ಪುತ್ತೂರು

ಪುತ್ತೂರು ನಗರಸಭೆಯ 61.56ಕೋಟಿ ಬಜೆಟ್ ಮಂಡನೆ | 68 ಲಕ್ಷ ರೂ. ಮಿಗತೆ ಬಜೆಟ್

ಪುತ್ತೂರು: ಪುತ್ತೂರು ನಗರಸಭೆ ಈ ಬಾರಿ 68 ಲಕ್ಷ ರೂ.ಮಿಗತೆ ಬಜೆಟ್ ಅನ್ನು ಮಂಡಿಸಿದ್ದು ಒಟ್ಟು 61.56 ಕೋಟಿ ರೂ. ಗಾತ್ರದ ಬಜೆಟ್ ಇದಾಗಿದೆ ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ. ಅವರು ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ಬಜೆಟ್ ಮಂಡನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 53.24 ಕೋ.ರೂ. ಆದಾಯಕ್ಕೆ ಆರಂಭಿಕ ಶುಲ್ಕ 8.32 ಕೋಟಿ ರೂ.ಸೇರಿ 61.56 ಕೋ.ರೂ.ನಿರೀಕ್ಷಿತ ಆದಾಯ, 60.88 ಕೋ.ರೂ. ಖರ್ಚು ನಿರೀಕ್ಷಿಸಲಾಗಿದೆ. ನಿರೀಕ್ಷಿತ ಆದಾಯ 2023-24ನೇ […]

ಪುತ್ತೂರು ನಗರಸಭೆಯ 61.56ಕೋಟಿ ಬಜೆಟ್ ಮಂಡನೆ | 68 ಲಕ್ಷ ರೂ. ಮಿಗತೆ ಬಜೆಟ್ Read More »

ಮಾಸ್ಟರ್ಸ್  ಅಥ್ಲೆಟಿಕ್ಸ್ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವೆಂಕಟೇಶ್ ಪ್ರಸಾದ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

ಪುತ್ತೂರು : ಕರ್ನಾಟಕ ಮಾಸ್ಟರ್ಸ್ ಆತ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕೋಲಾರದ ಪೊಲೀಸ್ ಕವಾಯತು ಕ್ರೀಡಾಂಗಣದಲ್ಲಿ ಫೆಬ್ರವರಿ 11 ಮತ್ತು 12ರಂದು ನಡೆದ ರಾಜ್ಯ ಮಟ್ಟದ  41ನೇ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕ, ಪುತ್ತೂರು ತಾಲೂಕು, ದರ್ಬೆತ್ತಡ್ಕ ನಿವಾಸಿ  ವೆಂಕಟೇಶ್ ಪ್ರಸಾದ್ ಪಾಲ್ಗೊಂಡು ರಾಷ್ಟ್ರಮಟ್ಟದ ಸ್ಪರ್ಧೆಗೆ  ಆಯ್ಕೆಯಾಗಿದ್ದಾರೆ. 45ರ ವಯೋಮಾನ ವಿಭಾಗದ ಎತ್ತರ ಜಿಗಿತದಲ್ಲಿ ಪ್ರಥಮ ಮತ್ತು ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮಾ.27 ರಿಂದ 30 ರ ವರೆಗೆ ಬೆಂಗಳೂರಿನ

ಮಾಸ್ಟರ್ಸ್  ಅಥ್ಲೆಟಿಕ್ಸ್ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವೆಂಕಟೇಶ್ ಪ್ರಸಾದ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ Read More »

ಬೆಳೆ ಸಾಲದ ಮೊತ್ತ ಹೆಚ್ಚಿಸಿ ಬಜೆಟಿನಲ್ಲಿ ಘೋಷಣೆ | ಶಾಸಕ ಸಂಜೀವ ಮಠಂದೂರು ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ

ಪುತ್ತೂರು: ಸಹಕಾರಿ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ದರದ ಸಾಲದ ಮೊತ್ತವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸುವಂತೆ ಶಾಸಕ ಸಂಜೀವ ಮಠಂದೂರು ಅವರು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಮನವಿ ನೀಡಿದ್ದರು. ಇದರ ಫಲಿತಾಂಶವೆಂಬಂತೆ, ಈ ಬಾರಿಯ ಬಜೆಟಿನಲ್ಲಿ ಸಹಕಾರಿ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿರುವ ಬಗ್ಗೆ ಘೋಷಣೆ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಉತ್ಪಾದನಾ

ಬೆಳೆ ಸಾಲದ ಮೊತ್ತ ಹೆಚ್ಚಿಸಿ ಬಜೆಟಿನಲ್ಲಿ ಘೋಷಣೆ | ಶಾಸಕ ಸಂಜೀವ ಮಠಂದೂರು ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ Read More »

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಪುತ್ತೂರು : ಪ್ರತಿಯೊಬ್ಬನೂ ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಅಥವಾ ಉದ್ಯಮಿಯಾಗಲು ವಿದ್ಯಾರ್ಥಿ ದೆಸೆಯಿಂದಲೇ ಸರಿಯಾದ ವರ್ತನೆ, ಸಾಮಾನ್ಯ ಜ್ಞಾನ ಹಾಗೂ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಆವಶ್ಯಕ ಎಂದು ಖ್ಯಾತ ಸ್ವರ್ಣೋದ್ಯಮಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ.ಜಿ. ಹೇಳಿದರು. ಅವರು  ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿದರು.. ಜೀವನದಲ್ಲಿ ಎಡರು ತೊಡರುಗಳು ಸಾಮಾನ್ಯ, ಆದರೆ ಅದನ್ನು ಸಮರ್ಥವಾಗಿ ಎದುರಿಸಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ Read More »

ಫೆ.26 : ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಬೆಳ್ಳಿಹಬ್ಬ | ರಕ್ತದಾನ ಶಿಬಿರ

ಪುತ್ತೂರು : ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಫೆ.26 ಭಾನುವಾರ ಬೆಳಿಗ್ಗೆ 10 ರಿಂದ ಶಾಂತಿಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಜಂಟಿ ಆಶ್ರಯದಲ್ಲಿ ಶಿಬಿರ ನಡೆಯಲಿದೆ. ಗ್ರಾಮದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಫೆ.26 : ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಬೆಳ್ಳಿಹಬ್ಬ | ರಕ್ತದಾನ ಶಿಬಿರ Read More »

ಸೆರೆಯಾದದ್ದು ಹಂತಕ ಆನೆ ಎನ್ನುವುದು ಖಚಿತ!

ಪುತ್ತೂರು: ಗುರುವಾರ ಸಂಜೆ ಸೆರೆ ಸಿಕ್ಕ ಕಾಡಾನೆಯ ದಂತದಲ್ಲಿದ್ದ ರಕ್ತದ ಕಲೆಗಳು, ಕೊಲೆಗಡುಕ ಎನ್ನುವುದನ್ನು ಖಾತ್ರಿ ಪಡಿಸಿವೆ. ರೆಂಜಿಲಾಡಿಯ ನೈಲದಲ್ಲಿ ರಂಜಿತಾ ಹಾಗೂ ರಮೇಶ್ ರೈ ಎನ್ನುವವರನ್ನು ಕಾಡಾನೆ ಕೊಂದು ಹಾಕಿತ್ತು. ರಂಜಿತಾ ಅವರ ಬೊಬ್ಬೆ ಕೇಳಿ ಓಡಿ ಬಂದ ರಮೇಶ್ ರೈ ಅವರು ಆನೆಯ ತಿವಿತಕ್ಕೆ ಕೊನೆಯುಸಿರೆಳೆದಿದ್ದರು. ಬಳಿಕ ಆನೆಗಳು ಪರಾರಿಯಾಗಿದ್ದು, ಕಾರ್ಯಾಚರಣೆ ವೇಳೆಯಲ್ಲೂ ಬಲೆಗೆ ಬಿದ್ದಿರಲಿಲ್ಲ. ಗುರುವಾರ ಸಂಜೆ ಹೊತ್ತಿಗೆ ಆನೆಯನ್ನು ಪತ್ತೆ ಹಚ್ಚಿ, ಅರಿವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 40 ವರ್ಷ

ಸೆರೆಯಾದದ್ದು ಹಂತಕ ಆನೆ ಎನ್ನುವುದು ಖಚಿತ! Read More »

ಕಾಡಾನೆ ಕಾರ್ಯಾಚರಣೆ ಕೊನೆಗೂ ಯಶಸ್ವಿ | ಇಬ್ಬರ ಹತ್ಯೆಗೈದ ಕಾಡಾನೆ ಸೆರೆ

ಪುತ್ತೂರು: ಅಭಿಮನ್ಯು ಸಹಿತ ದುಬಾರೆಯ 5 ಆನೆಗಳ ಸಹಾಯದಿಂದ ಕಳೆದ 3 ದಿನಗಳಿಂದ ಕಡಬ ರಕ್ಷಿತಾರಣ್ಯದಲ್ಲಿ ನಡೆಯುತ್ತಿರುವ ಕಾಡಾನೆ ಕಾರ್ಯಾಚರಣೆ ಕೊನೆಗೂ ಯಶಸ್ವಿ ಕಂಡಿದೆ. ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆ ಗುರುವಾರ ಸಂಜೆ ಸೆರೆ ಹಿಡಿದಿದೆ. ಕಡಬ ತಾಲೂಕಿನ ರೆಂಜಿಲಾಡಿಯ ನೈಲ ಎಂಬಲ್ಲಿ ಫೆ. 20ರಂದು ರಂಜಿತಾ (21) ಹಾಗೂ ರಮೇಶ್ ರೈ (52) ಎಂಬವರನ್ನು ಕಾಡಾನೆ ಕೊಂದು ಹಾಕಿತ್ತು. ಸ್ಥಳೀಯರ ಒತ್ತಾಯದ ಮೇರೆಗೆ ಅಷ್ಟರಲ್ಲಿ ಅಲ್ಲಿಗಾಗಮಿಸಿದ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ 3 ದಿನ

ಕಾಡಾನೆ ಕಾರ್ಯಾಚರಣೆ ಕೊನೆಗೂ ಯಶಸ್ವಿ | ಇಬ್ಬರ ಹತ್ಯೆಗೈದ ಕಾಡಾನೆ ಸೆರೆ Read More »

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನೂತನ ನಾಗನಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ

ಪುತ್ತೂರು : ನರಿಮೊಗರು ಗ್ರಾಮದ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನೂತನ ನಾಗನಕಟ್ಟೆಗೆ ಭೂಮಿ ಪೂಜೆ ಗುರುವಾರ ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಪೂಜೆಯ ಅಂಗವಾಗಿ ಬೆಳಿಗ್ಗೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗರ್ಭಗುಡಿ ಎದುರು ಪ್ರಾರ್ಥನೆ ನೆರೆವೇರಿಸಲಾಯಿತು. ಬಳಿಕ ನಾಗನಕಟ್ಟೆ ನಿರ್ಮಾಣ ಸ್ಥಳದ ಬಳಿ ತೆರಳಿ ವಿವಿಧ ವೈದಿಕ ಕಾರ್ಯಕ್ರಮದೊಂದಿಗೆ ಭೂಮಿ ಪೂಜೆಯನ್ನು ಲಕ್ಷ್ಮೀಶ ಪುತ್ತೂರಾಯ  ನೆರವೇರಿಸಿದರು. ತಂತ್ರಿ ಶ್ರೀಪತಿ ಭಟ್, ಅರ್ಚಕ ರಮೇಶ್ ಬೈಪಡಿತ್ತಾಯ ವೈದಿಕ ಕಾರ್ಯಕ್ರಮದಲ್ಲಿ ಸಹಕರಿಸಿದರು. ಈ

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನೂತನ ನಾಗನಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ Read More »

ಮಿತ್ತೂರು ಫ್ರೀಡಂ ಕಮ್ಯೂನಿಟಿ ಹಾಲಿನಲ್ಲಿ ಉಗ್ರ ಚಟುವಟಿಕೆ | ಎನ್‍.ಐ.ಎ. ವಶಕ್ಕೆ ಫ್ರೀಡಂ ಕಮ್ಯೂನಿಟಿ ಹಾಲ್

ಪುತ್ತೂರು : ಬಿಜೆಪಿ ಯುವ ಮುಖಂಡ, ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ನಡೆದ ತನಿಖೆ ವೇಳೆ ಕಬಕ ಸಮೀಪದ ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿಯ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ಪಿಎಫ್ ಐ ಸದಸ್ಯರಿಗೆ ಅನಧಿಕೃತವಾಗಿ ಭಯೋತ್ಪಾದನಾ ಚಟುವಟಿಕೆಗೆ ಸಹಕಾರಿಯಾಗುವ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ ಎಂಬ ವಿಚಾರ ಬಹಿರಂಗಗೊಂಡ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ಫ್ರೀಡಂ ಕಮ್ಯೂನಿಟಿ ಹಾಲ್ ನ್ನು ಸ್ವಾಧೀನಪಡಿಸಿಕೊಂಡು ಬೀಗ ಜಡಿದಿದೆ. ಮಿತ್ತೂರಿನಲ್ಲಿ ಸುಮಾರು 0.20 ಎಕ್ರೆ ಜಾಗದಲ್ಲಿ ಈ

ಮಿತ್ತೂರು ಫ್ರೀಡಂ ಕಮ್ಯೂನಿಟಿ ಹಾಲಿನಲ್ಲಿ ಉಗ್ರ ಚಟುವಟಿಕೆ | ಎನ್‍.ಐ.ಎ. ವಶಕ್ಕೆ ಫ್ರೀಡಂ ಕಮ್ಯೂನಿಟಿ ಹಾಲ್ Read More »

ಯುವಕರ ಕಠಿಣ ಪರಿಶ್ರಮದಿಂದ ಭವ್ಯ ಗುಡಿ ನಿರ್ಮಾಣಗೊಂಡಿದೆ : ಶಾಸಕ ಸಂಜೀವ ಮಠಂದೂರು

ಪೆರ್ನೆ : ಪೆರ್ನೆ ಮಾಡತ್ತಾರು ಕೊರತಿಕಟ್ಟೆ ಸಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಗುರುವಾರ ನಡೆಯಿತು. ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭವ್ಯವಾದ ಗುಡಿಗಳನ್ನು ನಿರ್ಮಾಣ ಮಾಡಿರುವುದರ ಪರಿಣಾಮ ಜನರ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ. ಯುವಕರ ಕಠಿಣ ಪರಿಶ್ರಮದಿಂದ ಉತ್ತಮ ಕೆಲಸ ಆಗಿದೆ. ಪರಂಪರೆಯನ್ನು ಹೇಗೆ ಉಳಿಸಬಹುದು ಅನ್ನುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆದಿವೆ ಎಂದ ಅವರು, ಧಾರ್ಮಿಕತೆಗೆ ಒತ್ತು ಕೊಟ್ಟು ಭಜನಾ

ಯುವಕರ ಕಠಿಣ ಪರಿಶ್ರಮದಿಂದ ಭವ್ಯ ಗುಡಿ ನಿರ್ಮಾಣಗೊಂಡಿದೆ : ಶಾಸಕ ಸಂಜೀವ ಮಠಂದೂರು Read More »

error: Content is protected !!
Scroll to Top