ಪುತ್ತೂರು

 ಬಪ್ಪಳಿಗೆ ಬಿ. ಅಬ್ದುಲ್ ರಹಿಮಾನ್ ನಿಧನ

ಪುತ್ತೂರು : ಪುತ್ತೂರು ಕೇಂದ್ರ ಜುಮಾ ಮಸೀದಿ ಜಮಾಅತ್ ಗೆ ಒಳಪಟ್ಟ ಪುತ್ತೂರಿನ ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿಯ ಆಡಳಿತ ಸಮಿತಿ ಮಾಜಿ ಅಧ್ಯಕ್ಷರಾದ  ಬನ್ನೂರು ನಿವಾಸಿ ಅಬ್ದುಲ್‍ ರಹಿಮಾನ್‍ ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರು ಪುರಸಭೆಯ ಮಾಜಿ ಕೌನ್ಸಿಲರ್ ಮತ್ತು ಪುತ್ತೂರು ಪುರಸಭೆಯ ಸ್ಥಾಯೀ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರಿಗೆ ಪುತ್ರ ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.

 ಬಪ್ಪಳಿಗೆ ಬಿ. ಅಬ್ದುಲ್ ರಹಿಮಾನ್ ನಿಧನ Read More »

ಮೇ 28 : ಕರಾವಳಿಯಾದ್ಯಂತ ‘ಗಂಟ್ ಕಲ್ವೆರ್’ ತುಳು ಸಿನೆಮಾ ಬಿಡುಗಡೆ

ಪುತ್ತೂರು : ಸ್ನೇಹ ಕೃಪಾ ಮೂವೀಸ್ ಲಾಂಛನದಲ್ಲಿ ತಯಾರಾದ ಕಲಾಸಾರ್ವಭೌಮ  ಸುಧಾಕರ ಬನ್ನಂಜೆ ಕಥೆ- ಚಿತ್ರಕಥೆ ಸಂಭಾಷಣೆ ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿರುವ ‘ಗಂಟ್ ಕಲ್ವೆರ್’ ಚಿತ್ರ ಮೇ 28 ರಂದು ತುಳುನಾಡನಾದ್ಯಂತ ಬಿಡುಗಡೆ ಯಾಗಲಿದೆ ಎಂದು ಸಿನೆಮಾ ನಿರ್ದೇಶಕ ಸುಧಾಕರ ಬನ್ನಂಜೆ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನ ಭಾರತ್ ಸಿನಿಮಾಸ್, ಕಲ್ಪನಾ, ಮಣಿಪಾಲ, ಪಡುಬಿದ್ರೆ, ಪುತ್ತೂರು, ದೇರಳಕಟ್ಟೆಯ ಭಾರತ್ ಸಿನಿಮಾಸ್, ಮಣಿಪಾಲದ  ಐನಾಕ್ಸ್, ಕಾರ್ಕಳದ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯ ಭಾರತ್, ಸುರತ್ಕಲ್ ನ ನಟರಾಜ್

ಮೇ 28 : ಕರಾವಳಿಯಾದ್ಯಂತ ‘ಗಂಟ್ ಕಲ್ವೆರ್’ ತುಳು ಸಿನೆಮಾ ಬಿಡುಗಡೆ Read More »

ಮೇ 25 : ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’ | ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಹಾಗೂ ಪುತ್ತೂರು ಘಟಕ ಸಹಯೋಗದಲ್ಲಿ

ಪುತ್ತೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಹಾಗೂ ಪುತ್ತೂರು ಘಟಕದ ಜಂಟಿ ಆಶ್ರಯದಲ್ಲಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸಹಕಾರದೊಂದಿಗೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’ ಮೇ 25 ಭಾನುವಾರ ಸುದಾನ ವಸತಿಯುತ ಶಾಲಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಯುವವಾಹಿನಿ ಪುತ್ತೂರು ಘಟಕದ ಕಾರ್ಯಕ್ರಮ ಸಂಚಾಲಕ ಪ್ರಭಾಕರ ಸಾಲ್ಯಾನ್‍ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸಮಿತಿ ಹಾಗೂ ಪುತ್ತೂರು ಘಟಕ ಸೇರಿದಂತೆ ಸುಮಾರು

ಮೇ 25 : ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’ | ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಹಾಗೂ ಪುತ್ತೂರು ಘಟಕ ಸಹಯೋಗದಲ್ಲಿ Read More »

ಪೆಟ್ರೋಲ್ ಹಾಕಿ ಹಣ ನೀಡದೇ ಪರಾರಿಯಾದ ಯುವಕರು | ಪರಾರಿಯಾಗುವ ಭರದಲ್ಲಿ ಅಪಘಾತ, ಪೊಲೀಸ್‍ ವಶಕ್ಕೆ

ವಿಟ್ಲ:ಪೆಟ್ರೋಲ್‍ ಬಂಕ್‍ ಗೆ ಆಲ್ಟೋ ಕಾರಿನಲ್ಲಿ ಬಂದ ಇಬ್ಬರು ಮದ್ಯ ವ್ಯಸನಿಗಳು ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರರಾರಿಯಾದ ಸಂದರ್ಭ ಬೈಕ್‍ ಹಾಗೂ ಪಿಕಪ್‍ ವಾಹನಗಳಿಗೆ ಡಿಕ್ಕಿಯಾಗಿ ಸಿಕ್ಕಿಬಿದ್ದ ಘಟನೆ ಮಂಗಳವಾರ ಸಂಜೆ ವಿಟ್ಲ ಸಾಲೆತ್ತೂರು ಸಮೀಪದ ವಾಲ್ತಾಜೆಯಲ್ಲಿ ನಡೆದಿದೆ. ಆರೋಪಿಗಳಿಬ್ಬರು ಹಿಂದಿ ಭಾಷಿಕರಾಗಿದ್ದು, ಪೆಟ್ರೋಲ್ ಹಾಕಿಸಿ ಹಣ ನೀಡದೇ ಸಾಲೆತ್ತೂರು ಮೂಲಕ ಪರಾರಿಯಾಗುತ್ತಿದ್ದಾಗ ಪಾಲ್ತಾಜೆಯಲ್ಲಿ ಆಕ್ಟಿವಾ ಮತ್ತು ಪಿಕಪ್ ವಾಹನಕ್ಕೆ ಆಲ್ಟೋ ಕಾರು ಢಿಕ್ಕಿಯಾಗಿದೆ.  ಆಕ್ಟಿವಾ ಸವಾರ ಕಟ್ಟತ್ತಿಲ ನಿವಾಸಿ ಅಬೂಬಕ್ಕರ್ ಗೆ  ಗಂಭೀರ ಗಾಯಗೊಂಡಿದ್ದಾರೆ.

ಪೆಟ್ರೋಲ್ ಹಾಕಿ ಹಣ ನೀಡದೇ ಪರಾರಿಯಾದ ಯುವಕರು | ಪರಾರಿಯಾಗುವ ಭರದಲ್ಲಿ ಅಪಘಾತ, ಪೊಲೀಸ್‍ ವಶಕ್ಕೆ Read More »

ಆರ್ ಎಸ್‍ ಎಸ್‍ ಹಿರಿಯ ಕಾರ್ಯಕರ್ತ, ನಾಟಿ ವೈದ್ಯ, ಪ್ರತಿಷ್ಠಿತ ಕಳುವಾಜೆ ಮನೆತನದ ಜಿನ್ನಪ್ಪ ಗೌಡ ಕಳುವಾಜೆ ನಿಧನ

ಪುತ್ತೂರು: ಕಡಬ ತಾಲೂಕಿನ ಕೃಷಿ ಕುಟುಂಬದ ನಾಟಿವೈದ್ಯ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಕಳುವಾಜೆ ಜಿನ್ನಪ್ಪ ಗೌಡರು ಇಂದು ಕಾಯ ತ್ಯಜಿಸಿದರು. ಎರಡು ದಿನಗಳ ಹಿಂದೆ ಮೆದುಳಿನ ವೈಫಲ್ಯ ಅವರನ್ನು ಬಾಧಿಸಿತ್ತು. ಕಳುವಾಜೆ ಮನೆತನದ ಪ್ರಸಿದ್ಧ ನಾಟಿ ವೈದ್ಯರಾಗಿದ್ದ ದಿ. ಸೋಮಪ್ಪ – ಬಾಲಕ್ಕ ದಂಪತಿಗಳ ಹಿರಿಯ ಮಗನಾಗಿ 1943ರ ಜನವರಿ 20ರಂದು ಜನಿಸಿದ ಕಳುವಾಜೆ ಜಿನ್ನಪ್ಪ ಗೌಡರಿಗೆ 82 ವರ್ಷ ವಯಸ್ಸಾಗಿತ್ತು. ಪತ್ನಿ ಶ್ರೀಮತಿ ಜಾನಕಿ ಬಂಡಾಜೆಯವರೊಂದಿಗಿನ ದಾಂಪತ್ಯದಲ್ಲಿ ಯಮುನಾ, ಜಯಂತಿ, ಭಾಸ್ಕರ

ಆರ್ ಎಸ್‍ ಎಸ್‍ ಹಿರಿಯ ಕಾರ್ಯಕರ್ತ, ನಾಟಿ ವೈದ್ಯ, ಪ್ರತಿಷ್ಠಿತ ಕಳುವಾಜೆ ಮನೆತನದ ಜಿನ್ನಪ್ಪ ಗೌಡ ಕಳುವಾಜೆ ನಿಧನ Read More »

ಜಾನಪದ ವಿದ್ವಾಂಸ ಡಾ.ಚಿನ್ನಪ್ಪ ಗೌಡ ಸಾಹಿತ್ಯದ “ದರಿಪು ದೈವ ನಿಲೆ ಪದಿನಾಜಿ ಕಟ್ಟಲೆ” ಆಲ್ಬಮ್‍ ಸಾಂಗ್‍ ಬಿಡುಗಡೆ

ಪುತ್ತೂರು: ಐಲೇಸಾ ದಿ ವಾಯ್ಸ್ ಆಪ್ ಓಶನ್ (ರಿ) ಶಿವಾಲಯ ಫೌಂಡೇಶನ್ ಮುಂಬೈ ಸಹಕಾರದಿಂದ ಜನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ ಅವರ ಸಾಹಿತ್ಯದಲ್ಲಿ ರಚನೆಯಾದ ಆಲ್ಬಮ್‍ ಸಾಂಗ್‍ “ದರಿಪು ದೈವ ನಿಲೆ ಪದಿನಾಜಿ ಕಟ್ಟಲೆ” ಭಾನುವಾರ ಸಂಜೆ ಬಿಡುಗಡೆಗೊಂಡಿತು. ನಿಟ್ಟೆ ಯುನಿರ್ವಸಿಟಿ ಉಪಕುಲಪತಿ ಡಾ.ಸತೀಶ್‍ ಕುಮಾರ್ ಭಂಡಾರಿ ಆಲ್ಬಂ ಸಾಂಗ್‍ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿವಾಯ ಫೌಂಡೇಶ್‍ ನ  ಅಧ್ಯಕ್ಷ ಪ್ರಶಾಂತ್‍ ಶೆಟ್ಟಿ ಪಲಿಮಾರ್, ಮೆಡಿಕಲ್‍ ಸಲಹೆಗಾರ್ತಿ

ಜಾನಪದ ವಿದ್ವಾಂಸ ಡಾ.ಚಿನ್ನಪ್ಪ ಗೌಡ ಸಾಹಿತ್ಯದ “ದರಿಪು ದೈವ ನಿಲೆ ಪದಿನಾಜಿ ಕಟ್ಟಲೆ” ಆಲ್ಬಮ್‍ ಸಾಂಗ್‍ ಬಿಡುಗಡೆ Read More »

19ರ ಕೆಳಗಿನ ಜಿಲ್ಲಾ ತಂಡಕ್ಕೆ ತೇಜಸ್ ಎಸ್‍. ಕೈಕಂಬ ಆಯ್ಕೆ

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ತೇಜಸ್ ಸುಬ್ಬಪ್ಪ ಕೈಕಂಬ ಇವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್’ ನ 19ರ ವಯೋಮಾನದ ಕೆಳಗಿನ ವಿಭಾಗದ ಅಂತರ್ಜಿಲ್ಲಾ ಕ್ರಿಕೆಟ್ ಪಂದ್ಯಾಟದ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದಾರೆ ಪುತ್ತೂರು ಜಿಡೆಕಲ್ಲಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಅವರ ಸುಪುತ್ರನಾದ ತೇಜಸ್ ಅವರು ಹರೀಶ್, ಕಿರಣ್ ಮತ್ತು ನವೀನ್ ಅವರ ಬಳಿ ತರಬೇತಿ ಪಡೆದಿದ್ದು ಪ್ರಸ್ತುತ ಇಲ್ಯಾಸ್ ಪಿಂಟೋ ಅವರಿಂದ ತರಬೇತಿ

19ರ ಕೆಳಗಿನ ಜಿಲ್ಲಾ ತಂಡಕ್ಕೆ ತೇಜಸ್ ಎಸ್‍. ಕೈಕಂಬ ಆಯ್ಕೆ Read More »

ಅಮರ್ ಲೈಟಿಂಗ್ಸ್ ಮಾಲಕ ರವೀಂದ್ರ ನಿಧನ

ಪುತ್ತೂರು: ಅಮರ್ ಲೈಟಿಂಗ್ಸ್ ನ ಮಾಲಕ, ನೆಲ್ಲಿಕಟ್ಟೆ ನಿವಾಸಿ ರವೀಂದ್ರ ಅನಾರೋಗ್ಯದಿಂದ ಸೋಮವಾರ ನಿಧನರಾದರು. ನೆಲ್ಲಿಕಟ್ಟೆಯಲ್ಲಿ ಅಮರ್ ಲೈಟಿಂಗ್ಸ್ ಸಂಸ್ಥೆಯನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಅವರು, ನೆಲ್ಲಿಕಟ್ಟೆ  ಮಿತ್ರ ಮಂಡಲದ  ಹಿರಿಯ ಸದಸ್ಯರಾಗಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಅಮರ್ ಲೈಟಿಂಗ್ಸ್ ಮಾಲಕ ರವೀಂದ್ರ ನಿಧನ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ’ರಿಸರ್ಚ್ ಇನ್ಫೋರ್ಮೇಟಿಕ್ಸ್: ಸಂಶೋಧನಾ ವಿಧಾನಕ್ರಮ, ಸಂಶೋಧನಾ ಬರಹ’ ಕಾರ್ಯಗಾರ

ಪುತ್ತೂರು: ’ರಿಸರ್ಚ್‌ ಇನ್ಫೋರ್ಮೇಟಿಕ್ಸ್ :  ಸಂಶೊಧನಾ ವಿಧಾನಶಾಸ್ತ್ರ ಮತ್ತು ಸಂಶೋಧನಾ ಬರಹ’ ವಿಷಯದಲ್ಲಿ ಒಂದು ದಿವಸದ ಕಾರ್ಯಗಾರವ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ  ರಿಸರ್ಚ್‌ಡೆವಲಪ್ ಮೆಂಟ್ಟ್ ಸೆಲ್ಲ್, ಇನ್ಸ್ಟಿಟ್ಯೂಶನ್ ಇನ್ನೋವೇಸನ್ ಕೌನ್ಸಿಲ್ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಸಹಯೋಗದಲ್ಲಿ ಹೊಸ ಸಂಶೋಧಕರನ್ನುಉತ್ತೇಜಿಸುವ ಹಾಗೂ ಅದ್ಯಾಪಕರ ಸಂಶೋಧನಾ ಕೌಸಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ನಡೆಸಲಾಯಿತು. ಕಾಲೇಜಿನ ಪ್ರಾಚಾರ್ಯ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ತಯಾರಾಗದೆ ಇದ್ದರೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಲು

ಸಂತ ಫಿಲೋಮಿನಾ ಕಾಲೇಜಿನಲ್ಲಿ’ರಿಸರ್ಚ್ ಇನ್ಫೋರ್ಮೇಟಿಕ್ಸ್: ಸಂಶೋಧನಾ ವಿಧಾನಕ್ರಮ, ಸಂಶೋಧನಾ ಬರಹ’ ಕಾರ್ಯಗಾರ Read More »

ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್‍ : ಬೈಕ್‍ ಸವಾರ ಮೃತ್ಯು

ಪುತ್ತೂರು: ಶಾಮಿಯಾನ ಲಾರಿಗೆ ಹಿಂದಿನಿಂದ ಬೈಕ್‍ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ ಸವಾರ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಸುದೀಪ್‍ ಚೊಕ್ಕಾಡಿ ಮೃತಪಟ್ಟ ಬೈಕ್‍ ಸವಾರ ಗಂಭೀರ ಗಾಯಗೊಂಡ ಸುದೀಪ್‍ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸುದೀಪ್‍ ಮುರ ಸಮೀಪ ಆಯುರ್ವೇದಿಕ್‍ ಔಷಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್‍ : ಬೈಕ್‍ ಸವಾರ ಮೃತ್ಯು Read More »

error: Content is protected !!
Scroll to Top