ಪುತ್ತೂರು

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ಸವಣೂರು :  ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2023-24ನೆ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಇವರು ನೆರವೇರಿಸಿದರು. ಬಳಿಕ ಮಾತನಾಡಿದ,ಸೀತಾರಾಮ ರೈ ಅವರು,ಪ್ರಜಾಪ್ರಭುತ್ವದ ಅರಿವು ವಿದ್ಯಾರ್ಥಿಗಳಿಗೆ ಆಗಬೇಕಾದರೆ ವಿದ್ಯಾರ್ಥಿ ಸಂಘಗಳು ಸಕ್ರಿಯರಾಗಬೇಕು. ಇಂತಹ ಸಂಘಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಾಯಕತ್ವವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು. ಮುಖ್ಯ ಅತಿಥಿ ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ರೈ ಅವರು ಮಾತನಾಡಿ ವಿದ್ಯಾರ್ಥಿ ಸಂಘಗಳು ನಾಯಕತ್ವವನ್ನು ಮೈಗೂಡಿಸಿಕೊಳ್ಳಲು ಅತ್ಯಂತ ಸಶಕ್ತವಾದ ವೇದಿಕೆಯಾಗಿದೆ,ನಾಯಕತ್ವ […]

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ Read More »

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನಾಚರಣೆ

ಪುತ್ತೂರು: ಪ್ರಸ್ತುತ ಡ್ರಗ್ಸ್  ಸೇವನೆಯಿಂದ ಶೇಕಡಾ 70ರಷ್ಟು ಜನ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇತ್ತೀಚಿನ ಯುವಜನಾಂಗ  ಈ ವಿಚಾರವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪುತ್ತೂರು ಘಟಕದ ಡಿವೈಎಸ್ಪಿ ಗಾನ ಪಿ ಕುಮಾರ್ ಹೇಳಿದರು. ಅವರು ಪೊಲೀಸ್ ಇಲಾಖೆ, ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ಐಕ್ಯುಎಸಿ  ಜಂಟಿ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ನಾವು ತೆಗೆದುಕೊಳ್ಳುವ  ಮಾತ್ರೆ, ವಿಕ್ಸ್, ಜ್ಯೂಸ್ ಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನಾಚರಣೆ Read More »

ಬಂಟ್ವಾಳ ನೀರಪಾದೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಶಿಲಾನ್ಯಾಸ

ಬಂಟ್ವಾಳ: ಬಂಟ್ವಾಳ ನೀರಪಾದೆ ಬಾಳ್ತಿಲ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸೇವಾ ಸಮಿತಿ ವತಿಯಿಂದ ನೀರಪಾದೆಯಲ್ಲಿ ನಾರಾಯಣ ಗುರು ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಸೂರ್ಯೋದಯದ ಶುಭ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ನಿಡ್ಯೆ ಅವರ ಮುಂದಾಳತ್ವ ದಲ್ಲಿ ವೇ.ಮೂ. ಕೇಶವ ಶಾಂತಿಯವರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಿಲಾನ್ಯಾಸ ನಡೆಯಿತು. ಅತಿಥಿಗಳಾಗಿ ಸಮಿತಿಯ ಗೌರವ ಅಧ್ಯಕ್ಷ ಡಾ | ಪ್ರಭಾಕರ ಭಟ್ ಕಲ್ಲಡ್ಕ , ಸೂರ್ಯನಾರಾಯಣ ಭಟ್ ಕಲಾಶ್ರಯ ದಾಸಕೋಡಿ , ಮಾಜಿ

ಬಂಟ್ವಾಳ ನೀರಪಾದೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಶಿಲಾನ್ಯಾಸ Read More »

ದೇವಸ್ಥಾನದ ಒಳಗೆ ಅನ್ಯಮತೀಯರಿಂದ ಕ್ಯಾಮರಾ ಬಳಕೆ | ಸೂಕ್ತ ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರದಿಂದ ಮನವಿ

ಪುತ್ತೂರು: ಹಿಂದೂ ದೇವಸ್ಥಾನದ ಒಳಗೆ ಅನ್ಯಮತೀಯರು ಪ್ರವೇಶಿಸಿದ್ದು, ದೇವಸ್ಥಾನದ ಒಳಗೆ ಕ್ಯಾಮರಾ ಬಳಕೆ ನಿಷೇಧವಾಗಿದ್ದರೂ ಭಾವಚಿತ್ರ ತೆಗೆಯುತ್ತಿರುವುದು ಭಕ್ತರ ಗಮನಕ್ಕೆ ಬಂದಿದ್ದು ಪುತ್ತಿಲ ಪರಿವಾರ ತೀವ್ರವಾಗಿ ಖಂಡಿಸಿದೆ. ಭಾವಚಿತ್ರ ತೆಗೆದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯಾದರೆ ದೇವಸ್ಥಾನದ ಆಡಳಿತ ಮಂಡಳಿ ನೇರ ಹೊಣೆಯಾಗಿರುತ್ತದೆ ಎಂದು ತಿಳಿಸಿದೆ. ದೇವಸ್ಥಾನದಲ್ಲಿನ ಹಾಗೂ ಭಕ್ತರ ನಂಬಿಕೆಗೆ ಧಕ್ಕೆಯಾದಲ್ಲಿ ಪುತ್ತಿಲ ಪರಿವಾರದಿಂದ ತೀವ್ರ ಹೋರಾಟ ನಡೆಸಲಾಗುವುದು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತಿಲ

ದೇವಸ್ಥಾನದ ಒಳಗೆ ಅನ್ಯಮತೀಯರಿಂದ ಕ್ಯಾಮರಾ ಬಳಕೆ | ಸೂಕ್ತ ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರದಿಂದ ಮನವಿ Read More »

ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ ನಿಧನ

ಪುತ್ತೂರು: ಉಪ್ಪಿನಂಗಡಿ ಮಾಲೀಕ್ ಜುಮ್ಮಾ ಮಸೀದಿ ಅಧ್ಯಕ್ಷ, ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ (49) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರನ್ನು ಕೆಲ ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಮಾಜಿಕ, ಧಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಉಪ್ಪಿನಂಗಡಿ ಗ್ರಾಪಂ ಮಾಜಿ ಸದಸ್ಯರಾಗಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ, ಪುತ್ತೂರು ತಾಲೂಕು ಜಮಾಅತ್ ಉಪಾಧ್ಯಕ್ಷರಾಗಿ, ಮಾಡನ್ನೂರು ಹುದಾ ಇಸ್ಲಾಮಿಕ್ ಅಕಾಡೆಮಿ ಉಪಾಧ್ಯಕ್ಷರಾಗಿ, ಕಮ್ಮಾಡಿ

ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ ನಿಧನ Read More »

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಈಶಾನ್ -ಫ್ರಾನ್ಸ್ ಗೆ

ಪುತ್ತೂರು: ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಜೂ.27ರಿಂದ ಜು.17ರ ತನಕ ನಡೆಯಲಿರುವ ಜಾಗತಿಕ ಮಟ್ಟದ ಆಹ್ವಾನಿತರ ಕೂಟ ಮತ್ತು ಅಂತಾರಾಷ್ಟ್ರೀಯ “ಹಿಪ್ ಹಾಪ್” ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಈಶಾನ್ ಆಯ್ಕೆಯಾಗಿದ್ದು, ನಾಳೆ (ಜೂ.27)ರಂದು ಭಾಗವಹಿಸಲು ಫ್ರಾನ್ಸ್ ಗೆ ತೆರಳುವನು. Lock is not Joke ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಡಾನ್ಸ್ ಅಸೋಸಿಯನ್ ವತಿಯಿಂದ ಆಯೋಜಿಸಲ್ಪಡುವ ಈ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 40ದೇಶಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಭಾರತದಿಂದ ಭಾಗವಹಿಸುತ್ತಿರುವ ಏಕೈಕ

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಈಶಾನ್ -ಫ್ರಾನ್ಸ್ ಗೆ Read More »

ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆ

ಪುತ್ತೂರು: ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಸೋಮವಾರ ಪತ್ತೆಯಾಗಿದೆ. ಸುಮಾರು 40 ರಿಂದ 50 ವರ್ಷ ಪ್ರಾಯದ ಶವ ಗುರುತಿಸಲು ಅಸಾಧ್ಯವಾದ ಸ್ಥಿತಿಯಲ್ಲಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಧರ್ಮಸ್ಥಳ ಠಾಣಾ ಸಬ್‍ ಇನ್‍ ಸ್ಪೆಕ್ಟರ್ ಅನಿಲ್ ಕುಮಾರ್ ಡಿ., ಸಿಬ್ಬಂದಿ್ಗಳು ಪರಿಶೀಲನೆ ನಡೆಸಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗಾಗಿ ಸಾಗಿಸಲಾಗಿದೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆ Read More »

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವತಿಯಿಂದ ಕೆದಿಲದಲ್ಲಿ ಗ್ರಾಮ ಸಂಜೀವಿನಿ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಮಹಾತ್ವಾಕಾಂಕ್ಷೆ ಯೋಜನೆ ವಿವೇಕ ಸಂಜೀವಿನಿಯ ಗ್ರಾಮ ಸಂಜೀವಿನಿ ಕಾರ್ಯಕ್ರಮ ಕೆದಿಲ ಗ್ರಾಮದಲ್ಲಿ ನಡೆಯಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಕೆದಿಲ ಶ್ರೀರಾಮ ಭಜನಾ ಮಂದಿರ, ಊರ ನಾಗರಿಕರ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೆದಿಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ ಧನಂಜಯ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಶಾಲೆಯಿಂದ ಗ್ರಾಮಗಳಲ್ಲಿ ನಡೆಯುತ್ತಿರುವ ಅನ್ಯಾನ್ಯ ಕಾರ್ಯಕ್ರಮಗಳಾದ ಬದು ನಿರ್ಮಾಣ, ಗದ್ದೆ ಕೊಯ್ಲು, ಭಜನಾ ಉತ್ಸವ,

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವತಿಯಿಂದ ಕೆದಿಲದಲ್ಲಿ ಗ್ರಾಮ ಸಂಜೀವಿನಿ ಕಾರ್ಯಕ್ರಮ Read More »

ಜೂ.30 : ವಿವೇಕಾನಂದ ಕಾಲೇಜಿನಲ್ಲಿ ಬೀಳ್ಕೊಡುಗೆ, ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ವಿವೇಕಾನಂದ ಕಾಲೇಜು, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಐಕ್ಯೂಎಸಿ ವತಿಯಿಂದ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ ಜೂ.30 ಶುಕ್ರವಾರ ಕಾಲೇಜು ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಲಿದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್ ಪಿ. ತಿಳಿಸಿದ್ದಾರೆ. ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1965 ರಲ್ಲಿ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜು ಆರಂಭಗೊಂಡಿದ್ದು

ಜೂ.30 : ವಿವೇಕಾನಂದ ಕಾಲೇಜಿನಲ್ಲಿ ಬೀಳ್ಕೊಡುಗೆ, ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ Read More »

ದ.ಕ.ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸುವಂತೆ ರೈತ ಸಂಘ, ಹಸಿರುಸೇನೆ ಆಗ್ರಹ

ಪುತ್ತೂರು: ದ.ಕ.ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದ.ಕ.ಜಿಲ್ಲಾ ಸಮಿತಿ ಸಹಾಯಕ ಆಯುಕ್ತರ ಮೂಲಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದೆ. ಹವಾಮಾನ ಆಧಾರಿತ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಜೂ.20 ರ ಒಳಗಡೆ ರೈತರಿಗೆ ಹೆಕ್ಟೇರಿಗೆ 6400 ರೂ. ಕಟ್ಟಲು ಸೂಚನೆ ಬರುತ್ತಿದ್ದು, ಈ ಬಾರಿ ಜೂ.25 ಕಳೆದರೂ ಸಂಬಂಧ ಪಟ್ಟ ಇಲಾಖೆ ಯಾವುದೇ ಸೂಚನೆಯನ್ನು ಇಲ್ಲಿಯತನಕ ನೀಡಿಲ್ಲ. ತಕ್ಷಣ ಸಂಬಂಧ ಪಟ್ಟ ಇಲಾಖೆಗೆ ಬರಪೀಡಿತ

ದ.ಕ.ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸುವಂತೆ ರೈತ ಸಂಘ, ಹಸಿರುಸೇನೆ ಆಗ್ರಹ Read More »

error: Content is protected !!
Scroll to Top