ಪುತ್ತೂರು

54 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ |  ನಾಳೆ ಬೆಳಗ್ಗೆ 11ಗಂಟೆಗೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 54ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.15 ಮಂಗಳವಾರದಂದು ಬೆಳಗ್ಗೆ 11:00 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.

54 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ |  ನಾಳೆ ಬೆಳಗ್ಗೆ 11ಗಂಟೆಗೆ ಚಿತ್ರ ಪ್ರದರ್ಶನ Read More »

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ

ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಇಡೀ ದೇಶಕ್ಕೆ ದಾರಿದೀಪವಾದ ಡಾ..ಬಿ.ಆರ್.ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅದರಲ್ಲೂ ಮಹಿಳೆಯರು ಶಿಕ್ಷಣದಲ್ಲಿ ಮುಂದೆ ಬರಬೇಕು ಎಂಬ ಚಿಂತನೆಯನ್ನಿಟ್ಟುಕೊಂಡು ಅದನ್ನು ಕಾರ್ಯರೂಪಕ್ಕೆ

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಬನ್ನೂರು: ಕೃಷ್ಣ ನಗರ ಅಲುಂಬುಡದಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏ.14 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಜಿಲ್ಲಾ ದಸ್ತಾವೇಜು ಬರಹಗಾರರಾದ ಬಾಲಚಂದ್ರ ಸೊರಕೆಯವರು ದೀಪ ಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಬಳಿಕ ಮಾತನಾಡುತ್ತಾ ಅಂಬೇಡ್ಕರ್ ಅವರ ಜೀವನ ಮೌಲ್ಯಗಳನ್ನು ಮತ್ತು ಸಂವಿಧಾನದ ರೂಪುರೇಷೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಮಾನ ನಾಗರಿಕ ಸಂಹಿತೆ ಜಾರಿಯಾಗದ ಹೊರತು ಎಲ್ಲರಲ್ಲೂ ಸಮಾನ ಮನೋಭಾವ ಬೆಳೆಯಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ನಾವೆಲ್ಲರೂ ಸಮಾನರು ಎಂಬ ಭಾವನೆ ಎಲ್ಲರ ಮನಸ್ಸಿನಲ್ಲಿ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ವಿಷುಕಣಿ ಬಲಿ ಉತ್ಸವ –ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ

ಪುತ್ತೂರು: ವಿಷುಕಣಿ ದಿನವಾದ ಸೋಮವಾರ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳ ಗಡಣವೇ ತುಂಬಿತ್ತು. ವಿಷುಕಣಿ ಹಬ್ಬದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ವಿಷುಕಣಿ ಬಲಿ ಉತ್ಸವ ನಡೆಯಿತು. ಬೆಳಿಗ್ಗೆ ಶ್ರೀ ದೇವಸ್ಥಾನದ ಗರ್ಭಗುಡಿಯಲ್ಲಿ ಕಣಿ ಇಡಲಾಯಿತು. ಬಳಿಕ ಒಳಾಂಗಣದಲ್ಲಿ ವಿಷುಕಣಿ ಬಲಿ ಉತ್ಸವ ನಡೆಯಿತು. ಒಳಾಂಗಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತುಂಬಿದ್ದು, ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ದೇವಸ್ಥಾನ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‍,

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ವಿಷುಕಣಿ ಬಲಿ ಉತ್ಸವ –ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ Read More »

ಆಶೀರ್ವಾದ್‍ ಫರ್ನಿಚರ್ ಮಳಿಗೆಗೆ ಬೆಂಕಿ

ಪುತ್ತೂರು: ದರ್ಬೆ ಬಳಿ ಕಾರ್ಯನಿರ್ವಹಿಸುತ್ತಿದ್ದ ಆಶೀರ್ವಾದ್ ಫರ್ನಿಚರ್ ಮಳಿಗೆಯಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.

ಆಶೀರ್ವಾದ್‍ ಫರ್ನಿಚರ್ ಮಳಿಗೆಗೆ ಬೆಂಕಿ Read More »

53ನೇ ದಿನಕ್ಕೆ ಕಾಲಿಟ್ಟ ಭಾವ ತೀರ ಯಾನ ಸಿನಿಮಾ | ನಾಳೆ ಬೆಳಗ್ಗೆ 11 ಗಂಟೆಗೆ ಶೋ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಅದ್ಭುತವಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಏ.14 ರಂದು ಬೆಳಗ್ಗೆ 11 ರ ಸಮಯಕ್ಕೆ  ಶೋ ನೀಡಲು ನಿರ್ಧರಿಸಲಾಗಿದೆ.

53ನೇ ದಿನಕ್ಕೆ ಕಾಲಿಟ್ಟ ಭಾವ ತೀರ ಯಾನ ಸಿನಿಮಾ | ನಾಳೆ ಬೆಳಗ್ಗೆ 11 ಗಂಟೆಗೆ ಶೋ Read More »

ಏ.20 : ಮುಳಿಯ ಗೋಲ್ಡ್ ಅಂಡ್ ಡೈಮಂಡ್  ನವೀಕೃತ  ವಿಸ್ತೃತ ಶೋರೂಮ್ | ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಎಂಟು ದಶಕಗಳ ಇತಿಹಾಸ ಮತ್ತು ಪರಂಪರೆಯ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಪುತ್ತೂರಿನಲ್ಲಿ  ತನ್ನ ನವೀಕೃತ  ವಿಶಾಲವಾದ ಶೋರೂಮ್ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ. ಈ ಶೋರೂಮ್ ನಾಲ್ಕು  ಅಂತಸ್ತಿನ ಮಹಡಿಯಾಗಿದ್ದು  ಮತ್ತಷ್ಟು ವಿವಿಧ ವಿನ್ಯಾಸಗಳ ಆಭರಣಗಳ ಸಂಗ್ರಹದೊಂದಿಗೆ ಗ್ರಾಹಕರ ಸೇವೆಗಾಗಿ  ಸಿದ್ಧವಾಗಿದೆ. ಏ. 20 ರಂದು  ಉದ್ಘಾಟನೆ ಗೊಳ್ಳಲಿರುವ  ನಿಟ್ಟಿನಲ್ಲಿ ಆಮಂತ್ರಣ ಪತ್ರ ವನ್ನು ಭಾನುವಾರ ಮುಳಿಯ ಸಂಸ್ಥೆಯ ಹಿರಿಯ ದಿಗ್ದರ್ಶಕರಾದ ಸರಾಫ್ ಮುಳಿಯ ಶ್ಯಾಮ್ ಭಟ್ ಬಿಡುಗಡೆಗೊಳಿಸಿದರು. ಸಂಸ್ಥೆಯ ನಿರ್ದೇಶಕಿಯರಾದ ಕೃಷ್ಣವೇಣಿ ಪ್ರಸಾದ್ ಮುಳಿಯ,

ಏ.20 : ಮುಳಿಯ ಗೋಲ್ಡ್ ಅಂಡ್ ಡೈಮಂಡ್  ನವೀಕೃತ  ವಿಸ್ತೃತ ಶೋರೂಮ್ | ಆಮಂತ್ರಣ ಪತ್ರ ಬಿಡುಗಡೆ Read More »

51 ದಿನಕ್ಕೆ ಕಾಲಿಟ್ಟ ಭಾವ ತೀರ ಯಾನ | ಇಂದು (ಏ.13) ಬೆಳಿಗ್ಗೆ 11 ಗಂಟೆಗೆ ಶೋ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ 51ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಯಶಸ್ವಿಯಾಗಿ ಮುನ್ನಡೆಯುವ ಮೂಲಕ ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇಂದು (ಏ.1) ಭಾನುವಾರ ಬೆಳಿಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.

51 ದಿನಕ್ಕೆ ಕಾಲಿಟ್ಟ ಭಾವ ತೀರ ಯಾನ | ಇಂದು (ಏ.13) ಬೆಳಿಗ್ಗೆ 11 ಗಂಟೆಗೆ ಶೋ Read More »

ಬಾರ್ಯ ಪ್ರಶಸ್ತಿಯಿಂದ ಸಮಾಜಕ್ಕೆ ಉತ್ತಮ ಸಂದೇಶ: ಸಂಜೀವ ಮಠಂದೂರು | ಬಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು: ಗುರು ಹಿರಿಯರ ಸಂಸ್ಮರಣೆಯ ಮೂಲಕ ಸಾಧಕರನ್ನು ಗೌರವಿಸುವ ಕಾರ್ಯವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ ಎಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠoದೂರು ತಿಳಿಸಿದರು. ಪುತ್ತೂರು ಪರ್ಲಡ್ಕ ಅಗಸ್ತ್ಯ ನಿವಾಸದಲ್ಲಿ ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ವತಿಯಿಂದ ಜರಗಿದ 27ನೇ ವರ್ಷದ ಬಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಪುತ್ತೂರು ಆದರ್ಶ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ವೈ ಸುಬ್ರಾಯ ಭಟ್ ಅವರಿಗೆ ಬಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ

ಬಾರ್ಯ ಪ್ರಶಸ್ತಿಯಿಂದ ಸಮಾಜಕ್ಕೆ ಉತ್ತಮ ಸಂದೇಶ: ಸಂಜೀವ ಮಠಂದೂರು | ಬಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ Read More »

ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಸಮಿತಿ ರಚನೆ | ಅಧ್ಯಕ್ಷರಾಗಿ ಜಿನ್ನಪ್ಪ ಪೂಜಾರಿ ಆಯ್ಕೆ

ಪುತ್ತೂರು: ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನಿರ್ದೇಶನದನ್ವಯ ಪುತ್ತೂರಿನಾದ್ಯಂತ ಧರ್ಮಶಿಕ್ಷಣ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಗ್ರಾಮಸ ಮಿತಿಗಳು ರೂಪುದಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಸಮಿತಿಯನ್ನು ರಚಿಸಲಾಯಿತು. ಬೆಳ್ಳಿಪ್ಪಾಡಿಯ ಸುಬ್ರಹ್ಮಣ್ಯ ಭಜನಾ ಮಂಡಳಿ ಕೇಂದ್ರಿತವಾಗಿ ಸಮಿತಿ ರಚಿಸಲಾಗಿದೆ. ಸ್ಥಳೀಯರಾದ ಜಿನ್ನಪ್ಪ ಪೂಜಾರಿ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ್ ಗೌಡ ಡಿ.ವಿ., ಉಪಾಧ್ಯಕ್ಷರಾಗಿ ಲಕ್ಷ್ಮಣ ಗೌಡ, ಕಾರ್ಯದರ್ಶಿಯಾಗಿ ರಾಮಣ್ಣ ಗೌಡ, ಜತೆ ಕಾರ್ಯದರ್ಶಿಯಾಗಿ ಮೋಹನ್ ಪಕಳ, ಸಂಚಾಲಕರಾಗಿ ವಸಂತ ಕೈಲಾಜೆ, ಖಜಾಂಚಿಯಾಗಿ ಚಂದನ್ ತೆಂಕಪಾಡಿ,

ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಸಮಿತಿ ರಚನೆ | ಅಧ್ಯಕ್ಷರಾಗಿ ಜಿನ್ನಪ್ಪ ಪೂಜಾರಿ ಆಯ್ಕೆ Read More »

error: Content is protected !!
Scroll to Top