ಪುತ್ತೂರು

ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು

ಸುಳ್ಯ : ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಕಂದೂರು ಎಂಬಲ್ಲಿ ಎ. 11 ರಂದು ಸಂಭವಿಸಿದೆ. ಹರೀಶ್ ಜಿ ಎಂಬವರೇ ಮೃತಪಟ್ಟ ವ್ಯಕ್ತಿ. ಇವರು ನೆಮ್ಮೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಕಂದೂರು ಎಂಬಲ್ಲಿಗೆ ತೆಂಗಿನಕಾಯಿ ಕೊಯ್ಯುವ ಕೆಲಸಕ್ಕೆ ಹೋಗಿದ್ದು, ತೆಂಗಿನಕಾಯಿ ಕೊಯ್ದು ಮರದಿಂದ ಇಳಿಯುತ್ತಿದ್ದಂತೆ ಆಕಸ್ಮಿಕವಾಗಿ ಮರದಿಂದ ನೆಲಕ್ಕೆ ಬಿದ್ದು ಸ್ಮೃತಿ ಕಳೆದುಕೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಹರೀಶ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. […]

ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ | ಅಷ್ಟಾವಧಾನ ಸೇವೆ | ಪೇಟೆ ಸವಾರಿ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಕೆಎಸ್‍ಆರ್‍ ಟಿಸಿ ಪುತ್ತೂರು ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಗಳ ವತಿಯಿಂದ ಅನ್ನಸಂತರ್ಪಣೆ ಜರಗಿತು. ಅಷ್ಟಾವಧಾನ ಸೇವೆ : ಜಾತ್ರೋತ್ಸವದ ಅಂಗವಾಗಿ ಶಿವನಿಗೆ ಇಷ್ಟವಾದ ಅಷ್ಟಾವಧಾನ ಸೇವೆ ಮಂಗಳವಾರ ರಾತ್ರಿ ನಡೆಯಿತು. ಋಗ್ವೇದ, ಯಜುರ್ವೇದ, ಸಾಮದೇದ, ಅಥರ್ವವೇದ, ಶಾಸ್ತ್ರಾ, ಪುರಾಣ, ಶಂಖನಾದ, ಪಂಚಾಂಗ, ಅಷ್ಟಕ, ಸಂಗೀತ, ವೀಣೆ, ನೃತ್ಯ, ಯಕ್ಷಗಾನ, ಗಾಯನ, ರುದ್ರವಾದ್ಯ, ವೀಣೆ, ಸ್ಯಾಕ್ಸೋಫೋನ್ ಮುಂತಾದ ಸರ್ವ ವಾದ್ಯಗಳ ಮೇಳೈಸುವಿಕೆಯೊಂದಿಗೆ ಅಷ್ಟಾವಧಾನ ಸೇವೆ ಜರಗಿತು. ಬಳಿಕ  ದೇವರ ಬಲಿ ಹೊರಟು ಉತ್ಸವ, ದೇವಸ್ಥಾನದ ವಠಾರದ ಕಟ್ಟೆಯಲ್ಲಿ ಪೂಜೆಗೊಂಡು ಬಳಿಕ ಶ್ರೀ ದೇವರು ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಸವಾರಿ ಮಾಡಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ | ಅಷ್ಟಾವಧಾನ ಸೇವೆ | ಪೇಟೆ ಸವಾರಿ Read More »

ಬಿಜೆಪಿ ಟಿಕೆಟ್‌ ಘೋಷಣೆ ಹಿನ್ನೆಲೆ ಪುತ್ತೂರಿನಲ್ಲಿ ಹೆಚ್ಚಿದ ಅಸಮಾಧಾನ

ಪುತ್ತೂರು : ಬಿಜೆಪಿ ನಿನ್ನೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಪುತ್ತೂರಿನ ಬಿಜೆಪಿ ಟಿಕೆಟ್ ನೀಡಿದೆ. ಇದರ ಬೆನ್ನಲ್ಲೇ ಪುತ್ತೂರು ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಬೆಂಬಲಿಗರ ನೇತೃತ್ವದಲ್ಲಿ ತುರ್ತು ಸಭೆ ನಡೆಯಲಿದೆ. ಕಳೆದ ಎರಡು ಅವಧಿಯಲ್ಲಿ ಅರುಣ್ ಅವರ ಹೆಸರು ಅಭ್ಯರ್ಥಿ ಸ್ಥಾನಕ್ಕೆ ಕೇಳಿ ಬಂದಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಅವರಿಗೆ

ಬಿಜೆಪಿ ಟಿಕೆಟ್‌ ಘೋಷಣೆ ಹಿನ್ನೆಲೆ ಪುತ್ತೂರಿನಲ್ಲಿ ಹೆಚ್ಚಿದ ಅಸಮಾಧಾನ Read More »

ಈ ಬಾರಿಯೂ ಶಕುಂತಳಾ ಶೆಟ್ಟಿಯವರಿಗೆ ಅವಕಾಶ ನೀಡಬೇಕು | ಇಲ್ಲದಿದ್ದಲ್ಲಿ ಸಾಮೂಹಿಕ ರಾಜೀನಾಮೆ | ಬಂಡಾಯದ ಕೂಗು

ಪುತ್ತೂರು: ಈ ಬಾರಿಯೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‍ ಅಭ್ಯರ್ಥಿಯಾಗಿ ಶಕುಂತಳಾ ಟಿ. ಶೆಟ್ಟಿಯವರಿಗೇ ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಪಕ್ಷದಲ್ಲಿ ತಟಸ್ಥವಾಗಿ ಉಳಿಯಲಿದ್ದೇವೆ ಎಂದು ಪುತ್ತೂರು ಮಹಿಳಾ ಬ್ಲಾಕ್ ಕಾಂಗ್ರೆಸ್‍ ಸಮಿತಿ ಅಧ್ಯಕ್ಷೆ ಶಾರದಾ ಅರಸ್ ಹೇಳಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಕುಂತಳಾ ಶೆಟ್ಟಿಯವರು ಈ ಹಿಂದಿನ ಶಾಸಕರಾಗಿದ್ದ ಅವಧಿಯಲ್ಲಿ ಮಹಿಳೆಯರ ಏಳಿಗೆಗಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಈ ಪೈಕಿ ಮಹಿಳಾ ಪೊಲೀಸ್ ಠಾಣೆಯನ್ನು ಪುತ್ತೂರಿಗೆ ಆರಂಭಿಸಲು

ಈ ಬಾರಿಯೂ ಶಕುಂತಳಾ ಶೆಟ್ಟಿಯವರಿಗೆ ಅವಕಾಶ ನೀಡಬೇಕು | ಇಲ್ಲದಿದ್ದಲ್ಲಿ ಸಾಮೂಹಿಕ ರಾಜೀನಾಮೆ | ಬಂಡಾಯದ ಕೂಗು Read More »

ಶಾಸಕ, ಸಚಿವ ಎಸ್.ಅಂಗಾರ ಅವರಿಗೆ ಟಿಕೆಟ್‌ ಮಿಸ್‌ : ವೆಂಕಟ್ ವಳಲಂಬೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಕಡಬ : ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ, ಸಚಿವ ಎಸ್.ಅಂಗಾರ ಅವರಿಗೆ ಬಿಜೆಪಿ ಟಿಕೆಟ್‌ ದೊರೆಯದೇ ಇರುವುದಕ್ಕಾಗಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವೆಂಕಟ್ ವಳಲಂಬೆ ಹೇಳಿದ್ದಾರೆ. ಕಳೆದ 30 ವರ್ಷಗಳ ಕಾಲ ಕ್ಷೇತ್ರ ಮತ್ತು ಪಕ್ಷಕ್ಕೆ ಯಾವುದೇ ಚ್ಯುತಿ ಬಾರದ ರೀತಿ ದುಡಿದ, ಸಾಮಾನ್ಯ ಮನೆತನದಿಂದ ಬಂದಿರುವ ಸರಳ ಸಜ್ಜನಿಕೆಯ ಎಲ್ಲರ ಜನಮನ ಗೆದ್ದಿರುವ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರುವ ಎಸ್.ಅಂಗಾರರಂತಹ ಪ್ರಾಮಾಣಿಕ ಕಾರ್ಯಕರ್ತನೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದರಿಂದ

ಶಾಸಕ, ಸಚಿವ ಎಸ್.ಅಂಗಾರ ಅವರಿಗೆ ಟಿಕೆಟ್‌ ಮಿಸ್‌ : ವೆಂಕಟ್ ವಳಲಂಬೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ Read More »

ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಬೋರ್ಡ್ ಅನಾವರಣ

ಪುತ್ತೂರು: ಸ್ಮಾರ್ಟ್ ಬೋರ್ಡ್‌ಗಳ ಮೂಲಕ ತರಗತಿಗಳು ನಡೆದಾಗ ದೃಶ್ಯ ಮಾಧ್ಯಮದೊಂದಿಗೆ ವಿದ್ಯಾರ್ಥಿಗಳು ವಿಷಯಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಬಹುದು. ತನ್ಮೂಲಕ ಜ್ಞಾನ ವೃದ್ಧಿಯ ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಕಲಿಕಾ ಕ್ಷೇತ್ರದಲ್ಲಿ ಪರಿಣತಿ ಪಡೆದು ಯಶಸ್ಸು ಪಡೆಯಬಹುದು ಎಂದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಅಭಿಲಾಷ್ ಹೇಳಿದರು. ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸುಮಾರು ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಅಳವಡಿಸಲಾಗಿರುವ ಇಂಟರ್‍ಯಾಕ್ಟಿವ್ ಸ್ಮಾರ್ಟ್ ಬೋರ್ಡ್ ನ್ನು ಉದ್ಘಾಟಿಸಿ ಮಾತನಾಡಿದರು. ದಶಕದ ಹಿಂದಿನವರೆಗೂ ಶಾಲಾ

ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಬೋರ್ಡ್ ಅನಾವರಣ Read More »

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ | ಪುತ್ತೂರಿನಿಂದ ಆಶಾ ತಿಮ್ಮಪ್ಪ, ಸುಳ್ಯದಿಂದ ಭಾಗೀರಥಿ ಮುರುಳ್ಯ ಚುನಾವಣಾ ಕಣಕ್ಕೆ | ಗೌಡ ಸಮುದಾಯಕ್ಕೆ ಒಲಿದ ಪುತ್ತೂರು ಕ್ಷೇತ್ರ

ಪುತ್ತೂರು: ರಾಜಕೀಯ ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಗೊಂಡಿದೆ. ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. 189 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಯಿತು. ಇದರಲ್ಲಿ 33 ಮಂದಿ ಓಬಿಸಿ ವರ್ಗದವರು, 30 St ಅಭ್ಯರ್ಥಿಗಳು, 16 scಗಳು, 52 ಹೊಸ ಮುಖಗಳು, 9 ವೈದ್ಯರು, ಓರ್ವ ಐಎಸ್, ಐಪಿಎಸ್, 31 ಮಂದಿ ಸ್ನಾತಕೋತ್ತರ ಪದವೀಧರರು, 8 ಮಹಿಳೆಯರು ತಂಡದಲ್ಲಿದ್ದಾರೆ. ಪುತ್ತೂರಿನಿಂದ ಗೌಡ ಸಮುದಾಯದ ಆಶಾ ತಿಮ್ಮಪ್ಪ,

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ | ಪುತ್ತೂರಿನಿಂದ ಆಶಾ ತಿಮ್ಮಪ್ಪ, ಸುಳ್ಯದಿಂದ ಭಾಗೀರಥಿ ಮುರುಳ್ಯ ಚುನಾವಣಾ ಕಣಕ್ಕೆ | ಗೌಡ ಸಮುದಾಯಕ್ಕೆ ಒಲಿದ ಪುತ್ತೂರು ಕ್ಷೇತ್ರ Read More »

ಹೊಸ ಮುಖಗಳ ಆಯ್ಕೆಗೆ ಮುಂದಾದ ಬಿಜೆಪಿ | ಕಾರ್ಯಕರ್ತರ ಅಸಮಾಧಾನ, ತಟಸ್ಥ ಧೋರಣೆಯ ಎಚ್ಚರಿಕೆ | ಅಭಿವೃದ್ಧಿ ಹರಿಕಾರ ಸಂಜೀವ ಮಠಂದೂರೇ ಅಭ್ಯರ್ಥಿಯಾಗಲೆಂದು ಒತ್ತಾಯ

ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲು ಇನ್ನೂ ವಿಳಂಬ ಮಾಡುತ್ತಿರುವ ಬಿಜೆಪಿ ವರಿಷ್ಠರ ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಂಡಿದೆ. ತಾವಿರುವ ಹುದ್ದೆಗೆ ರಾಜೀನಾಮೆ ನೀಡಿ, ತಾವು ಫೀಲ್ಡಿಗೆ ಹೋಗುವುದೇ ಇಲ್ಲ ಎಂಬ ಅಸಮಾಧಾನವನ್ನು ಹೊರಹಾಕಿರುವ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ ಭಾಗದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಜೀವ ಮಠಂದೂರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸಂಜೀವ ಮಠಂದೂರು ಅವರನ್ನು ಮತ್ತೊಮ್ಮೆ ಶಾಸಕ ಅಭ್ಯರ್ಥಿಯಾಗಿ ಘೋಷಿಸಬೇಕು.

ಹೊಸ ಮುಖಗಳ ಆಯ್ಕೆಗೆ ಮುಂದಾದ ಬಿಜೆಪಿ | ಕಾರ್ಯಕರ್ತರ ಅಸಮಾಧಾನ, ತಟಸ್ಥ ಧೋರಣೆಯ ಎಚ್ಚರಿಕೆ | ಅಭಿವೃದ್ಧಿ ಹರಿಕಾರ ಸಂಜೀವ ಮಠಂದೂರೇ ಅಭ್ಯರ್ಥಿಯಾಗಲೆಂದು ಒತ್ತಾಯ Read More »

ಪುತ್ತೂರು : ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಪುತ್ತೂರು : ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಟ್ಟಂಪಾಡಿಯ ಗುಮ್ಮಟಗದ್ದೆ ಎಂಬಲ್ಲಿ ಸಂಭವಿಸಿದೆ. ಪುಣ್ಯಶ್ರೀ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಎ. 4 ರಂದು ಇವರು ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದು, ಬಳಿಕ ಅಲ್ಲಿಯೇ ಇದ್ದರು. ಎ. 10 ರಂದು ರಾತ್ರಿ ಸುಮಾರು ಸಂಜೆ 3.55 ರ ವೇಳೆಗೆ ತನ್ನ ಪತಿ ಪುರುಷೋತ್ತಮ ರವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಂತರ ರಾತ್ರಿ ಸುಮಾರು 10.00 ಗಂಟೆಯ ವೇಳೆಗೆ ತಮ್ಮ ಮನೆಯ ಬಳಿಗೆ ಬಂದು

ಪುತ್ತೂರು : ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ Read More »

ಏ.16 : ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ| ಈ ಬಾರಿ ನಾಲ್ವರಿಗೆ ಪ್ರಶಸ್ತಿ ಪ್ರದಾನ

ಪುತ್ತೂರು: ಮಾಡಾವು ನೂಜಿ ಡಾ. ಪಿ. ಬಿ. ರೈ ಪ್ರತಿಷ್ಠಾನದಿಂದ ನೀಡಲಾಗುವ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಸಮಾರಂಭವು ಏ.16 ರಂದು ಬೆಳಗ್ಗೆ ದಂಬೆಕಾನ ಬಾಳಮೂಲೆ ಪಟ್ಟೆ ಮನೆಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ 100 ಕ್ಕೂ ಅಧಿಕ ಮಂದಿ ಸಮಾಜದ ವಿವಿಧ ಕ್ಷೇತ್ರಗಳ ಮೇರು ಸಾಧಕರು ಹಾಗೂ ತೆರೆಮರೆಯ ಸಾಧಕರನ್ನು ಗುರುತಿಸಿ ಪ್ರಶಸ್ತಿಯ ಗೌರವ ನೀಡಲಾಗಿದೆ ಎಂದರು. ಸಾಧಕರಾದ ದಂಬೆಕಾನ

ಏ.16 : ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ| ಈ ಬಾರಿ ನಾಲ್ವರಿಗೆ ಪ್ರಶಸ್ತಿ ಪ್ರದಾನ Read More »

error: Content is protected !!
Scroll to Top