ಪುತ್ತೂರು

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ವಿಶ್ವ ಆಹಾರ ಸುರಕ್ಷತಾ ದಿನಾಚರಣೆ’

ಪುತ್ತೂರು: ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಆಹಾರ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ರಾಸಾಯನಿಕಗಳ ಮಿತಿಮೀರಿದ ಬಳಕೆ ಮನುಷ್ಯನ ದೇಹದ ಮೇಲೆ ತಾತ್ಕಾಲಿಕ ಹಾಗೂ ದೀರ್ಘಕಾಲಿಕ ಪರಿಣಾಮ ಬೀರುತ್ತದೆ. ಆಹಾರ ಸುರಕ್ಷತಾ ಕೊರತೆಯಿಂದಾಗಿ ವಿಶ್ವದಾದ್ಯಂತ ಪ್ರತಿವರ್ಷ ಮಕ್ಕಳು ಸೇರಿದಂತೆ ಸುಮಾರು 22 ಲಕ್ಷ ಜನತೆ ಸಾವನ್ನಪ್ಪುತ್ತಿದ್ದಾರೆ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ, ಪ್ರಚಲಿತ ಘಟನೆಗಳ ವಿಶ್ಲೇಷಕ ಸೂರ್ಯ ಹೇಳಿದ್ದಾರೆ. ವಿವೇಕಾನಂದ […]

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ವಿಶ್ವ ಆಹಾರ ಸುರಕ್ಷತಾ ದಿನಾಚರಣೆ’ Read More »

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ದೊರೆಯಬೇಕು :ಡಾ|ಪ್ರಭಾಕರ ಭಟ್ | ಕಡಬ ಸರಸ್ವತೀ ವಿದ್ಯಾಲಯದಲ್ಲಿ ಆಂಗ್ಲ ಮಾಧ್ಯಮ ತರಗತಿಗಳ ಉದ್ಘಾಟನೆ

ಕಡಬ : , ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ವ್ಯಕ್ತಿತ್ವ ನಿರ್ಮಾಣ ಮಾಡುವುದರೊಂದಿಗೆ ರಾಷ್ಟ್ರನಿರ್ಮಾಣಕ್ಕೆ ಪ್ರೇರಣೆ ನೀಡುವ ಶಿಕ್ಷಣವನ್ನು ನೀಡಿದಾಗ ಸದೃಢ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ ಎಂದು ಮಂಗಳೂರಿನ ಸಮಾಜಿಕ ಕಾರ್ಯಕರ್ತ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು ಅವರು ಬುಧವಾರ ಕಡಬದ ಕೇವಳ  ಹನುಮಾನ್ ನಗರದಲ್ಲಿರುವ ಸರಸ್ವತೀ ವಿದ್ಯಾಲಯದಲ್ಲಿ ಪ್ರಾರಂಭವಾದ  ಆಂಗ್ಲ ಮಾಧ್ಯಮ ವಿಭಾಗದ ತರಗತಿಗಳ ಉದ್ಘಾಟನೆ ಹಾಗೂ ಶಾಲಾ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|ಪ್ರಭಾಕರ

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ದೊರೆಯಬೇಕು :ಡಾ|ಪ್ರಭಾಕರ ಭಟ್ | ಕಡಬ ಸರಸ್ವತೀ ವಿದ್ಯಾಲಯದಲ್ಲಿ ಆಂಗ್ಲ ಮಾಧ್ಯಮ ತರಗತಿಗಳ ಉದ್ಘಾಟನೆ Read More »

 ಚಿಕಿತ್ಸಕ ಗುಣದ ಕವಿ ಕನಕ : ಪ್ರೊ. ತಾಳ್ತಜೆ | ರಾಮಕುಂಜದಲ್ಲಿ ಕನಕ ಕಮ್ಮಟ ಉದ್ಘಾಟನೆ

ರಾಮಕುಂಜ: ತಮಿಳುನಾಡಿನಿಂದ ಮೊದಲ್ಗೊಂಡು ಕನ್ನಡನಾಡಿನ ಮೂಲಕ ಉತ್ತರ ಭಾರತ ಕಡೆಗೆ ವ್ಯಾಪಿಸಿದ ಭಕ್ತಿಲತೆ ಭಾರತದ ಬದುಕನ್ನು ಪೋಷಿಸಿದೆ. ಈ ಭಕ್ತಿ ಪರಂಪರೆಯ ವಿಶಿಷ್ಟ ಕವಿ ಕನಕ. ತನ್ನ ಆಧ್ಯಾತ್ಮಿಕ ಮತ್ತು ಸಾಮಾಜಿಕ ರಚನೆಗಳಲ್ಲಿ ಕನಕದಾಸರು ಚಿಕಿತ್ಸಕ ಗುಣದ ಕವಿಯಾಗಿ ಮೂಡಿಬಂದಿದ್ದಾರೆ ಎಂದು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಹೇಳಿದರು. ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ,ಕನಕದಾಸ ಸಂಶೋಧನಾ ಕೇಂದ್ರ ಮತ್ತು ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜು 

 ಚಿಕಿತ್ಸಕ ಗುಣದ ಕವಿ ಕನಕ : ಪ್ರೊ. ತಾಳ್ತಜೆ | ರಾಮಕುಂಜದಲ್ಲಿ ಕನಕ ಕಮ್ಮಟ ಉದ್ಘಾಟನೆ Read More »

ಕಾಮಗಾರಿಯ ಪಟ್ಟಿ ಕಳುಹಿಸಿ | ಬೂತ್, ವಲಯ ಅಧ್ಯಕ್ಷರುಗಳಿಗೆ ಶಾಸಕರ ಸೂಚನೆ

ಪುತ್ತೂರು: ಅನುದಾನ ಹಂಚಿಕೆ ಮಾಡುವ ಉದ್ದೇಶದಿಂದ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಅಗಬೇಕಾದ ವಿವಿಧ ಕಾಮಗಾರಿಗಳ ಪಟ್ಟಿ ಕಳುಹಿಸಿಕೊಡುವಂತೆ ಬೂತ್ ಮತ್ತು ವಲಯ ಅಧ್ಯಕ್ಷರುಗಳಿಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಸೂಚನೆಯನ್ನು ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆಯಾಗಲಿದ್ದು ಅನುದಾನವನ್ನು ಹಂಚಿಕೆ ಮಾಡುವ ಉದ್ದೇಶದಿಂದ ಈಗಾಗಲೇ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ವಲಯಾಧ್ಯಕ್ಷರುಗಳು ಮತ್ತು ಬೂತ್ ಅಧ್ಯಕ್ಷರುಗಳು ಕಾಮಗಾರಿಯ ಪಟ್ಟಿಯನ್ನು ಸಿದ್ದ ಮಾಡಿ ಶಾಅಸಕರ ಕಚೇರಿಗೆ ತಲುಪಿಸುವಂತೆ ಅಥವಾ ಶಾಸಕರ ಪಿ ಎ ಬಳಿ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

ಕಾಮಗಾರಿಯ ಪಟ್ಟಿ ಕಳುಹಿಸಿ | ಬೂತ್, ವಲಯ ಅಧ್ಯಕ್ಷರುಗಳಿಗೆ ಶಾಸಕರ ಸೂಚನೆ Read More »

ಜೂ.15 ರಿಂದ ಕಾಮಗಾರಿ ನೆಪದಲ್ಲಿ ರಸ್ತೆ ಅಗೆತಕ್ಕೆ ನಿಷೇಧ | ನಗರಸಭೆಯಿಂದ ಪ್ರಕಟಣೆ

ಪುತ್ತೂರು : ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಟೆಲಿಫೋನ್, ಕುಡಿಯುವ ನೀರು, ವಿದ್ಯುತ್ ಕೇಬಲ್ ಇನ್ನಿತರ ಕಾಮಗಾರಿಗಳಿಗೆ ರಸ್ತೆ ಅಗೆತ ಮಾಡುವುದನ್ನು ಜೂ.15 ರಿಂದ ನಿಷೇಧಿಸಲಾಗಿದೆ ಎಂದು ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಸೂಚನೆ ನೀಡಿದ್ದಾರೆ. ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಅಗೆಯುವುದು ಸಾಮಾನ್ಯವಾಗಿದ್ದು, ಪರಿಣಾಮ ಸಾರ್ವಜನಿಕರಿಗೆ ತೊಂದರೆ ಉಂಟಾಗಿ ಅಪಘಾತವೂ ಸಂಭವಿಸುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿನಿಷೇಧಿಸಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.

ಜೂ.15 ರಿಂದ ಕಾಮಗಾರಿ ನೆಪದಲ್ಲಿ ರಸ್ತೆ ಅಗೆತಕ್ಕೆ ನಿಷೇಧ | ನಗರಸಭೆಯಿಂದ ಪ್ರಕಟಣೆ Read More »

ಟಿಪ್ಪರ್-ಸ್ಕೂಟರ್ ಅಪಘಾತ : ನೆಲ್ಯಾಡಿಯ ಯುವಕ ಮೃತ್ಯು

ಮಂಗಳೂರು; ಮಂಗಳೂರಿನ ಪಂಪುವೆಲ್ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಗಾಯಗೊಂಡ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ‌. ಇಚ್ಚಂಪಾಡಿ ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ವಾಮನ ದಂಪತಿ ಪುತ್ರ ಸಂದೇಶ್ (25) ಮೃತಪಟ್ಟ ಯುವಕ.  ಸಂದೇಶ್ ಮಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ತನ್ನ ಸ್ಕೂಟಿಯಲ್ಲಿ ರೂಮ್ ಗೆ ತೆರಳುವ ವೇಳೆ ಪಂಪ್ ವೆಲ್ ನಲ್ಲಿ ಈ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡಿದ್ದ ಸಂದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ

ಟಿಪ್ಪರ್-ಸ್ಕೂಟರ್ ಅಪಘಾತ : ನೆಲ್ಯಾಡಿಯ ಯುವಕ ಮೃತ್ಯು Read More »

ಸವಣೂರು ಪ್ರಾ.ಕೃ.ಪ.ಸ.ಸಂಘದಲ್ಲಿ ಕರುಣಾಕರ ಪೂಜಾರಿ ಅವರಿಗೆ ಶ್ರದ್ಧಾಂಜಲಿ

ಸವಣೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕರುಣಾಕರ ಪೂಜಾರಿ ಪಟ್ಟೆ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು. ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಮಾತನಾಡಿ, ಕರುಣಾಕರ ಪೂಜಾರಿರವರು ಸಂಘದ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ಉತ್ತಮ ಸೇವೆಯನ್ನು ನೀಡಿದ್ದಾರೆ. ಅವರ ಅಗಲುವಿಕೆ ತುಂಬಾ ನೋವು ತಂದಿದೆ ಎಂದರು. ಸಂಘದ ಮಾಜಿ ಅಧ್ಯಕ್ಷ ,ಹಾಲಿ ನಿರ್ದೇಶಕ ಉದಯ ರೈ, ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ , ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ.

ಸವಣೂರು ಪ್ರಾ.ಕೃ.ಪ.ಸ.ಸಂಘದಲ್ಲಿ ಕರುಣಾಕರ ಪೂಜಾರಿ ಅವರಿಗೆ ಶ್ರದ್ಧಾಂಜಲಿ Read More »

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಶ್ರೀ ದೇವರಿಗೆ ಅನುಜ್ಞಾ ಕಲಶ

ಸವಣೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ದೇವಸ್ಥಾನ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಶ್ರೀ ದೇವರಿಗೆ ಅನುಜ್ಞಾ ಕಲಶವು ಜೂ.14 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣೆ,ಸ್ವಸ್ತಿ ಪುಣ್ಯಾಹ ವಾಚನ ,ಶ್ರೀ ಮಹಾಗಣಪತಿ ಹೋಮ,ಅನುಜ್ಞಾ ಕಲಶ ಪೂಜೆ, ಮಧ್ಯಾಹ್ನ 11.10ರಿಂದ ಸಿಂಹ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ದೇವರಿಗೆ ಅನುಜ್ಞಾ ಪ್ರಾರ್ಥನೆ,

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಶ್ರೀ ದೇವರಿಗೆ ಅನುಜ್ಞಾ ಕಲಶ Read More »

ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಲೋಕಾರ್ಪಣೆ |  ಅರುಣ್ ಕುಮಾರ್ ಪುತ್ತಿಲರಿಂದ ನೊಂದಣಿ ಪ್ರಮಾಣ ಪತ್ರ ಬಿಡುಗಡೆ

ಪುತ್ತೂರು: ಜಾತ್ರೆಗಳಲ್ಲಿ ಭಾರಿ ಮೊತ್ತಕ್ಕೆ ಅಂಗಡಿಗಳನ್ನು ಏಲಂ ಮಾಡಿ ಬಡ ವ್ಯಾಪಾರಸ್ಥರಿಗೆ ಹಾಗೂ ಜಾತ್ರೆಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಆರ್ಥಿಕ ನಷ್ಟ ತಪ್ಪಿಸಲು , ಏಲಂ ಮೊತ್ತವನ್ನು ಕಡಿಮೆ ಮಾಡಿಸಲು ವ್ಯಾಪಾರಿಗಳನ್ನು  ಒಟ್ಟುಗೂಡಿಸಲು  ಹಿಂದೂ ವ್ಯಾಪಾರಸ್ಥರ ಸಂಘ ತಲೆಯೆತ್ತಿದೆ. ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ‘ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ  ನೊಂದಾಯಿತವಾಗಿದ್ದು,  ಇದರ ನೊಂದಣಿ ಪತ್ರವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರ ಪುತ್ತೂರಿನ ಪುತ್ತಿಲರ ಪರಿವಾರ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಕರ್ನಾಟಕ ರಾಜ್ಯ ಹಿಂದೂ ಜಾತ್ರಾ

ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಲೋಕಾರ್ಪಣೆ |  ಅರುಣ್ ಕುಮಾರ್ ಪುತ್ತಿಲರಿಂದ ನೊಂದಣಿ ಪ್ರಮಾಣ ಪತ್ರ ಬಿಡುಗಡೆ Read More »

ಪ್ರಿಯಕರನಿಗಾಗಿ 11 ತಿಂಗಳ ಮಗುವನ್ನು ಬಿಟ್ಟು ಬಂದ ಹುಬ್ಬಳಿ ಮಹಿಳೆ | ಜೋಡಿಗಾಗಿ ತಡರಾತ್ರಿ ಕೋಡಿಂಬಾಡಿಯಲ್ಲಿ ಪೊಲೀಸರಿಂದ ಹುಡುಕಾಟ

ಪುತ್ತೂರು: ಹುಬ್ಬಳ್ಳಿಯ ಮಹಿಳೆಯೋರ್ವರು ತನ್ನ 11 ತಿಂಗಳ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಪುತ್ತೂರಿನಲ್ಲಿರುವ ಪ್ರಯಕರನನ್ನು ಸೇರಿಕೊಂಡ ಘಟನೆ ತಡರಾತ್ರಿ ನಡೆದಿದ್ದು, ಬಳಿಕ ಮಹಿಳೆಯ ಮನೆಯವರು ಪುತ್ತೂರಿನಲ್ಲಿ ಮಹಿಳೆಗಾಗಿ ಹುಡುಕಾಟ ನಡೆಸಿರುವುದಾಗಿ ತಿಳಿದು ಬಂದಿದೆ. ಹುಬ್ಬಳ್ಳಿಯ ಮಹಿಳೆಯೋರ್ವರು ಅದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದು, ಆತ ಪುತ್ತೂರಿನ ಕೋಡಿಂಬಾಡಿಯಲ್ಲಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಾಹಿತಿ ತಿಳಿದ ಮಹಿಳೆ ತನ್ನ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಫೋನ್ ಕರೆಯನ್ನು ಸ್ವೀಕರಿಸದೆ ನಾಪತ್ತೆಯಾಗಿದ್ದಳು.  ಪುತ್ತೂರಿನಲ್ಲಿ ತನ್ನ ಪ್ರಿಯಕರನ ಬಳಿ ಬಂದಿರಬಹುದು

ಪ್ರಿಯಕರನಿಗಾಗಿ 11 ತಿಂಗಳ ಮಗುವನ್ನು ಬಿಟ್ಟು ಬಂದ ಹುಬ್ಬಳಿ ಮಹಿಳೆ | ಜೋಡಿಗಾಗಿ ತಡರಾತ್ರಿ ಕೋಡಿಂಬಾಡಿಯಲ್ಲಿ ಪೊಲೀಸರಿಂದ ಹುಡುಕಾಟ Read More »

error: Content is protected !!
Scroll to Top