ಪುತ್ತೂರು

ಜಾಗ ಖರೀದಿಸಿಬಡವರಿಗೆ ಹಂಚುತ್ತೇನೆ: ಅಶೋಕ್ ರೈ

ಪುತ್ತೂರು : ತಾನು ಗೆದ್ದು ಶಾಸಕನಾದಲ್ಲಿ ಸ್ವಂತ ದುಡ್ಡಿನಿಂದ ಜಾಗ ಖರೀದಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದದಲ್ಲಿ ಮನೆ ಕಟ್ಟಲು ಸ್ವಂತ ಜಾಗವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಹಂಚುವ ಕೆಲಸವನ್ನು ಮಾಡುತ್ತೇನೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು. ವಿಟ್ಲ ಬೊಳಂತಿಮೊಗರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರಕಾರ ಕಳೆದ ಐದು ವರ್ಷದಿಂದ ಯಾವುದೇ ಮನೆಗಳನ್ನು ಬಡವರಿಗೆ ವಿತರಣೆ ಮಾಡಿಲ್ಲ. ಮನೆ ಸಿಗ್ತದೆ […]

ಜಾಗ ಖರೀದಿಸಿಬಡವರಿಗೆ ಹಂಚುತ್ತೇನೆ: ಅಶೋಕ್ ರೈ Read More »

ನಾಳೆ (ಮೇ 5) : ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾಪೂಜೆ

ಕಡಬ: ಕಡಬ ತಾಲೂಕಿನ ಶಾಂತಿಮೊಗರು ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಹುಣ್ಣಿಮೆ ಪ್ರಯುಕ್ತ ಪ್ರತಿ ತಿಂಗಳು ನಡೆಯುವ ವಿವಿಧ ವೈದಿಕ ಕಾರ್ಯಕ್ರಮಗಳು ಮೇ 5 ಶುಕ್ರವಾರ ನಡೆಯಲಿದೆ. ಬೆಳಿಗ್ಗೆ ಸಾರ್ವಜನಿಕ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಂಜೆ ಶ್ರೀ ದುರ್ಗಾ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲ್ಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ನಾಳೆ (ಮೇ 5) : ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾಪೂಜೆ Read More »

ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಎನ್‌ಡಿಎ ತೇರ್ಗಡೆ

ಪುತ್ತೂರು: ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಮೂರು ಮಂದಿ ವಿದ್ಯಾರ್ಥಿಗಳು 2023 ಎನ್‌ಡಿಎ -1 (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ- 1) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರಿನ ಖುಷಿಕರ ಬಿ.ಎಸ್ ಹಾಗೂ ಉದಯಕಲಾ ಎನ್.ಎಲ್ ದಂಪತಿ ಪುತ್ರ ಪ್ರಜ್ವಲ್ ಬಿ.ಕೆ, ಕಡಬದ ಕೃಷ್ಣ ಮೂರ್ತಿ ಕೆ ಹಾಗೂ ಅನುಪಮ ದಂಪತಿ ಪುತ್ರ ಶ್ರೀಶ ಶರ್ಮ ಕೆ ಹಾಗೂ ಪುರುಷರಕಟ್ಟೆಯ ಚರಣ್ ಕುಮಾರ್ ಹಾಗೂ ಮಾಲತಿ ದಂಪತಿ ಪುತ್ರ ಶ್ಯಮಂತ್ ಕುಮಾರ್ ಸಿ.ಕೆ ಎನ್‌ಡಿಎ ಮೊದಲ ಹಂತದ

ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಎನ್‌ಡಿಎ ತೇರ್ಗಡೆ Read More »

ಅಸಂಘಟಿತ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ರಿಕ್ಷಾ ಚಾಲಕ-ಮಾಲಕರು ಸಹಿತ ವಿವಿಧ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ಮಾಡಬೇಕಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆದ್ದು ನಿಮ್ಮೆಲ್ಲರ ವಿಶ್ವಾಸ ಪಡೆದು ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಭರವಸೆ ನೀಡಿದರು. ಅವರು ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆದ ಸಾರಥಿ ಸಂಗಮದಲ್ಲಿ ಮಾತನಾಡಿದರು. ಕಾರ್ಮಿಕರ ಪ್ರೀತಿ ವಿಶ್ವಾಸಕ್ಕೆ ಯಾವುದೇ ಚ್ಯುತಿ ಬಾರದಂತೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪ್ರೀತಿ ವಿಶ್ವಾಸದ ರಾಜಕಾರಣ

ಅಸಂಘಟಿತ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ Read More »

ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷಿದ್ಧ : ಶಾಸಕ ಸಂಜೀವ ಮಠಂದೂರು

ಪುತ್ತೂರು: ನಕ್ಸಲೈಟ್, ಭಯೋತ್ಪಾದನೆ, ಕಮ್ಯುನಿಸ್ಟ್ ಮೆಂಟಾಲಿಟಿ ಇರುವ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಆರ್ ಎಸ್ ಎಸ್ ಹಿನ್ನಲೆ ಹೊಂದಿರುವ ಹಿಂದೂ ಸಂಘಟನೆ ಭಜರಂಗದಳವನ್ನು ನಿಷೇಧ ಹೇಳಿಕೆ ಜತೆಗೆ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂಗಳನ್ನು ದಮನ ಮಾಡಿ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಪ್ರಯತ್ನವನ್ನು ಡಿಕೆಶಿ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿರುವ ಹಿಂದೂಗಳನ್ನು ಮಟ್ಟ ಹಾಕುವುದು ಕಾಂಗ್ರೆಸ್ ನ ಉದ್ದೇಶವಾಗಿದೆ ಎಂದು ತಿಳಿಸಿದ ಅವರು, ಈಗಾಗಲೇ

ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷಿದ್ಧ : ಶಾಸಕ ಸಂಜೀವ ಮಠಂದೂರು Read More »

ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿರುವ ಅಪರಿಮಿತ ಅವಕಾಶಗಳ ಬಗ್ಗೆ ವಿಶೇಷ ಉಪನ್ಯಾಸ

ಪುತ್ತೂರು: ವೃತ್ತಿ, ಉದ್ಯೋಗ ನೀಡುವ ಶಿಕ್ಷಣವನ್ನು ಅರಸಿ ಸೂಕ್ತವಾದುದನ್ನು ಆಯ್ಕೆ ಮಾಡುವ ಪರ್ವ ಕಾಲವಿದು. ಅವಕಾಶಗಳು ಕೈಬೀಸಿ ಕರೆಯುತ್ತಿದೆ. ಆದರೆ ಶಿಕ್ಷಣಾವಕಾಶಗಳ ಮಾಹಿತಿ ಕೊರತೆಯಾಗಬಾರದು.ಸರಿಯಾದ ಸಮಯದಲ್ಲಿ ಸರಿಯಾದ ಶಿಕ್ಷಣ ದೊರಕಿದಾಗ ಒಬ್ಬ ಸಾಮಾನ್ಯ ವ್ಯಕ್ತಿಯು ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ.ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ,ಅವಶ್ಯಕತೆಗೆ ಅನುಕೂಲವಾಗುವಂತಹ ಶಿಕ್ಷಣದ ಅವಕಾಶಗಳನ್ನು ಆಯ್ಕೆಮಾಡಬೇಕು ಎಂದು ವಿವೇಕಾನಂದ ಕಾಲೇಜ್ ಆಫ್ ಆರ್ಟ್ಸ್,ಸೈನ್ಸ್ ಮತ್ತು ಕಾಮರ್ಸ್ ಇದರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಶ ಭಟ್ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ

ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿರುವ ಅಪರಿಮಿತ ಅವಕಾಶಗಳ ಬಗ್ಗೆ ವಿಶೇಷ ಉಪನ್ಯಾಸ Read More »

ದೇಶ ದ್ರೋಹದ ಸಂಘಟನೆಯ ದಮನಕ್ಕೆ ಮೇ 10 ಸಕಾಲ : ಕಲ್ಲಡ್ಕ ಪ್ರಭಾಕರ್ ಭಟ್ | 2040ರಲ್ಲಿ ಮುಸ್ಲಿಂ ರಾಷ್ಟ್ರ ಆಗಬೇಕು ಎಂಬ ಹುನ್ನಾರ ನಡೆಯುತ್ತಿರುವುದು ಆಘಾತಕಾರಿ : ಡಾ.ಎಂ.ಕೆ.ಪ್ರಸಾದ್

ಪುತ್ತೂರು: ಭಾರತದ ಇತಿಹಾಸ ಸಾವಿರಾರು ವರ್ಷ. ಈ ದೇಶ ಸುಮ್ಮನೆ ಬದುಕಿ ಬರಲಿಲ್ಲ. ಸಾಯುವವರನ್ನು ಬದುಕುವ ಹಾಗೆ ಮಾಡಿರುವ, ಜೀವನದ ದೃಷ್ಟಿ ನೀಡಿರುವ ದೇಶ ಭಾರತ, ಸಮಾಜ ಹಿಂದೂ ಎಂದು ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ಬುಧವಾರ ಸಂಜೆ ಪುತ್ತಿಲ ಕೆರೆಮನೆ ಕಟ್ಟೆಯಲ್ಲಿ ನಡೆದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ಭಾರತದ ಮೂಲ ಚಿಂತನೆಯಿಂದ ಜಗತ್ತಿನ ಇತರ ದೇಶದವರು ಪೂಜನೀಯ ಭಾವನೆಯಿಂದ ನೋಡಿದರೆ ನಮ್ಮ ದೇಶದವರು ಭಾರತವನ್ನು ಪೂಜಿಸುತ್ತಾರೆ. ಭಾರತ ಆಧ್ಯಾತ್ಮಿಕ

ದೇಶ ದ್ರೋಹದ ಸಂಘಟನೆಯ ದಮನಕ್ಕೆ ಮೇ 10 ಸಕಾಲ : ಕಲ್ಲಡ್ಕ ಪ್ರಭಾಕರ್ ಭಟ್ | 2040ರಲ್ಲಿ ಮುಸ್ಲಿಂ ರಾಷ್ಟ್ರ ಆಗಬೇಕು ಎಂಬ ಹುನ್ನಾರ ನಡೆಯುತ್ತಿರುವುದು ಆಘಾತಕಾರಿ : ಡಾ.ಎಂ.ಕೆ.ಪ್ರಸಾದ್ Read More »

ಶಾಂತಿಗೋಡು ಗ್ರಾಮದಲ್ಲಿ ಬಿಜೆಪಿ ವತಿಯಿಂದ ಮತ ಯಾಚನೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ವತಿಯಿಂದ ಶಾಂತಿಗೋಡು ಗ್ರಾಮದಲ್ಲಿ ಬುಧವಾರ ಮತ ಯಾಚನೆ ಮಾಡಲಾಯಿತು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೇತೃತ್ವದಲ್ಲಿ ಶಾಂತಿಗೋಡು ಗ್ರಾಮದ ಕೈಂದಾಡಿ, ಶಾಂತಿಗೋಡು, ಕುಕ್ಯಾನ, ಕರ್ಪುತಮೂಳೆ, ಪಜಿರೋಡಿ ಮುಂತಾದ ಕಡೆಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಕ್ತಿಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್ ಕರ್ಪುತಮೂಳೆ, ಕಾರ್ಯಕರ್ತರಾದ ಶಿವಪ್ರಸಾದ್ ಕೈಂದಾಡಿ, ವಿಘ್ನೇಶ್ ಕುಕ್ಯಾನ, ಹೊನ್ನಪ್ಪ

ಶಾಂತಿಗೋಡು ಗ್ರಾಮದಲ್ಲಿ ಬಿಜೆಪಿ ವತಿಯಿಂದ ಮತ ಯಾಚನೆ Read More »

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಕೀಲರ ಸಂಘದ ಕಚೇರಿಗೆ ಭೇಟಿ | ಮತ ಯಾಚನೆ

ಪುತ್ತೂರು: ಪುತ್ತೂರು ಕೋರ್ಟು‌ಆವರಣದಲ್ಲಿರುವ ವಕೀಲರ ಸಂಘದ ಕಚೇರಿಗೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭೇಟಿ ನೀಡಿ ಮತ ಯಾಚಿಸಿದರು. ವಕೀಲರ ಜೊತೆ ಮಾತುಕತೆ ನಡೆಸಿದ ಅಶೋಕ್ ರೈಯವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಂಡರು. ಈ ಸಂದರ್ಭದಲ್ಲಿ ವಕೀಲರು ಆನಾಜೆಯಲ್ಲಿರುವ ನ್ಯಾಯಾಲಯ ಸಂಕೀರ್ಣದವರೆಗೆ ಸಿಟಿ ಬಸ್ ಸೌಕರ್ಯ ಕಲ್ಪಿಸಿದರೆ ಕಕ್ಷಿದಾರರಿಗೆ ಪ್ರಯೋಜನವಾಗಲಿದೆ. ಆನಾಜೆ ಕೋರ್ಟಿಗೆ ತೆರಳುವ ರಸ್ತೆಯನ್ನು ಅಗಲೀಕರಣ ಮಾಡಬೇಕು ಮತ್ತು ಸೋಲಾರ್ ಅಳವಡಿಕೆಯ ಕುರಿತು ಚರ್ಚಿಸಿದರು. ಶಾಸಕನಾಗಿ ಆಯ್ಕೆಯಾದಲ್ಲಿ ತಮ್ಮ ಬೇಡಿಕೆಗಳ ಕಡೆ ಹೆಚ್ಚು ಒತ್ತು

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಕೀಲರ ಸಂಘದ ಕಚೇರಿಗೆ ಭೇಟಿ | ಮತ ಯಾಚನೆ Read More »

ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕರಿಂದ ಹಲವೆಡೆ ಮತ ಯಾಚನೆ

ಪುತ್ತೂರು: ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಚಿಲ್ತಡ್ಕ ರವರು ಇಂದು ಉಕ್ಕುಡ ಶ್ರೀ ಶಾರದಾ ಪ್ರೋಸೆಸರ್ಸ್ ಹಾಗೂ ಚಂದಳಿಕೆ ಶ್ರೀ ವೆಂಕಟೇಶ್ವರ ಪ್ರೋಸೆಸರ್ಸ್ ಗೇರು ಬೀಜ ಕಾರ್ಖಾನೆಗಳಿಗೆ ಭೇಟಿ ನೀಡಿದರು. ಭೇಟಿ ನೀಡಿದ ಅವರು ಸಿಬ್ಬಂದಿಗಳಲ್ಲಿ ಮತ ಯಾಚಿಸಿದರು. ಈ ಸಂಧರ್ಭದಲ್ಲಿ  ರಾಜ್ಯ ಜೆಡಿಎಸ್ ವಕ್ತಾರೆ ಜೋಹರ ನಿಸಾರ್ ಅಹ್ಮದ್, ಗಧಾದರ್ ಮಲಾರ್, ಜಾಫರ್ ಖಾನ್, ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೆಗ, ರಫೀಕ್ ಮನಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕರಿಂದ ಹಲವೆಡೆ ಮತ ಯಾಚನೆ Read More »

error: Content is protected !!
Scroll to Top