ಪುತ್ತೂರು

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀ ರಾಮನವಮಿ ಉತ್ಸವ, ಸಾರ್ವಜನಿಕ ನವಗ್ರಹ ಯಾಗ

ಪುತ್ತೂರು: ನಗರದ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಮನವಮಿ ಉತ್ಸವ ಹಾಗೂ ಸಾರ್ವಜನಿಕ ನವಗ್ರಹ ಯಾಗ ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಉತ್ಸವದ ಅಂಗವಾಗಿ ಮಠದ ಪ್ರಧಾನ ಅರ್ಚಕ ಎ.ರಾಘವೇಂದ್ರ ಉಡುಪರ ನೇತೃತ್ವದಲ್ಲಿ ಬೆಳಿಗ್ಗೆ 8 ರಿಂದ ಪುಣ್ಯಾಹ ವಾಚನ, ಗ್ರಹಶಾಂತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಮಠದ ಟ್ರಸ್ಟಿಗಳಾದ ಯನ್. ಸುಬ್ರಹ್ಮಣ್ಯಂ, ಬೆಟ್ಟ ಈಶ್ವರ ಭಟ್, ಲೋಕೇಶ್ ಹೆಗ್ಡೆ, ಗಣಪತಿ ನಾಯಕ್, ಕಾರ್ಯದರ್ಶಿ […]

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀ ರಾಮನವಮಿ ಉತ್ಸವ, ಸಾರ್ವಜನಿಕ ನವಗ್ರಹ ಯಾಗ Read More »

ಡಿವೈಡರ್‌‌ಗೆ ಕಾರು ಢಿಕ್ಕಿ : ಮಹಿಳೆ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

ಉಪ್ಪಿನಂಗಡಿ : ಮಾ. 30 ರಂದು ನೆಲ್ಯಾಡಿ ಯ ಕರ್ಬಸಂಕ ಬಳಿ ಬೆಳ್ಳಂಬೆಳಿಗ್ಗೆ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ- ಮಂಗಳೂರು ಕಡೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕರ್ಬಸಂಕ‌ ಬಳಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿದ್ದು, ಆಕೆಯ ಪತಿ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಕರ್ಬಸಂಕ ಬಳಿ ನಡೆದಿದೆ. ಅನ್ನಪೂರ್ಣ(50)ಮೃತಪಟ್ಟ ಮಹಿಳೆ. ಅಶ್ವಿನ್ (ಮಗ) ಹಾಗೂ ಆತನ ತಂದೆ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು

ಡಿವೈಡರ್‌‌ಗೆ ಕಾರು ಢಿಕ್ಕಿ : ಮಹಿಳೆ ಮೃತ್ಯು, ಇಬ್ಬರಿಗೆ ಗಂಭೀರ ಗಾಯ Read More »

ಶಿರಾಡಿ ದೈವ ನರ್ತನ ವೇಳೆಯೇ ಕುಸಿದು ಬಿದ್ದ ದೈವ ನರ್ತಕ ಸಾವು | ವೀಡಿಯೋ ಇಲ್ಲಿದೆ ನೋಡಿ

ಕಾಣಿಯೂರಿನ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಮಾ. 30ರಂದು ದೈವ ನರ್ತನದ ವೇಳೆಯೇ ದೈವ ನರ್ತಕ, ಮೂಲಂಗೀರಿ ನಿವಾಸಿ ಕಾಂತು ಅಜಿಲ ಮಾಲೆಂಗ್ರಿ ಕುಸಿದು ಬಿಟ್ಟು ಮೃತಪಟ್ಟಿದ್ದಾರೆ.

ಶಿರಾಡಿ ದೈವ ನರ್ತನ ವೇಳೆಯೇ ಕುಸಿದು ಬಿದ್ದ ದೈವ ನರ್ತಕ ಸಾವು | ವೀಡಿಯೋ ಇಲ್ಲಿದೆ ನೋಡಿ Read More »

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಆಡಳಿತ ಮಂಡಳಿ ಚುನಾವಣೆ

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಆಡಳಿತ ಮಂಡಳಿಗೆ ಮಾ.26 ರಂದು ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಲೋಕಯ್ಯ ಗೌಡರ ನೇತೃತ್ವದ ತಂಡ ಒಂದು ಸ್ಥಾನದ ಮೂಲಕ ಬಹುಮತ ಪಡೆದಿದೆ. ಎದುರಾಳಿ ತಂಡದ ನಾಯಕತ್ವ ವಹಿಸಿದ್ದ ಕಿರಣ್ ಬುಡ್ಲೆಗುತ್ತು ಅತಿಹೆಚ್ಚು ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಅವರ ತಂಡ 10 ಸ್ಥಾನಗಳನ್ನು ಪಡೆದುಕೊಂಡಿದೆ. ಲೋಕಯ್ಯ ಗೌಡರ ತಂಡ 11 ಸ್ಥಾನಗಳನ್ನು ಗೆದ್ದುಕೊಂಡಿದೆ. ಸಂಘದ ಒಟ್ಟು 21 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಲೋಕಯ್ಯ

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಆಡಳಿತ ಮಂಡಳಿ ಚುನಾವಣೆ Read More »

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ | ಧಾರ್ಮಿಕ ಸಭಾ ಕಾರ್ಯಕ್ರಮ

ಪುತ್ತೂರು: ಪ್ರಸ್ತುತ ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣದ ಕೊರತೆಯಿದ್ದು, ಧಾರ್ಮಿಕ ಕೇಂದ್ರಗಳ ಮೂಲಕ ಧಾರ್ಮಿಕ ಶಿಕ್ಷಣ ನೀಡುವ ಕರ್ತಯವ್ಯ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು. ಅವರು ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ 5ನೇ ದಿನವಾದ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಯಾಗಿ ಮಾತನಾಡಿದರು. ಈಗಾಗಲೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ | ಧಾರ್ಮಿಕ ಸಭಾ ಕಾರ್ಯಕ್ರಮ Read More »

ಇಂದು (ಮಾ.30) : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಕೊನೆಯ ದಿನವಾದ ಗುರುವಾರದ ಕಾರ್ಯಕ್ರಮ ಈ ಕೆಳಗಿನಂತಿದೆ. ಮುಂಜಾನೆ 5 ರಿಂದ 108 ಕಾಯಿ ಗಣಪತಿ ಹೋಮ, 6.32 ರಿಂದ 7.10 ರ ವರೆಗೆ ನಡೆಯುವ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ, 10.30 ಕ್ಕೆ ಶ್ರೀಗಳಿಂದ ರಥ ಸಮರ್ಪಣೆ, 12 ಕ್ಕೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಡೆಯಲಿದೆ. ಸಂಜೆ 6.30 ರಿಂದ ಮಹಾಪೂಜೆ,

ಇಂದು (ಮಾ.30) : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮ Read More »

ನೀತಿ ಸಂಹಿತೆ ಜಾರಿ: ರಾಜಕೀಯ ಬ್ಯಾನರ್ ತೆರವು ಮಾಡಿದ ನಗರಸಭೆ

ಪುತ್ತೂರು: ಚುನಾವಣೆಗೆ ದಿನ ನಿಗದಿಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಿದೆ. ಆದ್ದರಿಂದ ರಾಜಕೀಯಕ್ಕೆ ಸಂಬಂಧಪಟ್ಟ ಎಲ್ಲಾ ಬ್ಯಾನರ್‍ಗಳನ್ನು ತೆರವು ಮಾಡುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಬುಧವಾರ ಪುತ್ತೂರು ನಗರಸಭಾ ವ್ಯಾಪ್ತಿಯ ವಿವಿಧ ರಾಜಕೀಯ ಪಕ್ಷಗಳ, ನಾಯಕರ ಪೋಸ್ಟರ್, ಬ್ಯಾನರ್ ಇತ್ಯಾದಿಗಳನ್ನು ತೆರವು ಮಾಡಲಾಯಿತು. ಜಾಹೀರಾತಿನಲ್ಲಿ ಹಾಕಲಾದ ರಾಜಕೀಯ ನಾಯಕರ ಭಾವಚಿತ್ರವನ್ನು ಮರೆಮಾಚುವ ಕಾರ್ಯವೂ ನಡೆಯಿತು.

ನೀತಿ ಸಂಹಿತೆ ಜಾರಿ: ರಾಜಕೀಯ ಬ್ಯಾನರ್ ತೆರವು ಮಾಡಿದ ನಗರಸಭೆ Read More »

ಜನಪ್ರೀತಿಯ ಶಿಕ್ಷಕ ಮದನ ಪೂಜಾರಿ ಅವರಿಗೆ ಏ. 2ರಂದು ಸಾರ್ವಜನಿಕ ಶ್ರದ್ಧಾಂಜಲಿ

ಪುತ್ತೂರು: ಕುದ್ಮಾರು ಶಾಲಾ ನಿವೃತ್ತ ಶಿಕ್ಷಕ ಮದನ ಪೂಜಾರಿ ಅವರು ಮಾ. 16ರಂದು ನಿಧನರಾಗಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಏ. 2ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಶಿಕ್ಷಕರಾಗಿ 35 ವರ್ಷಗಳ ಸಾರ್ಥಕ ವೃತ್ತಿ ಜೀವನ ನಡೆಸಿದವರು ಮದನ ಪೂಜಾರಿ ಅವರು. ಅವರು ಶಿಕ್ಷಕರಾಗಿದ್ದಷ್ಟು ಸಮಯ ಶಾಲೆಗಷ್ಟೇ ಶಿಕ್ಷಕರಾಗಿರಲಿಲ್ಲ, ಸಮಾಜಕ್ಕೆ ಶಿಕ್ಷಕರಾಗಿದ್ದದ್ದು ವಿಶೇಷತೆ. 35 ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ಅವರು ಶಿಕ್ಷಕರಾಗಿದ್ದುದರಿಂದ, ಕೆಲ ಮಕ್ಕಳ ತಂದೆಗೂ ಅವರೇ

ಜನಪ್ರೀತಿಯ ಶಿಕ್ಷಕ ಮದನ ಪೂಜಾರಿ ಅವರಿಗೆ ಏ. 2ರಂದು ಸಾರ್ವಜನಿಕ ಶ್ರದ್ಧಾಂಜಲಿ Read More »

ಮಾ. 30: ಚಾರ್ವಾಕ ಕೆಳಗಿನಕೇರಿ ಕೊಪ್ಪದಲ್ಲಿ ನೇಮೋತ್ಸವ

ಪುತ್ತೂರು: ಚಾರ್ವಾಕ ಗ್ರಾಮದ ಶ್ರೀ ಕ್ಷೇತ್ರ ಕೆಳಗಿನಕೇರಿ ಕೊಪ್ಪದಲ್ಲಿ ಮಾ. 30ರಂದು ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ ನಡೆಯಲಿದೆ. ಮಾ. 29ರಂದು ರಾತ್ರಿ 8ಕ್ಕೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಮಾ. 30ರಂದು ಶ್ರೀ ಕ್ಷೇತ್ರ ಕೊಪ್ಪದಲ್ಲಿ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾ. 30: ಚಾರ್ವಾಕ ಕೆಳಗಿನಕೇರಿ ಕೊಪ್ಪದಲ್ಲಿ ನೇಮೋತ್ಸವ Read More »

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪೂಜನ ಜೆ ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ.

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ  ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಪೂಜನ ಜೆ. ಎಸ್  ರವರು ಶೇ 90% ಅಂಕ ಪಡೆದು ಡಿಸ್ಟ್ರಿಕ್ಸಣ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. .ಪುತ್ತೂರಿನ ಭಾರತೀಯ ನೃತ್ಯ ಶಾಲೆಯಲ್ಲಿ ಶ್ರುತಿರೋಶನ್ ಬೆಳ್ಳೂರು ಶಿಷ್ಯೆಯಾಗಿರುವ ಅವರು ಪ್ರಸ್ತುತ ನರಿಮೊಗರು ಪುರುಷರಕಟ್ಟೆಯ ಸರಸ್ವತಿ ವಿದ್ಯಾಮಂದಿರದ 6 ನೇ ತರಗತಿಯ ವಿದ್ಯಾರ್ಥಿನಿ. ಒತ್ತೆಮುಂಡೂರು ಜಯರಾಮ ಪೂಜಾರಿ ಮತ್ತು ಶಾಲಿನಿ ದಂಪತಿ ಪುತ್ರಿ.

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪೂಜನ ಜೆ ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ. Read More »

error: Content is protected !!
Scroll to Top