ಪುತ್ತೂರು

ಕಡಬದ ಕುಟ್ರುಪ್ಪಾಡಿಯಲ್ಲಿ ಸೋಮವಾರ ಮುಂಜಾನೆ ಆನೆ ದಾಳಿ | ಇಬ್ಬರು ಮೃತ್ಯು | ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

ಕಡಬ : ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಸೋಮವಾರ ಮುಂಜಾನೆ ಆನೆಯೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಕಡಬ ತಾಲೂಕಿನ  ರೆಂಜಲಾಡಿ ಗ್ರಾಮದ ನೈಲ ನಿವಾಸಿಗಳಾದ ರಂಜಿತಾ (21) ಹಾಗೂ  ರಮೇಶ್ ರೈ(55) ಎಂದು ತಿಳಿದು ಬಂದಿದೆ. ರಂಜಿತಾ ಪೇರಡ್ಕ ಹಾಲಿನ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದು, ಸೋಮವಾರ ಮುಂಜಾನೆ ಕರ್ತವ್ಯಕ್ಕೆ ಮನೆಯಿಂದ ಹೋಗುತ್ತಿದ್ದಾಗ ಮೀನಾಡಿ ಸಮೀಪ ರಸ್ತೆಯಲ್ಲಿ ಆನೆಯೊಂದು ಹಠಾತ್ತನಎ  ದಾಳಿ ನಡೆಸಿದೆ. ಈ ಸಂದರ್ಭ ಯುತಿಯ ಬೊಬ್ಬೆ ಹೊಡೆದದ್ದನ್ನು […]

ಕಡಬದ ಕುಟ್ರುಪ್ಪಾಡಿಯಲ್ಲಿ ಸೋಮವಾರ ಮುಂಜಾನೆ ಆನೆ ದಾಳಿ | ಇಬ್ಬರು ಮೃತ್ಯು | ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು Read More »

ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮಾಡ್ಯುಲರ್ ಆಪರೇಷನ್ ಥಿಯೇಟರಿನಲ್ಲಿ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ

ಪುತ್ತೂರು: ಬೆಂಗಳೂರು, ಮಂಗಳೂರಿನಲ್ಲಿ ಲಭ್ಯವಿರುವ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ ಮಾದರಿಯ ಶಸ್ತ್ರಚಿಕಿತ್ಸೆಯನ್ನು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ. 25ರ ಮಹಾಶಿವರಾತ್ರಿಯ ಶುಭಗಳಿಗೆಯಲ್ಲಿ ನೆರವೇರಿಸಲಾಯಿತು. ಉತ್ತಮ, ಅತ್ಯಾಧುನಿಕ ಪರಿಕರಗಳನ್ನು ಒಳಗೊಂಡ ಮಾಡ್ಯುಲರ್ ಆಪರೇಷನ್ ಥಿಯೇಟರ್ ಇತ್ತೀಚೆಗಷ್ಟೇ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿತ್ತು. ಜಿಲ್ಲಾ ಕೇಂದ್ರದ ಸಿದ್ಧತೆಯಲ್ಲಿರುವ ಪುತ್ತೂರಿಗೆ ಮಾಡ್ಯುಲರ್ ಆಪರೇಷನ್ ಥಿಯೇಟರ್ ಪ್ರಮುಖ ಆದ್ಯತೆಗಳಲ್ಲೊಂದು. ರೋಗಿಗಳ ದೇಹಸೂಕ್ಷ್ಮತೆಗೆ ಅನುಗುಣವಾಗಿ ಆಪರೇಷನ್ ಥಿಯೇಟರ್ ಅನ್ನು ರಚಿಸಲಾಗಿರುತ್ತದೆ. ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಆಪರೇಷನ್ ನಡೆಸುವುದು ಇಲ್ಲಿನ ವಿಶೇಷತೆ.

ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮಾಡ್ಯುಲರ್ ಆಪರೇಷನ್ ಥಿಯೇಟರಿನಲ್ಲಿ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ Read More »

ನಾಳೆ (ಫೆ.21) ಶ್ರೀ ಸತ್ಯಸಾಯಿ ಮಂದಿರದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಪುತ್ತೂರು : ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿ, ದ.ಕ.ಜಿಲ್ಲಾ ವೆನ್‍ಲಾಕ್‍ ಆಸ್ಪತ್ರೆ ಹಾಗೂ ಪುತ್ತೂರು ಸಹಕಾರಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಫೆ.21 ಮಂಗಳವಾರ ಬೆಳಗ್ಗೆ 9.30 ಕ್ಕೆ ಕೋರ್ಟ್ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಮಂದಿರದಲ್ಲಿ ನಡೆಯಲಿದೆ. ಶಿಬಿರ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ರ ತನಕ ನಡೆಯಲಿದ್ದು, ಬೆಳಗ್ಗೆ 8.30 ರಿಂದ 11 ಗಂಟೆ ತನಕ ದಾಖಲಾತಿ ನಡೆಯಲಿದೆ. ಮೊದಲು ನೋಂದಾವಣೆ ಮಾಡಿದ 250 ಮಂದಿಗೆ ಮಾತ್ರ ಅವಕಾಶ. ಶಿಬಿರದಲ್ಲಿ

ನಾಳೆ (ಫೆ.21) ಶ್ರೀ ಸತ್ಯಸಾಯಿ ಮಂದಿರದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ Read More »

ಎನ್‍ಎಸ್‍ ಯುಐ ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ

ಪುತ್ತೂರು : ಬೆಂಗಳೂರಿನ ಶಿರೂರ್ ಪಾರ್ಕಿನಲ್ಲಿ ನಡೆದ ರಾಜ್ಯ ಎನ್ಎಸ್‍ಯುಐ ಕಾರ್ಯಕಾರಿಣಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಎನ್ಎಸ್ ಯುಐ  ಸಮಿತಿ ಉಪಾಧ್ಯಕ್ಷರಾದ ಫಾರೂಕ್ ಬಾಯಂಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ ಮಾಡಿದರು. 2014ರಿಂದ ನಗರ ಹಾಗೂ ತಾಲೂಕು ಮಟ್ಟದಲ್ಲಿ ಎನ್‍ಎಸ್ ಯುಐ ಸಂಘಟನೆಯಲ್ಲಿ ಸಕ್ರಿಯರಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿರುವ ಫಾರೂಕ್ ಅವರು ರಾಜ್ಯ ಮಟ್ಟದ ಇಂದಿರಾ ಕಾರ್ಯಗಾರ, ಪ್ರೇರಣಾ ಜಿಲ್ಲಾ ಕಾರ್ಯಾಗಾರ ಆಯೋಜಿಸುವ ಮೂಲಕ ಎನ್. ಎಸ್.ಯು.ಐಗೆ ಹೊಸ ಹುರುಪು ನೀಡಿದ್ದರು.ಇವರ

ಎನ್‍ಎಸ್‍ ಯುಐ ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ Read More »

ಫೆ.26 : ಕರ್ನಾಟಕದ ಇಂದಿನ ಅಗತ್ಯಗಳು ಕುರಿತು “ಜನ ಸಂವಾದ” ಕಾರ್ಯಕ್ರಮ

ಪುತ್ತೂರು : ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕ ಹಾಗೂ ಮಂಗಳೂರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಕರ್ನಾಟಕದ ಇಂದಿನ ಅಗತ್ಯಗಳು “ಜನ ಸಂವಾದ” ಕಾರ್ಯಕ್ರಮ ಫೆ.26 ಭಾನುವಾರ ಬೆಳಿಗ್ಗೆ 10 ಗಂಟೆಗೆ ಪುತ್ತೂರು ಜೈನ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ತನಕ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ “ಭ್ರಷ್ಟಾಚಾರ ನಿಯಂತ್ರಣ ಮತ್ತು ದಕ್ಷ ಆಡಳಿತ”, ಪತ್ರಕರ್ತ ಬಿ.ಎಂ.ಹನೀಫ್ “ಸಾಮಾಜಿಕ ಅಗತ್ಯಗಳು” ಹಾಗೂ ಗಾಂಧಿ

ಫೆ.26 : ಕರ್ನಾಟಕದ ಇಂದಿನ ಅಗತ್ಯಗಳು ಕುರಿತು “ಜನ ಸಂವಾದ” ಕಾರ್ಯಕ್ರಮ Read More »

ಹಿಂದೂ ಸಮಾಜ ಹೆಮ್ಮೆಪಡುವಂತಹ ಕಾರ್ಯಕ್ರಮ | ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಯ ಕೃತಜ್ಞತಾ ಸಭೆ | ಒಗ್ಗಟ್ಟಿನ ಕಾರ್ಯಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ

ಪುತ್ತೂರು: ಗೌಡ ಸಮುದಾಯ ಹಿಂದೂ ಸಮಾಜದ ಒಂದು ಕೊಂಬೆ. ಮರಕ್ಕೆ ಎಲ್ಲಿಯೂ ತೊಂದರೆ ಆಗದಂತೆ, ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವವನ್ನು ಗೌಡ ಸಮುದಾಯದ ಸಮಾವೇಶದಂತೆ ಮಾಡಿರುವುದು ಉತ್ತಮ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಫೆ. 19ರಂದು ನಡೆದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಕಾರ್ಯಕ್ರಮದ ಕೃತಜ್ಞತೆ ಸಭೆಯಲ್ಲಿ ಅವರು ಮಾತನಾಡಿದರು. ಒಂದು ದೇವಸ್ಥಾನಕ್ಕೆ

ಹಿಂದೂ ಸಮಾಜ ಹೆಮ್ಮೆಪಡುವಂತಹ ಕಾರ್ಯಕ್ರಮ | ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಯ ಕೃತಜ್ಞತಾ ಸಭೆ | ಒಗ್ಗಟ್ಟಿನ ಕಾರ್ಯಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ Read More »

ಪಯಸ್ವಿನಿ ನದಿಯಲ್ಲಿ ಈಜಲು ತೆರಳಿದ್ದ ಸಂದರ್ಭ ಮೃತಪಟ್ಟಿದ್ದ ಇಬ್ಬರ ಮನೆಗೆ ಶಾಸಕ ಸಂಜೀವ ಮಠಂದೂರು ಭೇಟಿ

ಪುತ್ತೂರು : ಇತ್ತೀಚೆಗೆ ನದಿಗೆ ಈಜಲು ತೆರಳಿದ್ದ ಸಂದರ್ಭ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಇಬ್ಬರ ಮನೆಗೆ ಶಾಸಕ ಸಂಜೀವ ಮಠಂದೂರು ಭಾನುವಾರ ಭೇಟಿ ಮಾಡಿದರು. ಅರಿಯಡ್ಕ ದೇರ್ಲ ನಿವಾಸಿ ನಾರಾಯಣ ಪಾಟಾಳಿ ಪುತ್ರ ಜಿತೇಶ್ ಹಾಗೂ ಪಡುವನ್ನೂರು ಗ್ರಾಮದ ಅಂಬಟೆಮೂಲೆ ಕೃಷ್ಣ ನಾಯ್ಕರ ಪುತ್ರ ಪ್ರವೀಣ್ ಮೃತಪಟ್ಟಿದ್ದರು, ಅವರ ಮನೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮತ್ತಿತರರು

ಪಯಸ್ವಿನಿ ನದಿಯಲ್ಲಿ ಈಜಲು ತೆರಳಿದ್ದ ಸಂದರ್ಭ ಮೃತಪಟ್ಟಿದ್ದ ಇಬ್ಬರ ಮನೆಗೆ ಶಾಸಕ ಸಂಜೀವ ಮಠಂದೂರು ಭೇಟಿ Read More »

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

ಪುತ್ತೂರು : ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವವು ಫೆ 18 ಶನಿವಾರ ನಡೆಯಿತು. ದೇವಸ್ಥಾನದ ಅನುವಂಶಿಕ ಮೊಕ್ತೇಸರರು, ಅರ್ಚಕರು ಆಗಿರುವ ಜನೇಶ್ ಭಟ್ ಬರೆಪ್ಪಾಡಿಯವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಾನಗಳು ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ, ಶ್ರೀ ದೇವರಿಗೆ 108 ಸೀಯಾಳ ಅಭಿಷೇಕ, ರುದ್ರಾಭಿಷೇಕ, ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ,

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ Read More »

ದ.ಕ.ಜಿಲ್ಲಾ ಗೃಹರಕ್ಷಕ ದಳದ ಡಾ.ಮುರಲೀ ಮೋಹನ್ ಚೂಂತಾರು ಪುತ್ತೂರು ಘಟಕಕ್ಕೆ ಭೇಟಿ

ಪುತ್ತೂರು : ಮೇ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕದಳದವರನ್ನು ನೇಮಿಸಬೇಕಾದ ಹಿನ್ನಲೆಯಲ್ಲಿ ದ.ಕ.ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ, ಪೌರರಕ್ಷಣಾ ಪಡೆಯ ಮುಖ್ಯಪಾಲಕ ಡಾ.ಮುರಲೀ ಮೋಹನ್ ಚೂಂತಾರು ಪುತ್ತೂರಿನ ಗೃಹರಕ್ಷಕದಳ ಘಟಕದ ಕಚೇರಿಗೆ ಭಾನುವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಿಷ್ಕ್ರೀಯ ಗೃಹರಕ್ಷಕರನ್ನು ತೆಗೆದುಹಾಕಿ ಕ್ರಿಯಾಶೀಲ ಗೃಹರಕ್ಷಕರನ್ನು ನೇಮಕ ಮಾಡುವಂತೆ ಘಟಕಾಧಿಕಾರಿ ಅಭಿಮನ್ಯು ರೈಯವರಿಗೆ ಸೂಚನೆ ನೀಡಿದರು. ಎಲ್ಲಾ ಗೃಹರಕ್ಷಕರು ತಮ್ಮ ಸದಸ್ಯತ್ವ ನವೀಕರಣಗೊಳಿಸಿ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು

ದ.ಕ.ಜಿಲ್ಲಾ ಗೃಹರಕ್ಷಕ ದಳದ ಡಾ.ಮುರಲೀ ಮೋಹನ್ ಚೂಂತಾರು ಪುತ್ತೂರು ಘಟಕಕ್ಕೆ ಭೇಟಿ Read More »

ಫೆ.25 : ವಿಜಯನಗರ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ 32ನೇ ವರ್ಷದ ವಾರ್ಷಿಕೋತ್ಸವ | ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು : ವಿಜಯನಗರ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ 32ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಫೆ.25 ಶನಿವಾರ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಗಣಪತಿ ಹವನ, ಸಂಜೆ 7 ಕ್ಕೆ ಪೂಜೆ ಆರಂಭ, 7.30 ಕ್ಕೆ ಅಳಿಕೆ ಶ್ರೀ ಸ್ಕಂದ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ 9 ಕ್ಕೆ ಮಹಮಂಗಳಾರತಿ, ಪ್ರಸಾದ ವಿತರಣೆ ನಡೆದು ಬಳಿಕ ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ

ಫೆ.25 : ವಿಜಯನಗರ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ 32ನೇ ವರ್ಷದ ವಾರ್ಷಿಕೋತ್ಸವ | ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ Read More »

error: Content is protected !!
Scroll to Top