ಪುತ್ತೂರು

ಜು.6 : ದ.ಕ.ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ

ಮಂಗಳೂರು : ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಜು.6 ಗುರುವಾರವೂ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ದ.ಕ.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವೊಂದು ತುರ್ತು ಕ್ರಮಗಳನ್ನು ಕೈಗೊಂಡಿದೆ. ಪ್ರಾಕೃತಿಕ ವಿಕೋಪದಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ತುರ್ತು ಸೇವೆಗೆ ಟೋಲ್ ಫ್ರೀ ನಂ 24+7 ಕಂಟ್ರೋಲ್ […]

ಜು.6 : ದ.ಕ.ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ Read More »

ಮಣಿಪುರದಲ್ಲಿ ಕ್ರೈಸ್ತರನ್ನು ಗುರಿಯಾಗಿರಿಸಿ ನರಮೇಧ ಖಂಡನೀಯ-ಕ್ರಿಶ್ಚಿಯನ್ ಯೂನಿಯನ್

ಪುತ್ತೂರು: ಈಶಾನ್ಯ ರಾಜ್ಯ ಮಣಿಪುರದಲ್ಲಿ ಕ್ರೈಸ್ತರ ಮತಗಳನ್ನು ಪಡೆದುಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ  ಸರ್ಕಾರದಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿರಿಸಿ ನಡೆಯುತ್ತಿರುವ ಗಲಭೆ, ನರಮೇಧ, ಲೂಟಿ, ಅತ್ಯಾಚಾರಗಳು ಖಂಡನೀಯವಾಗಿದ್ದು, ತಕ್ಷಣವೇ ರಾಷ್ಟ್ರಪತಿಗಳು ಮದ್ಯೆ ಪ್ರವೇಶಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಬಂಡುಕೋರರನ್ನು ನಿಗ್ರಹಿಸುವ ಕೆಲಸ ಮಾಡಬೇಖು ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯರ್ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಆಗ್ರಹಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ಮೈಥೇಯಿ ಮತ್ತು ಕುಕಿ ಪಂಗಡದ ನಡುವೆ ಇಷ್ಟೊಂದು ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದರೂ ಪ್ರಧಾನಿ

ಮಣಿಪುರದಲ್ಲಿ ಕ್ರೈಸ್ತರನ್ನು ಗುರಿಯಾಗಿರಿಸಿ ನರಮೇಧ ಖಂಡನೀಯ-ಕ್ರಿಶ್ಚಿಯನ್ ಯೂನಿಯನ್ Read More »

ಜು.9 : ಯುವವಾಹಿನಿ ಪುತ್ತೂರು ಘಟಕದ ವತಿಯಿಂದ “ಬಿಲ್ಲವ ವಧು-ವರಾನ್ವೇಷಣೆ-2023”

ಪುತ್ತೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿ  ಪುತ್ತೂರು ಘಟಕದ ಆಶ್ರಯದಲ್ಲಿ  “ಬಿಲ್ಲವ ವಧು-ವರಾನ್ವೇಷಣೆ-2023” ಜು.9 ಭಾನುವಾರ ಬೆಳಿಗ್ಗೆ 9.30 ಕ್ಕೆ ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಲಿದೆ. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕಡೆಂಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ಬಾಯಾರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಲ್ನಾಡು ದಂಡನಾಯಕ ಶ್ರೀ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಪೂಜಾರಿ

ಜು.9 : ಯುವವಾಹಿನಿ ಪುತ್ತೂರು ಘಟಕದ ವತಿಯಿಂದ “ಬಿಲ್ಲವ ವಧು-ವರಾನ್ವೇಷಣೆ-2023” Read More »

ಚಾಲಕನ ನಿಯಂತ್ರಣ ತಪ್ಪಿದ ಕಾರು | ಡಿವೈಡರ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ,

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಏರಿ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ತುಂಬೆಯಲ್ಲಿ ನಡೆದಿದೆ. ಬೆಳ್ತಂಗಡಿ ನಿವಾಸಿ ನವಾಜ್ ಎಂಬವರು ಕಾರಿನಲ್ಲಿ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ವೇಳೆ ತುಂಬೆಯಲ್ಲಿ ಈ ಘಟನೆ ನಡೆದಿದ್ದು ಕಾರು ಡಿವೈಡರ್ ಮೇಲೆ ಹತ್ತಿದ್ದಲ್ಲದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಒಂದು ಭಾಗ ನಜ್ಜುಗುಜ್ಜಾಗಿದೆ. ಆದರೆ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ

ಚಾಲಕನ ನಿಯಂತ್ರಣ ತಪ್ಪಿದ ಕಾರು | ಡಿವೈಡರ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ, Read More »

ಅಣ್ಣು ಶಾಂತಿಗೋಡು ನಿಧನ

ಪುತ್ತೂರು: ಶಾಂತಿಗೋಡು ಗ್ರಾಮದ ಓಲಾಡಿ ದಿ.ಚೋಮರವರ ಪುತ್ರ ಅಣ್ಣು ಶಾಂತಿಗೋಡು (49) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರು ಅವಿವಾಹಿತರಾಗಿದ್ದಾರೆ. ಮೃತರು ಸಹೋದರ, ಸಹೋದರಿಯರು, ಬಂದು ಬಳಗದವರನ್ನು ಅಗಲಿದ್ದಾರೆ.

ಅಣ್ಣು ಶಾಂತಿಗೋಡು ನಿಧನ Read More »

ವಸತಿ ಯೋಜನೆಗಳ ಅನುದಾನ ಸರಿಯಾಗಿ ಬಾರದೆ ತೊಂದರೆ | ಕ್ರಮ ಕೈಗೊಳ್ಳುವಂತೆ ಕಲಿಯುಗ ಸೇವಾ ಸಮಿತಿಯಿಂದ ಮುಖ್ಯಮಂತ್ರಿ, ವಸತಿ ಸಚಿವರಿಗೆ ಮನವಿ

ಪುತ್ತೂರು: ವಸತಿ ರಹಿತರಿಗೆ, ಬಡ ಕುಟುಂಬದವರಿಗೆ ಸರಕಾರ ನೀಡುತ್ತಿರುವ ವಸತಿ ಯೋಜನೆಗಳ ಅನುದಾನಗಳು ಸರಿಯಾಗಿ ಬಿಡುಗಡೆಯಾಗದೆ ಜನ ತೊಂದರೆ ಪಡುತ್ತಿರುವ ಬಗ್ಗೆ ಚಿಕ್ಕ ಮುಡ್ನೂರು ಕಲಿಯುಗ ಸೇವಾ ಸಮಿತಿ ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವರಿಗೆ ಮನವಿ ಮಾಡಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಮಂಜೂರುಗೊಂಡಿರುವ ವಸತಿ ಯೋಜನೆಗಳು ಅನೇಕ ಇದೆ. ಒಂದು ಹಂತದ ಅನುದಾನ ಮಾತ್ರ ಬಿಡುಗಡೆಯಾಗಿದ್ದು, ಕೆಲವು ವಸತಿ ಯೋಜನೆಗಳ ಮಂಜೂರಾತಿ ಪತ್ರ ಸಿಕ್ಕಿ ವರ್ಷ ಕಳೆದರೂ ಹಣ ಮಾತ್ರ ಬಿಡುಗಡೆಯಾಗಿಲ್ಲ. ಜನ ಸಾಲ

ವಸತಿ ಯೋಜನೆಗಳ ಅನುದಾನ ಸರಿಯಾಗಿ ಬಾರದೆ ತೊಂದರೆ | ಕ್ರಮ ಕೈಗೊಳ್ಳುವಂತೆ ಕಲಿಯುಗ ಸೇವಾ ಸಮಿತಿಯಿಂದ ಮುಖ್ಯಮಂತ್ರಿ, ವಸತಿ ಸಚಿವರಿಗೆ ಮನವಿ Read More »

ವಿಶ್ವ ಪರಿಸರ ದಿನದ ಮಹತ್ವದ ಜೊತೆಗೆ ಚಿತ್ರಕಲೆಗೆ ಪ್ರೋತ್ಸಾಹ  – ಲೋಕೇಶ್ ಎಸ್ ಆರ್. | ಭಾರತ ಸೇವಾದಳ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ

ಪುತ್ತೂರು:  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಾರತ ಸೇವಾದಳ ಪುತ್ತೂರು ತಾಲೂಕು ಸಮಿತಿ, ಶಿಕ್ಷಣ ಇಲಾಖೆ ಪುತ್ತೂರು  ನೇತೃತ್ವದಲ್ಲಿ ಹಾಗೂ ಶಿವಮಣಿ ಕಲಾಸಂಘದ ಸಂಚಾಲಕತ್ವದಲ್ಲಿ, ಕಸಾಪ ಪುತ್ತೂರು, ಸುದಾನ ವಿದ್ಯಾಸಂಸ್ಥೆಯ ಸಹಕಾರದಲ್ಲಿ  ಪುತ್ತೂರು ಮತ್ತು ಕಡಬ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ  ಶಾಲಾ ವಿದ್ಯಾರ್ಥಿಗಳಿಗೆ  ಚಿತ್ರಕಲಾ ಸ್ಪರ್ಧೆಯು ನೆಹರು ನಗರದ ಸುಧಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಿತು. ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರದ ಸಂರಕ್ಷಣೆಯ ಮಹತ್ವವನ್ನು

ವಿಶ್ವ ಪರಿಸರ ದಿನದ ಮಹತ್ವದ ಜೊತೆಗೆ ಚಿತ್ರಕಲೆಗೆ ಪ್ರೋತ್ಸಾಹ  – ಲೋಕೇಶ್ ಎಸ್ ಆರ್. | ಭಾರತ ಸೇವಾದಳ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ Read More »

ಬನ್ನೂರು ಶಾಲಾ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಯುವ, ಇನ್ನರ್ ವೀಲ್ ಕ್ಲಬ್, ಬನ್ನೂರು ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿ, ಬನ್ನೂರು ಸ್ಪೂರ್ತಿ ಯುವ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗಿಡ ನೆಡುವ ಕಾರ್ಯಕ್ರಮ ಬನ್ನೂರು ಸರಕಾರಿ ಪ್ರಾಥಮಿಕ ಶಾಲೆಯ ವಠಾರದಲ್ಲಿ ಬುಧವಾರ ನಡೆಯಿತು. ಪುತ್ತೂರು ನಗರಸಭೆ ಸದಸ್ಯೆ ಗೌರಿ ಬನ್ನೂರು ಗಿಡ

ಬನ್ನೂರು ಶಾಲಾ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮ Read More »

ಉದ್ಘಾಟನೆಗೆ ಸಜ್ಜುಗೊಂಡಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಶಾಖೆ | ಬೆಳ್ಳಾರೆ ಕೆಳಗಿನಪೇಟೆ ಕಾತ್ಯಾಯಿನಿ ಕಾಂಪ್ಲೆಕ್ಸ್ ನಲ್ಲಿ ನಾಳೆ (ಜು.6) ಉದ್ಘಾಟನೆ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಬೆಳ್ಳಾರೆ ಶಾಖೆಯ ಉದ್ಘಾಟನಾ ಸಮಾರಂಭ ಜು.6 ಗುರುವಾರ ಸುಳ್ಯ ತಾಲೂಕಿನ ಬೆಳ್ಳಾರೆ ಕೆಳಗಿನಪೇಟೆ ಕಾತ್ಯಾಯಿನಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ. ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಮಣಾಯಿ ಆರ್ಚ್ ಕಟ್ಟಡದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಬಳಿಕ ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ನಗರ ಹಾಗೂ ಕಾಣಿಯೂರು ಶಾಖೆಗಳನ್ನು ತೆರೆದು ಸುಮಾರು ಏಳು ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ. ಕಳೆದ ಅವಧಿಯಲ್ಲಿ 400 ಕೋಟಿಗಿಂತಲೂ ಮಿಕ್ಕಿ ವ್ಯವಹಾರಗಳನ್ನು ಮಾಡಿದ್ದು,

ಉದ್ಘಾಟನೆಗೆ ಸಜ್ಜುಗೊಂಡಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಶಾಖೆ | ಬೆಳ್ಳಾರೆ ಕೆಳಗಿನಪೇಟೆ ಕಾತ್ಯಾಯಿನಿ ಕಾಂಪ್ಲೆಕ್ಸ್ ನಲ್ಲಿ ನಾಳೆ (ಜು.6) ಉದ್ಘಾಟನೆ Read More »

ನಸ್ವೀಪ್ ನೀಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ | ಊರವರಿಂದ ಸನ್ಮಾನ

ಪುತ್ತೂರು : ಪುತ್ತೂರು ಸಮೀಪದ ಕೊಡಿಯಾಡಿಯ ನಿಝಾರ್ ಮತ್ತು ಉಮೈಬಾ ದಂಪತಿಯ ಪುತ್ರ ನಸ್ವೀಪ್ ನೀಟ್ ಪರೀಕ್ಷೆಯಲ್ಲಿ 585 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಎಂಬಿಬಿಎಸ್ ಸೀಟಿಗೆ ಅರ್ಹತೆ ಪಡೆದಿದ್ದಾರೆ. ಇವರು ಪುತ್ತೂರು ಕಮ್ಯೂನಿಟ್ ಸೆಂಟರ್ ಮುಖಾಂತರ ಬೀದರ್ ನ ಶಾಹಿನ್ ಸಂಸ್ಥೆಯಲ್ಲಿ ಕಲಿತು ನೀಟ್ ಪರೀಕ್ಷೆ ಬರೆದಿದ್ದರು. ಈ ಹಿನ್ನಲೆಯಲ್ಲಿ ಊರಿನ ಹಿಂದೂ ಮುಖಂಡರು ಮನೆಗೆ ತೆರಳಿ ನಸ್ವೀಪ್ ರನ್ನು ಸನ್ಮಾನಿಸಿದರು.

ನಸ್ವೀಪ್ ನೀಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ | ಊರವರಿಂದ ಸನ್ಮಾನ Read More »

error: Content is protected !!
Scroll to Top