ಪುತ್ತೂರು

ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ ಕುರಿತ ವಿಚಾರಗೋಷ್ಠಿ

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಭಿನ್ನವಾಗಿ ಆಲೋಚಿಸುವ ಶಕ್ತಿ ಇದೆ. ಈ ಚಿಂತನೆಗಳಿಗೆ ಮೂರ್ತ ರೂಪ ಕೊಡುವ ಮೂಲಕ ಅದನ್ನೊಂದು ವಿನ್ಯಾಸವನ್ನಾಗಿಸಿದರೆ ಹೊಸ ಹೊಸ ಉತ್ಪನ್ನಗಳು ಉದ್ಭವಿಸುವುದಕ್ಕೆ ಸಾಧ್ಯವಿದೆ ಎಂದು ಬೆಂಗಳೂರಿನ ವಿದ್ಯಾಕೋಶ ಫ್ರೈವೆಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಐಐಎಸ್ಸಿ ಬೆಂಗಳೂರಿನ ಪ್ರಾಜೆಕ್ಟ್ ನೆಟ್‌ವರ್ಕ್ ವಿಭಾಗದ ಪೂರ್ವ ಮುಖ್ಯಸ್ಥ ಡಾ.ಅಶೋಕ್ ರಾವ್ ಹೇಳಿದರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ಚಿಂತನೆ ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ […]

ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ ಕುರಿತ ವಿಚಾರಗೋಷ್ಠಿ Read More »

ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ 30ನೇ ವಾರ್ಷಿಕೋತ್ಸವ

ಪುತ್ತೂರು : ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ 30ನೇ ವರ್ಷದ ವಾರ್ಷಿಕೋತ್ಸವ ಬುಧವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಭಜನಾ ಮಂಡಳಿಯಲ್ಲಿ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, 9 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನಾಗ ತಂಬಿಲ, ದೈವಗಳಇಗೆ ತಂಬಿಲ ಸೇವೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ 12 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಊರ

ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ 30ನೇ ವಾರ್ಷಿಕೋತ್ಸವ Read More »

ವಿಶ್ವ ಮಹಿಳಾ ದಿನಾಚರಣೆ : ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ

ಪುತ್ತೂರು : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳಿಗೆ  ಉಚಿತ ಆರೋಗ್ಯ ತಪಾಸಣೆ ಬುಧವಾರ ನಡೆಯಿತು. ಮಣಿಪಾಲ್ ಸಿಗ್ಮಾ  ಹಾಗೂ ಬೊಳುವಾರು ಪ್ರಗತಿ ಸ್ಪೆಷಾಲಿಟಿ ಹಾಸ್ಪಿಟಲ್ ಬೊಳುವಾರು ವತಿಯಿಂದ ನಡೆಯಿತು. ತಪಾಸಣೆಯಲ್ಲಿ ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿದರು.

ವಿಶ್ವ ಮಹಿಳಾ ದಿನಾಚರಣೆ : ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ Read More »

ಮಾ.11 : ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಾವುನಲ್ಲಿ ಸ್ವಾಗತ | ಪುತ್ತೂರು ವೆಂಕಟ್ರಮಣ ದೇವಸ್ಥಾನದ ಬಳಿ ಸಮಾವೇಶ |

ಪುತ್ತೂರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪುತ್ತೂರು ವಿಧಾನ ಸಭಾಕ್ಷೇತ್ರಕ್ಕೆ ಮಾ.11 ರಂದು ಸಾಯಂಕಾಲ 5 ಗಂಟೆಗೆ ಕಾವುನಲ್ಲಿ ಸ್ವಾಗತಿಸಿ, 5.30ಕ್ಕೆ ಪುತ್ತೂರು ವೆಂಕಟ್ರಮಣ ದೇವಸ್ಥಾನ ಸಮೀಪದಲ್ಲಿ ಸಮಾವೇಶ ನಡೆಯಲಿದೆ. ಚುನಾವಣೆಯ ದಿಕ್ಸೂಚಿಯಾಗಿ ಈ ಸಮಾವೇಶ ನಡೆಯಲಿದೆ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ ಹೇಳಿದರು. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಸಭಾ ಚುನಾವಣೆಯ ದೃಷ್ಠಿಕೋನದಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಿದೆ. ನಾಲ್ಕು ತಂಡಗಳಾಗಿ ರಾಜ್ಯದ 224

ಮಾ.11 : ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಾವುನಲ್ಲಿ ಸ್ವಾಗತ | ಪುತ್ತೂರು ವೆಂಕಟ್ರಮಣ ದೇವಸ್ಥಾನದ ಬಳಿ ಸಮಾವೇಶ | Read More »

ಅಮೃತ ನಗರೋತ್ಥಾನ ಯೋಜನೆಯಡಿ ರಸ್ತೆ ಅಭಿವೃದ್ಧಿ, ನೂತನ ಸೇತುವೆ, ದಾರಿದೀಪ ಅಳವಡಿಕೆಗೆ ಶಂಕುಸ್ಥಾಪನೆ | ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಅಮೃತ ನಗರೋತ್ಥಾನ ಯೋಜನೆಯಡಿ 4.7 ಕೋಟಿ ರೂ. ಹಾಗೂ 3 ಕೋಟಿ ರೂ. ಅನುದಾನದಲ್ಲಿ ಬೆದ್ರಾಳ ಬಳಿ ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ ಹಾಗೂ ರಸ್ತೆ ವಿಭಜಕ್ಕೆ ದಾರಿದೀಪ ಅಳವಡಿಕೆಗೆ ಶಂಕುಸ್ಥಾಪನೆ ಸಮಾರಂಭ ಬುಧವಾರ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಳಿ ನಡೆಯಿತು. ಶಾಸಕ ಸಂಜೀವ ಮಠಂದೂರು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಈಗಾಗಲೇ ನಗರರಸಭೆ ಜಲಸಿರಿ ಯೋಜನೆಯಡಿ 117 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ. 7.7 ಕೋಟಿ ರೂ. ವೆಚ್ಚದ ಕಾಮಗಾರಿಗೆ ಇಂದು ಶಿಲಾನ್ಯಾಸ ನೆರವೇರಿದೆ.

ಅಮೃತ ನಗರೋತ್ಥಾನ ಯೋಜನೆಯಡಿ ರಸ್ತೆ ಅಭಿವೃದ್ಧಿ, ನೂತನ ಸೇತುವೆ, ದಾರಿದೀಪ ಅಳವಡಿಕೆಗೆ ಶಂಕುಸ್ಥಾಪನೆ | ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಸಂಜೀವ ಮಠಂದೂರು Read More »

ಮಾ.9 : ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ

ಕುದ್ಮಾರು : ಕಡಬ ತಾಲೂಕಿನ ಕುದ್ಮಾರು ಗ್ರಾಮದ ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ ಮಾ.9 ಗುರುವಾರ ಕುದ್ಮಾರು ದೈಪಿಲ ದ್ವಾರದ ಬಳಿ ಕಟ್ದತ್ತಾರು ಕಟ್ಟೆಯಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 8 ಕ್ಕೆ ಗಣಪತಿ ಹೋಮ, ಸಂಜೆ 6 ಕ್ಕೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯುವುದು, 8.30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು

ಮಾ.9 : ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ Read More »

ಇಂದು (ಮಾ.8) : ಕಾರ್ಜಾಲು ದೊಂಪದ ಬಲಿ ನೇಮೋತ್ಸವ ಆಮಂತ್ರಣ ಪತ್ರಿಕೆ ವಿತರಣೆ

ಪುತ್ತೂರು: ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ನೇಮೋತ್ಸವ ಮಾ.11 ರಂದು ನಡೆಯಲಿದ್ದು, ಇದರ ಅಂಗವಾಗಿ ಇಂದು ( ಮಾ.8 ) ಪುತ್ತೂರು ನಗರದಲ್ಲಿ ಆಮಂತ್ರಣ ಪತ್ರಿಕೆ ವಿತರಣೆ ನಡೆಯಲಿದೆ. ಸಂಜೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿಯಿಂದ ದರ್ಬೆ ವೃತ್ತದ ತನಕ ಆಮಂತ್ರಣ ಪತ್ರ ವಿತರಿಸಲಾಗುವುದು. ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವಲಪ್ ಮೆಂಟ್ ಚಾರಿಟೇಬಲ್‍ ಟ್ರಸ್ಟ್‍ನ ಅಧ್ಯಕ್ಷ ಸಂಜೀವ ಕಲ್ಲೇಗ ಚಾಲನೆ ನೀಡಲಿದ್ದಾರೆ ಎಂದು

ಇಂದು (ಮಾ.8) : ಕಾರ್ಜಾಲು ದೊಂಪದ ಬಲಿ ನೇಮೋತ್ಸವ ಆಮಂತ್ರಣ ಪತ್ರಿಕೆ ವಿತರಣೆ Read More »

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹವನ, ಚಕ್ರಾಬ್ಧ ಮಂಡಲ ವಿಷ್ಣು ಪೂಜೆ, ನಾಗ ಸಾನ್ನಿಧ್ಯದಲ್ಲಿ ನಾಗತಂಬಿಲ, ಮಧ್ಯಾಹ್ನ ಕಲಶಪೂಜೆ, ಕಲಶಾಭಿಷೇಕ, ವಿಶೇಷ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಬಳಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ದೈವಗಳ ಭಂಡಾರ ತೆಗೆದು ದೈವಸ್ಥಾನಗಳಗೆ ತೆರಳಿ ತಂಬಿಲ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನಾ

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ Read More »

ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ನಿರ್ಮಾಣವಾಗಲಿದೆ ಜಿಲ್ಲಾ ಕ್ರೀಡಾಂಗಣ | ತೆಂಕಿಲದಲ್ಲಿ ಜಾಗ ಗುರುತಿಸಿದ್ದು, ಯೋಜನಾ ವರದಿಯೂ ಸಿದ್ಧ

ಪುತ್ತೂರು: ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಪುತ್ತೂರಿಗೆ ಸುಸಜ್ಜಿತ ಕ್ರೀಡಾಂಗಣ ಅಗತ್ಯ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕಾಗಿ ಜಾಗ ಕಾದಿರಿಸಿದ್ದು, ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಶಾಸಕ ಸಂಜೀವ ಮಠಂದೂರು ಅವರು ಮುತುವರ್ಜಿಯ ವಹಿಸಿ ಜಿಲ್ಲಾ ಕೇಂದ್ರಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒಂದೊಂದಾಗಿ ಹೊಂದಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದರಲ್ಲಿ ಕ್ರೀಡಾಂಗಣವೂ ಒಂದು. ಪುತ್ತೂರು ನಗರದ ಹೊರವಲಯದ ತೆಂಕಿಲದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಜಿಲ್ಲಾ ಕ್ರೀಡಾಂಗಣಕ್ಕಾಗಿ ಈಗಾಗಲೇ ಸ್ಥಳ ಕಾಯ್ದಿರಿಸುವಿಕೆ ಪ್ರಕ್ರಿಯೆ ನಡೆದಿದೆ. ಶಾಸಕ ಸಂಜೀವ ಮಠಂದೂರು ಅವರ ಸರ್ವ ಪ್ರಯತ್ನದಿಂದ ಕ್ರೀಡಾಂಗಣದ ಕನಸು ನನಸಾಗುವುದರಲ್ಲಿದೆ.

ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ನಿರ್ಮಾಣವಾಗಲಿದೆ ಜಿಲ್ಲಾ ಕ್ರೀಡಾಂಗಣ | ತೆಂಕಿಲದಲ್ಲಿ ಜಾಗ ಗುರುತಿಸಿದ್ದು, ಯೋಜನಾ ವರದಿಯೂ ಸಿದ್ಧ Read More »

ರಾಗಿದಕುಮೇರು ಶಾಲೆಯಲ್ಲಿ, ತಾಪಂ ಸಭಾಂಗಣದಲ್ಲಿ ಅಣುಕು ಮತದಾನ

ಪುತ್ತೂರು: ಸಾರ್ವಜನಿಕರಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಬಲ್ನಾಡು ರಸ್ತೆಯಲ್ಲಿರುವ ರಾಗಿದಕುಮೇರು ಶಾಲೆಯಲ್ಲಿ ಹಾಗೂ ತಾ.ಪಂ. ಸಭಾಂಗಣದಲ್ಲಿ ಮಾರ್ಚ್ 8ರಂದು ಅಣುಕು ಮತದಾನ ನಡೆಯಲಿದೆ. ಮತದಾನದ ಸೆಕ್ಟರ್ 12ರ ಅಧಿಕಾರಿಗಳು ಬೆಳಿಗ್ಗೆ 10.30ಕ್ಕೆ ರಾಗಿದಕುಮೇರು ಹಿ.ಪ್ರಾ. ಶಾಲೆಯಲ್ಲಿ ಹಾಗೂ ಮಧ್ಯಾಹ್ನ 11ಕ್ಕೆ ತಾಲೂಕು ಪಂಚಾಯತ್ ಹಿಂಭಾಗದಲ್ಲಿರುವ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಮತದಾನದ ಅಣುಕು ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರಿಗೆ ಮತದಾನದ ಡಿಜಿಟಲ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ

ರಾಗಿದಕುಮೇರು ಶಾಲೆಯಲ್ಲಿ, ತಾಪಂ ಸಭಾಂಗಣದಲ್ಲಿ ಅಣುಕು ಮತದಾನ Read More »

error: Content is protected !!
Scroll to Top