ಧಾರ್ಮಿಕ

ಏ.28 : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ

ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ ಏ.28 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನೇಮೋತ್ಸವದ ಅಂಗವಾಗಿ ಏ.27 ಗುರುವಾರ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನ 12.15 ಕ್ಕೆ ದೇವತಾ ಪ್ರಾರ್ಥನೆ, ಮಹಾಪೂಜೆ, ಸಂಜೆ 6 ಕ್ಕೆ ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ರಂಗಪೂಜೆ, ರಾತ್ರಿ 7 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ರಾತ್ರಿ 9 ಕ್ಕೆ ತಂಬಿಲಾದಿಗಳು ನಡೆದು ಪ್ರಸಾದ ವಿತರಣೆ, 9.30 ಕ್ಕೆ ಅನ್ನಸಂತರ್ಪಣೆ […]

ಏ.28 : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ Read More »

ತಲೆಬೈಲು ಮಠದಲ್ಲಿ ಬೊಟ್ಯಾಡಿ ವಿಶೇಷ ಪ್ರಾರ್ಥನೆ

ಪುತ್ತೂರು: ಶತ್ರುನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ದೇವರ ಮಠದಲ್ಲಿ ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಜ್ಯದಲ್ಲಿ ಹಾಗೂ ಪುತ್ತೂರಿನಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಂತೆ ಪ್ರಾರ್ಥಿಸಿದರು. ಇದೇ ಸಂದರ್ಭ ಮಠದ ಮಂಜುನಾಥ್ ಉಡುಪ ಅವರು ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ತಲೆಬೈಲು ಮಠದಲ್ಲಿ ಬೊಟ್ಯಾಡಿ ವಿಶೇಷ ಪ್ರಾರ್ಥನೆ Read More »

ಶಾಂತಿಗೋಡು ಪಾಣಂಬು ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು: ಶಾಂತಿಗೋಡು ಗ್ರಾಮದ ಪಾಣಂಬು ತರವಾಡು ಮನೆಯಲ್ಲಿ ಕಲ್ಲುರ್ಟಿ, ಸತ್ಯದೇವತೆ, ವರ್ಣರ ಪಂಜುರ್ಲಿ, ಧೂಮಾವತಿ ದೈವಗಳ ನೇಮೋತ್ಸವದ ಅಂಗವಾಗಿ ಗೊನೆ ಮುಹೂರ್ತ ಬುಧವಾರ ಬೆಳಿಗ್ಗೆ ನಡೆಯಿತು. ಕುಟುಂಬದ ಯಜಮಾನ ತಿಮ್ಮಪ್ಪ ಗೌಡ  ಗೊನೆಮುಹೂರ್ತ ನೆರವೇರಿಸಿದರು. ಮೇ2 ರಂದು ನೇಮೋತ್ಸವ ನಡೆಯಲಿದ್ದು, ತರವಾಡು ಮನೆಯಲ್ಲಿ ಗಣಹೋಮ, ಮುಡಿಪು ಶುದ್ಧ, ಸಂಜೆ 4.30 ಕ್ಕೆ ದೈವಗಳ ಭಂಡಾರ ತೆಗೆದು ನೇಮೋತ್ಸವ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮೇ 3 ಬುಧವಾರ ಬೆಳಿಗ್ಗೆ 5 ಗಂಟೆಗೆ ಶಿರಾಡಿ ದೈವ, ರುದ್ರಚಾಮುಂಡಿ ಮತ್ತು ಗುಳಿಗ

ಶಾಂತಿಗೋಡು ಪಾಣಂಬು ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ Read More »

ವರುಣನ ಕೃಪೆಗಾಗಿ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಂದ ಲೋಕಕಲ್ಯಾಣಾರ್ಥವಾಗಿ ಹಾಗೂ ವರುಣನ ಕೃಪೆಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ ಬುಧವಾರ ಬೆಳಿಗ್ಗೆ ನಡೆಯಿತು. ದೇವಸ್ಥಾನದಲ್ಲಿ ಬೆಳಿಗ್ಗೆ ನಡೆಯುವ ನಿತ್ಯ ಬಲಿ ಬಳಿಕ ಶ್ರೀ ದೇವರ ಗರ್ಭಗುಡಿ ಎದುರು ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯರು ಪ್ರಾರ್ಥನೆ ಸಲ್ಲಿಸುವ ಮೂಲಕ ಸೀಯಾಳಾಭಿಷೇಕ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್, ರಾಧಾಕೃಷ್ಣ ಗೌಡ ನಂದಿಲ, ಯು.ಲೋಕೇಶ್ ಹೆಗ್ಡೆ, ಉದಯ್

ವರುಣನ ಕೃಪೆಗಾಗಿ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ Read More »

ಮೇ, ಜೂನ್​​ನಲ್ಲಿ ತಿರುಪತಿ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ಪ್ರವೇಶ ಟಿಕೆಟ್‌ ಬಿಡುಗಡೆ

ತಿರುಪತಿ : ತಿರುಮಲ ತಿರುಪತಿ ದೇವಸ್ಥಾನ (TTD) ಇಂದು ಬೆಳಿಗ್ಗೆ 10:00 ಗಂಟೆಯಿಂದ ಮೇ ಮತ್ತು ಜೂನ್ ತಿಂಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ವಿಶೇಷ ಪ್ರವೇಶ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಟಿಟಿಡಿಯು ವೆಬ್​​ಸೈಟ್​​ನಲ್ಲಿ ತಿಳಿಸಿರುವ ತಿಂಗಳಿನಲ್ಲಿ ತಿರುಮಲದಲ್ಲಿ ವಿಶೇಷ ಮತ್ತು ಹೆಚ್ಚುವರಿ ವಸತಿ ಕೊಠಡಿಗಳನ್ನು ಬಿಡುಗಡೆ ಮಾಡಲಿದೆ. ಮೇ ಮತ್ತು ಜೂನ್‌ನಲ್ಲಿ ತಿರುಮಲಗೆ ಭೇಟಿ ನೀಡಬೇಕಾದರೆ ಟೋಕನ್ ಪಡೆಯಲು ಭಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಕಲ್ಯಾಣೋತ್ಸವ, ಉಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವಂ

ಮೇ, ಜೂನ್​​ನಲ್ಲಿ ತಿರುಪತಿ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ಪ್ರವೇಶ ಟಿಕೆಟ್‌ ಬಿಡುಗಡೆ Read More »

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಶ್ರೇಯೋಭಿವೃದ್ಧಿಗೆ ಕುಂಟಾರು ರವೀಶ ತಂತ್ರಿಗಳಿಂದ ವಿಶೇಷ ಪ್ರಾರ್ಥನೆ

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಗೆಲುವು, ಶ್ರೇಯೋಭಿವೃದ್ಧಿಗಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಕುಂಟಾರು ಶ್ರೀ ರವೀಶ ತಂತ್ರಿಗಳು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ವಿಶೇಷ ಪ್ರಾರ್ಥನೆ ಸಲ್ಲಿಸಿದ ತಂತ್ರಿಗಳು ಬಳಿಕ ಆಶಾ ತಿಮ್ಮಪ್ಪ ಅವರಿಗೆ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಶ್ರೇಯೋಭಿವೃದ್ಧಿಗೆ ಕುಂಟಾರು ರವೀಶ ತಂತ್ರಿಗಳಿಂದ ವಿಶೇಷ ಪ್ರಾರ್ಥನೆ Read More »

ಏ.29 ರಿಂದ ಮೇ 7 : ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ

ಪುತ್ತೂರು: ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾಷ್ಬಬಂಧ ಬ್ರಹ್ಮಕಲಶೋತ್ಸವ ಏ.29 ರಿಂದ ಮೇ 7 ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಇರುವ ಶ್ರೀ ದೇವಸ್ಥಾನ ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು, ಜೀರ್ಣೋದ್ಧಾರದ ಕುರಿತು ಸ್ವರ್ಣಪ್ರಶ್ನೆಯಲ್ಲಿ ಚಿಂತನೆ ನಡೆಸಲಾಯಿತು. ಅದಂತೆ ಇದೀಗ ಊರ, ಪರವೂರ ಭಕ್ತಾದಿಗಳು ಹಾಗೂ ಬೆಳ್ಳಿಪ್ಪಾಡಿ

ಏ.29 ರಿಂದ ಮೇ 7 : ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ Read More »

ನಾಳೆ ಅಯೋಧ್ಯೆಯ ಶ್ರೀ ರಾಮನಿಗೆ ಜಲಾಭಿಷೇಕ

ಅಯೋಧ್ಯೆಯಲ್ಲಿ 155 ರಾಷ್ಟ್ರಗಳ ನೀರಿನ ಸಂಗಮ ಅಯೋಧ್ಯೆ : ಉಜೈಕಿಸ್ತಾನ್, ಪಾಕಿಸ್ತಾನ, ಚೀನಾ ಸೇರಿದಂತೆ ವಿವಿಧ ದೇಶಗಳ 155 ನದಿಗಳ ನೀರು ಗುರುವಾರ ಬೆಳಗ್ಗೆ ಅಯೋಧ್ಯೆಗೆ ತಲುಪಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏಪ್ರಿಲ್ 23 ರಂದು ಈ ನದಿಗಳ ನೀರಿನಿಂದ ಅಯೋಧ್ಯೆಯ ಶ್ರೀ ರಾಮನಿಗೆ ‘ಜಲಾಭಿಷೇಕ’ ಮಾಡಲಿದ್ದಾರೆ. ದೆಹಲಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ, ನೀರು ಸಂಗ್ರಹದ ಹಿಂದಿರುವ ವ್ಯಕ್ತಿ ವಿಜಯ್ ಜಾಲಿ, ಅಂಟಾರ್ಕ್ಷಿಕಾದಿಂದ ಕೂಡ ನೀರನ್ನು ತರಲಾಗಿದೆ ಎಂದು ತಿಳಿಸಿದ್ದಾರೆ.ತಾಂಜಾನಿಯಾ,

ನಾಳೆ ಅಯೋಧ್ಯೆಯ ಶ್ರೀ ರಾಮನಿಗೆ ಜಲಾಭಿಷೇಕ Read More »

ಲಕ್ಷ್ಮೀ ದೇವಿ ಬೆಟ್ಟಕ್ಕೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭೇಟಿ

ಪುತ್ತೂರು : ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ಲಕ್ಷ್ಮೀ ದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕ್ಕೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಶುಕ್ರವಾರ ಭೇಟಿ ನೀಡಿದರು. ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಆಶಾ ತಿಮ್ಮಪ್ಪ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

ಲಕ್ಷ್ಮೀ ದೇವಿ ಬೆಟ್ಟಕ್ಕೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭೇಟಿ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹುಲಿಭೂತ, ರಕ್ತೇಶ್ವರಿ ನೇಮ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಅಂಗವಾಗಿ ಶ್ರೀ ದೈವಗಳ ನೇಮೋತ್ಸವ ಬುಧವಾರ ರಾತ್ರಿ ನಡೆಯಿತು. ಬೆಳಿಗ್ಗೆ ವೀರಮಂಗಲದಿಂದ ಶ್ರೀ ದೇವರು ಅವಭೃತ ಸ್ಣಾನದ ಬಳಿಕ ಶ್ರೀ ದೇವಸ್ಥಾನಕ್ಕೆ ಆಗಮಿಸಿ ಧ್ವಜಾವರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತ್ತು. ರಾತ್ರಿ ಚೂರ್ಣೋತ್ಸವ, ವಸಂತ ಕಟ್ಟೆ ಪೂಜೆ ನಡೆಯಿತು. ಬಳಿಕ ಹುಲಿಭೂತ, ರಕ್ತೇಶ್ವರಿ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹುಲಿಭೂತ, ರಕ್ತೇಶ್ವರಿ ನೇಮ Read More »

error: Content is protected !!
Scroll to Top