ಪುತ್ತೂರು

ವಸಂತ ಲಕ್ಷ್ಮೀ ಸಚ್ಚರಿಪೇಟೆ ಸೂರ್ಡೆಲ್ ನಿಧನ

ಪೆರ್ನಾಜೆ  : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಚ್ಚರಿಪೇಟೆ ನಿವಾಸಿ ನಿವೃತ್ತ ಶಿಕ್ಷಕ  ಉದಯ  ಶಂಕರ ಭಟ್ ಸೂರ್ಡೆಲ್ ಪತ್ನಿ ವಸಂತ ಲಕ್ಷ್ಮೀ (62 ವ ) ಫೆ.12 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ತಾಯಿ ಶಾರದಮ್ಮ ಪೆರ್ನಾಜೆ, ಪತಿ ಉದಯಶಂಕರ ಭಟ್ ಸೂರ್ಡೆಲ್, ಸಹೋದರರಾದ ಸತ್ಯನಾರಾಯಣ ಭಟ್ ಪಿಲ್ಯಪೆರ್ನಾಜೆ, ಕುಮಾರ್ ಪೆರ್ನಾಜೆ,  ಉಪನ್ಯಾಸಕ ಮುರ್ಡೇಶ್ವರ ಕೃಷ್ಣ ಪ್ರಸಾದ್ ಪೆರ್ನಾಜೆ., ಸಹೋದರಿಯರಾದ ಸರಸ್ವತಿ ಪ್ರಕಾಶ್ ಕೋಟೆ ಸುಳ್ಯ ,ಪಾರ್ವತಿ ಜಯರಾಮ್ ಭಟ್ ಉಳ್ಳಿಂಜ,  ಶಂಕರಿ ಬಾಲಕೃಷ್ಣ […]

ವಸಂತ ಲಕ್ಷ್ಮೀ ಸಚ್ಚರಿಪೇಟೆ ಸೂರ್ಡೆಲ್ ನಿಧನ Read More »

ಪುತ್ತೂರು ಬ್ಲಾಕ್, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನ ಬೂತ್ ಅಧ್ಯಕ್ಷರು – ಬಿ.ಎಲ್.ಎ.ಗಳ ತರಬೇತಿ ಶಿಬಿರ

ಪುತ್ತೂರು : ಕಾಂಗ್ರೆಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್ ಹಾಗೂ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನ ಬೂತ್ ಅಧ್ಯಕ್ಷರ – ಬಿ.ಎಲ್.ಎ. ಗಳ ತರಬೇತಿ ಶಿಬಿರ ನಗರದ ಪುರಭವನದಲ್ಲಿ ಮಂಗಳವಾರ ನಡೆಯಿತು. ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡ ತರಬೇತಿ ಶಿಬಿರವನ್ನು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ ತರಬೇತಿ ಶಿಬಿರದಲ್ಲಿ ತರಬೇತುದಾರ ಎಂ.ಜಿ.ಹೆಗಡೆ ತರಬೇತು ನೀಡಿ, ಬದಲಾವಣೆ ಜಗದ ನಿಯಮವಾಗಿದ್ದು, ಸಾಮಾಜಿಕ, ರಾಜಕೀಯವಾಗಿ ಬದಲಾವಣೆಗಳು ನಡೆಯುತ್ತಾ ಇರುತ್ತವೆ. ರಾಜಕೀಯ

ಪುತ್ತೂರು ಬ್ಲಾಕ್, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನ ಬೂತ್ ಅಧ್ಯಕ್ಷರು – ಬಿ.ಎಲ್.ಎ.ಗಳ ತರಬೇತಿ ಶಿಬಿರ Read More »

ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರ – ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಪುತ್ತೂರು : ಬೆಳ್ಳಿಪ್ಪಾಡಿ ಗ್ರಾಮದ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಪುತ್ತೂರು-ಉಪ್ಪಿನಂಗಡಿ ರಸ್ತೆಯ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಬೆಳ್ಳಿಪ್ಪಾಡಿಯಲ್ಲಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಇದೀಗ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಜಿರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಗೌಡ ಪಮ್ಮನಮಜಲು, ಕೋಶಾಧಿಕಾರಿ ಚಂದ್ರ ಶೆಟ್ಟಿಗಾರ್ ಆಲಂಗೋಡಿ ಮತ್ತಿತರರು

ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರ – ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ Read More »

ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಶ್ರಮದಾನ

ಪುತ್ತೂರು: ಕುಂಜೂರುಪಂಜ  ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಫೆ. 15ರಂದು 20ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರಮದಾನ ಹಾಗೂ ಬಲ್ನಾಡು ಘಟಕದ ಮಾಸಿಕ ಸಭೆ ನಡೆಯಿತು. ಫೆ. 15ರಂದು ಮಂದಿರದಲ್ಲಿ ಸಾಮೂಹಿಕ  ದುರ್ಗಾ ಪೂಜೆ ಮತ್ತು ಅರ್ಧ ಏಕಾಹ ಭಜನೆ ನಡೆಯಲಿದೆ. ಮಾಸಿಕ ಸಭೆ: ಇದೇ ಸಂದರ್ಭ ಬಲ್ನಾಡು ಘಟಕದ  ಮಾಸಿಕ ಸಭೆ ನಡೆಯಿತು. ಲೆಕ್ಕಪರಿಶೋದಕಿ ಲತಾ, ವಲಯ ಮೇಲ್ವಿಚಾರಕ ಹರೀಶ್ ಮಾಹಿತಿ ನೀಡಿದರು. ಘಟಕದ ಸಂಯೋಜಕಿ ಆಶಾಲತಾ, ಪ್ರತಿನಿಧಿ ವಿನಯ, ಸದಸ್ಯರಾದ ಬಾಲಕೃಷ್ಣ, ಶಂಭು  ಪೂಜಾರಿ, ಹರಿಪ್ರಸಾದ್, ಸುನೀಲ್,

ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಶ್ರಮದಾನ Read More »

ಮಾಸಾಶನದ ಪ್ರಥಮ ಕಂತು ವಿತರಣೆ

ಪುತ್ತೂರು : ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಮಚ್ಚಿಮಲೆ ನಿವಾಸಿ ಅಕ್ಕಮ್ಮ ಅವರಿಗೆ ಮಾಶಾಸನದ ಪ್ರಥಮ ಕಂತನ್ನು ವಿತರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾದ ಮಾಸಾಶನ ಪ್ರಥಮ ಕಂತು ರೂ. 750ನ್ನು ಒಕ್ಕೂಟ ಅಧ್ಯಕ್ಷ ಮಹಾಲಿಂಗ ನಾಯ್ಕ  ವಿತರಿಸಿದರು. ಈ ಸಂದರ್ಭದಲ್ಲಿ ಯೋಜನೆಯ ಮೇಲ್ವಿಚಾರಕ ಹರೀಶ್ ಕುಲಾಲ್, ಸೇವಾಪ್ರತಿನಿಧಿ ಆಶಾಲತಾ, ದೀಪಿಕಾ, ಸುವಿಧಾ ಸಹಾಯಕಿ ಸ್ವಾತಿ, ನವದುರ್ಗ ಸಂಘದ ಸದಸ್ಯ ಹೊನ್ನಪ್ಪ ಪೂಜಾರಿ ಉಪಸ್ಥಿತರಿದ್ದರು

ಮಾಸಾಶನದ ಪ್ರಥಮ ಕಂತು ವಿತರಣೆ Read More »

ಶಾಫಿ ಬೆಳ್ಳಾರೆಗೆ ಎಸ್.ಡಿ.ಪಿ.ಐ. ಟಿಕೇಟ್: ವಿರೋಧಿಸಿದ ಶಾಸಕ ಸಂಜೀವ ಮಠಂದೂರು | ಎಸ್.ಡಿ.ಪಿ.ಐ. ರಾಜಕೀಯ ಪಕ್ಷವಲ್ಲ; ಭಯೋತ್ಪಾದಕ ಸಂಘಟನೆಯೆಂದು ಜರೆದ ಮಠಂದೂರು

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳಲ್ಲೋರ್ವನಾದ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಎಸ್.ಡಿ.ಪಿ.ಐ. ಪಕ್ಷ ತನ್ನ ನಿಜರೂಪವನ್ನು ಜನರೆದುರು ತೆರೆದಿಟ್ಟಿದ್ದು, ಚುನಾವಣಾ ಆಯೋಗ ಶಾಫಿ ಬೆಳ್ಳಾರೆಯ ಉಮೇದುವಾರಿಕೆಯನ್ನು ಪರಿಗಣಿಸದಂತೆ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿಲುವನ್ನು ಹಂಚಿಕೊಂಡಿರುವ ಶಾಸಕರು, ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಎನ್ನುವ ನೆಲೆಯಲ್ಲಿ ಸೂಕ್ತ ಸಾಕ್ಷ್ಯವನ್ನು ಮುಂದಿಟ್ಟುಕೊಂಡೇ ಎನ್‍.ಐ.ಎ. ಶಾಫಿ ಬೆಳ‍್ಳಾರೆಯನ್ನು ಬಂಧಿಸಿದೆ. ಇದೀಗ ಜೈಲು ಸೇರಿರುವ ಶಾಫಿ ಬೆಳ್ಳಾರೆಗೆ ಪುತ್ತೂರು ವಿಧಾನಸಭಾ

ಶಾಫಿ ಬೆಳ್ಳಾರೆಗೆ ಎಸ್.ಡಿ.ಪಿ.ಐ. ಟಿಕೇಟ್: ವಿರೋಧಿಸಿದ ಶಾಸಕ ಸಂಜೀವ ಮಠಂದೂರು | ಎಸ್.ಡಿ.ಪಿ.ಐ. ರಾಜಕೀಯ ಪಕ್ಷವಲ್ಲ; ಭಯೋತ್ಪಾದಕ ಸಂಘಟನೆಯೆಂದು ಜರೆದ ಮಠಂದೂರು Read More »

ಆರ್ಯಾಪು ಗ್ರಾಮ ಪಂಚಾಯತ್ ಉಪಚುನಾವಣೆಗೆ ಬಿಜೆಪಿಯಿಂದ ಯತೀಶ್ ಡಿ.ಬಿ. ನಾಮಪತ್ರ ಸಲ್ಲಿಕೆ

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಆರ್ಯಾಪು ಪಂಚಾಯತ್ ನ ಉಪ ಚುನಾವಣೆ ಗೆ ಬಿಜೆಪಿಯಿಂದ ಯತೀಶ್ ಡಿ.ಬಿ ಸೋಮವಾರ ನಾಮಪತ್ರ ಸಲ್ಲಿಸಿದರು. ಆರ್ಯಾಪು ಚುನಾವಣಾಧಿಕಾರಿ ತ್ರಿವೇಣಿ ರಾವ್ ಅವರಿವರಿಗೆ ನಾಮಪತ್ರ ಸಲ್ಲಿಸಿದರು… ಈ ಸಂದರ್ಭದಲ್ಲಿ ಬಿಜೆಪಿ ದ.ಕ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಆರ್ಯಾಪು

ಆರ್ಯಾಪು ಗ್ರಾಮ ಪಂಚಾಯತ್ ಉಪಚುನಾವಣೆಗೆ ಬಿಜೆಪಿಯಿಂದ ಯತೀಶ್ ಡಿ.ಬಿ. ನಾಮಪತ್ರ ಸಲ್ಲಿಕೆ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಪಕ್ಷದಿಂದ ಚುನಾವಣೆ ಟಿಕೇಟ್

ಪುತ್ತೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಎಸ್ ಡಿಪಿಐ ಪಕ್ಷ ಕೂಡಾ ಚುನಾವಣೆಗೆ ಸಿದ್ಧತೆ ನಡೆಸಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಶಾಫಿ ಬೆಳ್ಳಾರೆಗೆ ಎಸ್ ಡಿಪಿಐ ಪಕ್ಷದಿಂದ ಪುತ್ತೂರು ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ಘೋಷಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಎಸ್ ಡಿಪಿಐನ ಈ ನಡೆ ವಿವಾದ ಉಂಟು ಮಾಡಿದೆ. ಸಾಕ್ಷ್ಯಾಧಾರ ಮುಂದಿಟ್ಟು ಎನ್ಐಎ ಶಾಫಿ ಬೆಳ್ಳಾರೆಯವರನ್ನು ಬಂಧಿಸಿದೆ. ಸದ್ಯ ಕೇಂದ್ರ ತನಿಖಾ ಸಂಸ್ಥೆಗಳ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಪಕ್ಷದಿಂದ ಚುನಾವಣೆ ಟಿಕೇಟ್ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಕೇಂದ್ರ ಮುಂಗಡಪತ್ರ -2023-24ರ ವಿಶ್ಲೇಷಣೆ’ | 12 ವಿದ್ಯಾರ್ಥಿಗಳಿಂದ ‘ಕೇಂದ್ರ ಮುಂಗಡಪತ್ರದ ವಿಶ್ಲೇಷಣೆ’

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರಿಯ ಸೇವಾ ಯೋಜನೆ ಘಟಕದ ವತಿಯಿಂದ ‘ಕೇಂದ್ರ ಮುಂಗಡಪತ್ರ -2023-24ರ ವಿಶ್ಲೇಷಣೆ’ ಕಾರ್ಯಕ್ರಮ ನಡೆಯಿತು. ದ್ವಿತೀಯ ಬಿ.ಎ.ಎಲ್.ಎಲ್.ಬಿ.ಯ 12 ವಿದ್ಯಾರ್ಥಿಗಳು ಬಜೆಟ್‌ನಲ್ಲಿ ಗುರುತಿಸಲಾದ ವಿವಿಧ ವಲಯಗಳ ಮುಖ್ಯಾಂಶಗಳ ಕುರಿತು ವಿಚಾರ ಮಂಡಿಸಿ, ಹೊಸ ಬಜೆಟ್‍ನಿಂದ ಸಾಮಾನ್ಯ ಜನರಿಗೆ, ಸರಕಾರಕ್ಕೆ, ಉದ್ಯಮಿಗಳಿಗೆ ಮತ್ತು ಇತರರಿಗೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಣೆ ಮಾಡಿದರು. ವಿದ್ಯಾರ್ಥಿಗಳಾದ ಶ್ರೇಯಸ್ ಎಸ್ ರಾವ್, ಮನ್ವಿತ್, ಅಕ್ಷತಾ ಕೆ.ವಿ., ಯಶ್ವಿತಾ, ಸೀಮಂತೀನಿ, ಶ್ರೀಕೃಷ್ಣ ಭಟ್, ಸುಶ್ಮಿತಾ, ವೇಗನ್,

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಕೇಂದ್ರ ಮುಂಗಡಪತ್ರ -2023-24ರ ವಿಶ್ಲೇಷಣೆ’ | 12 ವಿದ್ಯಾರ್ಥಿಗಳಿಂದ ‘ಕೇಂದ್ರ ಮುಂಗಡಪತ್ರದ ವಿಶ್ಲೇಷಣೆ’ Read More »

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಶಿವನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿಯಂದು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆಯುಕ್ತರ ಸೂಚನೆ

ಪುತ್ತೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ಶಿವನ ದೇವಸ್ಥಾನಗಳಲ್ಲಿ ಫೆ.18ರಂದು ಮಹಾ ಶಿವರಾತ್ರಿ ಹಬ್ಬದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ಭರಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಶಿವರಾತ್ರಿಯ ಹಬ್ಬದ ದಿನದಂದು ವಿಶೇಷವಾಗಿ ಸಂಕಲ್ಪಿಸಿ ಆ ದಿನ ಪ್ರಾಂತ: ಕಾಲದಿಂದ ಮಧ್ಯಾಹ್ನದವರೆಗೆ ಯಾವುದಾದರೊಂದು ಸೂಕ್ತ ಸಮಯದಲ್ಲಿ ದೇವಾಲಯದ ದೈನಂದಿನ ಪೂಜಾವಿಧಿಗಳಿಗೆ ಧಕ್ಕೆಯಾಗದಂತೆ ರುದ್ರಾಭಿಷೇಕ ಮತ್ತು ರುದ್ರ ಹೋಮ ಪೂಜಾಕಾರ್ಯಗಳನ್ನು ವಿಶೇಷವಾಗಿ ನಡೆಸುವುದು.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಶಿವನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿಯಂದು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆಯುಕ್ತರ ಸೂಚನೆ Read More »

error: Content is protected !!
Scroll to Top