ಧಾರ್ಮಿಕತೆಯ ಔನ್ನತ್ಯದಲ್ಲಿದ್ದರೂ, ಸರಳತೆಯ ಸಾಕಾರ ಮೂರ್ತಿ | ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನಿಧನಕ್ಕೆ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಂತಾಪ
ಪುತ್ತೂರು: ಶ್ರವಣಬೆಳಗೊಳದ ಶ್ರೀ ಜೈನ ಮಠದ ಪೀಠಾಧ್ಯಕರಾದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನಿಧನಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಶ್ರೀ ಜೈನಮಠಕ್ಕೆ ಭೇಟಿ ನೀಡಿದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಅಂತಿಮ ದರ್ಶನ ಪಡೆದರು. ಸಂತಾಪ ಸಂದೇಶ ನೀಡಿದ ಅವರು, ಶ್ರೀ ಜೈನಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಇನ್ನಿಲ್ಲವಾದುದು ದುಃಖದ ಸಂಗತಿ. ಪೂಜ್ಯರು ಧಾರ್ಮಿಕ ಕ್ಷೇತ್ರದ ಔನ್ನತ್ಯದ ಸ್ಥಾನದಲ್ಲಿದ್ದರೂ ಸರಳತೆಯ […]









