ಪುತ್ತೂರು

ಪ್ರಧಾನಮಂತ್ರಿ ಫಸಲು ಭಿಮಾ ಯೋಜನೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಸೇರ್ಪಡೆ

ಪುತ್ತೂರು: ಪ್ರಧಾನಮಂತ್ರಿ ಫಸಲು ಭಿಮಾ ಯೋಜನೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಸೇರ್ಪಡೆಗೊಳಿಸುವಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯಶಸ್ವಿಯಾಗಿದ್ದಾರೆ. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ಅವಧಿ ಮುಗಿಯುತ್ತಾ ಬಂದರೂ ಪ್ರೀಮಿಯಂ ಪಾವತಿಯ ಬಗ್ಗೆ ರೈತರಿಗೆ ಯಾವುದೇ ಸೂಚನೆ ನೀಡದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಮತ್ತು ಕಾಳುಮೆಣಸನ್ನು ಯೋಜನೆಯಿಂದ ಹೊರಗಿಡಲಾಗಿದೆ ಎಂದು ವರದಿಯಾಗಿತ್ತು. ಇದರಿಂದ ರೈತರು ನಿರಾಶಡಗೊಂಡಿದ್ದರು. ಈ ಕುರಿತು ಮಾಹಿತಿ ಸಂಗ್ರಹಿಸಿದ ಶಾಸಕ ಅಶೋಕ್ ರೈ ಬೆಂಗಳೂರಿನಲ್ಲಿ ತೋಟಗಾರಿಕಾ ಸಚಿವ […]

ಪ್ರಧಾನಮಂತ್ರಿ ಫಸಲು ಭಿಮಾ ಯೋಜನೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಸೇರ್ಪಡೆ Read More »

ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯ ನೆರವಿನ ಚೆಕ್ ಹಸ್ತಾಂತರ

ಪುತ್ತೂರು: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ ಯೋಜನೆಯಡಿ ಕ್ಯಾಂಪ್ಕೊ ಪುತ್ತೂರು ಶಾಖೆಯ ಸಕ್ರಿಯ ಸದಸ್ಯರಾದ ಪುತ್ತೂರು ತಾಲೂಕು , ಕೊಡಿಪ್ಪಾಡಿ ಗ್ರಾಮದ ಅನಾಜೆ ಮನೆಯ ಮಹಾಬಲ ನಾಯ್ಕ ಕೆ ರವರ ಪುತ್ರ ರಘುನಾಥ ಕೆ ರೆದ ಹೃದಯ ಶಸ್ತ್ರಚಿಕಿತ್ಸೆಗೆ  ನೆರವಿನ ಚೆಕ್ ಹಸ್ತಾಂತರ ಮಾಡಲಾಯಿತು. ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ರೂ. 2,00,000/- ಸಹಾಯಧನದ ಚೆಕ್ ನ್ನು ರಘುನಾಥ ಕೆ ಅವರ ಪುತ್ರ ಜಿತೇಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ARDF ನ ಸಂಯೋಜಕರಾದ

ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯ ನೆರವಿನ ಚೆಕ್ ಹಸ್ತಾಂತರ Read More »

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಡಬ ಕಚೇರಿ ಶುಭಾರಂಭ

ಸುಳ್ಯ : ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಡಬ ಕಚೇರಿ ಕಡಬ ಮಿನಿ ವಿದಾನಸೌಧ ಕಟ್ಟಡದಲ್ಲಿ ಶುಕ್ರವಾರ ಶುಭಾರಂಭಗೊಂಡಿತು. ಬೆಳಗ್ಗೆ 7.00 ಗಂಟೆಗೆ ಗಣಹೋಮ ಪೂಜೆ ನಡೆದ ಬಳಿಕ 9.00 ಗಂಟೆಗೆ ಜನಸಂಘ ಮತ್ತು ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಹರಿಶ್ಚಂದ್ರ ರೈ ಪಟ್ಟೆ ಗುತ್ತು ಪೆರಾಬೆ, ತನಿಯಪ್ಪ ಮಜಗುಡ್ಡೆ ಕಡಬ, ಕುಶಾಲಪ್ಪ ಗೌಡ ಕುಡಾಲ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷರು,

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಡಬ ಕಚೇರಿ ಶುಭಾರಂಭ Read More »

ಸೀತಾರಾಮ ಶೆಣೈ ನಿಧನ

ಪುತ್ತೂರು: ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಕಚೇರಿಯ ನಿವೃತ್ತ ಅಧೀಕ್ಷಕ ಸೀತಾರಾಮ ಶೆಣೈ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. 1965 ರಲ್ಲಿ ಕಾಲೇಜಿನಲ್ಲಿ ಅಧ್ಯಾಪಕೇತರ ಸಿಬ್ಬಂದಿಯಾಗಿ ಸೇರ್ಪಡೆಗೊಂಡಿದ್ದು, 1967 ರಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ 2001 ರಲ್ಲಿ ನಿವೃತ್ತರಾಗಿದ್ದರು. ಅವರ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

ಸೀತಾರಾಮ ಶೆಣೈ ನಿಧನ Read More »

ಮರ್ದಾಳದ ಯುವಕ ನೇಣು ಬಿಗಿದು ಆತ್ಮಹತ್ಯೆ

ಕಡಬ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಮರ್ಧಾಳದಲ್ಲಿ ನಡೆದಿದೆ. ಮರ್ದಾಳ ನೆಕ್ಕಿತ್ತಡ್ಕ ನಿವಾಸಿ ದಿ.ಸಂಜೀವ ರೈ ಎಂಬವರ ಪುತ್ರ ರಘುನಾಥ ರೈ ಯಾನೆ ಚುಮ್ಮ (38) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಸಂಜೆ ವೇಳೆ ಈ ಕೃತ್ಯ ಎಸಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿರುವುದಾಗಿ ಶಂಕಿಸಲಾಗಿದೆ. ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರ್ದಾಳದ ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಜಟಿಲ ಸಮಸ್ಯೆಯಾದ ಅನ್ನಭಾಗ್ಯದ ಅಕ್ಕಿ ಬದಲು ಹಣ ವರ್ಗಾವಣೆ ಪ್ರಕ್ರಿಯೆ | ಬ್ಯಾಂಕ್ ಮತ್ತು ಪ್ಯಾನ್ ಕಾರ್ಡ್ ವಿವರ ಇಲ್ಲದಿರುವುದು ಸಮಸ್ಯೆ

ಬೆಂಗಳೂರು: ರಾಜ್ಯ ಸರಕಾರ ಬಿಪಿಎಲ್ ಕಾರ್ಡುದಾರರಿಗೆ ನೀಡುವ 5 ಕೆ.ಜಿ. ಅಕ್ಕಿ ಬದಲು ಹಣ ನೀಡುವ ಕುರಿತು ಈಗಾಗಲೇ ಘೋಷಣೆ ಮಾಡಿದ್ದು, ಹಣ ಹೇಗೆ ಕೊಡುವುದು ಎಂಬುದು ಅಧಿಕಾರಿಗಳಿಗೆ ಚಿಂತೆ ಶುರುವಾಗಿದೆ. ಐದು ಕೆ.ಜಿ.ಅಕ್ಕಿ ಬದಲು 170 ರೂಪಾಯಿ ಓರ್ವ ಫಲಾನುಭವಿಗೆ ನೀಡಬೇಕು. ಒಂದು ಮನೆಯಲ್ಲಿ ನಾಲ್ಕು ಮಂದಿ ಇದ್ದರೆ 680 ರೂ. ಪ್ರತಿತಿಂಗಳು ವರ್ಗಾಯಿಸಬೇಕು. ಜು.1 ರಿಂದಲೇ ನೀಡಲು ನಿರ್ಧರಿಸಿದ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಫಲಾನುಭವಿಗಳ ಖಾತೆಗೆ ಹಣ ಜಮಾ

ಜಟಿಲ ಸಮಸ್ಯೆಯಾದ ಅನ್ನಭಾಗ್ಯದ ಅಕ್ಕಿ ಬದಲು ಹಣ ವರ್ಗಾವಣೆ ಪ್ರಕ್ರಿಯೆ | ಬ್ಯಾಂಕ್ ಮತ್ತು ಪ್ಯಾನ್ ಕಾರ್ಡ್ ವಿವರ ಇಲ್ಲದಿರುವುದು ಸಮಸ್ಯೆ Read More »

ತೆಂಕಿಲ ಗುಡ್ಡದಲ್ಲಿ ಮೃತಪಟ್ಟ ರೀತಿಯಲ್ಲಿ ಕರುವಿನ ಮೃತದೇಹ ಪತ್ತೆ

ಪುತ್ತೂರು: ನಗರದ ಹೊರವಲಯದ ತೆಂಕಿಲ ಕಟ್ಟತ್ತಾರು ಸಮೀಪದ ಗುಡ್ಡವೊಂದರಲ್ಲಿ ಕರುವಿನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿಯಂತೆ ರಾತ್ರಿ ಹೊತ್ತು ಅಕ್ರಮ ಗೋಸಾಗಾಟ ಸಂದರ್ಭದಲ್ಲಿ ಆಗಿರುವ ಕೃತ್ಯ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಗ್ರಹಿಸಿದೆ. ಮೃತದೇಹವನ್ನು ವಿಹಿಂಪ, ಬಜರಂಗದಳ ಹಾಗೂ ಸ್ಥಳೀಯ ಹಿಂದೂ ಯುವಕರಿಂದ ಅಂತಿಮ ಸಂಸ್ಕಾರ ನೆರವೇರಿತು.

ತೆಂಕಿಲ ಗುಡ್ಡದಲ್ಲಿ ಮೃತಪಟ್ಟ ರೀತಿಯಲ್ಲಿ ಕರುವಿನ ಮೃತದೇಹ ಪತ್ತೆ Read More »

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿ ಭೇಟಿ

ನರಿಮೊಗರು : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗೆ ಎಡನೀರು ಶಂಕರಾಚಾರ್ಯ ಪೀಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿಯವರು  ಜೂ.29ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಶೀರ್ಚನ ನೀಡಿದ ಶ್ರೀಗಳು, ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಹೊಂದಬೇಕು. ಇಂದಿನ ಶಿಕ್ಷಣವು ರಾಜಕೀಯಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಹಿಂದಿನ ಕಾಲದಲ್ಲಿ ಶಿಕ್ಷಣವು ಪುರಾಣಗಳನ್ನು ಸಂಬಂಧಿಸಿದ ಪಠ್ಯಕ್ರಮವಿತ್ತು. ಮನುಷ್ಯ ನಾಗಿ ಹುಟ್ಟುವುದು, ಉತ್ತಮ ಶಿಕ್ಷಣ, ವಿನಯ ದಿಂದ ಕೂಡಿದ ಜೀವನ ಪಡೆಯುವುದು ತುಂಬಾ ಸೌಭಾಗ್ಯಯುತವಾದುದು,ಎಲ್ಲರೂ ಸಂಸ್ಕಾರವನ್ನು ಬೆಳೆಸಿ ಉಳಿಸಿ ಉತ್ತಮ ಪ್ರಜೆಯಾಗಿ ಬಾಳಿ ಎಂದರು.

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿ ಭೇಟಿ Read More »

ತಪ್ತ ಮುದ್ರಧಾರಣೆ ಕಾರ್ಯಕ್ರಮ

ಪುತ್ತೂರು : ಪುತ್ತೂರು ತಾಲೂಕಿನ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ತಪ್ತ ಮುದ್ರಾಧಾರಣೆ ಕಾರ್ಯಕ್ರಮ ನೆರವೇರಿಸಸಿದರು ಈ ಸಂದರ್ಭದಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪಾಲ್ಗೊಂಡು ಮುದ್ರಾ ಧಾರಣೆ ಮಾಡಿಸಿಕೊಂಡು ಶ್ರೀ ದೇವರ ಹಾಗೂ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ತಪ್ತ ಮುದ್ರಧಾರಣೆ ಕಾರ್ಯಕ್ರಮ Read More »

ಸಂಭ್ರಮದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು

ಪುತ್ತೂರು : ಸಂಭ್ರಮದ ಬಕ್ರೀದ್ ಹಬ್ಬವನ್ನು ಗುರುವಾರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಬಾಂಧವರು ಆಚರಿಸಿದರು. ಬ್ರಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ ಆಯಾ ತಾಲೂಕು, ವಲಯ ಪ್ರಾರ್ಥನಾ ಮಂದಿರಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಸೀದಿಗಳಲ್ಲಿ ಧರ್ಮಗುರುಗಳು ಸಂದೇಶ ನೀಡಿದರು. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ಕೋರಿದರು. ಪುತ್ತೂರು ನಗರದಲ್ಲಿ ಹಬ್ಬದ ಹಿನ್ನಲೆಯಲ್ಲಿ ಜನಸಂಖ್ಯೆ ಭಾರೀ ವಿರಳ ಇದ್ದುದು ಕಂಡು ಬಂದಿದ್ದು, ಬಹುತೇಕ ಮುಸ್ಲಿಂ ಬಾಂಧವರು ತಮ್ಮ ಅಂಗಡಿ

ಸಂಭ್ರಮದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು Read More »

error: Content is protected !!
Scroll to Top