ದಕ್ಷಿಣ ಕನ್ನಡದ ಅತಿ ದೊಡ್ಡ ಚಿನ್ನದ ಮಳಿಗೆ ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯು ವಿಸ್ತರಿತ ನವೀಕೃತ ಮಳಿಗೆ ಪುನರಾರಂಭ | ಏ.20 ರಂದು ಮುಳಿಯ ಆರಂಭೋತ್ಸವಕ್ಕೆ ಚಾಲನೆ
ಪುತ್ತೂರು: ದಕ್ಷಿಣ ಕನ್ನಡದ ಅತಿದೊಡ್ಡ ಚಿನ್ನದ ಮಳಿಗೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯು ವಿಸ್ತರಿತ ನವೀಕೃತ ಮಳಿಗೆಯಲ್ಲಿ ಪುನರಾರಂಭಗೊಳ್ಳುತ್ತಿದೆ. ಇದರ ಲೋಕಾರ್ಪಣೆ ಮತ್ತು ಮುಳಿಯ ಆರಂಭೋತ್ಸವ ಏ.20 ಭಾನುವಾರ ಚಾಲನೆಗೊಳ್ಳಲಿದೆ ಎಂದು ಸಂಸ್ಥೆಯ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ. ಮಂಗಳವಾರ ಮುಳಿಯ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳಿಯ ಸಂಸ್ಥೆಯ ಬ್ರ್ಯಾಂಡ್ ಅಂಬಾಸೀಡರ್ ಆಗಿರುವ ಚಿತ್ರನಟ ರಮೇಶ್ ಅರವಿಂದ್ ಅವರು […]










