ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳ ಖರೀದಿಗೆ ಸಹಾಯ ಧನ – ವಿವಿಧ ಕೃಷಿಗೆ ಸಹಾಯ ಧನ | ತೋಟಗಾರಿಕೆ ಇಲಾಖೆ ಮಾಹಿತಿ
ಪುತ್ತೂರು: ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್ + ಮ್ಯಾಂಕೇಜೆಬ್, ಕಾಪರ್ ಸಲ್ವೇಟ್ (ಮೈಲು ತುತ್ತು) ಖರೀದಿಗೆ ಶೇಕಡಾ 30 ರಂತೆ ಪ್ರತೀ ಎಕರೆಗೆ ರೂ. 600 ಸಹಾಯಧನ ಲಭ್ಯವಿದೆ. ಪ್ರತಿ ರೈತರಿಗೆ 5 ಎಕರೆಗೆ ಗರಿಷ್ಟ 3000 ಸಹಾಯಧನ ನೀಡಲಾಗುವುದು. ರೈತರು ಅರ್ಜಿಯೊಂದಿಗೆ 1) ಅಧಿಕೃತ ಕೀಟನಾಶಕ ಮಾರಾಟ ಪರವಾನಿಗೆ ಇರುವ ಮಾರಾಟಗಾರರಿಂದ ಮೇಲಿನ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿ, ಜಿ.ಎಸ್.ಟಿ. ಬಿಲ್ಲು. […]










