ಆರ್ಯಾಪು ದೇವರ ಗ್ರಾಮ | ಕಾರ್ಪಾಡಿ ದೇವರ ಬಾಲಾಲಯ ಪ್ರತಿಷ್ಠಾ ಸಭಾ ಕಾರ್ಯಕ್ರಮದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ
ಪುತ್ತೂರು: ಕೇರಳ ಹೇಗೆ ದೇವರ ರಾಜ್ಯವೋ, ಹಾಗೇ ಆರ್ಯಾಪು ದೇವರ ಗ್ರಾಮ. ಆದ್ದರಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರ ಕಾರ್ಯ ಸುಗಮವಾಗಿ ನಡೆಯಲಿದ್ದು, ಭಕ್ತರ ಸಮರ್ಪಣಾ ಭಾವ ಇಲ್ಲಿ ಅಗತ್ಯ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ದೇವರ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ವ್ಯವಸ್ಥೆಯೊಂದಿಗೆ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರ ಕಾರ್ಯಕ್ಕೆ […]