ಪುತ್ತೂರು

ಇಂದು ಕೇಂದ್ರ ಗೃಹ ಸಚಿವ ಅಮಿತ್‍ ಶಾ ಪುತ್ತೂರಿಗೆ | ಕಾರ್ಯಕ್ರಮ ಹೀಗಿದೆ

ಪುತ್ತೂರು : ಅಮಿತ್‍ ಶಾ ಪುತ್ತೂರಿಗೆ ಭೇಟಿ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಮೂರು ಹೆಲಿಪ್ಯಾಡ್‍ಗಳನ್ನು ನಿರ್ಮಿಸಲಾಗಿದೆ. ಕೇರಳದ ಗಡಿ ಭಾಗದಲ್ಲಿರುವ ಹನುಮಗಿರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಅಮರಗಿರಿಯಲ್ಲಿ ಭಾರತ್‍ಮಾತಾ ಮಂದಿರವನ್ನು ಉದ್ಘಾಟಿಸುವರು. ಹೈದರಾಬಾದ್‍ನಿಂದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದು, ಅಲ್ಲಿಂದ ಬಿಎಎಸ್‍ಎಫ್‍ ಹೆಲಿಕ್ಯಾಪ್ಟರ್‍ನಲ್ಲಿ ಬರಲಿರುವ ಅಮಿತ್‍ ಶಾ ಅವರ ಹೆಲಿಕಾಪ್ಟರ್ ಲ್ಯಾಂಡ್‍ ಆಗಲು ಈಶ್ವರಮಂಗಲದ ಗಜಾನನ ಶಾಲಾ ಮೈದಾನದಲ್ಲಿ ಹೆಲಿಪ್ಯಾಡ್‍ ನಿರ್ಮಿಸಲಾಗಿದೆ. ಹನುಮಗಿರಿ ಕಾರ್ಯಕ್ರಮ ಮುಗಿಸಿ ಹೆಲಿಕ್ಯಾಪ್ಟರ್‍ನಲ್ಲಿ ಬರಲಿರುವ ಶಾ ಅವರು […]

ಇಂದು ಕೇಂದ್ರ ಗೃಹ ಸಚಿವ ಅಮಿತ್‍ ಶಾ ಪುತ್ತೂರಿಗೆ | ಕಾರ್ಯಕ್ರಮ ಹೀಗಿದೆ Read More »

ಕೇಂದ್ರ ಗೃಹಸಚಿವ ಅಮಿತ್ ಶಾ ಪುತ್ತೂರು ಭೇಟಿ | ವಾಹನ ಸಂಚಾರ ವ್ಯವಸ್ಥೆ ಬದಲಾವಣೆ ಹೀಗಿದೆ

ಪುತ್ತೂರು : ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಅಮಿತ್‍ ಶಾ ಆಗಮನದ ಹಿನ್ನಲೆಯಲ್ಲಿ ಫೆ. 11ರಂದು ಪುತ್ತೂರು ನಗರದಲ್ಲಿ ವಾಹನ ಸಂಚಾರ ಬದಲಿ ಮಾರ್ಗಸೂಚಿ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 273 ರ ಮಾಣಿ- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಮಧ್ಯಾಹ್ನ 2.30 ರಿಂದ ಸಂಜೆ 5.30ರವರೆಗೆ ನಿಷೇಧ ಮಾಡಲಾಗಿದೆ. ಮಂಜಲ್ಪಡ್ಪು ಬೈಪಾಸ್‍ ಜಂಕ್ಷನ್‍ನಿಂದ ಮುಕ್ರಂಪಾಡಿವರೆಗಿನ ರಸ್ತೆಯಲ್ಲಿ 2.30 ರಿಂದ ಸಂಜೆ 5.30ರವರೆಗೆ ವಾಹನ ಸಂಚಾರಕ್ಕೆ ನಿಷೇಧ. ಮಂಗಳೂರಿನಿಂದ ಮಡಿಕೇರಿಗೆ ಹೋಗುವ ವಾಹನಗಳು ಮಂಜಲ್ಪಡ್ಪು – ಬೊಳುವಾರು

ಕೇಂದ್ರ ಗೃಹಸಚಿವ ಅಮಿತ್ ಶಾ ಪುತ್ತೂರು ಭೇಟಿ | ವಾಹನ ಸಂಚಾರ ವ್ಯವಸ್ಥೆ ಬದಲಾವಣೆ ಹೀಗಿದೆ Read More »

ಅಮಿತ್ ಶಾ ಆಗಮನಕ್ಕೆ ಬಿಗಿ ಭದ್ರತೆ ಹೀಗಿದೆ | ಪಾರ್ಕಿಂಗ್, ಊಟದ ವ್ಯವಸ್ಥೆ ಬಗ್ಗೆಯೂ ಇಲ್ಲಿದೆ ಮಾಹಿತಿ

ಪುತ್ತೂರು : ಪ್ರತಿಷ್ಠಿತ ಅಂತರಾಜ್ಯ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಹಾಗೂ ಹನುಮಗಿರಿಯಲ್ಲಿ ಅಮರಗಿರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು  ಇಂದು (ಫೆ. 11) ಪುತ್ತೂರಿಗೆ ಕೇಂದ್ರ ಗೃಹ ಸಚಿವ, ದೇಶದ ಪ್ರಥಮ ಸಹಕಾರ ಸಚಿವ ಅಮಿತ್‍ ಶಾ ಭೇಟಿ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್‍ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‍ ನಿಯೋಜನೆ ಮಾಡಲಾಗಿದೆ. ಅಮಿತ್‍ ಶಾ ಸಹಿತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ರಾಜ್ಯದ ಹಲವು ಸಚಿವರು, ಜನಪ್ರತಿನಿಧಿಗಳು, ರಾಜಕೀಯ ನಾಯಕರುಗಳು

ಅಮಿತ್ ಶಾ ಆಗಮನಕ್ಕೆ ಬಿಗಿ ಭದ್ರತೆ ಹೀಗಿದೆ | ಪಾರ್ಕಿಂಗ್, ಊಟದ ವ್ಯವಸ್ಥೆ ಬಗ್ಗೆಯೂ ಇಲ್ಲಿದೆ ಮಾಹಿತಿ Read More »

ಪ್ರೊ.ಹರಿಣಾಕ್ಷಿ ಕೇವಳ ಅವರಿಗೆ ಪಿಹೆಚ್. ಡಿ. ಪದವಿ

ಪುತ್ತೂರು : ಉಡುಪಿಯ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಹರಿಣಾಕ್ಷಿ ಕೇವಳ ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಪಿಹೆಚ್. ಡಿ. ಪದವಿ ಲಭಿಸಿದೆ. ಅವರು “ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಕಥೆಗಳಲ್ಲಿಮಹಿಳೆ” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಡಾ. ಹರಿಣಾಕ್ಷಿ ಕೇವಳ ಅವರು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅವರ ಪತ್ನಿ.. ಅವರ ಹಿರಿಯ ಮಗ ಸುಜನ್ ಕೇವಳ ಉದ್ಯಮಿಯಾಗಿದ್ದು ಕಿರಿಯ

ಪ್ರೊ.ಹರಿಣಾಕ್ಷಿ ಕೇವಳ ಅವರಿಗೆ ಪಿಹೆಚ್. ಡಿ. ಪದವಿ Read More »

ಆರ್ಯಾಪು ದೇವರ ಗ್ರಾಮ | ಕಾರ್ಪಾಡಿ ದೇವರ ಬಾಲಾಲಯ ಪ್ರತಿಷ್ಠಾ ಸಭಾ ಕಾರ್ಯಕ್ರಮದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ

ಪುತ್ತೂರು: ಕೇರಳ ಹೇಗೆ ದೇವರ ರಾಜ್ಯವೋ, ಹಾಗೇ ಆರ್ಯಾಪು ದೇವರ ಗ್ರಾಮ. ಆದ್ದರಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರ ಕಾರ್ಯ ಸುಗಮವಾಗಿ ನಡೆಯಲಿದ್ದು, ಭಕ್ತರ ಸಮರ್ಪಣಾ ಭಾವ ಇಲ್ಲಿ ಅಗತ್ಯ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ದೇವರ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ವ್ಯವಸ್ಥೆಯೊಂದಿಗೆ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರ ಕಾರ್ಯಕ್ಕೆ

ಆರ್ಯಾಪು ದೇವರ ಗ್ರಾಮ | ಕಾರ್ಪಾಡಿ ದೇವರ ಬಾಲಾಲಯ ಪ್ರತಿಷ್ಠಾ ಸಭಾ ಕಾರ್ಯಕ್ರಮದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ Read More »

ಅಮಿತ್ ಶಾ ಪುತ್ತೂರಿಗೆ ಆಗಮನ ಹಿನ್ನಲೆ : ಮದ್ಯದಂಗಡಿಗಳ ಬಂದ್

ಪುತ್ತೂರು : ಫೆ.11 ಶನಿವಾರ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದದ ಅಂಗವಾಗಿ ಕೇಂದ್ರ ಗೃಹ, ಸಹಕಾರಿ ಸಚಿವ ಅಮಿತ್ ಶಾ ಪುತ್ತೂರಿಗೆ ಭೇಟಿ ಹಿನ್ನಲೆಯಲ್ಲಿ ಶನಿವಾರ ಬೆಳಿಗ್ಗೆ 12 ರಿಂದ ರಾತ್ರಿ 8 ಗಂಟೆ ತನಕ ಮದ್ಯದಂಗಡಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪುತ್ತೂರು ವಲಯ ವ್ಯಾಪ್ತಿಯಲ್ಲಿರುವ ಎಲ್ಲಾ ಮದ್ಯ, ಶೇಂದಿ ಮಾರಾಟ, ದಾಸ್ತಾನು, ಸಾಗಣಿಕೆಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ

ಅಮಿತ್ ಶಾ ಪುತ್ತೂರಿಗೆ ಆಗಮನ ಹಿನ್ನಲೆ : ಮದ್ಯದಂಗಡಿಗಳ ಬಂದ್ Read More »

ಫೆ.11 : ಅಮಿತ್ ಶಾ ಪುತ್ತೂರಿಗೆ ಆಗಮನ ಹಿನ್ನಲೆ : ಮಾರ್ಗ ಸೂಚಿ ಬಿಡುಗಡೆ

ಪುತ್ತೂರು : ಶನಿವಾರ ಪುತ್ತೂರಿಗೆ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಪುತ್ತೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಪುತ್ತೂರು ನಗರಕ್ಕೆ ಆಗಮಿಸುವ ವಾಹನಗಳಿಗೆ ಪರ್ಯಾಯ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಶನಿವಾರ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಮೈದಾನಕ್ಕೆ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಪುತ್ತೂರು ಹೊರತು ಪಡಿಸಿ ಹೊರವಲಯದಿಂದ ಬರುವ ಹಲವಾರು ವಾಹನಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಂದರ್ಭ ನಗರದಲ್ಲಿ ವಾಹನದಟ್ಟಣಿ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಸಂಚಾರ ರಸ್ತೆಗಳನ್ನು ಬದಲಿಸಿ ಪುತ್ತೂರು

ಫೆ.11 : ಅಮಿತ್ ಶಾ ಪುತ್ತೂರಿಗೆ ಆಗಮನ ಹಿನ್ನಲೆ : ಮಾರ್ಗ ಸೂಚಿ ಬಿಡುಗಡೆ Read More »

ಜನಮನ ಸೂರೆಗೊಂಡ ಕೃಷಿಯಂತ್ರ ಮೇಳದ ವಿವಿಧ ಮಳಿಗೆಗಳು

ಪುತ್ತೂರು :  ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್  ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ  ಬೃಹತ್ ಕೃಷಿಯಂತ್ರ ಮೇಳ-೨೦೨೩ ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಬೃಹತ್‍ ಕೃಷಿಯಂತ್ರ ಮೇಳ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದ್ದು, ರೈತಾಪಿ ವರ್ಗದಲ್ಲಿ  ಹುಮ್ಮಸ್ಸು ಹುಟ್ಟಿಸಿದೆ. ಈ ಮಳಿಗೆಯಲ್ಲಿ ಏನಿದೆ, ಏನಿಲ್ಲ ಕೃಷಿ ಚಟುವಟಿಕೆಗೆ ಸಹಕಾರಿಯಾಗುವ ಎಲ್ಲವೂ ಇದೆ. ಈ ನಿಟ್ಟಿನಲ್ಲಿ ವೀಕ್ಷಕದ ದಂಡೇ ಆಗಮಿಸುತ್ತಿದೆ. ಕೃಷಿತಂತ್ರ ಮಳಿಗೆಗಳಲ್ಲಿ ಡ್ರೋನ್ ತಂತ್ರಜ್ಞಾನ ಬಳಸಿ ಔಷ ಸಿಂಪಡಣೆ , ಪ್ರಾತ್ಯಕ್ಷಿಕೆ, ಅಡಕೆ ಕೊಯ್ಲು ದೋಟಿಗಳು, ಔಷಧ ಸಿಂಪಡಣೆಗೆ ಕಾರ್ಬನ್ ಫೈಬರ್ ದೋಟಿಯ ಪ್ರಾತ್ಯಕ್ಷಿಕೆ ಹಾಗೂ ಮಾರಾಟ, ಬ್ಯಾಟರಿ ಚಾಲಿತ ಕೃಷಿ ಯಂತ್ರೋಪಕರಣ, ಸಾವಯವ ಗೊಬ್ಬರ್  ಬಳಕೆ ವಿಧಾನ ಕುರಿತು ಮಾಹಿತಿ, ಮಾರಾಟ ಎಲ್ಲವೂ ಆಕರ್ಷಿತಗೊಂಡವು. ಮಂಗಳೂರು ವಿವಿ ಪ್ರವರ್ತಿತ ಪಾರಂಪರಿಕ ಗ್ರಾಮ  : ತುಳುನಾಡಿನ ಜನರು ಅನಾದಿ ಕಾಲದಿಂದ ಮಾಡಿಕೊಂಡು ಬಂದಿರುವ ಕುಲಕಸುಬು ವೈಭವವನ್ನು ಮತ್ತೊಮ್ಮೆ ಸಾರುವ ಪಾರಂಪರಿಕ ಗ್ರಾಮ ಮಳಿಗೆಯಲ್ಲಿ ಬೆತ್ತದಿಂದ ಬುಟ್ಟಿ, ತೆಂಗಿನ ಗರಿಯಿಂದ ಮಡಲು,  ಹೆಣೆಯುವುದು, ಕುಂಬಾರಿಕೆಯ ಮಣ್ಣಿನ ಮಡಕೆಗಳು,

ಜನಮನ ಸೂರೆಗೊಂಡ ಕೃಷಿಯಂತ್ರ ಮೇಳದ ವಿವಿಧ ಮಳಿಗೆಗಳು Read More »

ರಾಜಕೀಯ ಚಾಣಕ್ಯನ ಭೇಟಿ: ಗರಿಗೆದರಿದ ರಾಜಕೀಯ ಚಟುವಟಿಕೆ | ಭರದ ಸಿದ್ಧತೆ ಜೊತೆಗೆ ರಾಜಕೀಯ ಕುತೂಹಲ | ಶಾ ಭೇಟಿ ನೀಡಲಿದೆಯೇ ಬಿಜೆಪಿಗೆ ಹೊಸ ಧಿಕ್ಕು!

ಪುತ್ತೂರು: ಅಮಿತ್ ಶಾ ಭೇಟಿ ಪುತ್ತೂರಿಗೆ ಹೊಸ ರಂಗು ತಂದಿದೆ. ಉತ್ಸಾಹಕ್ಕೆ ಸಿಕ್ಕ ಯುವಕರು ಪೇಟೆಯಲ್ಲಿ ಮಾತ್ರವಲ್ಲ, ಗ್ರಾಮಾಂತರ ಭಾಗಗಳಲ್ಲೂ ಬಿಜೆಪಿ ಧ್ವಜ ಹಾರಿಸುತ್ತಿದ್ದಾರೆ. ಅಂದರೆ ಬಿಜೆಪಿಗೆ ಹೊಸ ಉತ್ಸಾಹ ಬಂದಿದ್ದು, ಇದು ರಾಜಕೀಯ ವಲಯದಲ್ಲೂ ಹೊಸ ಬಿರುಗಾಳಿ ಬೀಸುವ ಸಾಧ್ಯತೆಗಳು ದಟ್ಟವಾಗಿದೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕೃಷಿ ಯಂತ್ರ ಮೇಳ, ಹನುಮಗಿರಿಯಲ್ಲಿ ಅಮರಗಿರಿ ಲೋಕಾರ್ಪಣೆ ಹೀಗೆ ಸಾಲು ಸಾಲು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಗಮಿಸುತ್ತಿರುವ ಅಮಿತ್ ಶಾ ಅವರ ಭೇಟಿ ರಾಜಕೀಯವಾಗಿಯೂ

ರಾಜಕೀಯ ಚಾಣಕ್ಯನ ಭೇಟಿ: ಗರಿಗೆದರಿದ ರಾಜಕೀಯ ಚಟುವಟಿಕೆ | ಭರದ ಸಿದ್ಧತೆ ಜೊತೆಗೆ ರಾಜಕೀಯ ಕುತೂಹಲ | ಶಾ ಭೇಟಿ ನೀಡಲಿದೆಯೇ ಬಿಜೆಪಿಗೆ ಹೊಸ ಧಿಕ್ಕು! Read More »

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ 5ನೇ ಬೃಹತ್ ಕೃಷಿಯಂತ್ರ ಮೇಳ-2023 ಕ್ಕೆ ಚಾಲನೆ

ಪುತ್ತೂರು : ಕ್ಯಾಂಪ್ಕೋ ಲಿಮಿಟೆಡ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ 5ನೇ ಬೃಹತ್ ಕೃಷಿ ಯಂತ್ರಮೇಳ ಮತ್ತು ಕನಸಿನ ಮನೆ ಉದ್ಘಾಟನಾ ಸಮಾರಂಭಕ್ಕೆ ಶುಕ್ರವಾರ ನೆಹರೂನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು. ರೈತರಿಗೆ ನೀಡುವ ಸಬ್ಸಿಡಿ ವಿಚಾರದಲ್ಲಿ ಹೊಸ ಮಾರ್ಗಸೂಚಿ ತಯಾರಿ : ಶೋಭಾ ಕಂರದ್ಲಾಜೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ 5ನೇ ಬೃಹತ್ ಕೃಷಿಯಂತ್ರ ಮೇಳ-2023 ಕ್ಕೆ ಚಾಲನೆ Read More »

error: Content is protected !!
Scroll to Top