ಪುತ್ತೂರು

ಸಾಮರ್ಥ್ಯಕ್ಕಿಂತ ಅಧಿಕ ಮಕ್ಕಳನ್ನು ವಾಹನಗಳಲ್ಲಿ ಸಾಗಿಸುವುದು ಮಕ್ಕಳ ಭವಿಷ್ಯಕ್ಕೆ ಮಾರಕ | ಮಳೆಗಾಲದಲ್ಲಿ ಎಚ್ಚರಿಕೆ ಕರೆಗಂಟೆ

ಪುತ್ತೂರು: ಮಳೆ್ಗಾಲ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ನಿರಂತರ ಮಳೆ ಸುರಿಯಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ವಾಹನ ಚಾಲಕರು, ಸಾರ್ವಜನಿಕರು ಜಾಗ್ರತೆ ವಹಿಸುವುದು ಅತೀ ಅಗತ್ಯ. ಮಳೆಗಾಲ ಬಂತೆಂದರೆ ಸಾಕು. ರಸ್ತೆಗಳಲ್ಲಿ, ಚರಂಡಿಗಳಲ್ಲಿ ನೀರು ಹರಿಯುವುದು ಸಹಜ. ಹೀಗೆ ನಿಂತ ನೀರಿನ ಮೇಲೆ ವಾಹನಗಳು ಚಲಿಸುವುದರಿಂದ ರಸ್ತೆ ಬದಿಗಳಲ್ಲಿ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆಗಳಲ್ಲಿನ ಕೆಸರು ನೀರಿನ ಸಿಂಚನವಾಗುವುದನ್ನು ನಾವು ಕಾಣುತ್ತೇವೆ. ವಾಹನ ಸವಾರರು ನಿಂತ ನೀರಿನ ಬಳಿ ವಾಹನ ಚಲಾಯಿಸುವಾಗ ನಿಧಾನಕ್ಕೆ ಚಲಿಸುವುದರ ಜತೆ ಜಾಗೃತರಾಗುವುದು […]

ಸಾಮರ್ಥ್ಯಕ್ಕಿಂತ ಅಧಿಕ ಮಕ್ಕಳನ್ನು ವಾಹನಗಳಲ್ಲಿ ಸಾಗಿಸುವುದು ಮಕ್ಕಳ ಭವಿಷ್ಯಕ್ಕೆ ಮಾರಕ | ಮಳೆಗಾಲದಲ್ಲಿ ಎಚ್ಚರಿಕೆ ಕರೆಗಂಟೆ Read More »

ರೈಲಿನಲ್ಲೂ ಮಹಿಳೆಯರಿಗೆ, ವೃದ್ದರಿಗೆ ಉಚಿತ ಪಯಣಕ್ಕೆ ಕೇಂದ್ರ ಸರಕಾರ ಅವಕಾಶ ನೀಡಲಿ : ಬಿ.ಎಂ.ಬಟ್

ಪುತ್ತೂರು: ಕರ್ನಾಟಕ ಸರಕಾರ ರಾಜ್ಯದ ಮಹಿಳೆಯರಿಗೆ ಸರಕಾರಿ ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದು ಸ್ವಾಗತಾರ್ಹವಾಗಿದ್ದು, ರೈಲಿನಲ್ಲೂ ಮಹಿಳೆಯರಿಗೆ, ವೃದ್ಧಿರಿಗೆ ಉಚಿತ ಪ್ರಯಾಣಕ್ಕೆ ಕೇಂದ್ರ ಸರಕಾರ ಅವಕಾಶ ಕಲ್ಪಿಸಲಿ ಎಂದು ಪುತ್ತೂರು ತಾಲೂಕು ಬೀಡಿ ಕಾರ್ಮಿಕ ಸಂಘದ ಕಾರ್ಯದರ್ಶಿ, ಸಿಐಟಿಯು ಮುಖಂಡ ಬಿ.ಎಂ.ಭಟ್  ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು,  ಸಮಾಜದಲ್ಲಿ ಮಹಿಳಾ ಋಣ ತೀರಿಸಲು ಯಾರಿಂದಲೂ ಅಸಾದ್ಯ. ಹೊಸ ಜೀವಿಯ ಜನನಕ್ಕೆ ಅಂದರೆ ಜಗತ್ತಿನ ಭಾವಿ ಜನಾಂಗದ ಸೃಷ್ಟಿಗೆ ಕಾರಣವಾಗುವ ಮಹಿಳೆ ಒಮ್ಮೆ ತನ್ನ  ಜೀವವನ್ನೇ

ರೈಲಿನಲ್ಲೂ ಮಹಿಳೆಯರಿಗೆ, ವೃದ್ದರಿಗೆ ಉಚಿತ ಪಯಣಕ್ಕೆ ಕೇಂದ್ರ ಸರಕಾರ ಅವಕಾಶ ನೀಡಲಿ : ಬಿ.ಎಂ.ಬಟ್ Read More »

ಜೂ.16 : ಪುತ್ತೂರು ಅಂಚೆ ಕಚೇರಿಯಲ್ಲಿ ತ್ರೈಮಾಸಿಕ ಅಂಚೆ ಅದಾಲತ್

ಪುತ್ತೂರು: ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ  ಅದಾಲತ್ ಜೂ.16 ರಂದು ಬೆಳಿಗ್ಗೆ 11.30 ಕ್ಕೆ ಪುತ್ತೂರು ಅಂಚೆ  ವಿಭಾಗದ   ಹಿರಿಯ  ಅಂಚೆ  ಅಧೀಕ್ಷಕರ  ಕಚೇರಿಯಲ್ಲಿ  ನಡೆಯಲಿದೆ . ಅದಾಲತ್ತಿನಲ್ಲಿ, ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ವ್ಯಾಪ್ತಿಯ  ಅಂಚೆ  ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು  ಕೊರತೆಗಳನ್ನು, ತಕರಾರುಗಳನ್ನು  ಪರಶೀಲಿಸಲಾಗುವುದು.  ಸಾರ್ವಜನಿಕರು ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟ  ದೂರುಗಳನ್ನು   ಪತ್ರಮುಖೇನ , ಅಂಚೆ  ಅದಾಲತ್  ತಲೆಬರಹದಡಿ ಜೂ.16 ರೊಳಗೆ 

ಜೂ.16 : ಪುತ್ತೂರು ಅಂಚೆ ಕಚೇರಿಯಲ್ಲಿ ತ್ರೈಮಾಸಿಕ ಅಂಚೆ ಅದಾಲತ್ Read More »

ಬಾಲಕಾರ್ಮಿಕ ಪದ್ದತಿಯ ಬಗ್ಗೆ ಅರಿವು ಮೂಡಿಸಬೇಕಿದೆ: ಸಂಗೀತಾ ಎಸ್ ಎಂ | ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ

ಪುತ್ತೂರು: ಬಾಲಕಾರ್ಮಿಕ ಪದ್ದತಿ ಸಮಾಜಕ್ಕೆ ಅಂಟಿರುವ ಪಿಡುಗು. ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾರ್ವಜನಿಕರೂ ಕೈಜೋಡಿಸುವ ಮೂಲಕ ಬಾಲಕಾರ್ಮಿಕರನ್ನು ಸಮಾಜ ಮುಖ್ಯವಾಹಿನಿಗೆ ತರಲು ನಾವೆಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕಿದೆ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಎಸ್ ಎಂ. ಹೇಳಿದರು. ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದರು. ಬಾಲಕಾರ್ಮಿಕ ಪದ್ಧತಿಯನ್ನು ಹೊಡೆದೊಡಿಸಲು

ಬಾಲಕಾರ್ಮಿಕ ಪದ್ದತಿಯ ಬಗ್ಗೆ ಅರಿವು ಮೂಡಿಸಬೇಕಿದೆ: ಸಂಗೀತಾ ಎಸ್ ಎಂ | ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ Read More »

ಶುಲ್ಕರಹಿತ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಜೂ.14 ಬುಧವಾರ ಕೊನೆಯ ದಿನಾಂಕ

ಪುತ್ತೂರು: ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಇಂದು ಜೂ.14 ರ ತನಕ ಮಾತ್ರ ಲಭ್ಯವಿದ್ದು, ಯಾವುದೇ ಶುಲ್ಕವಿರುವುದಿಲ್ಲ. ಇನ್ನು ಕೆಲವೇ ಗಂಟೆಗಳು ಬಾಕಿಯಿದ್ದು, ಈಗಲೇ ಅಪ್ಡೇಟ್ ಮಾಡಿಬಿಡಿ. ಭಾರತದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, 10 ವರ್ಷಗಳಿಗಿಂತ ಹಳೆಯದಾದ ಆಧಾರ್ ಕಾರ್ಡ್ ಅಪ್ಡೇಟ್ (Aadhaar card Update) ಮಾಡೋದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದ್ದು, ಉಚಿತವಾಗಿ ಅಪ್ಡೇಟ್‌ ಮಾಡಲು ಅವಕಾಶ ನೀಡಿತ್ತು. ಯಾವುದೇ ಶುಲ್ಕವಿಲ್ಲದೆ ಆನ್ ಲೈನ್

ಶುಲ್ಕರಹಿತ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಜೂ.14 ಬುಧವಾರ ಕೊನೆಯ ದಿನಾಂಕ Read More »

ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳ ’ಅಭಿನವ’ ಪತ್ರಿಕೆ ಲೋಕಾರ್ಪಣೆ

ಪುತ್ತೂರು: ಪತ್ರಕರ್ತರು ತಮ್ಮ ಬದುಕನ್ನು ಸಾಗಿಸುವುದಕ್ಕೆ ವೃತ್ತಿಯನ್ನಾಗಿ ಪತ್ರಿಕೋದ್ಯಮವನ್ನು ಆರಿಸಿಕೊಳ್ಳುವುದು ಹೌದಾದರೂ ಆ ವೃತ್ತಿಯಲ್ಲಿ ನಿರತರಾಗುತ್ತಾ ಸಮಾಜಕ್ಕೆ ಸ್ಪಂದಿಸುವ ಅವಕಾಶಗಳನ್ನು ತಮ್ಮದಾಗಿಸುತ್ತಾ ಸಾಗುತ್ತಾರೆ. ಇದರಿಂದಾಗಿ ಸಮಾಜದ ಆಗುಹೋಗುಗಳಲ್ಲಿ ಪತ್ರಕರ್ತರು ಭಾಗೀದಾರರಾಗಿ ಮುನ್ನಡೆಯುತ್ತಾರೆ. ಅವೆಷ್ಟೋ ಜನರಿಗೆ ಪತ್ರಕರ್ತರ ಲೇಖನಿಗಳು ಬದುಕನ್ನು ಕಲ್ಪಿಸಿಕೊಡುತ್ತವೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಹೇಳಿದರು. ಅವರು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಪಿಸಲಾರಂಭಿಸಿದ ’ಅಭಿನವ’ ಎಂಬ ಪ್ರಾಯೋಗಿಕ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ

ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳ ’ಅಭಿನವ’ ಪತ್ರಿಕೆ ಲೋಕಾರ್ಪಣೆ Read More »

ಕಡಬ ಸಮುದಾಯ ಆಸ್ಪತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ | ಡಯಾಲಿಸಿಸ್ ಕೇಂದ್ರ ಶೀಘ್ರ ಆರಂಭಿಸಲು ಕ್ರಮದ ಭರವಸೆ

ಕಡಬ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಡಬ ಸಮುದಾಯ ಆಸ್ಪತ್ರೆಗೆ ಮಂಗಳವಾರ  ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಯ ಸಿಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್  ಆಸ್ಪತ್ರೆಯ ಸಿಬಂದಿ ಕೊರತೆ ಹಾಗೂ ಇತರ ಅಗತ್ಯತೆಗಳ ಕುರಿತು ಶಾಸಕಿಗೆ ಮಾಹಿತಿ ನೀಡಿದರು. ಆಸ್ಪತ್ರೆಗೆ  ಹೊಸ ಡಿಜಿಟಲ್ ಎಕ್ಸ್‌ರೇ ಯಂತ್ರ ನೀಡಲಾಗಿದ್ದರೂ ಎಕ್ಸ್‌ರೇ ತಂತ್ರಜ್ಞ  ಹುದ್ದೆ ಖಾಲಿ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಶಾಸಕಿ

ಕಡಬ ಸಮುದಾಯ ಆಸ್ಪತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ | ಡಯಾಲಿಸಿಸ್ ಕೇಂದ್ರ ಶೀಘ್ರ ಆರಂಭಿಸಲು ಕ್ರಮದ ಭರವಸೆ Read More »

ಎರಡೂವರೆ ವರ್ಷದಲ್ಲಿ ಅಗದ ಕೆಲಸ ಮೂರೇ ದಿನದಲ್ಲಿ ನಡೆದೇ ಹೋಯ್ತು | ಅಶೋಕ್ ರೈಗೆ ಓಟು ಹಾಕದೆ ತಪ್ಪು ಮಾಡಿದೆ ಎಂದ ನಾಗರಿಕ

ಪುತ್ತೂರು; ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿರುವ ವ್ಯಕ್ತಿಯೋರ್ವರು ತನ್ನ ಮನೆಯ ಬಳಿ ಇರುವ ಹಂಪನ್ನು ತೆಗೆದು ಬಿಡಿ ರಾತ್ರಿ ವಾಹನಗಳ ಜಂಪ್‌ಗೆ ನಿದ್ದೆ ಬರುತ್ತಿಲ್ಲ ಎಂದು ಕಚೇರಿಗೆ, ಮಾಜಿ ಶಾಸಕರ ಕಚೇರಿಗೆ ಅಲೆದಾಡಿ ಅಲೆದಾಡಿ ಸಾಕಾಗಿ ಹೋಗಿ ಕೊನೆಗೆ ಪುತ್ತೂರಿನ ಶಾಸಕರಾದ ಅಶೋಕ್ ರೈ ಬಳಿ ಹೇಳಿಕೊಂಡಾಗ ಮೂರೇ ದಿನದಲ್ಲಿ ಹಂಪನ್ನು ತೆರವು ಮಾಡಲಾಗಿದೆ. ಶಾಸಕರ ಅಧಿಕಾರದ ಪವರನ್ನು ಕಂಡ ಆ ವ್ಯಕ್ತಿ ನಾನು ಅಶೋಕ್ ರೈಗೆ ಓಟು ಹಾಕದೆ ತಪ್ಪು ಮಾಡಿದೆ ಎಂದು ತನ್ನ ಸ್ನೇಹಿತರಲ್ಲಿ ಹೇಳಿಕೊಂಡಿದ್ದು

ಎರಡೂವರೆ ವರ್ಷದಲ್ಲಿ ಅಗದ ಕೆಲಸ ಮೂರೇ ದಿನದಲ್ಲಿ ನಡೆದೇ ಹೋಯ್ತು | ಅಶೋಕ್ ರೈಗೆ ಓಟು ಹಾಕದೆ ತಪ್ಪು ಮಾಡಿದೆ ಎಂದ ನಾಗರಿಕ Read More »

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಖೋ ಖೋ ತಂಡ ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನ

ಪುತ್ತೂರು : ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ದೆಹಲಿಯಲ್ಲಿ ನಡೆಸಿದ  66ನೇ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿದ್ಯಾಭಾರತಿಯನ್ನು ಪ್ರತಿನಿಧಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಏಳನೇ ಸ್ಥಾನವನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದೆ. ತಂಡದಲ್ಲಿ ವಿದ್ಯಾರ್ಥಿಗಳಾದ ಪವನ್, ಗುರುಪ್ರಸಾದ್, ಭರತ್, ಅಶ್ವಿತ್ ಭಂಡಾರಿ, ನಂದನ್, ಮಂಜುನಾಥ, ಸಾತ್ವಿಕ್, ಪವನ್ ಕುಮಾರ್, ಶ್ರೀನಿಶ್, ಜೀವನ್ ಭಾಗವಹಿಸಿದ್ದರು. ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್,  ಡಾ. ಜ್ಯೋತಿ ,ಯತೀಶ್ ಬಾರ್ತಿಕುಮೆರ್ ಹಾಗೂ ಕಾರ್ತಿಕ್

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಖೋ ಖೋ ತಂಡ ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನ Read More »

ಮನೆಯೊಳಗೆ ಬಿದ್ದು ಮೃತಪಟ್ಟ ಮೆಸ್ಕಾಂ ಪವರ್ ಮ್ಯಾನ್ | ಮನೆಗೆ ಭೇಟಿ ನೀಡಿ ಶಾಸಕರಿಂದ ಸಾಂತ್ವನ

ಪುತ್ತೂರು: ಅನಾರೋಗ್ಯದಿಂದಿದ್ದ ಮೆಸ್ಕಾಂ ಪವರ್‌ಮ್ಯಾನ್ ಮನೆಯೊಳಗೆ ಕುಸಿದು ಬಿದ್ದು ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಮೃತರ ಮನೆಗೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕುರಿಯ ಗ್ರಾಮದ ಇಡಬೆಟ್ಟು ಕುಂಡಕೋರಿ ನಿವಾಸಿ ಕುಂಡ ಮೇರ ಎಂಬವರ ಪುತ್ರ ಕುಂಬ್ರದಲ್ಲಿ ಮೆಸ್ಕಾಂ ಪವರ್‌ಮ್ಯಾನ್ ಆಗಿ ಕರ್ತವ್ಯದಲ್ಲಿರುವ ಉಮೇಶ್ ಕುಂಡಕೋರಿ (42) ರವರು ಕೆಲದಿನಗಳಿಂದ ಅನಾರೋಗ್ಯ  ಪೀಡಿತರಾಗಿದ್ದು ಜೂ. 12 ರಂದು ರಾತ್ರಿ ಮನೆಯೊಳಗೆ ಕುಸಿದು ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ

ಮನೆಯೊಳಗೆ ಬಿದ್ದು ಮೃತಪಟ್ಟ ಮೆಸ್ಕಾಂ ಪವರ್ ಮ್ಯಾನ್ | ಮನೆಗೆ ಭೇಟಿ ನೀಡಿ ಶಾಸಕರಿಂದ ಸಾಂತ್ವನ Read More »

error: Content is protected !!
Scroll to Top