ಪುತ್ತೂರು

ನಮ್ಮ ಕ್ರೀಡಾಳುಗಳಿಂದ ದೇಶಕ್ಕೆ ಹೆಮ್ಮೆ ತರುವ ಕಾರ್ಯ | ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಸುರೇಶ ಶೆಟ್ಟಿ

ಪುತ್ತೂರು: ದಶಕಗಳ ಹಿಂದೆ ಕ್ರೀಡಾಕ್ಷೇತ್ರದಲ್ಲಿ ಭಾರತದ ಪ್ರದರ್ಶನ ನೀರಸವಾಗಿರುತ್ತಿತ್ತು. ಅಲ್ಲೋ ಇಲ್ಲೋ ಒಬ್ಬ ಕ್ರೀಡಾಪಟು ಮೂರು – ನಾಲ್ಕನೇ ಸ್ಥಾನ ಗಳಿಸುವುದೇ ದೊಡ್ಡ ಸಾಧನೆ ಎನಿಸುತ್ತಿತ್ತು. ಆದರೆ ಈಗ ಚಿತ್ರಣ ಬದಲಾಗುತ್ತಿದೆ. ಒಲಿಂಪಿಕ್ಸ್ ನಂತಹ ಸ್ಪರ್ಧೆಗಳಲ್ಲೂ ನಿರಂತರವಾಗಿ ಚಿನ್ನ, ಬೆಳ್ಳಿ ಪದಕಗಳು ಭಾರತಕ್ಕೆ ಬರಲಾರಂಭಿಸಿವೆ. ಹಾಗಾಗಿ ನಮ್ಮ ಕ್ರೀಡಾಳುಗಳು ದೇಶಕ್ಕೆ ಹೆಮ್ಮೆ ತರುವ ಕಾರ್ಯ ಮಾಡುತ್ತಿದ್ದಾರೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯ ಸುರೇಶ ಶೆಟ್ಟಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ […]

ನಮ್ಮ ಕ್ರೀಡಾಳುಗಳಿಂದ ದೇಶಕ್ಕೆ ಹೆಮ್ಮೆ ತರುವ ಕಾರ್ಯ | ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಸುರೇಶ ಶೆಟ್ಟಿ Read More »

ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ, ನೂತನ ಕೊಠಡಿ ಉದ್ಘಾಟನೆ

ಪುತ್ತೂರು: ಪ್ರತೀ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಸಿ  ಆಂಗ್ಲ ಶಿಕ್ಷಕರನ್ನು ನೀಡುವ ಯೋಜನೆಯಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಅವರು ಬುಧವಾರ ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ನೂತನ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರಿ ಶಾಲಾ ಅಭಿವೃದ್ಧಿಯಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆ ಜತೆಗೆ ಸರಕಾರ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು

ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ, ನೂತನ ಕೊಠಡಿ ಉದ್ಘಾಟನೆ Read More »

ಸಾಮಾಜಿಕ ಜಾಲತಾಣಗಳಲ್ಲಿ  ಒಂದು ಪಕ್ಷರ ಪರ ಪ್ರಚಾರ ಮಾಡುತ್ತಿರುವ ಗ್ರಂಥ ಪಾಲಕರನ್ನು ಕೆಲಸದಿಂದ ವಜಾ ಮಾಡುವಂತೆ ಮನವಿ

ಪುತ್ತೂರು: ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕ ಪ್ರವೀಣ್ ವಗ್ಗ ಒಂದು ರಾಜಕೀಯ ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದು ತಕ್ಷಣ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿದೆ. ಸರಕಾರಿ ಒದ್ಯೋಗಿಯಾಗಿದ್ದ ಈ ರೀತಿಯಾಗಿ ಒಂದು ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು. ಯಾವುದೇ ಪಕ್ಷದ ಪರ ಇರುವಂತಿಲ್ಲ. ಬೇರೆ ಬೇರೆ ಧರ್ಮ ಜಾತಿಗಳ ವಿದ್ಯಾರ್ಥಿಗಳರುವ ಈ ಕಾಲೇಜನಲ್ಲಿ ಒಬ್ಬರು ಅಧ್ಯಾಪಕರು ಈ ರೀತಿ

ಸಾಮಾಜಿಕ ಜಾಲತಾಣಗಳಲ್ಲಿ  ಒಂದು ಪಕ್ಷರ ಪರ ಪ್ರಚಾರ ಮಾಡುತ್ತಿರುವ ಗ್ರಂಥ ಪಾಲಕರನ್ನು ಕೆಲಸದಿಂದ ವಜಾ ಮಾಡುವಂತೆ ಮನವಿ Read More »

ಇಂದು ಕಾಣಿಯೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಸೇವಾ ನಿವೃತ್ತಿ

ಕಾಣಿಯೂರು: ಕಾಣಿಯೂರು ಸ.ಹಿ.ಪ್ರಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಅವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. 1994ರಲ್ಲಿ ಬಂಟ್ವಾಳ ಕೊಯಿಲ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, 1996ರಲ್ಲಿ ಕುದ್ಮಾರು ಸ.ಉ.ಹಿ.ಪ್ರಾ ಶಾಲೆಯಲ್ಲಿ, ಒಂದು ವರ್ಷ ಬೆಳಂದೂರು ಸ.ಹಿ.ಪ್ರಾ.ಶಾಲೆಗೆ ನಿಯೋಜನೆಗೊಂಡು ಕರ್ತವ್ಯ ಸಲ್ಲಿಸಿದ್ದಾರೆ. 2016ರಲ್ಲಿ ಕಾಣಿಯೂರು ಸ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ 21 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು, ಇದೀಗ ಸೇವಾ ನಿವೃತ್ತರಾಗುತ್ತಿದ್ದಾರೆ.

ಇಂದು ಕಾಣಿಯೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಸೇವಾ ನಿವೃತ್ತಿ Read More »

ಉನ್ನತೀಕರಿಸಿದ ಹಿ ಪ್ರಾ ಶಾಲೆ ಶಾಲಾ ಪ್ರಾರಂಭೋತ್ಸವ ,ಶಾಸಕರಿಗೆ ಅಭಿನಂದನೆ

ಸವಣೂರು : ಸವಣೂರು ಉನ್ನತೀಕರಿಸಿದ ಹಿ ಪ್ರಾ ಶಾಲೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು. ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ,ಉಪಾಧ್ಯಕ್ಷ ಶೀನಪ್ಪ ಶೆಟ್ಟಿ, ಸದಸ್ಯರಾದ ಚಂದ್ರಾವತಿ ಸುಣ್ಣಾಜೆ,ತೀರ್ಥರಾಮ ಕೆಡೆಂಜಿ,ಗಿರಿಶಂಕರ ಸುಲಾಯ,ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ  ದಿನೇಶ್ ಮೆದು,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹನೀಫ್,ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ,ಶಾಲಾ ಮುಖ್ಯಗುರು ಬಾಲಕೃಷ್ಣ ಕೆ.ಮೊದಲಾದವರಿದ್ದರು.

ಉನ್ನತೀಕರಿಸಿದ ಹಿ ಪ್ರಾ ಶಾಲೆ ಶಾಲಾ ಪ್ರಾರಂಭೋತ್ಸವ ,ಶಾಸಕರಿಗೆ ಅಭಿನಂದನೆ Read More »

ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿವಾಗದ 94ಸಿ ಕಡತ! ಪ್ರಶ್ನಿಸಿದ ಪತ್ರಕರ್ತನಿಗೆ ದಬಾಯಿಸಿದ ತಾಲೂಕು ಕಛೇರಿ ಸಿಬ್ಬಂದಿ

ಕಡಬ: ಕಡಬ ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ ಉಳಿದ 94 ಸಿ ಕಡತದ ಬಗ್ಗೆ ವಿಚಾರಿಸಲು ತೆರಳಿದ ಪತ್ರಕರ್ತರಿಗೆ ಕಡತ ವಿಲೇವಾರಿ ಸಿಬಂದಿ ಅನುಚಿತವಾಗಿ ವರ್ತಿಸಿದ ಅರೋಪ ವ್ಯಕ್ತವಾಗಿದೆ.  ಕಳೆದ 5 ತಿಂಗಳ ಹಿಂದೆ ಸುಬ್ರಹ್ಮಣ್ಯದ ಮಹಿಳೆಯೋರ್ವರು 94 ಸಿ ಅರ್ಜಿ ಸಲ್ಲಿಸಿದ್ದರು.  ಬಳಿಕ ಕುಂಟುತ್ತಾ ಸಾಗುತ್ತಾ ವಿಲೇವಾರಿಯಾಗಲಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಗ್ರಾಮದ ಕಡತ ವಿಲೇವಾರಿ ಮಾಡುವ ಸಿಬ್ಬಂದಿ ಬಳಿ ತೆರಳಿ  ಕಡಬದ ಪತ್ರಕರ್ತರೋರ್ವರು  ವಿಚಾರಿಸುವ  ವೇಳೆ  ಪತ್ರಕರ್ತ ಎಂದು ಪರಿಚಯಿಸಿಕೊಂಡಿದ್ದಾರೆ. ಪತ್ರಕರ್ತರು ಎಂದು ಪರಿಚಯಿಸಿಕೊಂಡು ಇಲ್ಲಿಗೆ

ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿವಾಗದ 94ಸಿ ಕಡತ! ಪ್ರಶ್ನಿಸಿದ ಪತ್ರಕರ್ತನಿಗೆ ದಬಾಯಿಸಿದ ತಾಲೂಕು ಕಛೇರಿ ಸಿಬ್ಬಂದಿ Read More »

ಅಕ್ಷಯ ಕಾಲೇಜಿನಲ್ಲಿ “ಯಕ್ಷಸಿಂಚನ” ಯಕ್ಷಗಾನ ಕಲಾ ಸಂಘ ಉದ್ಘಾಟನೆ

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಯಕ್ಷಗಾನ ಕಲಾ ಸಂಘ “ಯಕ್ಷಸಿಂಚನ“ ಉದ್ಘಾಟನೆಗೊಂಡಿತು. ಹನುಮಗಿರಿ ಯಕ್ಷಗಾನ ಮೇಳದ ಖ್ಯಾತ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಉದ್ಘಾಟಿಸಿ, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಗೆಜ್ಜೆಗಿರಿ ಮೇಳದ ಪ್ರಧಾನ ಭಾಗವತ ಗಿರೀಶ್ ರೈ ಕಕ್ಕೆಪದವು ಮುಖ್ಯ ಅಥಿತಿಗಳಾಗಿ ಶುಭಕೋರಿದರು. ಈ ಸಂದರ್ಭದಲ್ಲಿ ಭಾಗವತರಾದ ರವಿಚಂದ್ರ  ಕನ್ನಡಿಕಟ್ಟೆ ಮತ್ತು ಗಿರೀಶ್ ರೈ ಕಕ್ಕೆಪದವು ತಮ್ಮ ಸುಮಧುರ ಕಂಠದಿಂದ ಭಾಗವತಿಕೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾಲೇಜಿನ

ಅಕ್ಷಯ ಕಾಲೇಜಿನಲ್ಲಿ “ಯಕ್ಷಸಿಂಚನ” ಯಕ್ಷಗಾನ ಕಲಾ ಸಂಘ ಉದ್ಘಾಟನೆ Read More »

ನಾಳೆ (ಮೇ 31) :ಸವಣೂರು ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ತಪಾಸಣೆ

ಸವಣೂರು:ಸವಣೂರು ಗ್ರಾಮ ಪಂಚಾಯಿತಿಯ ಕುಮಾರಧಾರ ಸಭಾಂಗಣದಲ್ಲಿ ಗ್ರಾ.ಪಂ.ನ ಆರೋಗ್ಯ ಅಮೃತ ಅಭಿಯಾನದಡಿ ಆರೋಗ್ಯ ಇಲಾಖಾ ವತಿಯಿಂದ ಆರೋಗ್ಯ ತಪಾಸಣೆ ಮೇ 31 ಬುಧವಾರ ನಡೆಯಲಿದೆ. ಶಿಬಿರದಲ್ಲಿ ಹಲವು ರೋಗಗಳಿಗೆ ಸಂಬಂಧಿಸಿದ ತಪಾಸಣೆ ನಡೆಸಲಾಗುವುದು. ಆರೋಗ್ಯ ತಪಾಸಣೆಯಲ್ಲಿ ನರೇಗ ಯೋಜನೆ ಕೂಲಿಕಾರರು, ಸಾರ್ವಜನಿಕರು, ಸ್ತ್ರೀಶಕ್ತಿ ಒಕ್ಕೂಟದವರು ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳುವಂತೆ ಗ್ರಾ.ಪಂ.ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ (ಮೇ 31) :ಸವಣೂರು ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ತಪಾಸಣೆ Read More »

ನರಿಮೊಗರು : ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ದೀಕ್ಷಾ ಸಮಾರಂಭ

ನರಿಮೊಗರು: ಇಲ್ಲಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 2023-24ನೇ  ಶೈಕ್ಷಣಿಕ  ವರ್ಷದ  ನೂತನ  ವಿದ್ಯಾರ್ಥಿಗಳಿಗೆ  ದೀಕ್ಷಾ  ಸಮಾರಂಭ  ಹಾಗೂ  ಶಾಲಾ  ಪ್ರಾರಂಭೋತ್ಸವ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಯತೀಶ್‌ ಅರ್ವಾರ ಮಾತನಾಡಿ, ನಾವು ಶಾಲೆಯಲ್ಲಿ ಹೇಳುವಂತಹ ಶ್ಲೋಕಕ್ಕೆ ಪೂರಕವಾದ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿ ನೂತನ ಶೈಕ್ಷಣಿಕ ವರ್ಷಕ್ಕೆ ಶುಭಾಶಯ ಕೋರಿದರು. ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್‌ ಆಚಾರ್‌ ಹಿಂದಾರು ಮಾತನಾಡಿ, ನಾವು  ಆಯ್ಕೆ  ಮಾಡಿಕೊಂಡ ಯಾವುದೇ ಕ್ಷೇತ್ರವಿರಲಿ  ಭವಿಷ್ಯತ್ತಿನಲ್ಲಿ  ಯಾರಿಗೂ  ತೊಂದರೆ  ಕೊಡದಂತಹ  ವ್ಯಕ್ತಿಗಳಾಗಿ ಬೆಳಗಬೇಕು. ಇನ್ನೊಬ್ಬರಿಗೆ ಸಹಾಯಹಸ್ತ ನೀಡುವ ವ್ಯಕ್ತಿಗಳಾಗಿ ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಹೇಳಿ  ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ರಾಮ-ಕೃಷ್ಣರ  ಹಾಗೆ  ಶ್ರಮ ಪಟ್ಟು  ಉತ್ತಮ  ಸಾಧನೆ  ಮಾಡಿ 

ನರಿಮೊಗರು : ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ದೀಕ್ಷಾ ಸಮಾರಂಭ Read More »

ಮನೆ ಮೇಲೆ ಮರಬಿದ್ದು ಅಪಾರ ಹಾನಿ

ಕಡಬ: ಸೋಮವಾರ ರಾತ್ರಿ ಬೀಸಿದ ಗಾಳಿ, ‌ಸಿಡಿಲು ಸಹಿತ ಮಳೆಗೆ ಕಡಬ ತಾಲೂಕಿನ ಕೊಡಿಂಬಾಳ ಗ್ರಾಮದ ಪೆಲತ್ತೊಡಿ ಗಣೇಶ್ ಎಂಬವರ ಮನೆಗೆ ಹಾನಿಯಾಗಿದೆ. ಮನೆ ಸಮೀಪದ ಮರವೊಂದು ಮನೆ ಮೇಲೆ ಬಿದ್ದಿದೆ. ವಿದ್ಯುತ್ ಕಂಬದ ಮೇಲೂ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಮನೆ ಮೇಲೆ ಬಿದ್ದಿದೆ. ಮನೆ ಬಾಗಶಃ ಹಾನಿಯಾಗಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಪರಿಸರದ ವಿವಿದೆಡೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗಿದೆ.

ಮನೆ ಮೇಲೆ ಮರಬಿದ್ದು ಅಪಾರ ಹಾನಿ Read More »

error: Content is protected !!
Scroll to Top