ಪುತ್ತೂರು

ಏ. 9: ಪುತ್ತೂರು ಜಾತ್ರೆಗೆ ಕಡೇಶಿವಾಲಯ ಯುವಶಕ್ತಿಯಿಂದ ಶ್ರಮದಾನ

ಪುತ್ತೂರು: ಕಡೇಶಿವಾಲಯ ಯುವಶಕ್ತಿ ನೇತೃತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 9ರಂದು ಶ್ರಮದಾನ ಸೇವೆ ನಡೆಯಲಿದೆ. ಯುವಶಕ್ತಿ ಸೇವಾಪಥ ದ.ಕ. ಇದರ ನೇತೃತ್ವದಲ್ಲಿ ಮಿತ್ರಸಂಸ್ಥೆಗಳ ಒಗ್ಗೂಡುವಿಕೆಯೊಂದಿಗೆ ಶ್ರಮದಾನ ಸೇವೆ ಆಯೋಜಿಸಲಾಗಿದೆ. ಹತ್ತೂರು ಸಂಭ್ರಮಿಸುವ ಪುತ್ತೂರ ಒಡೆಯನ ಜಾತ್ರೋತ್ಸವದ ಶುಭಸಮಯದಿ ಶ್ರಮಸೇವೆಗೈಯೋಣ ಬನ್ನಿ ಎಂಬ ಧ್ಯೇಯವಾಕ್ಯದೊಂದಿಗೆ ಶ್ರಮದಾನ ನಡೆಯಲಿದೆ. ಈಗಾಗಲೇ ಹಲವಾರು ಜನಪರ ಕಾರ್ಯಕ್ರಮಗಳಲ್ಲಿ ಖ್ಯಾತಿ ಗಳಿಸಿರುವ ಕಡೇಶಿವಾಲಯ ಯುವಶಕ್ತಿ ತಂಡ ಏಪ್ರಿಲ್ 9ರಂದು ಜಾತ್ರೋತ್ಸವ ಹಿನ್ನೆಲೆಯಲ್ಲಿ ಶ್ರಮದಾನಕ್ಕೆ ಮುಂದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಏ. 9: ಪುತ್ತೂರು ಜಾತ್ರೆಗೆ ಕಡೇಶಿವಾಲಯ ಯುವಶಕ್ತಿಯಿಂದ ಶ್ರಮದಾನ Read More »

ಸಂತ ಫಿಲೋಮಿನಾ ಕಾಲೇಜಿಗೆ ಮ್ಯಾನೇಜ್‌ಮೆಂಟ್‌  ಫೆಸ್ಟ್ ನಲ್ಲಿ ಸಮಗ್ರ ಪ್ರಶಸ್ತಿ

ಪುತ್ತೂರು: ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಆಯೋಜಿಸಲಾದ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್ʼ ಸ್ಪಿನೌಟ್-2023ʼ ನಲ್ಲಿ ಸಂತ ಫಿಲೋಮಿನಾ ಕಾಲೇಜಿನ ಬಿಬಿಎ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ತೃತೀಯ ಬಿಬಿಎಯ ಕೃಪಾಲಿ ರೈ ಹಾಗೂ ದ್ವಿತೀಯ ಬಿಬಿಎ ಯ ಭವಿಷ್ಯ ರೈ ಮಾರ್ಕೆಟಿಂಗ್‌ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ತೃತೀಯ ಬಿಬಿಎಯ ಆದಿತ್ಯ ಡೋಂಗ್ರೆ ಸ್ಪರ್ಧೆಯ ಬೆಸ್ಟ್‌ ಮ್ಯಾನೇಜರ್‌ ಆಗಿ ಹೊರಹೊಮ್ಮಿದ್ದಾರೆ.  ಇದರೊಂದಿಗೆ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿದೆ. ಪ್ರಶಸ್ತಿ ವಿಜೇತ ತಂಡದಲ್ಲಿ ತೃತೀಯ ಬಿಬಿಎಯ ಲೋಕೇಂದರ್‌

ಸಂತ ಫಿಲೋಮಿನಾ ಕಾಲೇಜಿಗೆ ಮ್ಯಾನೇಜ್‌ಮೆಂಟ್‌  ಫೆಸ್ಟ್ ನಲ್ಲಿ ಸಮಗ್ರ ಪ್ರಶಸ್ತಿ Read More »

ಮಂಗಳೂರು ವಿಶ್ವವಿದ್ಯಾನಿಲಯ ಎಂ.ಎ ಪರೀಕ್ಷೆಯಲ್ಲಿ ಪವನ.ಕೆ ತೃತೀಯ ರ್ಯಾಂಕ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ 2021-22ನೇ ಸಾಲಿನ ಹಿಂದಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಬೆಳ್ಳಾರೆಯ ಪವನ.ಕೆ 8.25 ಸಿಜಿಪಿಎಯೊಂದಿಗೆ ತೃತೀಯ ರ್ಯಾಂಕ್ ಗಳಿಸಿದ್ದಾರೆ. ಪ್ರಸ್ತುತ ವಿವೇಕಾನಂದ ಪದವಿ (ಸ್ವಾಯುತ್ತ) ಕಾಲೇಜಿನಲ್ಲಿ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಪದ್ಮನಾಭ ನಾಯಕ್ ಮತ್ತು ಶ್ರೀಮತಿಯವರ ಪುತ್ರಿಯಾಗಿದ್ದು, ಗಣೇಶ್ ಪ್ರಸಾದ್ ನಾಯಕ್‌ರವರ ಪತ್ನಿ.

ಮಂಗಳೂರು ವಿಶ್ವವಿದ್ಯಾನಿಲಯ ಎಂ.ಎ ಪರೀಕ್ಷೆಯಲ್ಲಿ ಪವನ.ಕೆ ತೃತೀಯ ರ್ಯಾಂಕ್ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ | ಏ.9 ರಂದು ಪುಷ್ಕರಣಿಯ ಶ್ರೀ ವರುಣ ದೇವರಿಗೆ ಸೇವಾ ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವ ಏ.10 ರಿಂದ 20 ರ ತನಕಿ ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಜಾತ್ರೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಿಳಿಸಿದ್ದಾರೆ. ಅವರು ಶುಕ್ರವಾರ ದೇವಸ್ಥಾನದ ಕಚೇರಿಯಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಜಾತ್ರೋತ್ಸವದ ವಿಶೇಷತೆಗಳ ಕುರಿತು ಮಾಹಿತಿ ನೀಡಿ, ಈಗಾಗಲೇ ದೇವಸ್ಥಾನದ ಪುಷ್ಕರಣಿಯಲ್ಲಿರುವ ನೂತನ ಶಿಲಾಮಯ ಕಟ್ಟೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶನಿವಾರ ಸಂಪೂರ್ಣಗೊಳ್ಳಲಿದೆ. ಧ್ವಜಾರೋಹಣದ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ | ಏ.9 ರಂದು ಪುಷ್ಕರಣಿಯ ಶ್ರೀ ವರುಣ ದೇವರಿಗೆ ಸೇವಾ ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶ Read More »

ಅಭಿವೃದ್ಧಿ ಸಹಿಸದವರಿಂದ ಅಪಪ್ರಚಾರ : ಸಂಜೀವ ಮಠಂದೂರು ಹೇಳಿಕೆ

ಪುತ್ತೂರು: ಅಭಿವೃದ್ಧಿಯನ್ನು ಸಹಿಸದ ಕೆಲವೊಂದು ವ್ಯಕ್ತಿಗಳು ತನ್ನ ತೇಜೋವಧೆ ಮಾಡುವ ಉದ್ದೇಶದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಂತಹ ಅಪಪ್ರಚಾರಗಳ ವಿರುದ್ಧ ಕಾನೂನು ಹೋರಾಟ ಮಾಡಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದೇನೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿಷ್ಠಿತ ಮನೆಯಲ್ಲಿ ಹುಟ್ಟಿ ಬೆಳೆದಿರುವ ತನ್ನ ಜೀವನವನ್ನು ಧಾರ್ಮಿಕ, ಶೈಕ್ಷಣಿಕ, ಸಹಕಾರ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಿಗೆ ಮೀಸಲಾಗಿಟ್ಟಿದ್ದು, ಕಳೆದ ಹಲವು ದಶಕಗಳಿಂದ ಈ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದೇನೆ.

ಅಭಿವೃದ್ಧಿ ಸಹಿಸದವರಿಂದ ಅಪಪ್ರಚಾರ : ಸಂಜೀವ ಮಠಂದೂರು ಹೇಳಿಕೆ Read More »

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಏ.9ರ ನಂತರ ಪ್ರಕಟ

ಅಂತಿಮ ಹಂತದ ಆಯ್ಕೆ ಪ್ರಕ್ರಿಯೆ ದಿಲ್ಲಿಯಲ್ಲಿ ಪುತ್ತೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಏ.9 ರಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಪಕ್ಷದ ಕೇಂದ್ರ

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಏ.9ರ ನಂತರ ಪ್ರಕಟ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನ ವೇದಿಕೆ ಕಾರ್ಯಕ್ರಮಗಳ ಉದ್ಘಾಟನೆ, ಅತಿಥಿ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವೇದಿಕೆ ಆಶ್ರಯದಲ್ಲಿ ವಿಜ್ಞಾನ ವೇದಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಪುತ್ತೂರಿನ ದಂತ ವೈದ್ಯ ಡಾ| ಎಲ್‌. ಕೃಷ್ಣಪ್ರಸಾದ್‌ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ವಂ|ಡಾ| ಆಂಟನಿ ಪ್ರಕಾಶ್‌ ಮೊಂತೆರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕ್ಯಾಂಪಸ್‌ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ ಶುಭ ಹಾರೈಸಿದರು. ಬಳಿಕ ಡಾ.ಎಲ್‌ ಕೃಷ್ಣಪ್ರಸಾದ್‌ʼದಂತ ವೈದ್ಯಕೀಯ ಮತ್ತು ರಸಾಯನ ಶಾಸ್ತ್ರ

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನ ವೇದಿಕೆ ಕಾರ್ಯಕ್ರಮಗಳ ಉದ್ಘಾಟನೆ, ಅತಿಥಿ ಉಪನ್ಯಾಸ Read More »

ದೇವಪ್ಪ ನೋಂಡಾ ನಿಧನ

ಪುತ್ತೂರು: ಪುತ್ತೂರು ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ, ಹೊಟೇಲ್ ಶ್ರೀ ಲಕ್ಷ್ಮೀ ಮಾಲಕ, ಒಡಿಯೂರು ಸೊಸೈಟಿ ನಿರ್ದೇಶಕ ದೇವಪ್ಪ ನೋಂಡಾ ಎ.7 ರಂದು ಸ್ವಗೃಹದಲ್ಲಿ ನಿಧನರಾದರು. ದೇವಪ್ಪ ನೋಂಡಾ ಅವರ ಆರೋಗ್ಯದಲ್ಲಿ ಏರುಪೇರಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

ದೇವಪ್ಪ ನೋಂಡಾ ನಿಧನ Read More »

ಪುಣ್ಚಪ್ಪಾಡಿ ಶಾಲೆಯಲ್ಲಿ ಬಣ್ಣದ ಬಣ್ಣ ಮಕ್ಕಳ ರಂಗ ಶಿಬಿರಕ್ಕೆ ಚಾಲನೆ | ಹೊಸತನದ ಹುಡುಕಾಟದ ಕಲಿಕೆಯೇ ಇಂದಿನ ಅಗತ್ಯ : ಕಲಾನಿಧಿ ಗೋಪಾಡ್ಕರ್

ಪುತ್ತೂರು: ಹೊಸತನದ ಹುಡುಕಾಟದ ಕಲಿಕೆಯೇ ಇಂದಿನ ಅಗತ್ಯ ಎಂದು ಕರ್ನಾಟಕದ ಹಿರಿಯ ಶೈಕ್ಷಣಿಕ ಚಿಂತಕ ಕಲಾ ನಿಧಿ ಗೋಪಾಡ್ಕರ್ ಮಂಗಳೂರು ಹೇಳಿದರು. ಅವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,  ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಂಯುಕ್ತ ಆಶ್ರಯದಲ್ಲಿ ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಪುಣ್ಚಪ್ಫಾಡಿ ಇಲ್ಲಿ ನಡೆದ ಮೂರು ದಿನಗಳ ಮಕ್ಕಳರಂಗ ಶಿಬಿರ ಬಣ್ಣದ ಬಣ್ಣವನ್ನು ಉದ್ಘಾಟಿಸಿ ಮಾತನಾಡಿದರು. ಕಲಿಕೆ

ಪುಣ್ಚಪ್ಪಾಡಿ ಶಾಲೆಯಲ್ಲಿ ಬಣ್ಣದ ಬಣ್ಣ ಮಕ್ಕಳ ರಂಗ ಶಿಬಿರಕ್ಕೆ ಚಾಲನೆ | ಹೊಸತನದ ಹುಡುಕಾಟದ ಕಲಿಕೆಯೇ ಇಂದಿನ ಅಗತ್ಯ : ಕಲಾನಿಧಿ ಗೋಪಾಡ್ಕರ್ Read More »

ಶಾಸಕ ಸಂಜೀವ ಮಠಂದೂರು ಕುರಿತು ಮಾನಹಾನಿ ವರದಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ

ಪುತ್ತೂರು: ಮಾನಹಾನಿಕರ ವರದಿ ಪ್ರಕಟಿಸದಂತೆ ಶಾಸಕ ಸಂಜೀವ ಮಠಂದೂರು ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಮುದ್ರಣ, ವಿದ್ಯುನ್ಮಾನ, ಡಿಜಿಟಲ್ ಮಾಧ್ಯಮಗಳಲ್ಲಿ ಮಾನಹಾನಿಕರ ವರದಿ ಪ್ರಸಾರ ಮಾಡುವುದು, ವೆಬ್ ಹೋಸ್ಟಿಂಗ್ ಮತ್ತು ಹಂಚಿಕೊಳ್ಳುವುದನ್ನು ನಿಷೇಧಿಸಲು ತಡೆಯಾಜ್ಞೆ ನೀಡುವಂತೆ ಶಾಸಕ ಮಠಂದೂರು ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಜೂನ್ 26ಕ್ಕೆ ವಿಚಾರಣೆ ಮುಂದೂಡಿದೆ. ತಾನು ವಿಧಾನಸಭಾ ಸದಸ್ಯನಾಗಿದ್ದು, ಕೆಲ‌ ಕಿಡಿಗೇಡಿಗಳು ತನ್ನ ಮಾನಹಾನಿಕರ ಛಾಯಾಚಿತ್ರವನ್ನು

ಶಾಸಕ ಸಂಜೀವ ಮಠಂದೂರು ಕುರಿತು ಮಾನಹಾನಿ ವರದಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ Read More »

error: Content is protected !!
Scroll to Top