷ ಶಂಕರ ಭಟ್ ಬದನಾಜೆ ಬಿಡುಗಡೆಗೊಳಿಸಿದರು. ಸಮಿತಿ ಕಾರ್ಯಧ್ಯಕ್ಷ ಕೃಷ್ಣಯ್ಯ ಕೆ ಅರಮನೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕ್ಲಬ್ ಗೌರವಾಧ್ಯಕ್ಷ ಗಂಗಾಧರ ಸಿ. ಅಧ್ಯಕ್ಷ ಕರುಣಾಕರ ಗೌಡ ಎಂ. ಕಾರ್ಯದರ್ಶಿ ಚೇತನ್ ಕುಮಾರ್ ಕಲ್ಲಕಟ್ಟಾ. ಕೋಶಾಧಿಕಾರಿ ವಿಶ್ವನಾಥ ಎಂ.  ಹಾಗೂ

ಆ.27-28 : ಚಂದಳಿಕೆಯಲ್ಲಿ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕೃತಿ ಮುಂದುವರಿಯಬೇಕು :ಪಡುವೆಟ್ನಾಯ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಕೇಂದ್ರೀಯ ಸಮಿತಿಯ ಸಭೆಯು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಜರಗಿತು. ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯರನ್ನು ಗೌರವದಿಂದ ಕಾಣುವ ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಹಿರಿಯರ ಮಾರ್ಗದರ್ಶನದಿಂದ ಸಮಾಜದಲ್ಲಿ ಉತ್ತಮ ಬದಲಾವಣೆಗಳು ಸಾಧ್ಯವಿದೆ ಎಂದು ಅವರು ತಿಳಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾತನಾಡಿ ಹೊರ ಜಿಲ್ಲೆಗಳಲ್ಲಿಯೂ

ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕೃತಿ ಮುಂದುವರಿಯಬೇಕು :ಪಡುವೆಟ್ನಾಯ Read More »

ಸುಳ್ಯದಲ್ಲಿ ಧೀಂಕಿಟ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಧೀಂಕಿಟ ಶಿರೋನಾಮೆಯಲ್ಲಿ ಒಂದು ದಿನದ ಅರೆಭಾಷೆ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರ ಉದ್ಘಾಟನೆಗೊಂಡಿತು. ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೆ. ವಿ. ದಾಮೋದರ ಗೌಡರು ಮುಖ್ಯ ಅತಿಥಿಯಾಗಿದ್ದರು. ಕಲಾವಿದ ಜಬ್ಬಾರ್ ಸಮೋ ಮತ್ತು ಭಾಗವತಿಕೆ ಪ್ರತಿಭೆ ಭವ್ಯಶ್ರೀ ಕುಲ್ಕುಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸದಾನಂದ ಮಾವಜಿಯವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಪ್ರೊ. ದಾಮೋದರ ಗೌಡರು ಅಕಾಡೆಮಿಯ ತ್ರೈಮಾಸಿಕ

ಸುಳ್ಯದಲ್ಲಿ ಧೀಂಕಿಟ Read More »

ಕಾರವಾರ: ದಟ್ಟ ಕಾಡಿನ ಗುಹೆಯಲ್ಲಿ ಇಬ್ಬರು ಪುಟ್ಟ ಮಕ್ಕಳ ಜೊತೆ ವಾಸವಾಗಿದ್ದ ವಿದೇಶಿ ಮಹಿಳೆಯ ರಕ್ಷಣೆ

ಗುಡ್ಡ ಕುಸಿತದ ತನಿಖೆ ಮಾಡುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದ ತಾಯಿ-ಮಕ್ಕಳು ಕಾರವಾರ: ವಿದೇಶ ಮಹಿಳೆಯೊಬ್ಬಳು ಇಬ್ಬರು ಪುಟ್ಟ ಮಕ್ಕಳೊಂದಿಗೆ ದಟ್ಟಾರಣ್ಯದೊಳಗೆ ಗುಹೆಯೊಳಗೆ ವಾಸ ಮಾಡುತ್ತಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿಉದೆ. ಹಿಂದೂ ಧರ್ಮದ ಕಡೆಗೆ ವಾಲಿದ ರಷ್ಯಾ ಮೂಲದ ಮಹಿಳೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯದ ಗುಹೆಯಲ್ಲಿ ವಾಸವಿದ್ದಳು. ಇವರನ್ನು ಪೊಲೀಸರು ರಕ್ಷಿಸಿ ಕರೆದೊಯ್ದಿದ್ದಾರೆ. ಮೋಹಿ (40) ತನ್ನ ಪುಟ್ಟ ಮಕ್ಕಳಾದ ಪ್ರೆಯಾ (6) ಹಾಗೂ ಅಮಾ

ಕಾರವಾರ: ದಟ್ಟ ಕಾಡಿನ ಗುಹೆಯಲ್ಲಿ ಇಬ್ಬರು ಪುಟ್ಟ ಮಕ್ಕಳ ಜೊತೆ ವಾಸವಾಗಿದ್ದ ವಿದೇಶಿ ಮಹಿಳೆಯ ರಕ್ಷಣೆ Read More »

error: Content is protected !!
Scroll to Top