ಧಾರ್ಮಿಕ

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಾಲಾಲಯಕ್ಕೆ ಭೂಮಿಪೂಜೆ

ಪುತ್ತೂರು: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಬಾಲಾಲಯದ ಭೂಮಿ ಪೂಜೆ ಸೋಮವಾರ ನಡೆಯಿತು.ದೇವಸ್ಥಾನದ ಅರ್ಚಕ, ಆನುವಂಶೀಯ ಮೊಕ್ತೇಸರ ಜನೇಶ್ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಪುತ್ತಿಲ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಫೆ. 1-3: ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆಬರೆಪ್ಪಾಡಿ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಾಲಯದ ಅನುಜ್ಞಾ ಕಲಶ ಮತ್ತು ಬಾಲಾಲಯ […]

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಾಲಾಲಯಕ್ಕೆ ಭೂಮಿಪೂಜೆ Read More »

ಹಿಂದೂ ಧರ್ಮದ ಶಕ್ತಿ ಪ್ರದರ್ಶಿಸಿದ ಒಕ್ಕಲಿಗ ಸಮಾವೇಶ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮ ಧರ್ಮದ ಶಕ್ತಿಯನ್ನು ಅನಾವರಣ ಮಾಡಿ, ಮಾದರಿ ಸಮಾರಂಭ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಎಲ್ಲಾ ಪಕ್ಷ ಮುಖಂಡರೂ ಭಾಗವಹಿಸಿದ್ದು ಪಕ್ಷಾತೀತ ಎಂದು ಸಾಬೀತಾದರೆ, ಎಲ್ಲಾ ಸಮುದಾಯದವರು ಭಾಗವಹಿಸುವ ಮೂಲಕ ಆದಿಚುಂಚನಗಿರಿ ಮಹಾಸಂಸ್ಥಾನ ಇಡೀ ಸಮಾಜಕ್ಕೆ ಮಾರ್ಗದರ್ಶಕ ಎನ್ನುವುದನ್ನು ರುಜುವಾತು ಪಡಿಸಿತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರಶಂಸೆ ವ್ಯಕ್ತಪಡಿಸಿ, ಸಂದೇಶ ರವಾನೆ ಆಗುತ್ತಿತ್ತು. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ

ಹಿಂದೂ ಧರ್ಮದ ಶಕ್ತಿ ಪ್ರದರ್ಶಿಸಿದ ಒಕ್ಕಲಿಗ ಸಮಾವೇಶ Read More »

 ವೈಭವಕ್ಕೆ ಸಾಕ್ಷಿಯಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ, ಗುರುವಂದನೆ, ತುಲಾಭಾರ, ಗ್ರಂಥ ಬಿಡುಗಡೆ

ಪುತ್ತೂರು: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಗುರುವಂದನೆ, ತುಲಾಭಾರ ಸಮಾರಂಭ ವೈಭವದಿಂದ ಜರಗಿತು. ರವಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಯತಿವರೇಣ್ಯರ ಉಪಸ್ಥಿತಿಯಲ್ಲಿ ನಡೆದ ಸಮಾರಂಭಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾದರು. ರಾಜಕೀಯ ನಾಯಕರ ಸಹಿತ, ಅನೇಕ ಗಣ್ಯರು ಆಗಮಿಸಿ ಗುರುಗಳ ಆಶೀರ್ವಾದ ಸ್ವೀಕರಿಸಿದರು. ಬೆಳಿಗ್ಗೆ ಪೆರಿಯಡ್ಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ದರ್ಬೆಯಿಂದ ಭವ್ಯ ಶೋಭಾಯಾತ್ರೆ ನಡೆಯಿತು. ಶ್ರೀಗಳ ಉಪಸ್ಥಿತಿಯಲ್ಲಿ ಗಣ್ಯರು ಚೆಂಡೆ,

 ವೈಭವಕ್ಕೆ ಸಾಕ್ಷಿಯಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ, ಗುರುವಂದನೆ, ತುಲಾಭಾರ, ಗ್ರಂಥ ಬಿಡುಗಡೆ Read More »

ಜಯಂತ್ಯೋತ್ಸವ ಸಂಸ್ಮರಣೆಯ ವೈಭವದ ಶೋಭಾಯಾತ್ರೆ

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ರವಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಮೊದಲು ವೈಭವದ ಶೋಭಾಯಾತ್ರೆ ನಡೆಯಿತು. ದರ್ಬೆ ವೃತ್ತದಿಂದ ಹೊರಟ ಶೋಭಾಯಾತ್ರೆ ಪುತ್ತೂರು ಪೇಟೆ ಮೂಲಕ ಸಾಗಿ ಸಭಾಂಗಣದ ಬಳಿ ಸಮಾಪನಗೊಂಡಿತು. ಮುಂಭಾಗದಿಂದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪುತ್ಥಳಿ ಸಾಗಿದರೆ, ಅದನ್ನು ಅನುಸರಿಸಿ ಹಾಗೂ ಚೆಂಡೆ, ಕೊಂಬು ವಾದ್ಯಗಳ ಸ್ವರದೊಂದಿಗೆ ಸ್ವಾಮೀಜಿಗಳು, ಪ್ರಮುಖರು ಸಾಗಿದರು. ಇದರ ಹಿಂದೆ ಸಾಗಿ ಬಂದ ಟ್ಯಾಬ್ಲೋಗಳು ಆಕರ್ಷಕವಾಗಿತ್ತು.

ಜಯಂತ್ಯೋತ್ಸವ ಸಂಸ್ಮರಣೆಯ ವೈಭವದ ಶೋಭಾಯಾತ್ರೆ Read More »

ಪೆರಿಯಡ್ಕದಲ್ಲಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಂದ ಆಂಗ್ಲ ಮಾಧ್ಯಮ ಶಾಲೆಗೆ ಶಿಲಾನ್ಯಾಸ

ಪುತ್ತೂರು: ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಜ. 22ರಂದು ಬೆಳಿಗ್ಗೆ ಉಪ್ಪಿನಂಗಡಿಯ ಪೆರಿಯಡ್ಕ ಬಿಜಿಎಸ್ ಶಾಲಾ ಆವರಣದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಮೀನುಗಾರಿಕಾ ಇಲಾಖೆಯ ಸಚಿವ ಎಸ್. ಅಂಗಾರ, ಶಾಸಕ ಸಂಜೀವ ಮಠಂದೂರು ಮೊದಲಾದವರು ಉಪಸ್ಥಿತರಿದ್ದರು.

ಪೆರಿಯಡ್ಕದಲ್ಲಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಂದ ಆಂಗ್ಲ ಮಾಧ್ಯಮ ಶಾಲೆಗೆ ಶಿಲಾನ್ಯಾಸ Read More »

ಜಯಂತ್ಯೋತ್ಸವ ಸಂಸ್ಮರಣೆಗೆ ಹೊರೆಕಾಣಿಕೆ ಸಮರ್ಪಣೆ | ದರ್ಬೆಯಲ್ಲಿ ಭವ್ಯ ಮೆರವಣಿಗೆಗೆ ಚಾಲನೆ

ಪುತ್ತೂರು: ಹೊರೆಕಾಣಿಕೆ ಮೆರವಣಿಗೆ ಆರಂಭವಾಗುವ ಮೂಲಕ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ ಸಮಾರಂಭಕ್ಕೆ ಚಾಲನೆ ಸಿಕ್ಕಿದೆ. ದರ್ಬೆ ವೃತ್ತದ ಬಳಿ ಹೊರೆಕಾಣಿಕೆ ಮೆರವಣಿಗೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು‌ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ತೆಂಗಿನಕಾಯಿ ಒಡೆದು ಉದ್ಘಾಟಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ

ಜಯಂತ್ಯೋತ್ಸವ ಸಂಸ್ಮರಣೆಗೆ ಹೊರೆಕಾಣಿಕೆ ಸಮರ್ಪಣೆ | ದರ್ಬೆಯಲ್ಲಿ ಭವ್ಯ ಮೆರವಣಿಗೆಗೆ ಚಾಲನೆ Read More »

ಜಯಂತ್ಯೋತ್ಸವ ಸಂಸ್ಮರಣೆ ಸಮಾರಂಭದ ಸಿದ್ಧತೆಗಳಿಗೆ ಅಂತಿಮ ಸ್ಪರ್ಶ

ಪುತ್ತೂರು: ರಾಜ್ಯದ ಕೇಂದ್ರಬಿಂದುವಾಗಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78ನೇ ವರ್ಷದ ಜಯಂತ್ಯೋತ್ಸವ ಸಂಸ್ಮರಣೆ ಸಮಾರಂಭದ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ. ಸಮಾರಂಭಕ್ಕೆ ವೇದಿಕೆ, ಸಭಾಂಗಣ ಸಿದ್ಧಗೊಳ್ಳುತ್ತಿದ್ದು, ಅಂತಿಮ ಸ್ಪರ್ಶವಷ್ಟೇ ಬಾಕಿ ಉಳಿದಿವೆ. ಜ. 22ರಂದು ಬೆಳಿಗ್ಗೆ 8 ಗಂಟೆಗೆ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಶಂಕುಸ್ಥಾಪನೆ ಸಮಾರಂಭದ ಮೂಲಕ ಇಡೀ ದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಇಂದು ಸಂಜೆಯೇ ಆಗಮಿಸಲಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಶಾಸಕ ಸಂಜೀವ ಮಠಂದೂರು ಅವರ ಮನೆಯಲ್ಲಿ

ಜಯಂತ್ಯೋತ್ಸವ ಸಂಸ್ಮರಣೆ ಸಮಾರಂಭದ ಸಿದ್ಧತೆಗಳಿಗೆ ಅಂತಿಮ ಸ್ಪರ್ಶ Read More »

ನಟ ಜಗ್ಗೇಶ್‍ಗೆ ಪುತ್ತೂರಿನಲ್ಲಿ ನಡೆಯಲಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವದ ಆಮಂತ್ರಣ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಜ. 22ರಂದು ನಡೆಯಲಿರುವ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಯ ಆಮಂತ್ರಣವನ್ನು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರಿಗೆ ನೀಡಲಾಯಿತು. ಶಾಸಕ ಸಂಜೀವ ಮಠಂದೂರು ಅವರ ಆಪ್ತ ಸಹಾಯಕ ವಸಂತ್ ಅವರು ಜಗ್ಗೇಶ್ ಅವರಿಗೆ ಆಮಂತ್ರಣ ನೀಡಿ, ಸಮಾರಂಭಕ್ಕೆ ಆಹ್ವಾನಿಸಿದರು. ಸಮಾರಂಭದಲ್ಲಿ ಭಾಗವಹಿಸಲಿರುವ ಮುಖ್ಯ ಅತಿಥಿಗಳ ಪೈಕಿ ಜಗ್ಗೇಶ್ ಅವರು ಕೂಡ ಒಬ್ಬರು. ಸಮಾರಂಭದಲ್ಲಿ ಪಾಲ್ಗೊಳ್ಳಲು ಪುತ್ತೂರಿಗೆ ಆಗಮಿಸಲಿರುವ ಜಗ್ಗೇಶ್ ಅವರು ನಂತರ

ನಟ ಜಗ್ಗೇಶ್‍ಗೆ ಪುತ್ತೂರಿನಲ್ಲಿ ನಡೆಯಲಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವದ ಆಮಂತ್ರಣ Read More »

ಜಯಂತ್ಯೋತ್ಸವ ಸಂಸ್ಮರಣೆ : ಜ. 21ರಂದು ಸಂಜೆ ವೈಭವದ ಹೊರೆಕಾಣಿಕೆ ಮೆರವಣಿಗೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮಕ್ಕೆ ಮುನ್ನದಿನವಾದ ಜ. 21ರಂದು ಸಂಜೆ 3.30ಕ್ಕೆ ದರ್ಬೆ ದುಗ್ಗಣ್ಣ ದೇರಣ್ಣ ಸಭಾಭವನದ ಬಳಿಯಿಂದ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ 3.30ಕ್ಕೆ ಸರಿಯಾಗಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ಸಿಗಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಶಾಸಕ ಸಂಜೀವ ಮಠಂದೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರು ತೆಂಗಿನಕಾಯಿ ಒಡೆದು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಜಯಂತ್ಯೋತ್ಸವ ಸಂಸ್ಮರಣೆ : ಜ. 21ರಂದು ಸಂಜೆ ವೈಭವದ ಹೊರೆಕಾಣಿಕೆ ಮೆರವಣಿಗೆ Read More »

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣೆಯಂದು ನಡೆಯಲಿದೆ ಭವ್ಯ ಶೋಭಾಯಾತ್ರೆ | ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ ವೈವಿಧ್ಯಮಯ ಸ್ತಬ್ಧಚಿತ್ರಗಳು

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಜ. 22ರಂದು ನಡೆಯಲಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಸಮಾರಂಭಕ್ಕೆ ಪೂರ್ವಭಾವಿಯಾಗಿ ಭವ್ಯ ಶೋಭಾಯಾತ್ರೆ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ದರ್ಬೆ ವೃತ್ತದಿಂದ ದೇವರಮಾರು ಗದ್ದೆಯವರೆಗೆ ನಡೆಯಲಿರುವ ಶೋಭಾಯಾತ್ರೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಜೊತೆಯಲ್ಲಿ ಮಹಾಸಂಸ್ಥಾನದ ಎಲ್ಲಾ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಮೆರವಣಿಗೆ ಆಕರ್ಷಕವಾಗಿ ಮೂಡಿಬರುವಂತಾಗಲು ವಿವಿಧ ಸ್ತಬ್ದಚಿತ್ರಗಳು ಮೆರುಗು ನೀಡಲಿವೆ. ಸ್ತಬ್ಧಚಿತ್ರಗಳ್ಯಾವುವು:ಮುಂಭಾಗದಿಂದ ಶೋಭಾಯಾತ್ರೆಯ ಮಾಹಿತಿಯನ್ನು ಸಾರುತ್ತಾ,

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣೆಯಂದು ನಡೆಯಲಿದೆ ಭವ್ಯ ಶೋಭಾಯಾತ್ರೆ | ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ ವೈವಿಧ್ಯಮಯ ಸ್ತಬ್ಧಚಿತ್ರಗಳು Read More »

error: Content is protected !!
Scroll to Top