ಪುತ್ತೂರು

ವಿಶ್ವ ತಂಬಾಕು ದಿನಾಚರಣೆ

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೆತ್ತಡ್ಕ ವಲಯ ಒಕ್ಕೂಟದ ವತಿಯಿಂದ ವಿಶ್ವ ತಂಬಾಕು ದಿನಾಚರಣೆಯನ್ನು ಭಾನುವಾರ ಪುತ್ತೂರು ಯೋಜನಾ ಕಚೇರಿಯಲ್ಲಿ ಆಚರಿಸಲಾಯಿತು. ತಾಲೂಕು ಜನಜಾಗ್ರತಿ ಅಧ್ಯಕ್ಷ ಲೋಕೇಶ್ ಹೆಗೆ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಾಮೆತ್ತಡ್ಕ ಒಕ್ಕೂಟ ಅಧ್ಯಕ್ಷೆ ಅಹಲ್ಯ ವಹಿಸಿದ್ದರು.     ಅಖಿಲ ಕರ್ನಾಟಕ ಜನಜಾಗೃತಿ ಯೋಜನಾಧಿಕಾರಿ  ಗಣೇಶ್ ಆಚಾರ್ಯ ಸಂಪನ್ಮೂಲ ವ್ಯೆಕ್ತಿಯಾಗಿ ಮಾತನಾಡಿದರು. ತಾಲ್ಲೂಕು ಯೋಜನಾಧಿಕಾರಿ  ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಜನಜಾಗೃತಿ ಮಾಜಿ ಅಧ್ಯಕ್ಷ ಮಹಾಬಲ ರೈ, ವಲಯ ಜನಜಾಗೃತಿ ಅಧ್ಯಕ್ಷ ಸತೀಶ್ ನಾಯ್ಕ್ ಉಪಸ್ಥಿತರಿದ್ದರು. […]

ವಿಶ್ವ ತಂಬಾಕು ದಿನಾಚರಣೆ Read More »

ಶೈಕ್ಷಣಿಕ ಹಬ್‌ ಹಿರಿಮೆಗೆ ಮತ್ತೊಂದು ಗರಿಮೆ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್  | ಜೂನ್ 5: ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶೋತ್ಸವ

ಪುತ್ತೂರು: ಆಧುನಿಕತೆಯ ವೇಗಕ್ಕೆ ಸಂಸ್ಕಾರ ಪಾಠಗಳು ಮೂಲೆಗುಂಪಾಗುತ್ತಿವೆ ಎನ್ನುವ ಆತಂಕದ ನಡುವೆ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಭರವಸೆಯ ಸೆಲೆಯಾಗಿ ಟಿಸಿಲೊಡೆದಿದೆ. ಪುತ್ತೂರು – ಉಪ್ಪಿನಂಗಡಿ ಟ್ವಿನ್ ಸಿಟಿಯ ನಡುವಿನ ಬನ್ನೂರು ಪುತ್ತೂರು ಪೇಟೆಗೆ ಕೂಗಳತೆಯ ದೂರದಲ್ಲಿದೆ. ಇಲ್ಲಿನ ಅಲುಂಬುಡ ಪ್ರದೇಶದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ತಲೆಎತ್ತಿದೆ. ಪಟ್ಟಣದ್ದೇ ವಾತಾವರಣ ಆದರೆ ತೋಟದ ನಡುವೆ ಶಾಲೆ. ಹೇಗಿರಬಹುದು ನೀವೇ ಊಹಿಸಿ. ಕಣ್ಣು ಸುಸ್ತಾಗಿ ಹೊರ ನೋಡಿದರೆ ಹಚ್ಚ ಹಸುರಿನ ಪರಿಸರ ಕಣ್ಣಿಗೆ ಇಂಪು. ದಿನವಿಡೀ ಸ್ವಚ್ಛ

ಶೈಕ್ಷಣಿಕ ಹಬ್‌ ಹಿರಿಮೆಗೆ ಮತ್ತೊಂದು ಗರಿಮೆ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್  | ಜೂನ್ 5: ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶೋತ್ಸವ Read More »

ಹಿಂದೂಗಳ ಮೇಲೆ ದಬ್ಬಾಳಿಕೆ ನಡೆದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ : ಅರುಣ್ ಕುಮಾರ್ ಪುತ್ತಿಲ

ಸುಳ್ಯ: ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳ ನಡೆದರೆ ಹಿಂದೂ ಸಮಾಜ ಅದಕ್ಕೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. ಅವರು ಸುಳ್ಯದ ಜಾಲ್ಸೂರು ಗ್ರಾಮದ ಅಡ್ಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಖಾಕಿ ವ್ಯವಸ್ಥೆಯಡಿ ದೌರ್ಜನ್ಯ ಎಸಗಬೇಡಿ. ಧಾರ್ಮಿಕ ವ್ಯವಸ್ಥೆ

ಹಿಂದೂಗಳ ಮೇಲೆ ದಬ್ಬಾಳಿಕೆ ನಡೆದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ : ಅರುಣ್ ಕುಮಾರ್ ಪುತ್ತಿಲ Read More »

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದ ಶಿಲಾನ್ಯಾಸದ ಆಮಂತ್ರಣ ಪತ್ರಿಕೆ ಅನಾವರಣ

ಕಾಣಿಯೂರು: ಶ್ರೀ ಕ್ಷೇತ್ರ ಬರೆಪ್ಪಾಡಿ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಜೂ.4 ರಂದು ನಡೆಯಿತು. ಜೂ 10ರಂದು  ಶ್ರೀ ಕ್ಷೇತ್ರದಲ್ಲಿ ಶಿ ಲಾನ್ಯಾಸ ಕಾರ್ಯಕ್ರಮದ ನಡೆಯಲಿದ್ದು,. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದ ಶಿಲಾನ್ಯಾಸದ ಆಮಂತ್ರಣ ಪತ್ರಿಕೆ ಅನಾವರಣ Read More »

ಜೂ.10 : ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜೂ.10 ರಂದು ನಡೆಯಲಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದು, ಜೀರ್ಣೋದ್ಧಾರಗೊಳಿಸು ಸಂಕಲ್ಪವನ್ನು ಈಗಾಗಲೇ ಮಾಡಲಾಗಿದ್ದು., ಜೂ.10 ರಂದು ಬೆಳಿಗ್ಗೆ 6.58 ರ ಮುಹೂರ್ತದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶಿಲಾನ್ಯಾಸಕ್ಕೆ ಚಾಲನೆ ನೀಡಲಾಗುವುದು. ಈ ದೇವಸ್ಥಾನವು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕಾರಣಿಕ ತೀರ್ಥ ಕ್ಷೇತ್ರವಾಗಿದೆ.

ಜೂ.10 : ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ Read More »

ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು. ರೆಂಜಿಲಾಡಿಯಿಂದ ತಿಂಗಳಾಡಿ ವರೆಗೆ ರಸ್ತೆ ಬದಿಗಳಲ್ಲಿರುವ ಕಸ ಕಡ್ಡಿಗಳನ್ನು ಹೆಕ್ಕಿ ಶ್ರಮದಾನದ ಮೂಲಕ ಸ್ವಚ್ಚಗೊಳಿಸಲಾಯಿತು. ಶ್ರಮದಾನದಲ್ಲಿ ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ಗೌರವಾಧ್ಯಕ್ಷ ಸುಂದರ ಬಲ್ಯಾಯ, ಅಧ್ಯಕ್ಷ ಹರೀಶ್ ಪೈ, ಪದ್ಮಯ್ಯ ನಾಯ್ಕ,ಅಶೋಕ್ ನಾಯ್ಕ, ತಿಮ್ಮಪ್ಪ ನಾಯ್ಕ, ಪ್ರವೀಣ್, ಪ್ರದೀಪ್, ದೀಕ್ಷಿತ್, ನವೀನ್ ಬಾಳಾಯ, ನವೀನ್ ಎಲಿಯ, ಪುರುಷೋತ್ತಮ ಆಚಾರ್ಯ, ಅರುಣ್, ಮೋಕ್ಷಿತ್, ಭರತ್, ಜಗನ್ನಾಥ್ ಬಾಳಾಯ, ಪ್ರೇಮಚಂದ್ರ, ನಾರಾಯಣ ಬಲ್ಯಾಯ ಮತ್ತಿತರರು ಪಾಲ್ಗೊಂಡಿದ್ದರು.

ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದಿಂದ ಸ್ವಚ್ಛತಾ ಕಾರ್ಯ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಭಾರತೀಯ ಪರಂಪರಾ ದಿನಾಚರಣೆ

ಪುತ್ತೂರು: ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಭಾರತೀಯ ಪರಂಪರಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಖ್ಯಾತ ಚಿಂತಕರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರಪಂಚದ ಇತರೆ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶ ಅವಿಚ್ಛಿನ್ನವಾದ ಸಾಂಸೃತಿಕ ವೈಭವವನ್ನು ಹೊಂದಿದೆ. ರೋಮಾಂಚಕ ಇತಿಹಾಸ, ಶ್ರೀಮಂತ ಸಂಸ್ಕೃತಿ, ಅದ್ಭುತ ಸ್ಮಾರಕಗಳು ಮತ್ತು ಪರಂಪರೆಯನ್ನು ಹೊಂದಿರುವ ದೇಶ ಭಾರತ. ಸಿಂಧೂ ಬಯಲಿನ ನಾಗರಿಕತೆಯನ್ನು ನಾಗರಿಕತೆಗಳ ತೊಟ್ಟಿಲು ಎನ್ನುತ್ತಾರೆ.  ಅದಕ್ಕೆ ತಕ್ಕಂತೆ ನಮ್ಮ ಭಾರತದ ಶ್ರೇಷ್ಠ ಪರಂಪರೆ ಬೆಳೆದುಬಂದಿದೆ ಎಂದು

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಭಾರತೀಯ ಪರಂಪರಾ ದಿನಾಚರಣೆ Read More »

ಕೇರಳದಲ್ಲಿ ಸಹೋದರನ ಕೊಲೆ | ಕೊಲೆ ಆರೋಪಿ ಪುತ್ತೂರಿನಲ್ಲಿ ಪೊಲೀಸ್ ವಶ

ಪುತ್ತೂರು : ಕೊಲೆ ಆರೋಪಿಯೋರ್ವನನ್ನು ಪೊಲೀಸರು ಕೊಂಬೆಟ್ಟು ಬಳಿ ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಆರೋಪಿಯು ಕೇರಳದಲ್ಲಿ ಸಹೋದರನನ್ನು ಕೊಲೆಗೈದು ಪುತ್ತೂರಿನಲ್ಲಿ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ತಿಳಿದ ಕೇರಳ ಪೊಲೀಸರು ಪುತ್ತೂರಿಗೆ ಆಗಮಿಸಿದ್ದರು. ಆರೋಪಿಯನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ಸಹಕರಿಸಿದ್ದು, ಆರೋಪಿಯು ದೇವಸ್ಥಾನದ ಸಮೀಪವಿರುವ ಚರಂಡಿಗಳಲ್ಲೆಲ್ಲಾ ಬಿದ್ದು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ನಗರ ಠಾಣಾ ಪೊಲೀಸರು, ಕೇರಳ ಪೊಲೀಸರ ಜೊತೆ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು…

ಕೇರಳದಲ್ಲಿ ಸಹೋದರನ ಕೊಲೆ | ಕೊಲೆ ಆರೋಪಿ ಪುತ್ತೂರಿನಲ್ಲಿ ಪೊಲೀಸ್ ವಶ Read More »

ದೂರ ಶಿಕ್ಷಣ ಇನ್ನು ಹತ್ತಿರ | ಶಿಕ್ಷಣ ಪಡೆಯುವ ನಿಮ್ಮ ಕನಸು ಪ್ರೇರಣಾದಲ್ಲಿ ನನಸು! | ವಯಸ್ಸಿನ ಅಂಜಿಕೆ ಬೇಡ, ಸದಾವಕಾಶದ ಬಾಗಿಲು ತೆರೆದ ಪ್ರೇರಣಾ

ಪುತ್ತೂರು: ಶಿಕ್ಷಣ ಪಡೆಯುವ ವಯಸ್ಸಲ್ಲಿ ಶಿಕ್ಷಣ ಪಡೆದಿಲ್ಲವೇ? ಕೆಲಸದ ಒತ್ತಡದಿಂದ ಶಿಕ್ಷಣದಿಂದ ದೂರ ಉಳಿದಿರುವಿರೇ? ಹೀಗಿದ್ದು, ವಿದ್ಯಾಭ್ಯಾಸ ಮುಂದುವರಿಸುವ ಅಪೇಕ್ಷೆ ನಿಮ್ಮದಾಗಿದ್ದರೆ ಪುತ್ತೂರಿನ ಪ್ರೇರಣಾ ಸಂಸ್ಥೆಗೆ ಭೇಟಿ ನೀಡಿ. ವಿದ್ಯಾಭ್ಯಾಸ ಪಡೆಯುವುದು ಎಲ್ಲರ ಬಯಕೆಯೂ ಹೌದು. ಅದರಲ್ಲೂ ಅನಿವಾರ್ಯ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗಿ ಕೆಲಸಕ್ಕೆ ಸೇರಿದವರು ಕಾಲೇಜನ್ನು, ಕಾಲೇಜು ವಿದ್ಯಾರ್ಥಿಗಳನ್ನು ನೋಡಿ ತಾವು ಶಿಕ್ಷಣ ಮುಂದುವರಿಸಬೇಕು ಎಂದು ಅಪೇಕ್ಷೆ ಪಡುತ್ತಿರುತ್ತಾರೆ. ಆದರೆ ಅದು ಹೇಗೆ ಎಂದು ತಿಳಿಯದು. ಆದ್ದರಿಂದ ಶಿಕ್ಷಣ ಪಡೆಯಬೇಕೆಂಬ ಕನಸು ಕನಸಾಗಿಯೇ ಉಳಿದಿರುತ್ತದೆ. ಆದರೆ

ದೂರ ಶಿಕ್ಷಣ ಇನ್ನು ಹತ್ತಿರ | ಶಿಕ್ಷಣ ಪಡೆಯುವ ನಿಮ್ಮ ಕನಸು ಪ್ರೇರಣಾದಲ್ಲಿ ನನಸು! | ವಯಸ್ಸಿನ ಅಂಜಿಕೆ ಬೇಡ, ಸದಾವಕಾಶದ ಬಾಗಿಲು ತೆರೆದ ಪ್ರೇರಣಾ Read More »

ಜನಸಾಮಾನ್ಯರಿಗೆ ತೊಂದರೆ ನೀಡಿದಲ್ಲಿ ಅಧಿಕಾರಿಗಳ ಎತ್ತಂಗಡಿ : ಶಾಸಕ ಅಶೋಕ್ ಕುಮಾರ್ ರೈ | ಪುತ್ತೂರಿನಲ್ಲಿ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನಾ ಸಮಾರಂಭ

ಪುತ್ತೂರು: ಭ್ರಷ್ಟಾಚಾರ ಇಟ್ಟುಕೊಂಡು ಪುತ್ತೂರಿಗೆ ಬರುವ ಯಾವುದೇ ಅಧಿಕಾರಿಗಳು ಜನಸಾಮಾನ್ಯರಲ್ಲಿ ಹಣಕ್ಕಾಗಿ ಕೈಯೊಡ್ಡಿದರೆ ಅವರನ್ನು ಒಂದೇ ವಾರದಲ್ಲಿ ಇಲ್ಲಿಂದ ಎತ್ತಂಗಡಿ ಮಾಡುವ ಕೆಲಸ ಮಾಡಲಿದ್ದೇನೆ. ಹೀಗೆಂದು ಹೇಳಿದರು ಪುತ್ತೂರು ವಿಧಾನಸಭಾ ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನಲ್ಲಿ ಕಾಂಗ್ರೆಸ್ ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ನಡೆದ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಪುತ್ತೂರು ಕ್ಷೇತ್ರದಲ್ಲಿ ಯಾವುದೇ ಅಧಿಕಾರಿಗಳಿಂದ ನಾವು ಅಪೇಕ್ಷೆ ಪಡುವುದು ಬಡವರಿಗೆ ಸೇವೆ ನೀಡುವುದನ್ನು. ಅದನ್ನು ಬಿಟ್ಟು ಬಡವರನ್ನು, ಜನಸಾಮಾನ್ಯರ ಕೆಲಸಕ್ಕಾಗಿ ಅಲೆದಾಡಿಸುವ

ಜನಸಾಮಾನ್ಯರಿಗೆ ತೊಂದರೆ ನೀಡಿದಲ್ಲಿ ಅಧಿಕಾರಿಗಳ ಎತ್ತಂಗಡಿ : ಶಾಸಕ ಅಶೋಕ್ ಕುಮಾರ್ ರೈ | ಪುತ್ತೂರಿನಲ್ಲಿ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನಾ ಸಮಾರಂಭ Read More »

error: Content is protected !!
Scroll to Top