ಧಾರ್ಮಿಕ

ನಾಳೆ (ಏ.21) : ಶ್ರೀ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ

ಪುತ್ತೂರು: ನಗರದ ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಏ.21 ಶುಕ್ರವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಉತ್ಸವದ ಅಂಗವಾಗಿ ಬೆಳಿಗ್ಗೆ 7.3೦ ರಿಂದ ಗಣಪತಿ ಹೋಮ, ಮಹಾಪೂಜೆ, ಪಾಷಾಣ ಮೂರ್ತಿಗೆ ತಂಬಿಲ, ನಾಗದೇವರಿಗೆ ತಂಬಿಲ, ಗುಳಿಗನಿಗೆ ತಂಬಿಲ ನಡೆಯಲಿದೆ. 11 ಗಂಟೆಗೆ ಮೂಡಾಯೂರು ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 1230೦ ಕ್ಕೆ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ, 1.30 ರಿಂದ […]

ನಾಳೆ (ಏ.21) : ಶ್ರೀ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ Read More »

ಧ್ವಜಾವರೋಹಣದೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೆ ಸಂಪನ್ನ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಬುಧವಾರ ಬೆಳಿಗ್ಗೆ ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತು. ಮಂಗಳವಾರ ಸಂಜೆ ಶ್ರೀ ದೇವರು ದೂರದ ವೀರಮಂಗಲಕ್ಕೆ ಜಳಕಕ್ಕೆ ತೆರಳಿ ಬುಧವಾರ ಮುಂಜಾನೆ ಕುಮಾರಧಾರ ನದಿಯಲ್ಲಿ ಜಳಕಗೊಂಡು ಅಲ್ಲಿಂದ ಪುನಃ ಶ್ರೀ ದೇವಸ್ಥಾನಕ್ಕೆ ಆಗಮಿಸಿದರು. ಸಂಪ್ರದಾಯದಂತೆ ದೇವಸ್ಥಾನದಲ್ಲಿ ಶ್ರೀ ದೇವರನ್ನು ಬರಮಾಡಿಕೊಂಡು ಬಳಿಕ ಶ್ರೀ ದೇವರು ಗರ್ಭಗುಡಿ ಪ್ರವೇಶಿಸಿದರು. ಶ್ರೀ ಮಹಾಲಿಂಗೇಶ್ವರನಿಗೆ ಆರತಿ ಬೆಳಗಲಾಯಿತು. ಬಳಿಕ ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ಧ್ವಜಾವರೋಹಣ ನಡೆಯುವ ಮೂಲಕ ಒಂಭತ್ತು ದಿನಗಳ ಜಾತ್ರೆ

ಧ್ವಜಾವರೋಹಣದೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೆ ಸಂಪನ್ನ Read More »

ವೀರಮಂಗಲದ ಕುಮಾರಧಾರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ |  ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆ

ಪುತ್ತೂರು:  ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ  ದೂರದ ವೀರಮಂಗಲದಲ್ಲಿ ಶ್ರೀ ದೇವರ ಅವಭೃತ ಸ್ನಾನ ಬುಧವಾರ ಬೆಳಿಗ್ಗೆ 6.45 ಸುಮಾರಿಗೆ ನಡೆಯಿತು. ಮಂಗಳವಾರ ಸಂಜೆ ಶ್ರೀ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆದು ಬಳಿಕ ಹೊರಟ ಶ್ರೀ ದೇವರು ವೀರಮಂಗಲದ ತೆರಳುವ ದಾರಿಯುದ್ದಕ್ಕೂ ಕಟ್ಟೆಪೂಜೆ ಗೊಂಡು ಬುಧವಾರ ಮುಂಜಾನೆ ಹೊತ್ತಿಗೆ ತಲುಪಿದರು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಭಕ್ತಾದಿಗಳು ತಳಿರು ತೋರಣಗಳಿಂದ ಸಿಂಗರಿಸಿ ಶ್ರೀ ದೇವರಿಗೆ ಹಣ್ಣುಕಾಯಿ, ಕಾಣಿಕೆ ಅರ್ಪಿಸಿದರು. ಶ್ರೀ ದೇವರ ಜತೆ

ವೀರಮಂಗಲದ ಕುಮಾರಧಾರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ |  ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆ Read More »

ಇಂದು ಸಂಜೆ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ | ವೀರಮಂಗಲದ ನೂತನ ಶಿಲಾಮಯ ಕಟ್ಟೆಯಲ್ಲಿ ಪೂಜೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಇಂದು ಶ್ರೀ ದೇವರು ದೂರದ ವೀರಮಂಗಲಕ್ಕೆ ಅವಭೃತ ಸ್ನಾನಕ್ಕೆ ತೆರಳಲಿದ್ದಾರೆ. ಸಂಜೆ ಶ್ರೀ ದೇವರ ಬಲಿ ಹೊರಟು ಬಳಿಕ ರಕ್ತೇಶ್ವರ ದೈವದೊಂದಿಗೆ ನುಡಿಗಟ್ಟು ನಡೆಯಲಿದೆ. ಅದಾದ ಬಳಿಕ ಶ್ರೀ ದೇವರು ವೀರಮಂಗಲಕ್ಕೆ ಸಾವಿರಾರು ಭಕ್ತಾದಿಗಳೊಂದಿಗೆ ತೆರಳಲಿದ್ದಾರೆ. ಶ್ರೀ ದೇವರು ಮಂಗಳವಾರ ಸಂಜೆ ಹೊರಟು ಬುಧವಾರ ಪ್ರಾತಃಕಾಲ ವೀರಮಂಗಲ ತಲುಪಿ ಅಲ್ಲಿ ಕುಮಾರಧಾರ ನದಿಕಿನಾರೆಯಲ್ಲಿ ಜಳಕ ಮಾಡಿ, ಬಳಿಕ ಕಟ್ಟೆಯಲ್ಲಿ ಪೂಜೆಗೊಂಡು ಪುನಃ ಹಿಂದಿರುಗಲಿದ್ದಾರೆ. ಸುಮಾರು 15 ಕಿ.ಮೀ.

ಇಂದು ಸಂಜೆ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ | ವೀರಮಂಗಲದ ನೂತನ ಶಿಲಾಮಯ ಕಟ್ಟೆಯಲ್ಲಿ ಪೂಜೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರನ ವೈಭವದ ಬ್ರಹ್ಮರಥೋತ್ಸವ | ಮುಗಿಲು ಮುಟ್ಟಿದ ಭಕ್ತರ ಜಯಘೋಷ | ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ ಸುಡುಮದ್ದು

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಸೋಮವಾರ ರಾತ್ರಿ ನಡೆಯಿತು. ರಥೋತ್ಸವದ ಅಂಗವಾಗಿ ಸಂಜೆ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ಹೊರಾಂಗಣದಲ್ಲಿ ಬಲಿ ಉತ್ಸವ ನಡೆಯಿತು. ರಾತ್ರಿ 9 ಗಂಟೆ ಸುಮಾರಿ ಶ್ರೀ ದೇವರು ರಥಾರೂಢನಾದನು. ಬಳಿಕ ಬ್ರಹ್ಮರಥೋತ್ಸವ ಸೇವೆ ಮಾಡಿಸಿದವರು ಸಂಕಲ್ಪ ಮಾಡಿ ಪ್ರಸಾದ ಸ್ವೀಕರಿಸಿದರು. ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ಪುತ್ತೂರು ಬೆಡಿ ಎಂದೇ ಪ್ರಸಿದ್ಧಿ ಪಡೆದೆ ಸುಡುಮದ್ದು

ಪುತ್ತೂರು ಶ್ರೀ ಮಹಾಲಿಂಗೇಶ್ವರನ ವೈಭವದ ಬ್ರಹ್ಮರಥೋತ್ಸವ | ಮುಗಿಲು ಮುಟ್ಟಿದ ಭಕ್ತರ ಜಯಘೋಷ | ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ ಸುಡುಮದ್ದು Read More »

ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ | ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ ಉತ್ಸವ ಸಾವಿರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಿತು. ಬೆಳಿಗ್ಗೆ ಉತ್ಸವ, ವಸಂತಕಟ್ಟೆ ಪೂಜೆ ನಡೆದು ಬಳಿಕ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು.

ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ | ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಅತೀ ಹೆಚ್ಚು ಆದಾಯ ಗಳಿಕೆ

ಮಂಗಳೂರು : 5,000 ವರ್ಷಕ್ಕೂ ಅಧಿಕ ಹಿನ್ನೆಲೆಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಅತೀ ಹೆಚ್ಚು ಆದಾಯ ಗಳಿಕೆಯಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಈ ವರ್ಷದ ವಾರ್ಷಿಕ ಆದಾಯ 123 ಕೋಟಿ ರೂ ದಾಖಲಾಗಿದೆ. 2022ರ ಎಪ್ರಿಲ್‌ನಿಂದ 2023ರ ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 123 ಕೋಟಿ ರೂ. ಆದಾಯ ಗಳಿಸಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಅತೀ ಹೆಚ್ಚು ಆದಾಯ ಗಳಿಕೆ Read More »

ಶ್ರೀ ಮಹಾಲಿಂಗೇಶ್ವರ ದೇವರ ತೆಪ್ಪೋತ್ಸವ | ಪುಷ್ಕರಣಿಯ ನೂತನ ಶಿಲಾಮಯ ಕಟ್ಟೆಯಲ್ಲಿ ಪೂಜೆ | ಪುಷ್ಕರಣಿಯಲ್ಲಿ ಕೆರೆ ಆಯನ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಜಾತ್ರೋತ್ಸವ ನಡೆಯುತ್ತಿದ್ದು, ಭಾನುವಾರ ರಾತ್ರಿ ದೇವಸ್ಥಾನದ ಪುಷ್ಕರಣಿಯಲ್ಲಿ ಕೆರೆ ಆಯನ, ತೆಪ್ಪೋತ್ಸವ ನಡೆಯಿತು. ದೇವಸ್ಥಾನದ ಪುಷ್ಕರಣಿಯಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಕಟ್ಟೆಯಲ್ಲಿ  ಪೂಜೆಗೊಂಡು, ಪುಷ್ಕರಣಿಯಲ್ಲಿ ಕೆರೆ ಆಯನ ನಡೆಯಿತು. ರಾತ್ರೀ ಬಲ್ನಾಡಿನಿಂದ ಶ್ರೀ ದಂಡನಾಯಕ, ಉಳ್ಳಾಲ್ತಿ ದೈವಗಳ ಭಂಡಾರ ಬಂದು ಶ್ರೀ ದೇವಸ್ಥಾನವನ್ನು ಪ್ರವೇಶಿಸಿದ ಬಳಿಕ ಜೋಡು ತೆಪ್ಪದಲ್ಲಿ ಶ್ರೀ ದೇವರನ್ನು ಕುಳ್ಳಿರಿಸಿ ಕಟ್ಟೆಗೆ ತೆರಳಿ ಅಲ್ಲಿ ಪೂಜೆ ನಡೆಯಿತು. ನೆರೆದಿದ್ದ ಭಕ್ತಾದಿಗಳು ತೆಪ್ಪೋತ್ಸವ ಕಂಡು

ಶ್ರೀ ಮಹಾಲಿಂಗೇಶ್ವರ ದೇವರ ತೆಪ್ಪೋತ್ಸವ | ಪುಷ್ಕರಣಿಯ ನೂತನ ಶಿಲಾಮಯ ಕಟ್ಟೆಯಲ್ಲಿ ಪೂಜೆ | ಪುಷ್ಕರಣಿಯಲ್ಲಿ ಕೆರೆ ಆಯನ Read More »

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಸಣ್ಣ ರಥೋತ್ಸವ  | ತೆಪ್ಪೋತ್ಸವ | ಕೆರೆ ಆಯನ | ಇಂದು ಶ್ರೀ ಮಹಾಲಿಂಗೇಶ್ವರನ ವೈಭವದ ಬ್ರಹ್ಮರಥೋತ್ಸವ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ವಿಜೃಂಭಣೆಯಿಂದ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ವೈಭವವನ್ನು ಪಡೆಯುತ್ತಿದೆ. ಭಾನುವಾರ ರಾತ್ರಿ ದೂರದ ಬಲ್ನಾಡಿನಿಂದ ವರ್ಷಂಪ್ರತಿ ಬರುವ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನವಾಯಿತು. ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆದು ದೇವಸ್ಥಾನದ ಹೊರಾಂಗಣದಲ್ಲಿ ಬಲಿ ಉತ್ಸವ ಆಗುತ್ತಿದ್ದಂತೆ ರಾತ್ರಿ 11 ಗಂಟೆ ಸುಮಾರಿಗೆ ಬಲ್ನಾಡಿನಿಂದ ಶ್ರೀ ದೈವಗಳ ಕಿರುವಾಳು ಆಗಮಿಸಿ ಶ್ರೀ ಮಹಾಲಿಂಗೇಶ್ವರನ್ನು ಎದುರುಗೊಂಡು ಮಾತುಕತೆ ನಡೆಸಿ ಬಳಿಕ ಶ್ರೀ ದೇವರ ಬಲಿಯೊಂದಿಗೆ

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಸಣ್ಣ ರಥೋತ್ಸವ  | ತೆಪ್ಪೋತ್ಸವ | ಕೆರೆ ಆಯನ | ಇಂದು ಶ್ರೀ ಮಹಾಲಿಂಗೇಶ್ವರನ ವೈಭವದ ಬ್ರಹ್ಮರಥೋತ್ಸವ Read More »

ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಬೆಳಿಗ್ಗೆಯಿಂದಲೇ ಭಕ್ತಾದಿಗಳಿಂದ ಮಲ್ಲಿಗೆ ಅರ್ಪಣೆ |ಮಲ್ಲಿಗೆ ಸ್ಟಾಲ್ ಗಳಲ್ಲಿ ಭರ್ಜರಿ ವ್ಯಾಪಾರ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಕಿರುವಾಳು ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಬಲ್ನಾಡು ದೈವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಮಲ್ಲಿಗೆ, ಹರಕೆ ಸರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಇಂದು ರಾತ್ರಿ ಬಲ್ನಾಡಿನಿಂದ ಶ್ರೀ ದಂಡನಾಯಕ ಉಳ್ಳಾಲ್ತಿ ದೈವ ಹಾಗೂ ಪರಿವಾರ ದೈವಗಳ ಕಿರುವಾಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಈ ಬಾರಿ ಬಲ್ನಾಡಿನ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಮಲ್ಲಿಗೆಯನ್ನು ಅರ್ಪಿಸುತ್ತಿದ್ದಾರೆ. ಪ್ರತಿ

ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಬೆಳಿಗ್ಗೆಯಿಂದಲೇ ಭಕ್ತಾದಿಗಳಿಂದ ಮಲ್ಲಿಗೆ ಅರ್ಪಣೆ |ಮಲ್ಲಿಗೆ ಸ್ಟಾಲ್ ಗಳಲ್ಲಿ ಭರ್ಜರಿ ವ್ಯಾಪಾರ Read More »

error: Content is protected !!
Scroll to Top