ಪುತ್ತೂರು

ಮೇ 12 : ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ, ಪುನಃಪ್ರತಿಷ್ಠಾಪನೆ

ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ, ಪುನಃಪ್ರತಿಷ್ಠಾಪನೆ ಮೇ 12 ರಂದು ವೇ.ಮೂ.ಜಗದೀಶ್ ಭಟ್ ಭಟ್ರಪಾಡಿ ಅವರ ನೇತೃತ್ವದಲ್ಲಿ ನಡೆಯಲಿದೆ. ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರು ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಿಗ್ಗೆ ಗಂಟೆ 8.22 ಕ್ಕೆ ಸಲುವ ವೃಷಭಲಗ್ನ ಸುಮುಹೂರ್ತದಲ್ಲಿ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ನಃಪ್ರತಿಷ್ಠಾಪನೋತ್ಸವ ನಡೆಯಲಿದೆ ಎಂದು ಪ್ರಕಟಣೆ […]

ಮೇ 12 : ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ, ಪುನಃಪ್ರತಿಷ್ಠಾಪನೆ Read More »

ಮದ್ಯ ಮುಕ್ತ, ಆಮಿಷ ಮುಕ್ತ ಚುನಾವಣೆಗೆ ಜನಜಾಗೃತಿ ವೇದಿಕೆ ಆಗ್ರಹ | ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ

ಪುತ್ತೂರು: ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮದ್ಯ ಹಂಚುವುದಿಲ್ಲ, ಆಮಿಷ ಒಡ್ಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕು. ಪ್ರಜ್ಞಾವಂತ ನಾಗರಿಕರು ಮದ್ಯಪಾನದ ಮತ್ತು ಇತರ ಯಾವುದೇ ಆಮಿಷಕ್ಕೆ ಬಲಿಯಾಗಬಾರದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ತಿಳಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಭಾರತೀಯ ರಾಜಕೀಯ ವ್ಯವಸ್ಥೆಯ ನೈತಿಕ ಅಧಃಪತನವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಪಾನಾದಿ ದುಶ್ಚಟಗಳ ವ್ಯಾಪಕತೆಗೆ ಕಾರಣವಾಗಿದೆ. ಹೆಂಡ ಹಂಚದೆ, ಆಮಿಷಗಳಿಲ್ಲದೆ ಚುನಾವಣೆಯೇ ಇಲ್ಲ ಎಂಬಂತಹ

ಮದ್ಯ ಮುಕ್ತ, ಆಮಿಷ ಮುಕ್ತ ಚುನಾವಣೆಗೆ ಜನಜಾಗೃತಿ ವೇದಿಕೆ ಆಗ್ರಹ | ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ Read More »

ಮೇ 5 : ರಾಷ್ಟ್ರಮಟ್ಟದ ವಿದ್ಯಾರ್ಥಿ ಕಾರ್ಯಾಗಾರ “ಜ್ಞಾನ ಸಂಗಮ-2023”

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ನವದೆಹಲಿ ಭಾರತೀಯ ತಾಂತ್ರಿಕ ಶಿಕ್ಷಣ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ “ಜ್ಞಾನ ಸಂಗಮ-2023”ನ್ನು ಮೇ 5 ಶುಕ್ರವಾರ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ಆಯೋಜಿಸಲಾಗಿದೆ. ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅವರ ಪ್ರಾಜೆಕ್ಟ್‌ಗೆ ಸಂಬಂದಿಸಿದಂತೆ ಪ್ರಬಂಧಗಳನ್ನು ಮಂಡಿಸುವುದರ ಮೂಲಕ ತಮ್ಮಲ್ಲಿರುವ ಹೊಸ ಹೊಸ ಆವಿಷ್ಕಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಸಲುವಾಗಿ

ಮೇ 5 : ರಾಷ್ಟ್ರಮಟ್ಟದ ವಿದ್ಯಾರ್ಥಿ ಕಾರ್ಯಾಗಾರ “ಜ್ಞಾನ ಸಂಗಮ-2023” Read More »

ಕುಚ್ಚಲಕ್ಕಿ ಬೇಡಿಕೆ ಕಾಂಗ್ರೆಸ್ ನಿಂದ ಈಡೇರಲಿದೆ : ಅಶೋಕ್ ರೈ

ಪುತ್ತೂರು: ಪಡಿತರ ವಿತರಣೆಯಲ್ಲಿ ಇದುವರೆಗೆ ಬೆಳ್ತಿಗೆ ಮತ್ತು ಬಿಳಿ ಅಕ್ಕಿಯನ್ನು ನೀಡಲಾಗುತ್ತಿದೆ. ಕರಾವಳಿ ಭಾಗದ ಜನ ಕುಚ್ಚಲಕ್ಕಿ ಅನ್ನ ಊಟ ಮಾಡುವ ಕಾರಣ ಈ ಭಾಗಕ್ಕೆ ರೇಶನ್ ಮೂಲಕ ಕುಚ್ಚಲಕ್ಕಿ ನೀಡಬೇಕು ಎಂಬ ಬೇಡಿಕೆ ಇದ್ದು ಈ ಬೇಡಿಕೆಯನ್ನು ಈ ಬಾರಿ ಕಾಂಗ್ರೆಸ್ ಈಡೇರಿಸಲಿದೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭರವಸೆ ನೀಡಿದ್ದಾರೆ. ವಿಟ್ಲ ಕಂಬಳಬೆಟ್ಟುವಿನಲ್ಲಿ ರಾತ್ರಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿಗೆ ಕುಚ್ಚಲಕ್ಕಿ ನೀಡುವುದಾಗಿ ಕಳೆದ ಒಂದು ವರ್ಷದಿಂದ ಬಿಜೆಪಿ

ಕುಚ್ಚಲಕ್ಕಿ ಬೇಡಿಕೆ ಕಾಂಗ್ರೆಸ್ ನಿಂದ ಈಡೇರಲಿದೆ : ಅಶೋಕ್ ರೈ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ಟಾರ್ಟಪ್ ಬಗ್ಗೆ ಉಪನ್ಯಾಸ

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ಇನ್ಸ್ಟಿಟ್ಯೂಷನ್ಸ್ ಇನೊವೇಶನ್ ಕೌನ್ಸಿಲ್ ಗಳ ಸಹಯೋಗದಲ್ಲಿ“ಹೌಟು ಪ್ಲಾನ್ ಫಾರ್ ಸ್ಟಾರ್ಟಪ್ – ಲೀಗಲ್ ಆಂಡ್ ಎಧಿಕಲ್ ಸ್ಟೆಪ್ಸ್? ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು. ಬೆಂಗಳೂರಿನ ಸ್ಲ್ಯಾಂಗ್ ಲ್ಯಾಬ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಮಧುರಾನಾಥ್‌ ಆರ್. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ,  ಇಂದಿನ ಯುವ ಜನತೆ ಒಂದು ಉದ್ಯಮವನ್ನು ಸ್ಥಾಪಿಸಿ ಹತ್ತಾರು ಜನರಿಗೆ ಉದ್ಯೋಗ ನೀಡುವ ಕನಸು ಕಾಣುತ್ತಿರುವುದು ಸಂತಸದ ವಿಚಾರ..ವಿದ್ಯಾರ್ಥಿಗಳಲ್ಲಿ ಸ್ಟಾರ್ಟಪ್

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ಟಾರ್ಟಪ್ ಬಗ್ಗೆ ಉಪನ್ಯಾಸ Read More »

ಗಿಡದಲ್ಲಿ ನೇತು ಹಾಕಿದ್ದ 1 ಕೋಟಿ ರೂ. ವಶ | ಅಶೋಕ್ ರೈ ಸಹೋದರನ ಮನೆಗೆ ಐಟಿ ದಾಳಿ!?

ಪುತ್ತೂರು: ಮೈಸೂರಿನಲ್ಲಿ ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಗಿಡಕ್ಕೆ ನೇತು ಹಾಕಿದ್ದ 1 ಕೋಟಿ ರೂ.ವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಉದ್ಯಮಿ ಅಶೋಕ್ ಕುಮಾರ್ ರೈ ಅವರ ಸಹೋದರ ಕೆ. ಸುಬ್ರಹ್ಮಣ್ಯ ರೈ ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಿಡದಲ್ಲಿ ನೇತು ಹಾಕಿದ್ದ 1 ಕೋಟಿ ರೂ. ವಶ | ಅಶೋಕ್ ರೈ ಸಹೋದರನ ಮನೆಗೆ ಐಟಿ ದಾಳಿ!? Read More »

ತಾಕತ್ತಿದ್ದರೆ ಕಾಂಗ್ರೆಸ್ ಬಜರಂಗದಳ ಕಾರ್ಯಕರ್ತರ ಮೈ ಮುಟ್ಟಿನೋಡಲಿ  : ಆಶಾ ತಿಮ್ಮಪ್ಪ

ಪುತ್ತೂರು : ಹಿಂದೂ ಹೆಣ್ಣು ಮಕ್ಕಳ, ಮಹಿಳೆಯರ ರಕ್ಷಣೆ ಜತೆಗೆ ಯಾವುದೇ ಒಂದು ಕೆಲಸವನ್ನು ಒಂದು ನಿರ್ಧಾರ ಇಟ್ಟುಕೊಂಡು ಮಾಡುವ ಬಜರಂಗದಳವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನಿಷೇಧ ಮಾಡುತ್ತೇವೆ ಎಂದು ಹೇಳಿದ್ದು, ತಾಕತ್ತಿದ್ದರೆ ಕಾಂಗ್ರೆಸ್ ಬಜರಂಗದಳ ಕಾರ್ಯಕರ್ತರ ಮೈಮುಟ್ಟಿ ನೋಡಲಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗುಡುಗಿದ್ದಾರೆ. ಬಜರಂಗದಳ, ವಿಹಿಂಪ, ಹಿಂಜಾವೇ ಇವೆಲ್ಲ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿದ್ದು, ಹಿಂದೂಗಳ ರಕ್ಷಣ ಮಾಡುವ ಇಂತಹಾ ಸಂಘಟನೆಗಳನ್ನು ಕಾಂಗ್ರೆಸ್ ನಿಷೇಧ ವಿಚಾರ ಎತ್ತಿರುವುದು

ತಾಕತ್ತಿದ್ದರೆ ಕಾಂಗ್ರೆಸ್ ಬಜರಂಗದಳ ಕಾರ್ಯಕರ್ತರ ಮೈ ಮುಟ್ಟಿನೋಡಲಿ  : ಆಶಾ ತಿಮ್ಮಪ್ಪ Read More »

ಬಜರಂಗದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆ ಜೇನುಗೂಡಿಗೆ ಕಲ್ಲೆಸೆದಂತೆ | ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜ ಮುರಳೀಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಕೆಟ್ಟ ಪರಿಸ್ಥಿತಿ ಉಂಟಾಗಿದ್ದು, ಹತಾಶ ಮನೋಸ್ಥಿತಿಯಿಂದ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಜೇನು ಗೂಡಿಗೆ ಕಲ್ಲು ಎಸೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಹೇಳಿದ್ದಾರೆ. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಮ ಮಂದಿರ ಹೋರಾಟದಿಂದ ಹುಟ್ಟಿಕೊಂಡಿರುವ ಬಜರಂಗದಳವನ್ನು ಕೆರಳಿಸುವ ಕೆಲಸಕ್ಕೆ ಕೈಹಾಕಿದ್ದು, ಕೋವಿಡ್ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ತಮ್ಮ ಮನೆ ಮಠಗಳನ್ನು ಬಿಟ್ಟು ಯಾವುದೇ ಫಲಾಪೇಕ್ಷೆಯಿಲ್ಲದೆ ಜನರ ಆರೋಗ್ಯ

ಬಜರಂಗದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆ ಜೇನುಗೂಡಿಗೆ ಕಲ್ಲೆಸೆದಂತೆ | ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜ ಮುರಳೀಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿ Read More »

ಕಾರ್ಮಿಕ ವರ್ಗಕ್ಕೆ ದ್ರೋಹ ಬಗೆದ ಡಬಲ್ ಇಂಜಿನ್  ಸರಕಾರ : ಸುನೀಲ್ ಕುಮಾರ್ ಬಜಾಲ್

ಪುತ್ತೂರು: ಕಾರ್ಮಿಕ ವರ್ಗದ ಹಕ್ಕು ಸವಲತ್ತುಗಳನ್ನು ಕಿತ್ತು ಹಾಕಿದ್ದಲ್ಲದೆ,  ಮಾಲಕರ ಪರ ಕಾನೂನು ತಿದ್ದುಪಡಿ ಮಾಡಿ ತ್ಯಾಗ ಬಲಿದಾನಗಳಿಂದ ಪಡೆದ ಹಕ್ಕಾದ 8 ಗಂಟೆ ಕೆಲಸವನ್ನು 12 ಗಂಟೆ ಕೆಲಸಕ್ಕೆ ಏರಿಸಿ ಡಬಲ್ ಇಂಜಿನ್ ಸರಕಾರ ಕಾರ್ಮಿಕ ವರ್ಗಕ್ಕೆ ದ್ರೋಹ ಎಸಗಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು. ಅವರು ಮಂಗಳವಾರ ಸಿಐಟಿಯು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರು ಮಾಜಿ ಸೈನಿಕರ ಭವನದಲ್ಲಿ ನಡೆದ ಮೇ ದಿನಾಚರಣೆಯನ್ನು ಉದ್ಘಾಟಿಸಿ

ಕಾರ್ಮಿಕ ವರ್ಗಕ್ಕೆ ದ್ರೋಹ ಬಗೆದ ಡಬಲ್ ಇಂಜಿನ್  ಸರಕಾರ : ಸುನೀಲ್ ಕುಮಾರ್ ಬಜಾಲ್ Read More »

ಪುತ್ತೂರಿನ ಅಮರನಾಥ್ ಗೌಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿ ಸಂಚಾಲಕರಾಗಿ ನೇಮಕ

ಪುತ್ತೂರು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿ ಸಂಚಾಲಕರಾಗಿ ಅಮರನಾಥ್ ಗೌಡ ಅವರನ್ನು ನೇಮಿಸಲಾಗಿದೆ. ಸ್ಥಳೀಯ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ನೇಮಕ ಮಾಡಿದ್ದು, ಬ್ಲಾಕ್ ಅಧ್ಯಕ್ಷರು ಹಾಗೂ ಅಭ್ಯರ್ಥಿಗಳ ನಿರ್ದೇಶನದಂತೆ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ನಿರ್ದೇಶನ ಮಾಡಲಾಗಿದೆ. ಅಮರನಾಥ ಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ಪುತ್ತೂರಿನ ಅಮರನಾಥ್ ಗೌಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿ ಸಂಚಾಲಕರಾಗಿ ನೇಮಕ Read More »

error: Content is protected !!
Scroll to Top