ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 250000 ಮೊತ್ತದ ಚೆಕ್ ಹಸ್ತಾಂತರ | ದೇಶದ ರಕ್ಷಣೆಯ ತುಡಿತ ಪ್ರತಿ ಭಾರತೀಯನಲ್ಲಿ ಸದಾ ಇರಬೇಕು : ಚಂದಪ್ಪ ಮೂಲ್ಯ
ಉಪ್ಪಿನಂಗಡಿ : ಭಾರತದ ರಕ್ಷಣಾ ಬಲಕ್ಕೆ ಶಕ್ತಿ ತುಂಬುವ ಸಲುವಾಗಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ ರೂ.250000/- ಮೊತ್ತ ಚೆಕ್ ನ್ನು ನಿವೃತ್ತ ಸೈನ್ಯಾಧಿಕಾರಿ ಚಂದಪ್ಪ ಮೂಲ್ಯ ಅವರ ಮುಖಾಂತರ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಂದಪ್ಪ ಮೂಲ್ಯ, ನಿವೃತ್ತ ಸೈನಿಕನಾಗಿ ದೇಶದ ರಕ್ಷಣೆಗಾಗಿ ಹೋರಾಟ ಮಾಡಲು ಸದಾ ಸಿದ್ಧ. ಭಾರತ ಜಗತ್ತಿನಲ್ಲಿ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಆಧುನಿಕ ಯುದ್ಧ ತಂತ್ರಜ್ಞಾನ ಬಳಕೆಯೊಂದಿಗೆ ಶತ್ರು ರಾಷ್ಟ್ರದೊಳಗೆ ನುಗ್ಗಿ ದಾಳಿ ಮಾಡುವಂತಹ […]










