ಪುತ್ತೂರು

ಅಂಬಿಕಾ ಮಹಾವಿದ್ಯಾಲಯದಲ್ಲಿ ಅನುಪಮ ಪ್ರತಿಭಾ ವೇದಿಕೆ ಕಾರ್ಯಕ್ರಮ

ಪ್ರತಿಭಾ ಪ್ರದರ್ಶನದಿಂದ ಮನಸ್ಸಿನ ವಿಕಾಸ ಸಾಧ್ಯ : ಚಂದ್ರಕಾಂತ ಗೋರೆ ಪುತ್ತೂರು: ಪ್ರತಿಭಾ ಪ್ರದರ್ಶನದಿಂದ ವಿದ್ಯಾರ್ಥಿಗಳ ಮನಸ್ಸು ವಿಕಸನಗೊಂಡು ಬುದ್ಧಿಮಟ್ಟವೂ ಬೆಳೆಯುತ್ತದೆ. ಸಕಾರಾತ್ಮಕತೆ ಸ್ವೀಕರಿಸುವ ಹಾಗೂ ಋಣಾತ್ಮಕ ವಿಚಾರ ದೂರಗೊಳಿಸುವ ಗುಣ ವೃದ್ಧಿಯಾಗುತ್ತದೆ. ಮಕ್ಕಳು ತಮ್ಮೊಳಗೆ ಹುದುಗಿರುವ ಕಲೆಯನ್ನು ಮುಕ್ತವಾಗಿ ಅಭಿವ್ಯಕ್ತಿಗೊಳಿಸಿದಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಗರದ ನಟ್ಟೋಜು ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಹೇಳಿದರು. ಅವರು ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅನುಪಮ […]

ಅಂಬಿಕಾ ಮಹಾವಿದ್ಯಾಲಯದಲ್ಲಿ ಅನುಪಮ ಪ್ರತಿಭಾ ವೇದಿಕೆ ಕಾರ್ಯಕ್ರಮ Read More »

ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ: ವಲಯ ಮಟ್ಟದ ಪೂರ್ವಭಾವಿ ಸಭೆ, ಆಮಂತ್ರಣ ಬಿಡುಗಡೆ

ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78 ನೇ ಜಯoತ್ಯೋತ್ಸವ ಸಂಸ್ಮರಣ ಕಾರ್ಯಕ್ರಮದ ಪೂರ್ವ ಭಾವಿ ಸಭೆಯು ಕಡಬ ತಾಲೂಕಿನ , ಅಲಂಕಾರು ವಲಯದಲ್ಲಿ ನೆರವೇರಿತು . ಈ ಸಭೆಯ ಸಾನ್ನಿಧ್ಯ ವನ್ನು ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ವಹಿಸಿದ್ದರು. ಪುತ್ತೂರು ಶಾಸಕರಾದ ಸಂಜೀವ ಮಠಂದೂರು , ಒಕ್ಕಲಿಗಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡ ಹಾಗೂ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ನಾಗೇಶ್ ಕೆಡೆಂಜಿ ,

ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ: ವಲಯ ಮಟ್ಟದ ಪೂರ್ವಭಾವಿ ಸಭೆ, ಆಮಂತ್ರಣ ಬಿಡುಗಡೆ Read More »

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಕರೆ ಮೂಹೂರ್ತ

ಪುತ್ತೂರು : ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಡಿ. 12ರಂದು ಕರೆ ಮುಹೂರ್ತ ನಡೆಯಿತು. ಜ. 28 ಮತ್ತು 29ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ 30ನೇ ವರ್ಷದ ಕಂಬಳ ಈ ಬಾರಿ ನಡೆಯಲಿದೆ.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಂಬಳ ಸಮಿತಿ ಸಂಚಾಲಕ ಸುಧಾಕರ ಶೆಟ್ಟಿ ನೇತೃತ್ವದಲ್ಲಿ ಮೂಲ ನಾಗನ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಕರೆ ಮೂಹೂರ್ತ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ೮ನೇ ಶಾಖೆ ಕಾಣಿಯೂರಿನಲ್ಲಿ ಉದ್ಘಾಟನೆ | ಆರ್ಥಿಕ ವಿಚಾರಗಳಿಂದ ಸಮಾಜದ ಬದಲಾವಣೆ: ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಪುತ್ತೂರು: ಇಲ್ಲಿನ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ೮ನೇ ಶಾಖೆ ಕಾಣಿಯೂರಿನ ರಾಶಿ ಕಾಂಪ್ಲೆಕ್ಸ್ನಲ್ಲಿ ಡಿ. ೧೨ರಂದು ಉದ್ಘಾಟನೆಗೊಂಡಿತು.ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾಮಠದ ಸ್ವಾಮೀಜಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಪ್ರತಿ ಜಾತಿ, ಧರ್ಮ, ಮತಗಳು ಒಂದಕ್ಕಿAತ ಒಂದು ಭಿನ್ನವಾಗಿವೆ. ಆದರೆ ಹಣದ ವಿಚಾರ ಬಂದಾಗ ಈ ಭಿನ್ನತೆಗಳು ಕಾಣಸಿಗುವುದಿಲ್ಲ. ದೇವಸ್ಥಾನದಲ್ಲಿ ದೇವರ ಪೂಜೆ ಮಾಡುವವರು ಒಂದು ವರ್ಗ. ದೇವಸ್ಥಾನದ ಹೊರಗಡೆ ನಿಲ್ಲುವವರು ಇನ್ನೊಂದು ವರ್ಗದವರು. ಆದರೆ ಹಣದ ವಿಷಯಕ್ಕೆ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ೮ನೇ ಶಾಖೆ ಕಾಣಿಯೂರಿನಲ್ಲಿ ಉದ್ಘಾಟನೆ | ಆರ್ಥಿಕ ವಿಚಾರಗಳಿಂದ ಸಮಾಜದ ಬದಲಾವಣೆ: ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ Read More »

ವಿಜಯ ಸಾಮ್ರಾಟ್ ತಂಡ ನಿರ್ಮಿಸಿದ ಮನೆ ಹಸ್ತಾಂತರ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕುಂಬ್ರುಗ ಎಂಬಲ್ಲಿ ಬಡ ಕುಟುಂಬಕ್ಕೆ ವಿಜಯ ಸಾಮ್ರಾಟ್ ತಂಡ ನಿರ್ಮಾಣ ಮಾಡಿಕೊಟ್ಟ ಮನೆಯನ್ನು ಶಾಸಕ ಸಂಜೀವ ಮಠಂದೂರು ಅವರು ಕುಟುಂಬಕ್ಕೆ ಹಸ್ತಾಂತರಿಸಿದರು. ಗೋಪಾಲಶೆಟ್ಟಿ ಅವರ ಕುಟುಂಬ ಭದ್ರವಾದ ಮನೆ ಇರದೇ ಪರಿತಪಿಸುತ್ತಿದ್ದ ಸಂಕಷ್ಟ ಹಾಗೂ ಈ ದಂಪತಿ ಪುತ್ರಿಯ ವಿದ್ಯಾಭ್ಯಾಸದ ಸಮಸ್ಯೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಗೆ ಸ್ಪಂದಿಸಿದ ಯುವ ಉದ್ಯಮಿ ಸಹಜ್ ರೈ ಬಳಜ್ಜ ನೇತೃತ್ವದ ವಿಜಯ ಸಾಮ್ರಾಟ್ ತಂಡ, ಶಾಸಕ ಸಂಜೀವ ಮಠಂದೂರು ಅವರ ಉಪಸ್ಥಿತಿಯಲ್ಲಿ ಸ್ಥಳಕ್ಕೆ ಭೇಟಿ ನೀಡಿ,

ವಿಜಯ ಸಾಮ್ರಾಟ್ ತಂಡ ನಿರ್ಮಿಸಿದ ಮನೆ ಹಸ್ತಾಂತರ Read More »

೭೮ನೇ ಜಯಂತ್ಯೋತ್ಸವ, ಸಂಸ್ಮರಣೆ: ಪೂರ್ವಭಾವಿ ಸಭೆ

ಪುತ್ತೂರು: ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಹಾಗೂ ಸಂಸ್ಮರಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಸರ್ವೋದಯ ಪ್ರೌಢಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, ಕಾರ್ಯಕ್ರಮದ ರೂಪುರೇಷೆ ಬಗ್ಗೆ ವಿವರಿಸಿದರು.ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಒಗ್ಗಟ್ಟಿನಿಂದ ಸಹಕರಿಸುವಂತೆ ಮನವಿ ಮಾಡಿಕೊಂಡರು.ಸುಂದರ ಗೌಡ, ಸಚಿನ್, ನಾಗೇಶ್ ಕೆಡೆಂಜಿ, ಪುರುಷೋತ್ತಮ ಮುಂಗ್ಲಿಮನೆ, ಮೋಹನ್ ಗೌಡ, ಮುಕುಂದ ಉಪಸ್ಥಿತರಿದ್ದರು.

೭೮ನೇ ಜಯಂತ್ಯೋತ್ಸವ, ಸಂಸ್ಮರಣೆ: ಪೂರ್ವಭಾವಿ ಸಭೆ Read More »

ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ: ವಲಯ ಮಟ್ಟದ ಪೂರ್ವಭಾವಿ ಸಭೆ, ಆಮಂತ್ರಣ ಬಿಡುಗಡೆ

ಪುತ್ತೂರು: ಸಮುದಾಯದ ಸಂಘಟನೆ, ಸಮಾಜ ಬಲಿಷ್ಟವಾಗಲು ಗುರುಗಳನ್ನು ಮುಂದಿಟ್ಟುಕೊಳ್ಳಬೇಕು. ಇದರಿಂದ ಗುರಿಯನ್ನು ತಲುಪಬಹುದು ಎಂದ ಅವರು ವಿಚಾರ ಮಾಡುವ, ನೋಡುವ, ಕೇಳುವ ಶಕ್ತಿ ಹಾಗೂ ಸಮಾಜ ಸೇವೆ, ಧರ್ಮಸೇವೆ ಮಾಡಲು ಮಾನವನಿಗೆ ಮಾತ್ರ ಸಾಧ್ಯ ಎಂದು ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಜ. ೨೨ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಲಿರುವ ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಠದ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೭೮ನೇ ಜಯಂತ್ಯೋತ್ಸವ

ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ: ವಲಯ ಮಟ್ಟದ ಪೂರ್ವಭಾವಿ ಸಭೆ, ಆಮಂತ್ರಣ ಬಿಡುಗಡೆ Read More »

ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶ: ೫ ಲಕ್ಷ ರೂ. ಘೋಷಿಸಿದ ಶಾಸಕರು

ಪುತ್ತೂರು: ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಡಿ. ೧೨ರಂದು ಶಾಸಕ ಸಂಜೀವ ಮಠಂದೂರು ಅವರು ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಸಂಜೀವ ಮಠಂದೂರು ಅವರು, ದೈವಾರಾಧನೆ, ನಾಗಾರಾಧನೆಯ ವಿಶಿಷ್ಟ ಪರಂಪರೆಯನ್ನು ತುಳುನಾಡು ನೀಡಿದೆ. ಶ್ರದ್ಧೆ, ನಂಬಿಕೆಯ ತಳಹದಿಯ ಮೇಲೆ ಇಲ್ಲಿ ದೈವದ ಆರಾಧನೆ ನಡೆಯುತ್ತಿದೆ. ಆದ್ದರಿಂದ ದೈವಸ್ಥಾನಕ್ಕೆ ಸಂಬಂಧಪಟ್ಟ ಒಂದು ಕಾರ್ಯಕ್ಕೆ ಮುಂದಡಿ ಇಟ್ಟಿದ್ದೇವೆ ಎಂದರೆ, ಅದಕ್ಕೆ ಬೇಕಾದ ಕೆಲಸಗಳು ಒಂದೊಂದಾಗಿ ಕೂಡಿಕೊಂಡು ಬರುತ್ತವೆ. ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ

ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶ: ೫ ಲಕ್ಷ ರೂ. ಘೋಷಿಸಿದ ಶಾಸಕರು Read More »

ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಕ್ರೀಡಾಕೂಟದ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವ ಶತಕಾರ್ಯಕ್ರಮದ ಅಂಗವಾಗಿ ಡಿ‌. 17ಮತ್ತು 18ರಂದು ವಿವೇಕಾನಂದ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟದ ಆಮಂತ್ರಣ ಪತ್ರ ಮತ್ತು ವೇಳಾಪಟ್ಟಿ ಬಿಡುಗಡೆಯು ದರ್ಬೆಯ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆಯಿತು.ಚಲನಚಿತ್ರ ನಟ, ರಂಗಭೂಮಿ‌ ಕಲಾವಿದ ವಿನಾಯಕ ಜೆಪ್ಪು ಅವರು ಕ್ರೀಡಾಕೂಟದ ಆಮಂತ್ರಣ ಪತ್ರ ಬಿಡುಗಡೆ ಮಾಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.ಪುದುಪ್ಪಾಡಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ ರಾಮಕೃಷ್ಣ ಬೋರ್ಕರ್ ಬೇಟೋಳಿ, ಸಂಘದ ಉಪಾಧ್ಯಕ್ಷ ಹರೀಶ್ ಬೋರ್ಕರ್ ಕತ್ತಲಕಾನ,

ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಕ್ರೀಡಾಕೂಟದ ಆಮಂತ್ರಣ ಪತ್ರ ಬಿಡುಗಡೆ Read More »

ಪುತ್ತೂರು ಸರ್ವ ಜನಾಂಗದ ತೋಟ | ಅಮೃತ ನಗರೋತ್ಥಾನ ಕಾಮಗಾರಿ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಜನರು ಸ್ವಾಭಿಮಾನದ ಬದುಕು ಸಾಗಿಸಲು ಬೇಕಾದ ಅಗತ್ಯತೆಗಳನ್ನು ಪೂರೈಸುವ ದೃಷ್ಟಿಕೋನದಿಂದ ಪುತ್ತೂರು ನಗರಸಭೆ ಆಲೋಚಿಸುತ್ತಿದೆ. ಇದು ಸಾಧ್ಯವಾದಾಗ ಸಾರ್ಥಕತೆಯನ್ನು ನಾವು ಕಾಣುತ್ತೇವೆ. ಆದ್ದರಿಂದ ಕುವೆಂಪು ಹೇಳಿರುವ ಸರ್ವ ಜನಾಂಗದ ಶಾಂತಿಯ ತೋಟ ಪುತ್ತೂರು ಆಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಪುತ್ತೂರು ನಗರಸಭೆ ಆಶ್ರಯದಲ್ಲಿ ರವಿವಾರ ಪುತ್ತೂರು ಪುರಭವನದಲ್ಲಿ ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ 4ರ ಯೋಜನೆಯಲ್ಲಿ ಪುತ್ತೂರು ನಗರಸಭೆಗೆ ಮಂಜೂರಾಗಿರುವ 30 ಕೋಟಿ ರೂ. ಮೊತ್ತದ ಯೋಜನೆಯಲ್ಲಿ 16.96 ಕೋಟಿ ರೂ. ವೆಚ್ಚದ

ಪುತ್ತೂರು ಸರ್ವ ಜನಾಂಗದ ತೋಟ | ಅಮೃತ ನಗರೋತ್ಥಾನ ಕಾಮಗಾರಿ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

error: Content is protected !!
Scroll to Top